»   » ಮತ್ತೆ ರೊಚ್ಚಿಗೆದ್ದು ಏಕವಚನ ಬಳಸಿದ ಜಗನ್.! ಇದು ಸೀಕ್ರೆಟ್ ಟಾಸ್ಕ್.?

ಮತ್ತೆ ರೊಚ್ಚಿಗೆದ್ದು ಏಕವಚನ ಬಳಸಿದ ಜಗನ್.! ಇದು ಸೀಕ್ರೆಟ್ ಟಾಸ್ಕ್.?

Posted By:
Subscribe to Filmibeat Kannada
Bigg Boss Kannada Season 5 : ಮತ್ತೆ ರಿಯಾಜ್ ಮೇಲೆ ಎಗರಾಡಿದ ಜಗನ್ | Filmibeat Kannada

ಜಗನ್ನಾಥ್ ಚಂದ್ರಶೇಖರ್.... 'ಬಿಗ್ ಬಾಸ್' ಮನೆಯ ಆಂಗ್ರಿ ಯಂಗ್ ಮ್ಯಾನ್. ಸಣ್ಣ ಪುಟ್ಟ ವಿಷಯಕ್ಕೆ ಟೆಂಪರ್ ರೈಸ್ ಮಾಡಿಕೊಳ್ಳುವ ಜಗನ್ನಾಥ್ ಈಗಾಗಲೇ 'ಬಿಗ್'ಮನೆಯಲ್ಲಿ ಹಲವು ರಾದ್ಧಾಂತಗಳಿಗೆ ಸಾಕ್ಷಿ ಆಗಿದ್ದಾರೆ.

'ಜ್ಯೂಸ್ ಬೇಕು' ಟಾಸ್ಕ್ ನಲ್ಲಿ ಸಮೀರಾಚಾರ್ಯ ಶರ್ಟ್ ಹರಿದು, ಏಕವಚನ ಪ್ರಯೋಗ ಮಾಡಿದ ಜಗನ್ನಾಥ್ ಇದೀಗ ಮತ್ತೊಮ್ಮೆ ಅದೇ ತಪ್ಪನ್ನ ಪುನರಾವರ್ತಿಸಿದ್ದಾರೆ.

ಸಮೀರಾಚಾರ್ಯ ಶರ್ಟ್ ಹರಿದು, ಏಕವಚನ ಪ್ರಯೋಗ ಮಾಡಿದ ಜಗನ್.!

ತಟ್ಟೆ ಸರಿಯಾಗಿ ತೊಳೆಯದ ವಿಷಯಕ್ಕೆ ರಿಯಾಝ್ ಜೊತೆ ಜಗನ್ ಜಗಳವಾಡಿದ್ದಾರೆ. ರಿಯಾಝ್ ಗೆ 'ಲೋ..' ಎಂದು ಕರೆದು ಆವಾಝ್ ಹಾಕಿದ್ದಾರೆ ಜಗನ್. ಸಣ್ಣ ವಿಷಯವನ್ನ ಜಗನ್ ಇಷ್ಟು ದೊಡ್ಡದು ಮಾಡಿದ ಪರಿಣಾಮ, ಇದು ಸೀಕ್ರೆಟ್ ಟಾಸ್ಕ್ ಇರಬೇಕು ಎಂಬ ಲೆಕ್ಕಾಚಾರ ರಿಯಾಝ್ ತಲೆಯಲ್ಲಿ ಓಡುತ್ತಿದೆ. ಮುಂದೆ ಓದಿರಿ...

ಇಬ್ಬರ ನಡುವೆ ಜಗಳ ಆಗಲು ಕಾರಣ.?

ತಿಂಡಿ ತಿಂದ ಬಳಿಕ ತಮ್ಮ ತಟ್ಟೆಯನ್ನ ರಿಯಾಝ್ ಸರಿಯಾಗಿ ತೊಳೆದಿರಲಿಲ್ಲವಂತೆ. ತಟ್ಟೆಯಲ್ಲಿ ದೋಸೆ ಹಾಗೇ ಇದ್ದ ಕಾರಣ, ಕ್ಲೀನ್ ಆಗಿ ತೊಳೆಯಿರಿ ಎಂದು ಜಗನ್ ಹೇಳಿದರು.

ಕೇಳಿಸಿಕೊಳ್ಳುವ ವ್ಯವಧಾನ ಇಲ್ಲದ ಜಗನ್ ಗೆ ಕೂಗಾಡೋದು ಬಿಟ್ಟು ಬೇರೇನೂ ಬರಲ್ಲ.!

