»   » ಸಮೀರಾಚಾರ್ಯ ಶರ್ಟ್ ಹರಿದು, ಏಕವಚನ ಪ್ರಯೋಗ ಮಾಡಿದ ಜಗನ್.!

ಸಮೀರಾಚಾರ್ಯ ಶರ್ಟ್ ಹರಿದು, ಏಕವಚನ ಪ್ರಯೋಗ ಮಾಡಿದ ಜಗನ್.!

Posted By:
Subscribe to Filmibeat Kannada
Bigg Boss Kannada Season 5 : ಸಮೀರ್ ಆಚಾರ್ಯ ಶರ್ಟ್ ಹರಿದು ಏಕವಚನದಲ್ಲಿ ಬೈದ ಜಗನ್ | FIlmibeat Kannada

''ನಿಮಗೆ ಆಟದಲ್ಲಿ ಸೀರಿಯಸ್ ನೆಸ್ ಇಲ್ಲ'' ಎಂದು ಕೆಲವೇ ಕೆಲವು ದಿನಗಳ ಹಿಂದೆ ಸಮೀರಾಚಾರ್ಯ ರವರಿಗೆ ಭೋದನೆ ಮಾಡಿದ ಜಗನ್ ಇದೀಗ ಆಟದಲ್ಲಿ ಓವರ್ ಸೀರಿಯಸ್ ಆಗಿ ಅದೇ ಸಮೀರಾಚಾರ್ಯ ರವರ ಶರ್ಟ್ ಹರಿದು ಹಾಕಿದ್ದಾರೆ.

ಸಾಲದಕ್ಕೆ, ಸಮೀರಾಚಾರ್ಯ ಮೇಲೆ ಏಕವಚನ ಪ್ರಯೋಗ ಮಾಡಿದ್ದಾರೆ ಮಿಸ್ಟರ್ ಜಗನ್ನಾಥ್ ಚಂದ್ರಶೇಖರ್.

ಸಮೀರಾಚಾರ್ಯಗೆ ಸೀರಿಯಸ್‌ನೆಸ್ ಇಲ್ಲ ಎಂದ 'ಗಾಂಧಾರಿ' ಜಗನ್.!

ಅಷ್ಟಕ್ಕೂ, ಇದೆಲ್ಲ ಆಗಿದ್ದು 'ಜ್ಯೂಸ್ ಬೇಕು' ಟಾಸ್ಕ್ ನಲ್ಲಿ. ಆಟದ ನಿಯಮಗಳ ಅನುಸಾರ, ಎದುರಾಳಿ ತಂಡದ ಕಬ್ಬನ್ನು ಕದಿಯಲು ಸಮೀರಾಚಾರ್ಯ ಮುಂದಾದಾಗ, ಸಮೀರಾಚಾರ್ಯ ರನ್ನ ತಡೆಯುವ ಭರದಲ್ಲಿ ಅವರ ಶರ್ಟ್ ಹರಿದು ಹಾಕಿದ್ದಾರೆ ಜಗನ್. ಮುಂದೆ ಓದಿರಿ....

'ಬಿಗ್ ಬಾಸ್' ನೀಡಿದ್ದ ಟಾಸ್ಕ್ ಏನು.?

ಮನೆಯ ಸದಸ್ಯರಲ್ಲಿರುವ ಸಹಕಾರ ಮನೋಭಾವನೆ, ಹೊಂದಾಣಿಕೆ, ಒಗ್ಗಟ್ಟು ತಿಳಿಯುವ ಸಲುವಾಗಿ 'ಬಿಗ್ ಬಾಸ್' ಈ ವಾರ 'ಒಗ್ಗಟ್ಟಿನಲ್ಲಿ ಬಲವಿದೆ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನೀಡಿದರು. ಇದರಲ್ಲಿ, ಎರಡು ತಂಡಗಳು ಕಾಲ ಕಾಲಕ್ಕೆ ನೀಡುವ ಸವಾಲಿನ ಅನುಸಾರ ಹಣ ಗಳಿಸಬಹುದು. ಟಾಸ್ಕ್ ಅಂತ್ಯದಲ್ಲಿ ಅತಿ ಹೆಚ್ಚು ಹಣ ಹೊಂದಿರುವ ತಂಡ ಜಯಶಾಲಿ ಆಗಲಿದೆ.

ಜಗನ್ ಗೆ ಕಿರಿಕಿರಿ: ನಿವೇದಿತಾ ಗೌಡ ಕಣ್ಣಲ್ಲಿ ಗಂಗಾ-ಕಾವೇರಿ.!

ಒಂದು ತಂಡದ ಕ್ಯಾಪ್ಟನ್ ಆದ ಜಗನ್

ಟಾಸ್ಕ್ ಗಾಗಿ, 'ಬಿಗ್ ಬಾಸ್' ಮನೆ ಸದಸ್ಯರನ್ನ ಎರಡು ತಂಡಗಳಾಗಿ ವಿಭಜಿಸಲಾಗಿತ್ತು. ರಿಯಾಝ್ ಒಂದು ತಂಡದ ಕ್ಯಾಪ್ಟನ್ ಆದರೆ, ಮತ್ತೊಂದು ತಂಡದ ಕ್ಯಾಪ್ಟನ್ ಆಗಿ ಜಗನ್ ಆಯ್ಕೆ ಆದರು.

''ಬಿಗ್ ಬಾಸ್'ನಲ್ಲಿ ಜಗನ್ ತೋರಿಸಬೇಡಿ'' ಎಂದ ಯುವತಿ : ಕಾರಣ ಏನು?

'ಜ್ಯೂಸ್' ಬೇಕು...

'ಒಗ್ಗಟ್ಟಿನಲ್ಲಿ ಬಲವಿದೆ' ಟಾಸ್ಕ್ ನ ಮೊದಲ ಹಂತದ ಸವಾಲು 'ಜ್ಯೂಸ್ ಬೇಕು'. 'ಬಿಗ್ ಬಾಸ್' ನೀಡುವ ಕಬ್ಬು, ಕಿತ್ತಳೆ ಹಣ್ಣು, ನಿಂಬೆ ಹಣ್ಣು ಬಳಸಿ ಸ್ಪರ್ಧಿಗಳು ಜ್ಯೂಸ್ ತಯಾರಿಸಬೇಕಿತ್ತು. ಎರಡು ನಿಮಿಷಗಳ ಒಳಗೆ ಸ್ಟೋರ್ ರೂಮ್ ನಿಂದ ಜ್ಯೂಸ್ ಸಾಮಗ್ರಿಗಳನ್ನು ತಂಡದವರು ತರಬೇಕಿತ್ತು. ಹಾಗೇ, ಸಾಮಗ್ರಿಗಳನ್ನು ಎದುರಾಳಿ ತಂಡದಿಂದ ರಕ್ಷಿಸಿಕೊಳ್ಳುವ ಹೊಣೆ ಆಯಾ ತಂಡದ್ದಾಗಿತ್ತು.

ನಟ ಜಗನ್ನಾಥ್ ಹೀಗೊಂದು ಶಪಥ ಮಾಡಿದ್ದಾರೆ.! ಏನದು.?

ಕಬ್ಬನ್ನ ಎತ್ತಿಕೊಳ್ಳಲು ಮುಂದಾದ ಸಮೀರಾಚಾರ್ಯ

ಜಗನ್ನಾಥ್ ತಂಡ ತೆಗೆದುಕೊಂಡು ಬಂದಿದ್ದ ಕಬ್ಬನ್ನ ಎತ್ತಿಕೊಂಡು ಸಮೀರಾಚಾರ್ಯ ಹೋಗುತ್ತಿರುವಾಗ, ಸಮೀರಾಚಾರ್ಯ ಶರ್ಟ್ ನ ಹಿಡಿದು ಎಳೆದು ಬಿಟ್ಟರು ಜಗನ್.

ಕೋಪಗೊಂಡ ಸಮೀರಾಚಾರ್ಯ

ಶರ್ಟ್ ನ ಹರಿದು ಹಾಕಿದ್ದಕ್ಕೆ, ಸಮೀರಾಚಾರ್ಯ ಕೋಪಗೊಂಡರು. ''ಶರ್ಟ್ ಹರಿಯುವ ಹಾಗಿಲ್ಲ'' ಎಂದು ಸಮೀರಾಚಾರ್ಯ ಹೇಳಲು ಹೋದರೆ ''ನಾನು ತಡೆಯುತ್ತಿದ್ದೇನೆ'' ಅಂತ ಏರುದನಿಯಲ್ಲಿ ಜಗನ್ ಸಬೂಬು ನೀಡಿದರು.

ಏಕವಚನ ಪ್ರಯೋಗ

''ತಡೆಯುವುದು ಬೇರೆ, ಶರ್ಟ್ ಹರಿಯುವ ಹಾಗಿಲ್ಲ'' ಅಂತ ಸಮೀರಾಚಾರ್ಯ ಹೇಳಿದರೆ, ''ಯಾರಿಗೆ ಹೇಳ್ತಾಯಿದ್ದೀಯಾ ನೀನು'' ಅಂತ ಏಕವಚನದಲ್ಲಿ ಜಗನ್ ಕೂಗಾಡಿದರು.

ಕುಂಟು ನೆಪ್ಪ ಕೊಟ್ರಾ ಜಗನ್.?

''ನಾನು ತಡೆಯುತ್ತಿದ್ದೆ, ಹೋಗಿ ಹೋಗಿ ಅಂತ ಹೇಳುತ್ತಿದೆ'' ಅಂತ ಶರ್ಟ್ ಹರಿದಿದ್ದಕ್ಕೆ ಜಗನ್ ಕುಂಟು ನೆಪ ನೀಡಿದರು. ಆದರೆ, ''ನೀವು ನನ್ನನ್ನ ತಡೆಯಲಿಲ್ಲ'' ಅಂತ ಸಮೀರಾಚಾರ್ಯ ವಾದ ಮಾಡಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ 'ಜ್ಯೂಸ್ ಬೇಕು' ಟಾಸ್ಕ್ ನಲ್ಲಿ ಉಭಯ ತಂಡಗಳು ತಲ್ಲೀನರಾದರು.

English summary
Bigg Boss Kannada 5: Week 4: Verbal fight between Jaganath and Sameeracharya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X