»   » ಜಗನ್, ಆಶಿತಾ ಕಂಡ್ರೆ ಉರಿದು ಬೀಳ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.!

ಜಗನ್, ಆಶಿತಾ ಕಂಡ್ರೆ ಉರಿದು ಬೀಳ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಆಶಿತಾ ಮತ್ತು ಜಗನ್ ನ ಕಂಡ್ರೆ ವೀಕ್ಷಕರಿಗೆ ಕೋಪ

'ಗಾಂಧಾರಿ' ಧಾರಾವಾಹಿ ಖ್ಯಾತಿಯ ಜಗನ್ ಹಾಗೂ 'ನೀಲಿ' ಧಾರಾವಾಹಿ ಖ್ಯಾತಿಯ ಆಶಿತಾ ಕಂಡ್ರೆ ವೀಕ್ಷಕರು ಉರಿದು ಬೀಳ್ತಿದ್ದಾರೆ. ಇಬ್ಬರ ನಡವಳಿಕೆ, ವರ್ತನೆ ನೋಡಿ 'ಬಿಗ್ ಬಾಸ್' ಪ್ರಿಯರು ಕೆಂಡ ಕಾರುತ್ತಿದ್ದಾರೆ.

ಜಯಶ್ರೀನಿವಾಸನ್ ಸೇರಿದಂತೆ 'ಬಿಗ್ ಬಾಸ್' ಮನೆಯ ಕೆಲ ಸದಸ್ಯರಿಗೆ ಮರ್ಯಾದೆ ಕೊಡದೆ, ಕೇವಲವಾಗಿ ಮಾತನಾಡುವ ಆಶಿತಾ ವರ್ತನೆ ವೀಕ್ಷಕರಿಗೆ ಬೇಸರ ತಂದಿದೆ. ಇನ್ನೂ ದೊಡ್ಡವರು-ಚಿಕ್ಕವರು ಎನ್ನದೆ ಇದ್ದಕ್ಕಿದ್ದಂತೆ ಉಗ್ರ ಪ್ರತಾಪ ತೋರುವ ಜಗನ್ನಾಥ್ ಚಂದ್ರಶೇಖರ್ ವಿರುದ್ಧ ಕೂಡ ವೀಕ್ಷಕರ ರೋಷಾಗ್ನಿ ಜ್ವಾಲೆ ಉರಿಯುತ್ತಿದೆ.

ಜಗನ್ ಜೊತೆ ಪ್ರೀತಿ ಮುರಿದು ಬಿದ್ದಿದ್ದೇಕೆ.? ಅನುಪಮಾ ಗೌಡ ಕಣ್ಣೀರಧಾರೆ.!

ಈ ಇಬ್ಬರೂ ಆದಷ್ಟು ಬೇಗ 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗಬೇಕು ಅಂತ ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸುತ್ತಿದ್ದಾರೆ. ಮುಂದೆ ಓದಿರಿ....

ವರ್ಸ್ಟ್ ಕಂಟೆಸ್ಟೆಂಟ್ ಯಾರು.?

''ಸೆಲೆಬ್ರಿಟಿ ಸ್ಪರ್ಧಿಗಳ ಪೈಕಿ ವರ್ಸ್ಟ್ ಕಂಟೆಸ್ಟೆಂಟ್ ಗಳಂದ್ರೆ ಅದು ಜಗನ್ನಾಥ್ ಚಂದ್ರಶೇಖರ್ ಹಾಗೂ ಆಶಿತಾ'' ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ.

ಸಮೀರಾಚಾರ್ಯಗೆ ಸೀರಿಯಸ್‌ನೆಸ್ ಇಲ್ಲ ಎಂದ 'ಗಾಂಧಾರಿ' ಜಗನ್.!

'ಶಿಟ್' ಎಂದ ಆಶಿತಾ

'ಬೂಟಾಟಿಕೆ' ಟಾಸ್ಕ್ ನಲ್ಲಿ ರಿಯಾಝ್ ಗೆದ್ದಾಗ, ಆಶಿತಾ 'ಶಿಟ್' ಎಂದರು. ಈ ಮಾತು ವೀಕ್ಷಕರನ್ನ ಕೆರಳಿಸಿದೆ.

ಟ್ರೋಲ್ ಆಗುತ್ತಿರುವ ಜಗನ್, ಆಶಿತಾ

ಆಶಿತಾ ರವರನ್ನ ಟ್ರೋಲ್ ಹುಡುಗರು 'ಬಕೆಟ್'ಗೆ ಹೋಲಿಕೆ ಮಾಡುತ್ತಿದ್ದಾರೆ.

