»   » ರಿಯಾಝ್ ಮತ್ತು ದಿವಾಕರ್ ನಡುವೆ ಮೂಡಿದೆ ಮನಸ್ತಾಪ.!

ರಿಯಾಝ್ ಮತ್ತು ದಿವಾಕರ್ ನಡುವೆ ಮೂಡಿದೆ ಮನಸ್ತಾಪ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಅಣ್ಣ-ತಮ್ಮಂದಿರಂತೆ, ಉತ್ತಮ ಸ್ನೇಹಿತರಂತೆ ಮೊದಲೆರಡು ವಾರ ಕಂಡುಬಂದ ರಿಯಾಝ್ ಹಾಗೂ ದಿವಾಕರ್ ಈಗ ಹಾವು-ಮುಂಗುಸಿಯಂತಾಗಿದ್ದಾರೆ.

ಮೊದಲು ಜಯಶ್ರೀನಿವಾಸನ್ ಜೊತೆ ಮುನಿಸಿಕೊಂಡು ಕಿತ್ತಾಡಿದ್ದ ದಿವಾಕರ್ ಇದೀಗ ರಿಯಾಝ್ ಜೊತೆ ಜಗಳ ಆಡಿದ್ದಾರೆ.

ದಿವಾಕರ್ ಬದಲಾಗಿದ್ದಾರಾ.? ರಿಯಾಝ್ ಗೆ ಅಷ್ಟು ಬೇಸರ ಯಾಕೆ.?

ಟಾಸ್ಕ್ ವಿಚಾರವಾಗಿ ದಿವಾಕರ್ ಆಟದ ವೈಖರಿ ಬಗ್ಗೆ ರಿಯಾಝ್ ಕಾಮೆಂಟ್ ಮಾಡಿದ್ದಕ್ಕೆ ರಿಯಾಝ್ ವಿರುದ್ಧ ದಿವಾಕರ್ ತಿರುಗಿ ಬಿದ್ದಿದ್ದಾರೆ. ಮುಂದೆ ಓದಿರಿ...

ಮೊನ್ನೆ ನಿವೇದಿತಾ, ನಿನ್ನೆ ರಿಯಾಝ್

ಮೊನ್ನೆಯಷ್ಟೇ ಕ್ಯಾಪ್ಟನ್ ನಿವೇದಿತಾ ಗೌಡ ಹಾಗೂ ದಿವಾಕರ್ ನಡುವೆ ಗಲಾಟೆ ಆಗಿತ್ತು. ದಿವಾಕರ್-ನಿವೇದಿತಾ ನಡುವೆ ಎಲ್ಲವೂ ಸರಿಹೋಯ್ತು ಎನ್ನುವಷ್ಟರಲ್ಲಿ ದಿವಾಕರ್-ರಿಯಾಝ್ ಮಧ್ಯೆ ಮನಸ್ತಾಪ ಮೂಡಿದೆ.

ರಿಯಾಝ್ ಹೇಳಿದ್ರಲ್ಲಿ ತಪ್ಪೇನಿದೆ.? ಸೆಲೆಬ್ರಿಟಿಗಳು ಮಾತ್ರ ಸರಿಯೇ.?

ದಿವಾಕರ್ ಆಟದ ವೈಖರಿ ಬಗ್ಗೆ ರಿಯಾಝ್ ಕಾಮೆಂಟ್

ಆಟದಲ್ಲಿ ದಿವಾಕರ್ ಚೆನ್ನಾಗಿ ಆಡಿದ್ರೆ, ತಮ್ಮ ತಂಡಕ್ಕೆ ಇನ್ನೂ ಹೆಚ್ಚು ಪಾಯಿಂಟ್ಸ್ ಬರುತ್ತಿತ್ತು ಎಂದು ರಿಯಾಝ್ ಕಾಮೆಂಟ್ ಮಾಡಿದರು.

'ಬಿಗ್ ಬಾಸ್' ಮನೆಯಲ್ಲಿ ದಿವಾಕರ್ ಗೆ ಆಪ್ತ ಗೆಳೆಯ ಯಾರು ಅಂತೀರಾ.?

ಜಗಳಕ್ಕೆ ಮೂಲ ಕಾರಣ 'ನಾನು'

''ನಾನು'' ಎನ್ನೋದು ರಿಯಾಝ್ ರವರಲ್ಲಿ ಸ್ವಲ್ಪ ಜಾಸ್ತಿ ಇದೆ ಎಂಬುದು ದಿವಾಕರ್ ರವರ ವಾದ.

ಆಗಾಗ ನಾಮಿನೇಟ್ ಆಗಬೇಕು, ಆಗಲೇ ಜನರಿಗೆ ಗೊತ್ತಾಗೋದು: ಇದು ದಿವಾಕರ್ ಸಿದ್ಧಾಂತ.!

ಗೆಲ್ಲುವ ವಿಶ್ವಾಸ ಎಲ್ಲರಲ್ಲಿಯೂ ಇದೆ.!

''ನಾನೇ ಗೆಲ್ಲೋದು... ನಿಮ್ಮೆಲ್ಲರನ್ನೂ ಕಳುಹಿಸಿದ ಮೇಲೆ ನಾನು ಹೊರಗೆ ಬರುವುದು'' ಎಂದು ದಿವಾಕರ್ ಹೇಳಿದ್ದ ಮಾತು ಮತ್ತೆ ಚರ್ಚೆ ಆಯ್ತು. ''ಎಲ್ಲರೂ ಇಲ್ಲಿ ಗೆಲ್ಲುವುದಕ್ಕೆ ಬಂದಿರುವುದು'' ಎಂದು ರಿಯಾಝ್ ಸಿಟ್ಟಲ್ಲಿ ನುಡಿದರು.

ದಿವಾಕರ್ ಗೆ 'ಕಳಪೆ ಬೋರ್ಡ್' ಕೊಟ್ಟಿದ್ದಕ್ಕೆ ಮನೆಯಲ್ಲಿ ಅಲ್ಲೋಲ-ಕಲ್ಲೋಲ.!

ಯಾರದ್ದು 'ನಾಟಕ'.?

''ನಿನ್ನ ಮೇಲೆ ಪ್ರೀತಿ ಇರುವುದಕ್ಕೆ ಸ್ವಲ್ಪ ಜಾಸ್ತಿ ಹಚ್ಚಿಕೊಂಡಿದ್ದೇನೆ'' ಎಂದು ರಿಯಾಝ್ ಹೇಳುತ್ತಿದ್ದರೆ, ದಿವಾಕರ್ ''ನಾಟಕ'' ಎನ್ನುತ್ತಿದ್ದರು.

ಪ್ರತಿ ಬಾರಿ ದಿವಾಕರ್ ಮೇಲೆ ಏಕೆ ಸೆಲೆಬ್ರಿಟಿಗಳ ಕೆಂಗಣ್ಣು.?

ಏಕವಚನ ಪ್ರಯೋಗ ಮಾಡಿದ ದಿವಾಕರ್

''ನಾನು ನಾಟಕ ಮಾಡುತ್ತಿದ್ದೀನಾ.?'' ಎಂದು ರಿಯಾಝ್ ದನಿ ಏರಿಸಿದ್ದಕ್ಕೆ, ದಿವಾಕರ್ ಏಕವಚನದಲ್ಲಿ ಮಾತನಾಡಿದರು. ಸಿಟ್ಟಲ್ಲಿ ''ಗೂಬೆ ತರಹ ಮಾತನಾಡುತ್ತಿದ್ದೀಯಾ'' ಎಂದು ದಿವಾಕರ್ ಗೆ ರಿಯಾಝ್ ಬೈದರು.

'ಬಿಗ್ ಬಾಸ್' ಮನೆಯಲ್ಲಿ ಮೂಲೆಗುಂಪಾಗುತ್ತಿದ್ದಾರಾ 'ಜನಸಾಮಾನ್ಯ' ಸ್ಪರ್ಧಿಗಳು.?

