»   » ಸರಿ-ತಪ್ಪು ನೋಡದೆ ರಿಯಾಝ್ ಮೇಲೆ ಉಗ್ರ ಪ್ರತಾಪ ತೋರಿದ ಜಗನ್, ಚಂದ್ರು.!

ಸರಿ-ತಪ್ಪು ನೋಡದೆ ರಿಯಾಝ್ ಮೇಲೆ ಉಗ್ರ ಪ್ರತಾಪ ತೋರಿದ ಜಗನ್, ಚಂದ್ರು.!

Posted By:
Subscribe to Filmibeat Kannada
Bigg Boss Kannada Season 5 : ರಿಯಾಜ್ ಮೇಲೆ ಉಗ್ರ ಪ್ರತಾಪ ತೋರಿದ ಜಗನ್ ಚಂದ್ರು | FIlmibeat Kannada

'ಅದೃಷ್ಟ'ದಿಂದ ರಿಯಾಝ್ ಈ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿದ್ದು ಕೆಲವರಿಗೆ ಇಷ್ಟ ಆಗಿಲ್ಲ ಅಂತ ಕಾಣುತ್ತೆ. ಹೀಗಾಗಿ, ಅತ್ತ ಅಡುಗೆ ಮನೆ ಡಿಪಾರ್ಟ್ಮೆಂಟ್ ಬಗ್ಗೆ ಅನುಪಮಾ ಗೌಡ, ಕೃಷಿ, ಆಶಿತಾ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಇತ್ತ ಕ್ಯಾಪ್ಟನ್ ಮಾತನ್ನ ಕೇಳುವ ತಾಳ್ಮೆ ಕೆಲವರಿಗೆ ಇಲ್ಲವೇ ಇಲ್ಲ.!

ಅಡುಗೆ ವಿಚಾರಕ್ಕೆ ಕ್ಯಾಪ್ಟನ್ ರಿಯಾಝ್ ಹಾಗೂ ಸಮೀರಾಚಾರ್ಯ, ಚಂದನ್ ಶೆಟ್ಟಿ ಮಾತನಾಡಿಕೊಳ್ಳುತ್ತಿರುವಾಗ, ಮಧ್ಯೆ ಬಾಯಿ ಹಾಕಿ ರಂಪ ಮಾಡಿದ್ದು ಜಗನ್ನಾಥ್.!

ನಂತರ 'ಜ್ಯೂಸ್ ಬೇಕು..' ಟಾಸ್ಕ್ ನಲ್ಲಿ ನಿರ್ಧಾರಕ್ಕೆ ಬರುವ ಮೊದಲು ಮಾನದಂಡಗಳ ಬಗ್ಗೆ ಚರ್ಚೆ ಮಾಡಲು ರಿಯಾಝ್ ಮುಂದಾದಾಗಲೂ, ಅಸಡ್ಡೆ ತೋರಿದ ಜಗನ್ ನಂತರ ಮಹಾ ಯುದ್ಧಕ್ಕೆ ನಾಂದಿ ಹಾಡಿದರು. ಸರಿ-ತಪ್ಪು ಲೆಕ್ಕ ಹಾಕದೆ ರಿಯಾಝ್ ಮೇಲೆ ಜಗನ್ನಾಥ್ ಹಾಗೂ ಸಿಹಿ ಕಹಿ ಚಂದ್ರು ಉಗ್ರ ಪ್ರತಾಪ ತೋರಿದರು. ಮುಂದೆ ಓದಿರಿ....

ನೀಡಿದ್ದ ಟಾಸ್ಕ್ ಏನು.?

'ಒಗ್ಗಟ್ಟಿನಲ್ಲಿ ಬಲವಿದೆ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ಸದ್ಯ ಚಾಲ್ತಿಯಲ್ಲಿದೆ. ಇದೇ ಟಾಸ್ಕ್ ನ ಮೊದಲ ಹಂತದ ಸವಾಲಿನಲ್ಲಿ (ಜ್ಯೂಸ್ ಬೇಕು) ರಿಯಾಝ್ ಹಾಗೂ ಜಗನ್ ನೇತೃತ್ವದ ಎರಡು ತಂಡಗಳು ಕಬ್ಬು, ಕಿತ್ತಳೆ ಹಾಗೂ ನಿಂಬೆ ಹಣ್ಣಿನ ಜ್ಯೂಸ್ ಸಿದ್ಧಪಡಿಸಿದ್ದರು.

ಜಗನ್ ಗೆ ಕಿರಿಕಿರಿ: ನಿವೇದಿತಾ ಗೌಡ ಕಣ್ಣಲ್ಲಿ ಗಂಗಾ-ಕಾವೇರಿ.!

ಕ್ವಾಲಿಟಿ ಚೆಕ್ ಮಾಡಬೇಕಿತ್ತು

ಉಭಯ ತಂಡಗಳು ಜ್ಯೂಸ್ ಸಿದ್ಧಪಡಿಸಿದ ಬಳಿಕ ತಂಡದ ಕ್ಯಾಪ್ಟನ್, ಎದುರಾಳಿ ತಂಡದ ಜ್ಯೂಸ್ ಕ್ವಾಲಿಟಿ ಚೆಕ್ ಮಾಡಬೇಕಿತ್ತು. ರಿಯಾಝ್ ತಂಡದ ಜ್ಯೂಸ್ ರುಚಿ ನೋಡಿದ ಜಗನ್, ''ನಿಂಬೆ ಹಣ್ಣಿನ ಜ್ಯೂಸ್ ಸ್ವಲ್ಪ ಕಹಿ ಇದೆ. ಆದರೂ ಅಪ್ರೂವ್ ಮಾಡುತ್ತೇನೆ'' ಎಂದರು.

ಸಮೀರಾಚಾರ್ಯಗೆ ಸೀರಿಯಸ್‌ನೆಸ್ ಇಲ್ಲ ಎಂದ 'ಗಾಂಧಾರಿ' ಜಗನ್.!

ಕಿತ್ತಳೆ ಜ್ಯೂಸ್ ರಿಜೆಕ್ಟ್ ಮಾಡಿದ ರಿಯಾಝ್

ಜಗನ್ ತಂಡದ ಜ್ಯೂಸ್ ರುಚಿ ನೋಡಿದ ರಿಯಾಝ್, ''ಎರಡೂ ಜ್ಯೂಸ್ ತುಂಬಾ ನೀರಾಗಿದೆ. ಆದ್ರೆ, ಕಬ್ಬಿನ ಜ್ಯೂಸ್ ನ ನಾನು ಅಪ್ರೂವ್ ಮಾಡುತ್ತೇನೆ. ಕಿತ್ತಳೆ ಹಣ್ಣಿನ ಜ್ಯೂಸ್ ತುಂಬಾ ನೀರಾಗಿದೆ. ಕಿತ್ತಳೆ ಹಣ್ಣಿನ ರುಚಿ ಬರುತ್ತಿಲ್ಲ. ಕ್ವಾಲಿಟಿ ಮತ್ತು ಟೇಸ್ಟ್ ಮಾನದಂಡ ಅಂತ ಹೇಳಿದ ಕಾರಣ ನಾನು ಅಪ್ರೂವ್ ಮಾಡಲ್ಲ. ಆದರೂ, ನಮಗಿಂತ ನಿಮ್ಮ ಕೌಂಟ್ ಜಾಸ್ತಿ ಇದೆ'' ಎಂದುಬಿಟ್ಟರು.

''ಬಿಗ್ ಬಾಸ್'ನಲ್ಲಿ ಜಗನ್ ತೋರಿಸಬೇಡಿ'' ಎಂದ ಯುವತಿ : ಕಾರಣ ಏನು?

ಎದುರಾಳಿ ತಂಡದವರು ಕುಡಿಯಬೇಕಿತ್ತು

ತಂಡಗಳು ತಯಾರಿಸಿದ ಜ್ಯೂಸ್ ನ ಎದುರಾಳಿ ತಂಡದ ಮೂವರು, ಐದು ನಿಮಿಷದ ಒಳಗೆ ಕುಡಿದರೆ, ಕುಡಿದಷ್ಟು ಜ್ಯೂಸ್ ನ ಹಣವನ್ನು ಪಡೆಯುತ್ತಾರೆ. ಸಂಪೂರ್ಣವಾಗಿ ಕುಡಿಯದ ಜ್ಯೂಸ್ ನ ಪರಿಗಣಿಸುವಂತಿಲ್ಲ ಎಂಬ ನಿಯಮವನ್ನ 'ಬಿಗ್ ಬಾಸ್' ನೀಡಿದ್ದರು.

ಸಮೀರಾಚಾರ್ಯ ಶರ್ಟ್ ಹರಿದು, ಏಕವಚನ ಪ್ರಯೋಗ ಮಾಡಿದ ಜಗನ್.!

ಮಾನದಂಡ ಬಗ್ಗೆ ಮಾತನಾಡಲು ಮುಂದಾದ ರಿಯಾಝ್

''ಯಾವ ಮಾನದಂಡ ಮೇಲೆ ನಿರ್ಣಯವನ್ನು ಕೈಗೊಳ್ಳಬೇಕು'' ಅಂತ ಜಗನ್ ಬಳಿ ರಿಯಾಝ್ ಮಾತನಾಡಲು ಹೋದಾಗ, ''ಇಲ್ಲ ಕ್ಯಾಮರಾಗೆ ಹೇಳಿಬಿಡಿ'' ಅಂತ ಜಗನ್ ಹೇಳಿದರೆ ಹೊರತು ತಂಡದ ಹಿತಾಸಕ್ತಿಗಾಗಿ ಮಾತನಾಡುವ ಆಸಕ್ತಿ ತೋರಲಿಲ್ಲ.

ಕ್ಯಾಮರಾ ಮುಂದೆ ರಿಯಾಝ್ ಹೇಳಿದ್ದೇನು.?

''ಸಂಪೂರ್ಣವಾಗಿ ಕುಡಿಯದ ಜ್ಯೂಸ್ ನ ಪರಿಗಣಿಸುವಂತಿಲ್ಲ'' ಎಂಬ ನಿಯಮವನ್ನ 'ಬಿಗ್ ಬಾಸ್' ನೀಡಿದ್ದ ಕಾರಣ, ''ಎಲ್ಲಾ ಲೋಟಗಳಲ್ಲೂ ಸ್ವಲ್ಪ ಸ್ವಲ್ಪ ಉಳಿದಿರುವ ಕಾರಣ, ಅವರೇನಾದರೂ ಈ ಮಾನದಂಡದ ಮೇಲೆ ಅಪ್ರೂವ್ ಮಾಡಲಿಲ್ಲ ಅಂದ್ರೆ ನಾವು ಕೂಡ ಮಾಡಲ್ಲ. ಅವರು ಅಪ್ರೂವ್ ಮಾಡಿದರೆ ನಾವು ಮಾಡುತ್ತೇವೆ'' ಅಂತ ರಿಯಾಝ್ ಕ್ಯಾಮರಾ ಮುಂದೆ ಹೇಳಿದರು.

ಉಲ್ಟಾ ಹೊಡೆದ ಜಗನ್

ಕ್ಯಾಮರಾ ಮುಂದೆ ರಿಯಾಝ್ ಹೇಳಿ ಬಂದ ಬಳಿಕ, ಕ್ಯಾಮರಾ ಮುಂದೆ ಹೋದ ಜಗನ್, ''ಎಲ್ಲವನ್ನೂ ಡಿಸ್ ಅಪ್ರೂವ್ ಮಾಡುತ್ತೇನೆ'' ಎಂದುಬಿಟ್ಟರು. ಅದಕ್ಕೆ, ''ನಾವೂ ಡಿಸ್ ಅಪ್ರೂವ್ ಮಾಡುತ್ತೇವೆ. ಹೋದ ಬಾರಿ ಕ್ವಾಲಿಟಿಗೆ ಡಿಸ್ ಅಪ್ರೂವ್ ಮಾಡಿದ್ದಕ್ಕೆ, ಇಲ್ಲಿ ಡಿಸ್ ಅಪ್ರೂವ್ ಮಾಡುತ್ತಿದ್ದಾರೆ'' ಅಂತ ರಿಯಾಝ್ ಹೇಳಿದರು.

ಮಹಾ ಯುದ್ಧಕ್ಕೆ ನಾಂದಿ

''ಎಲ್ಲವನ್ನೂ ಡಿಸ್ ಅಪ್ರೂವ್ ಮಾಡುತ್ತೇನೆ'' ಅಂತ ಜಗನ್ ಹೇಳಿದ್ಮೇಲೆ, 'ಬಿಗ್ ಬಾಸ್' ಮನೆಯಲ್ಲಿ ಮಹಾ ಯುದ್ಧವೇ ನಡೆಯಿತು. ''ಎದುರಾಳಿ ತಂಡ ಮಾಡಿದ್ದು ಕಬ್ಬಿನ ಜ್ಯೂಸ್ ಅಲ್ಲವೇ ಅಲ್ಲ'' ಅಂತ ಜೆಕೆ ಆರೋಪ ಮಾಡಿದರು. ಜೆಕೆ ಆಡಿದ ಮಾತಿಗೆ ಗರಂ ಆಗಿ ಆಶಿತಾ ಕೂಗಾಡಿದರು.

ಜಗನ್-ಅನುಪಮಾ ನಡುವೆ ವಾಕ್ಸಮರ

ಜಗನ್ ವಿರುದ್ಧ ಕೃಷಿ ಹಾಗೂ ಅನುಪಮಾ ಗೌಡ ದನಿ ಎತ್ತಿದಾಗ, ''ನಿಮ್ಮ ಟೀಮ್ ಜೊತೆ ಮೊದಲು ಮಾತನಾಡಿಕೊಳ್ಳಿ, ಮೊದಲು ನಾವು ತುಂಬಾ ಫೇರ್ ಗೇಮ್ ಅಡಿದ್ವಿ'' ಅಂತ ಜಗನ್ ಹೇಳಿದರು. ಅದಕ್ಕೆ, ''ಎಲ್ಲವನ್ನ ತೆಗೆದು ಬಿಸಾಕಿ. ಕ್ಯಾಪ್ಟನ್ ಗಳ ಜಗಳಕ್ಕೆ ಎಲ್ಲರ ಮಧ್ಯದಲ್ಲೂ ಗಲಾಟೆ ಆಗುತ್ತಿದೆ. ನಾವು ನಮ್ಮ ಅಭಿಪ್ರಾಯವನ್ನು ಹೇಳುವ ಹಾಗೇ ಇಲ್ವಾ.?'' ಅಂತ ಅನುಪಮಾ ಜೋರು ಮಾಡುತ್ತಿದ್ದಂತೆಯೇ, ''ಕ್ಯಾಪ್ಟನ್ ಜಗಳ ಅಲ್ಲ, ನಮ್ಮ ಟೀಮ್ ಕೂಡ ಕಷ್ಟ ಪಟ್ಟಿದ್ದಾರೆ'' ಅಂತ ಕಣ್ಣು ಕೆಂಪಗೆ ಮಾಡಿಕೊಂಡು ಜಗನ್ ನುಡಿದರು.

ಜಗನ್ ಕೊಟ್ಟ ಸಮಜಾಯಿಷಿ ಏನು.?

''ಎರಡೂ ಟೀಮ್ ಕೂಡ ಕಷ್ಟ ಪಟ್ಟು ಮಾಡಿದ್ದಾರೆ. ಅದನ್ನ ಪರಿಶೀಲಿಸಿ'' ಅಂತ ಕೃಷಿ ಕೇಳಿಕೊಂಡರೆ, ''ಅವರು ಡಿಸ್ ಅಪ್ರೂವ್ ಮಾಡಿದ್ಮೇಲೆ, ನಾನು ಮಾಡಿದ್ದು'' ಅಂತ ಜಗನ್ ಸಮಜಾಯಿಷಿ ನೀಡಿದರು.

ಕೃಷಿ ಜೊತೆ ಜಗನ್ ವಾಗ್ವಾದ

ನಿಜ ಹೇಳ್ಬೇಕಂದ್ರೆ, ಯಾವುದೇ ಲೋಟವನ್ನ ರಿಯಾಝ್ ಮೊದಲು ಡಿಸ್ ಅಪ್ರೂವ್ ಮಾಡಿರಲಿಲ್ಲ. ರಿಯಾಝ್ ಹೇಳಲು ಬಂದಿದ್ದನ್ನ, ಕ್ಯಾಮರಾ ಮುಂದೆ ರಿಯಾಝ್ ಹೇಳಿದ್ದನ್ನ ಕೇಳಿಸಿಕೊಳ್ಳುವ ತಾಳ್ಮೆ ಇಲ್ಲದ ಜಗನ್ ಕೃಷಿ ಜೊತೆಗೂ ವಾಗ್ವಾದಕ್ಕೆ ಇಳಿದರು.

ರಿಯಾಝ್ ಡಿಸ್ ಅಪ್ರೂವ್ ಮಾಡಿರಲಿಲ್ಲ

''ನಾನು ಡಿಸ್ ಅಪ್ರೂವ್ ಮಾಡೇ ಇಲ್ಲ'' ಅಂತ ರಿಯಾಝ್ ಒತ್ತಿ ಒತ್ತಿ ಹೇಳುತ್ತಿದ್ದರೂ, ಅದನ್ನ ನಂಬಲು ಯಾರೂ ರೆಡಿ ಇರಲಿಲ್ಲ. ''ಜನ ನೋಡ್ತಾರೆ... ಯಾರು ಪ್ರಾಮಾಣಿಕವಾಗಿ ಆಡಿದ್ದಾರೆ ಅಂತ'' ಎನ್ನುತ್ತಿದ್ದರು ಜಗನ್.

ಮಧ್ಯ ಪ್ರವೇಶಿಸಿದ ಸಿಹಿ ಕಹಿ ಚಂದ್ರು

ವಾದ, ವಿವಾದ ತಾರಕಕ್ಕೆ ಏರುತ್ತಿದ್ದಂತೆಯೇ, ''ಯುದ್ಧ ಮಾಡುತ್ತಿದ್ದೀವಾ ನಾವು... ಥರ್ಡ್ ವರ್ಲ್ಡ್ ವಾರ್ ನಡೆಯುತ್ತಿದ್ಯಾ... ಸ್ಟಾಪ್ ಇಟ್'' ಎನ್ನುತ್ತ ಪರಿಸ್ಥಿತಿಯನ್ನ ನಿಭಾಯಿಸಲು ಸಿಹಿ ಕಹಿ ಚಂದ್ರು ಮುಂದಾದರು.

ಸಿಹಿ ಕಹಿ ಚಂದ್ರುಗೆ ಜೋರು ಮಾಡಿದ ಜಗನ್

''ನನ್ನ ಮೇಲೆ ಯಾರೇ ಕೂಗಾಗಿಡರೂ, ನನಗೆ ಇಷ್ಟ ಆಗಲ್ಲ'' ಎಂದು ಸಿಹಿ ಕಹಿ ಚಂದ್ರುಗೆ ಜಗನ್ ಜೋರು ಮಾಡಿದರು.

ರಿಯಾಝ್ ಮೇಲೆ ಚಂದ್ರುಗೆ ಕೋಪ

''ಜಗಳ ಆಡಬೇಡಿ. ಕೂತು ಬಗೆಹರಿಸಿ'' ಅಂತ ಹೇಳುತ್ತಿದ್ದ ಸಿಹಿ ಕಹಿ ಚಂದ್ರು ಬಳಿಕ ರಿಯಾಝ್ ಮೇಲೆ ಕೋಪಗೊಂಡರು.

ರಿಯಾಝ್ ಹೇಳಿದ್ದು ತಪ್ಪಂತೆ.!

''ನೀವು ಲೆಕ್ಕಕ್ಕೆ ತೆಗೆದುಕೊಂಡರೆ, ನಾವು ತೆಗೆದುಕೊಳ್ಳುತ್ತೇವೆ, ಇಲ್ಲ ಅಂದ್ರೆ ಇಲ್ಲ ಅಂತ ನೀವು ಹೇಳುವುದೇ ತಪ್ಪು. ಕ್ಯಾಮರಾ ಮುಂದೆ ಹೋಗುವ ಮುನ್ನ ನೀವಿಬ್ಬರು ಮಾತನಾಡಿಕೊಳ್ಳಬೇಕು. ನಿಮ್ಮ ಒಪ್ಪಂದ ಆದ್ಮೇಲೆ ಕ್ಯಾಮರಾ ಮುಂದೆ ಹೋಗಬೇಕು. ನೀವಿಬ್ಬರು ಮಾತನಾಡಲಿಲ್ಲ, ನಾನು ನೋಡುತ್ತಿದ್ದೇನೆ'' ಎಂದುಬಿಟ್ಟರು ಸಿಹಿ ಕಹಿ ಚಂದ್ರು. (ಇದರ ಬಗ್ಗೆ ಚರ್ಚೆ ಮಾಡಲು ಜಗನ್ ಬಳಿ ರಿಯಾಝ್ ಹೋದಾಗ ಚಂದ್ರು ಗಮನಿಸಿರಲಿಲ್ಲವೇ.?!)

ರಿಯಾಝ್ ಮೇಲೆ ಕೂಗಾಡಿದ ಸಿಹಿ ಕಹಿ ಚಂದ್ರು

''ನಾನು ಮಾತನಾಡಲು ಹೋದೆ, ಅವರು ನನ್ನನ್ನ ಕಳುಹಿಸಿದರೋ, ಇಲ್ವೋ ಕೇಳಿ ಮೊದಲು...'' ಅಂತ ರಿಯಾಝ್ ಹೇಳುತ್ತಿದ್ದರೂ, ''ನೀವಿಬ್ಬರೂ ಮಾತನಾಡಲಿಲ್ಲ. ನೀವೇ ತೀರ್ಮಾನ ಕೊಡೋದನ್ನ ನಾನು ಒಪ್ಪಿಕೊಳ್ಳುವುದಿಲ್ಲ. ಟೀಮ್ ಮೆಂಬರ್ಸ್ ಗೆ ಬೆಲೆ ಇಲ್ಲ'' ಅಂತ ರಿಯಾಝ್ ಮೇಲೆ ಸಿಹಿ ಕಹಿ ಚಂದ್ರು ಕೂಡ ಕೂಗಾಡಿದರು.

ಅಪ್ರೂವ್ ಮಾಡುವ ಬಗ್ಗೆ ರಿಯಾಝ್ ಮಾತು

ಇಷ್ಟೆಲ್ಲ ಜಗಳ ಆದ ಬಳಿಕ, ಜ್ಯೂಸ್ ಅಪ್ರೂವ್ ಮಾಡುವ ಬಗ್ಗೆ ರಿಯಾಝ್ ತಮ್ಮ ತಂಡದ ಜೊತೆ ಚರ್ಚಿಸುತ್ತಿದ್ದರು. ಆದ್ರೆ, ''ತಪ್ಪು ಮಾಡಿದ್ದೇನೆ ಅಂತ ಅವರಿಗೆ ಅನಿಸಿದೆ. ಅದಕ್ಕೆ ಚೇಂಜ್ ಮಾಡುತ್ತಿದ್ದಾರೆ'' ಅಂತ ಜಗನ್ ತಮ್ಮ ತಂಡದ ಜೊತೆ ಮಾತನಾಡಿಕೊಳ್ಳುತ್ತಿದ್ದರು.

English summary
Bigg Boss Kannada 5: Week 4: Verbal fight between Jaganath, Sihi Kahi Chandru and Riyaz Basha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X