ಟ್ರೋಲ್ ಪೇಜ್ ಗಳಿಗೆ ಜಗನ್, ಆಶಿತಾ ಆಹಾರ

ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಮೇಲೆ ಉಗ್ರಪ್ರತಾಪ ತೋರಿದ ಆಶಿತಾ-ಜಗನ್ ಟ್ರೋಲ್ ಪೇಜ್ ಗಳಿಗೆ ಆಹಾರ ಆಗಿರುವುದು ಹೀಗೆ....

ಪೌರುಷ ತೋರುವ ಜಗನ್

ಹುಡುಗಿಯರ ಹತ್ತರ ನೈಸ್ ಆಗಿ ಮಾತನಾಡುವ ಜಗನ್, ಸಮೀರಾಚಾರ್ಯ ಹಾಗೂ ಜಯಶ್ರೀನಿವಾಸನ್ ಮುಂದೆ ಪೌರುಷ ತೋರಿಸುತ್ತಾರಂತೆ.

ಮೊದಲು ಹೊರ ಹಾಕಿ

''ಆಶಿತಾ ಹಾಗೂ ಜಗನ್ನಾಥ್ ರವರನ್ನ 'ಬಿಗ್ ಬಾಸ್' ಮನೆಯಿಂದ ಹೊರಗೆ ಕಳುಹಿಸಬೇಕು'' ಎಂದು ವೀಕ್ಷಕರು ಒತ್ತಾಯಿಸುತ್ತಿದ್ದಾರೆ.

'ಸೂಪರ್ ಹೀರೋ' ಜಗನ್

''ತಮಗೆ ತಾವೇ ಸೂಪರ್ ಹೀರೋ ಎಂದುಕೊಂಡಿದ್ದಾರೆ ಜಗನ್. ಇಂತಹ ವರ್ತನೆಯನ್ನ ಈ ಕೂಡಲೆ ನಿಲ್ಲಿಸಬೇಕು. ಜಗನ್ ತುಂಬಾ ಚೀಪ್ ಆಗಿ ಕಾಣುತ್ತಿದ್ದಾರೆ'' ಎಂದು ಮಂಜುಳಾ ಗುರು ಎಂಬುವರು ಟ್ವೀಟ್ ಮಾಡಿದ್ದಾರೆ.

ಆಶಿತಾ ಆಟಿಟ್ಯೂಡ್ ಬಗ್ಗೆ ವೀಕ್ಷಕರು ಗರಂ

'ಜಯಶ್ರೀನಿವಾಸನ್ ಅವರು ಇರಬೇಕಾ ಅಥವಾ ಹೋಗಬೇಕಾ' ಅಂತ ಸುದೀಪ್ ಕೇಳಿದಾಗ, ಅದಕ್ಕೆ ಆಶಿತಾ ಕೊಟ್ಟ ಪ್ರತಿಕ್ರಿಯೆ ಕೂಡ ವೀಕ್ಷಕರನ್ನ ಕೆರಳಿಸಿದೆ.

ಈ ಟ್ವೀಟ್ ನೋಡಿ

ಜಗನ್ನಾಥ್ ಬಗ್ಗೆ ವೀಕ್ಷಕರಲ್ಲಿ ಎಷ್ಟು ಅಸಮಾಧಾನ ಮೂಡಿದೆ ಎಂಬುದಕ್ಕೆ ಈ ಟ್ವೀಟ್ ಸಾಕ್ಷಿ.

ಜಗನ್ ಹೀಗೆ ಆಡ್ತಿದ್ರೆ...

''ಜಗನ್ ಹೀಗೆ ಆಡುತ್ತಿದ್ದರೆ, ಭವಿಷ್ಯ ತುಂಬಾ ಕಷ್ಟ ಇದೆ'' ಎಂದು ವೀಕ್ಷಕರೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿಮ್ಮ ಅಭಿಪ್ರಾಯ ಏನು.?

ಜಗನ್ನಾಥ್ ಚಂದ್ರಶೇಖರ್ ಹಾಗೂ ಆಶಿತಾ ವರ್ತನೆ ಬಗ್ಗೆ ನೀವೇನಂತೀರಿ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ... ಕಳೆಗಿರುವ ಕಾಮೆಂಟ್ ಬಾಕ್ಸ್ ಮೂಲಕ.

English summary
Bigg Boss Kannada 5: Week 3: Viewers are annoyed with Ashita Chandrappa and Jaganath Chandrashekar's behaviour.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X