ಇನ್ಮುಂದೆ ಮಾತನಾಡಲ್ಲ.!

''ನಾನು ಈ ತರಹ ಮಾಡಿದೆ ಎಂದು ಯಾರೂ ಹೇಳಿಕೊಳ್ಳುವುದಿಲ್ಲ. ನಾನು ಯಾರಿಗೂ ತಲೆ ಕೆಡಿಸಿಕೊಳ್ಳುವುದಿಲ್ಲ'' ಎಂದು ದಿವಾಕರ್ ಹೇಳಿದರೆ, ''ತಮ್ಮನ ತರಹ ಮಾತನಾಡಿದೆ. ಮಾತಾಡಲು ಇಷ್ಟ ಇಲ್ಲದೇ ಹೋದರೆ, ಮಾತಾಡಲೇ ಬೇಡ'' ಎಂದು ದಿವಾಕರ್ ಗೆ ರಿಯಾಝ್ ಹೇಳಿದರು.

ಇನ್ನುಂದೆ ಏನ್ ಕಥೆ.?

ಮೊದಲೆರಡು ವಾರ ಇಡೀ ಮನೆ ದಿವಾಕರ್ ವಿರುದ್ಧ ತಿರುಗಿ ಬಿದ್ದಾಗ, ದಿವಾಕರ್ ಪರ ನಿಂತಿದ್ದವರು ರಿಯಾಝ್. ಈಗ ಇವರಿಬ್ಬರೇ ಗಲಾಟೆ ಮಾಡಿಕೊಂಡಿದ್ದಾರೆ. ಈ ಜಗಳ ಆದ್ಮೇಲೆ, ಇನ್ಮುಂದೆ ದಿವಾಕರ್ ಹಾಗೂ ರಿಯಾಝ್ ನಡುವೆ ಸ್ನೇಹ ಮುಂದುವರೆಯುವುದು ಅಲ್ಮೋಸ್ಟ್ ಡೌಟ್ ಅನ್ನೋದು ವೀಕ್ಷಕರ ಅಭಿಪ್ರಾಯ.

ಸುದೀಪ್ ಹೇಳಿದ ಮಾತು ಮರೆತುಬಿಟ್ರಾ.?

''ಕಷ್ಟದಲ್ಲಿ ಇದ್ದಾಗ ನಮ್ಮ ಕೈ ಹಿಡಿದಿರುವವರನ್ನ ಯಾವತ್ತೂ ಮರೆಯಬಾರದು'' ಎಂದು ದಿವಾಕರ್ ಗೆ ಸುದೀಪ್ ಬುದ್ಧಿ ಮಾತು ಹೇಳಿದ್ದರು. ಆದರೂ, ದಿವಾಕರ್ ಗೆ ಜ್ಞಾನೋದಯ ಆದಂತೆ ಕಾಣುತ್ತಿಲ್ಲ.

ಇನ್ಮುಂದೆ ಯಾರಿಗೂ ಪ್ರೀತಿ ಕೊಡಲ್ಲ.!

ಮೊದಲಿನಿಂದಲೂ ಸಮೀರಾಚಾರ್ಯ ಜೊತೆ ಆತ್ಮೀಯರಾಗಿ ಇರುವ ರಿಯಾಝ್, ಇನ್ಮುಂದೆ ಸಮೀರಾಚಾರ್ಯ ಗೆ ಬಿಟ್ಟರೆ ಇನ್ಯಾರಿಗೂ ಮನಸ್ಸಿನಿಂದ ಪ್ರೀತಿ ಕೊಡಲ್ಲ ಅಂತ ರಿಯಾಝ್ ಆಣೆ ಮಾಡಿದ್ದಾರೆ.

English summary
Bigg Boss Kannada 5: Week 6: Verbal fight between Diwakar and Riyaz Basha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada