»   » ಸಿಡುಕುವ, ನಾಟಕ ಆಡುವ ಅನುಪಮಾ ಗೌಡ ಈ ವಾರ ಔಟ್ ಆಗ್ಬೇಕ್ ಅಷ್ಟೆ.!

ಸಿಡುಕುವ, ನಾಟಕ ಆಡುವ ಅನುಪಮಾ ಗೌಡ ಈ ವಾರ ಔಟ್ ಆಗ್ಬೇಕ್ ಅಷ್ಟೆ.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಪ್ರಮೋದ್ ಎಂಬುವರು ಅನುಪಮಾ ಗೌಡ ಮೇಲೆ ಫುಲ್ ಗರಂ | Oneindia Kannada

''ಚಿಕ್ಕ ಚಿಕ್ಕ ವಿಷಯಕ್ಕೆ ಚಂದನ್ ಶೆಟ್ಟಿ ಮೇಲೆ ಸಿಡುಕುವ, ನಾಟಕ ಆಡುವ ಅನುಪಮಾ ಗೌಡ ಈ ವಾರ ಔಟ್ ಆಗ್ಬೇಕ್ ಅಷ್ಟೆ.!'' - ಹಾಗಂತ ನಾವು ಹೇಳ್ತಿಲ್ಲ ಸ್ವಾಮಿ. ಬದಲಾಗಿ 'ಬಿಗ್ ಬಾಸ್' ಕಾರ್ಯಕ್ರಮವನ್ನ ಬಿಟ್ಟೂಬಿಡದೆ ನೋಡುತ್ತಿರುವ ವೀಕ್ಷಕರೊಬ್ಬರು ಆಗ್ರಹಿಸಿದ್ದಾರೆ.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ತಮ್ಮ ಬ್ರೇಕಪ್ ಕಹಾನಿ ಹೇಳಿಕೊಂಡಿರುವ ಅನುಪಮಾ ಗೌಡ ರನ್ನ ಕಂಡ್ರೆ ಕೆಲ ವೀಕ್ಷಕರಿಗೆ ಕಿರಿಕಿರಿ ಆಗುತ್ತಿದೆ. ಹಾಲು ಮುಚ್ಚಿಟ್ಟು, ಅದನ್ನ ಸಮರ್ಥಿಸಿಕೊಂಡು... ಬಳಿಕ ಬೇರೆಯವರು ಮಾಡುವ ಅಡುಗೆ ಬಗ್ಗೆ ಕಾಮೆಂಟ್ ಮಾಡುವ ಅನುಪಮಾ ಗೌಡ ಬಗ್ಗೆ ಮೈಸೂರಿನ ಪ್ರಮೋದ್ ಎಂಬುವವರು ಬೇಸರ ವ್ಯಕ್ತಪಡಿಸಿದ್ದಾರೆ.

ಸಾಲದಕ್ಕೆ, ''ಅನುಪಮಾ ಗೌಡ ರಿಂದ ಯಾವುದೇ ಟಿ.ಆರ್.ಪಿ ಗಿಟ್ಟಲ್ಲ. ಹೀಗಾಗಿ ಈ ವಾರ ಅನುಪಮಾ ಗೌಡ ರನ್ನ ಔಟ್ ಮಾಡಿ'' ಅಂತ ಪ್ರಮೋದ್ 'ಬಿಗ್ ಬಾಸ್' ಬಳಿ ಮನವಿ ಮಾಡಿಕೊಂಡಿದ್ದಾರೆ. ಮುಂದೆ ಓದಿರಿ...

ವೈರಲ್ ಆಗಿದೆ ವಿಡಿಯೋ

ಅನುಪಮಾ ಗೌಡ ಬಗ್ಗೆ ಮೈಸೂರಿನ ಪ್ರಮೋದ್ ಎಂಬುವರು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟಕ್ಕೂ, ಅನುಪಮಾ ಗೌಡ ಬಗ್ಗೆ ಪ್ರಮೋದ್ ಏನು ಹೇಳಿದರು ಅಂದ್ರೆ.....

ಮುಂಚೆ ಫ್ಯಾನ್ ಆಗಿದ್ದೆ.! ಆದ್ರೆ ಈಗ ಇಲ್ಲ.!

''ನಿಜ ಹೇಳಬೇಕು ಅಂದ್ರೆ, 'ಬಿಗ್ ಬಾಸ್' ನೋಡುವ ಮುಂಚೆ ನಾನು ಅನುಪಮಾ ಗೌಡ ಫ್ಯಾನ್ ಆಗಿದ್ದೆ. ಆದ್ರೆ, 'ಬಿಗ್ ಬಾಸ್' ಒಳಗೆ ಹೋದ ಮೇಲೆ ನಿಮ್ಮ ನೇಚರ್ ಏನು ಅಂತ ನಮಗೆ ಗೊತ್ತಾಯ್ತು'' - ಪ್ರಮೋದ್, ಮೈಸೂರು.

ಹೊಟ್ಟೆ ಉರ್ಕೊಳ್ಳುವ 'ಡವ್ ರಾಣಿ' ಅನುಪಮಾಗೆ ಬೆಂಡೆತ್ತಿದ ನೆಟ್ಟಿಗರು.!

ಸುಮ್ನೆ ಸಿಡುಕು ಯಾಕೆ.?

''ಚಿಕ್ಕ ಚಿಕ್ಕ ವಿಷಯಕ್ಕೆ ಚಂದನ್ ಶೆಟ್ಟಿ ಮೇಲೆ ಸಿಡುಕುತ್ತೀರಾ. ನಿಮಗೆ ಯಾರು ಸ್ಪರ್ಧಿ ಅಂತ ಅನಿಸುತ್ತಾರೆ, ಅವರ ಮೇಲೆ ಎಲ್ಲ ವಿಷಯಕ್ಕೂ ಕೋಪ ಮಾಡಿಕೊಳ್ಳುತ್ತೀರಾ. ಜೆಕೆ ಗೆ ಸಿಕ್ಕಾಪಟ್ಟೆ ಬಕೆಟ್ ಹಿಡಿಯುತ್ತೀರಾ...'' - ಪ್ರಮೋದ್, ಮೈಸೂರು.

ಅಡುಗೆ ಸಾಮಾನು ಮೇಲೆ ನಿಗಾ ಇಟ್ರೆ ಅನುಪಮಾಗೆ ಹಿಂಸೆ, ಹೊಟ್ಟೆ ಉರಿ.!

ಇಂತಹ ನಾಟಕ ಬೇಕಾ.?

''ನಿಮ್ಮದು-ಜಗನ್ ದು ಏನೇ ಇದ್ದರೂ, ಅದು ಆಚೆ. ನನಗೆ ಬ್ರೇಕಪ್ ಆಗಿದೆ. ಟಾಟ್ಯೂ ಇದೆ ಅಂತ ಮೈಕ್ ಹಾಕೊಂಡು ಹೇಳಬೇಕಾ.? ಮೈಕ್ ತೆಗೆಯುವ ಹಾಗಿಲ್ಲ, ಒಪ್ಪಿಕೊಳ್ಳುತ್ತೇನೆ. ಆದ್ರೆ, ಅದರ ಬಗ್ಗೆ ಚರ್ಚೆ ಮಾಡಲು ಅದು ವೇದಿಕೆಯೇ.? ಹೊರಗಡೆ ಮಾತನಾಡಲು ಜಗನ್ ಎಲ್ಲೂ ಸಿಕ್ಕೇ ಇಲ್ವಾ.? ನೀವೆಲ್ಲ ಒಟ್ಟಿಗೆ ಕಲರ್ಸ್ ನಲ್ಲಿ ವರ್ಕ್ ಮಾಡಿದ್ದೀರಿ ತಾನೆ.? ಈ ನಾಟಕ ಎಲ್ಲ ಯಾಕೆ ಆಡುತ್ತೀರಾ.?'' - ಪ್ರಮೋದ್, ಮೈಸೂರು

ಜಗನ್ ಜೊತೆ ಪ್ರೀತಿ ಮುರಿದು ಬಿದ್ದಿದ್ದೇಕೆ.? ಅನುಪಮಾ ಗೌಡ ಕಣ್ಣೀರಧಾರೆ.!

'ಬಿಗ್ ಬಾಸ್'ಗೆ ಗೌರವ ಕೊಡಿ

''ಮೊದಲು ಬಿಗ್ ಬಾಸ್ ಗೆ ಗೌರವ ಕೊಡುವುದನ್ನು ಕಲಿಯಿರಿ. ರಿಯಾಝ್ ಕ್ಯಾಪ್ಟನ್ ಆದಾಗ 'ಮೋಸ' ಅಂತ ವ್ಯಂಗ್ಯವಾಗಿ ಹೇಳ್ತೀರಾ. ಹೊರಗೆ ಬನ್ನಿ ರಿಯಾಝ್ ಎಂತಹ ದೊಡ್ಡ ಸೆಲೆಬ್ರಿಟಿ ಅಂತ ನಿಮಗೆ ಗೊತ್ತಾಗುತ್ತೆ'' - ಪ್ರಮೋದ್, ಮೈಸೂರು

'ಬಿಗ್ ಬಾಸ್' ಮೋಸ ಮಾಡಿದ್ರಾ.!? ಅನುಪಮಾ ಗೌಡ ಮಾಡಿದ್ದು ಇದೆಂಥಾ ಆರೋಪ.?!

ಅಂತಹ ಸ್ಪರ್ಧಿ ನಮಗೆ ಬೇಡ

''ದಯವಿಟ್ಟು ಬಿಗ್ ಬಾಸ್, ನನ್ನದೊಂದು ಕೋರಿಕೆ. ಕಳೆದ ವಾರ ನ್ಯಾಯವಾಗಿ ದಯಾಳ್ ಔಟ್ ಆಗಿದ್ದಾರೆ. ಅದೇ ರೀತಿ ಈ ವಾರ ಅನುಪಮಾ ಗೌಡ ಔಟ್ ಆಗಬೇಕು ಅಷ್ಟೆ. ಅನುಪಮಾ ಇಂದ ನಿಮಗೆ ಟಿ.ಆರ್.ಪಿ ಏನೂ ಗಿಟ್ಟಲ್ಲ. ಅಂತಹ ಸ್ಪರ್ಧಿ ನಮಗೆ ಬೇಡ. ದಯವಿಟ್ಟು ಆಚೆ ಕಳುಹಿಸಿ'' - ಪ್ರಮೋದ್, ಮೈಸೂರು

English summary
Bigg Boss Kannada 5: Week 4: Viewer Pramod's opinion on Anupama Gowda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X