ಮಿಸ್ಟರ್ ಪರ್ಫೆಕ್ಟ್ ರಿಯಾಝ್

''ಆ ತರಹ ಇರಲು ಚಾನ್ಸೇ ಇಲ್ಲ. ನಾನು ಏನೇ ಮಾಡಿದರೂ ಪರ್ಫೆಕ್ಟ್ ಆಗಿ ಮಾಡುತ್ತೇನೆ'' ಎಂದು ರಿಯಾಝ್ ಹೇಳಿದರು. ರಿಯಾಝ್ ಆಡಿದ ಈ ಮಾತಿನಿಂದಾಗಿ ಜಗನ್ ಗೆ ಟೆಂಪರ್ ರೈಸ್ ಆಯ್ತು.

ಜಗನ್ ಗೆ 'ಹುಷಾರು' ಎಂದು ಎಚ್ಚರಿಸಿ, ಬುದ್ಧಿಮಾತು ಹೇಳಿದ ಕಿಚ್ಚ ಸುದೀಪ್.!

ಮಾತಿನ ಚಕಮಕಿ

''ನಿಜವಾಗಲೂ, ಅದರಲ್ಲಿ ದೋಸೆ ಹಾಗೇ ಇತ್ತು. ತುಂಬಾ ಸಂಯಮದಿಂದ ಹೇಳುತ್ತಿದ್ದೇನೆ. ನೀವು ಬೇರೆ ತರಹ ಮಾತನಾಡಿದರೆ, ನಾನು ಬೇರೆ ತರಹ ಮಾತನಾಡಬೇಕಾಗುತ್ತೆ'' ಎಂದು ಏರುದನಿಯಲ್ಲಿ ಜಗನ್ ಮಾತನಾಡಿದ್ದಕ್ಕೆ, ''ಮಾತಾಡು, ಬೇಡ ಅನ್ನಲಿಲ್ಲ. ನಿನ್ನಿಷ್ಟ. ನಾನು ಆ ತರಹ ತೊಳೆಯುವುದಿಲ್ಲ. ಎಷ್ಟು ಕಾಳಜಿ ಇಂದ ತೊಳೆಯುತ್ತೇನೆ ಅಂತ ನನಗೆ ಗೊತ್ತು'' ಎಂದು ರಿಯಾಝ್ ಉತ್ತರಿಸಿದರು.

ಸದಾ ಕೆಂಡಕಾರುವ ಜಗನ್ನಾಥ್ ಗೆ ಸರಿಯಾಗಿ ಬೆಂಡೆತ್ತಿದ ಮೈಸೂರಿನ ಕಾಲರ್.!

ಏಕವಚನ ಪ್ರಯೋಗ

''ಲೋ... ನೀನು ತಾನು ಅಂತ ಮಾತನಾಡಬೇಡ. ನೆಟ್ಟಗೆ ಮಾತನಾಡುತ್ತಿದ್ದೇನೆ ಅಂದಾಗ ನೆಟ್ಟಗೆ ಮಾತಾಡು. ನಾನು ಮಾತನಾಡಿದರೆ, ಬಾಯಲ್ಲಿ ಬರುವುದು ತುಂಬಾ ಬೇರೆ ಪದ'' ಎಂದು ಜಗನ್ ಆವಾಝ್ ಹಾಕಿದರು.

ಸುದೀಪ್ ನಿರೂಪಣೆ ಸರಿ ಇರ್ಲಿಲ್ಲ, ಜಗನ್ ಔಟ್ ಆಗಲಿಲ್ಲ, ಜನ ಬೈಯ್ಯುವುದನ್ನ ನಿಲ್ಲಿಸುತ್ತಿಲ್ಲ.!

ಸೀಕ್ರೆಟ್ ಟಾಸ್ಕ್ ಕೊಟ್ಟಿದ್ದಾರಾ.?

ಜಗನ್ ರವರ ಈ ವರ್ತನೆ ನೋಡಿದ್ಮೇಲೆ, ''ಜಗಳ ಮಾಡುವ, ಕೋಪ ಬರಿಸುವ ಸೀಕ್ರೆಟ್ ಟಾಸ್ಕ್ ನ ಜಗನ್ ಗೆ ಕೊಟ್ಟಿರಬೇಕು'' ಅಂತ ರಿಯಾಝ್ ಲೆಕ್ಕಾಚಾರ ಹಾಕುತ್ತಿದ್ದರು.

ಕೋಪಗೊಂಡ ಜಗನ್

ಇತ್ತ, ''ಪರ್ಫೆಕ್ಟ್ ಆಗಿ ಮಾಡುತ್ತೇನೆ'' ಎಂದು ರಿಯಾಝ್ ಹೇಳಿದ ಮಾತು ಜಗನ್ ತಲೆಯಲ್ಲಿ ಕೊರೆಯುತ್ತಿತ್ತು.

English summary
Bigg Boss Kannada 5: Week 6: Verbal fight between Jaganath and Riyaz Basha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada