»   » ದಬ್ಬಾಳಿಕೆ ಮಾಡುತ್ತಿರುವ ಸೆಲೆಬ್ರಿಟಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.!

ದಬ್ಬಾಳಿಕೆ ಮಾಡುತ್ತಿರುವ ಸೆಲೆಬ್ರಿಟಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆಗಿ ಒಂದು ವಾರ ಕಳೆದಿದೆ ಅಷ್ಟೆ. ಅಷ್ಟು ಬೇಗ 'ಬಿಗ್ ಬಾಸ್' ಮನೆ ಇಬ್ಭಾಗ ಆಗಿದೆ. ಸೆಲೆಬ್ರಿಟಿಗಳೆಲ್ಲ ಒಂದು ಗುಂಪುಗಾಗಿದ್ದರೆ, ಜನಸಾಮಾನ್ಯರದ್ದೇ ಮತ್ತೊಂದು ಗುಂಪು.

ಒಡೆದ ಮನೆಯಂತಾಗಿರುವ 'ದೊಡ್ಮನೆ'ಯಲ್ಲಿ 'ಸೇಲ್ಸ್ ಮ್ಯಾನ್' ದಿವಾಕರ್ ಕಂಡ್ರೆ ಕೆಲ ಸೆಲೆಬ್ರಿಟಿ ಸ್ಪರ್ಧಿಗಳಿಗೆ ಕಿರಿಕಿರಿ. ಇದೇ ಕಾರಣಕ್ಕೆ ಆಗಾಗ ದಿವಾಕರ್ ಹಾಗೂ ಸೆಲೆಬ್ರಿಟಿ ಸ್ಪರ್ಧಿಗಳ (ತೇಜಸ್ವಿನಿ, ಸಿಹಿ ಕಹಿ ಚಂದ್ರು, ದಯಾಳ್ ಪದ್ಮನಾಭನ್) ನಡುವೆ ವಾದ-ವಾಗ್ವಾದ-ವಾಕ್ಸಮರ ನಡೆಯುತ್ತಿದೆ.

ವೀಕ್ಷಕರು ಎಷ್ಟು ಸೂಕ್ಷ್ಮವಾಗಿ 'ಬಿಗ್ ಬಾಸ್' ನೋಡ್ತಾರೆ ಅನ್ನೋಕೆ ಈ ಕಾಮೆಂಟ್ ಸಾಕ್ಷಿ.!

ಕಾಲು ಕೆರೆದುಕೊಂಡು ಜನಸಾಮಾನ್ಯರ ಜೊತೆ ಜಗಳಕ್ಕೆ ಇಳಿಯುತ್ತಿರುವ ಸೆಲೆಬ್ರಿಟಿಗಳ ವಿರುದ್ಧ 'ಬಿಗ್ ಬಾಸ್' ವೀಕ್ಷಕರು ಕೋಪಿಸಿಕೊಂಡಿದ್ದಾರೆ. 'ಕಾಮನ್ ಮ್ಯಾನ್' ಮೇಲೆ ದಬ್ಬಾಳಿಕೆ ಮಾಡುತ್ತಿರುವ ಸೆಲೆಬ್ರಿಟಿ ಸ್ಪರ್ಧಿಗಳ ವಿರುದ್ಧ ಫೇಸ್ ಬುಕ್ ನಲ್ಲಿ ವೀಕ್ಷಕರು ತಮ್ಮ ಅಸಮಾಧಾನವನ್ನು ಹೊರಹಾಕಿರುವುದು ಹೀಗೆ....

ಸೆಲೆಬ್ರಿಟಿಗಳ ವಿರುದ್ಧ ವೀಕ್ಷಕರು ಗರಂ

''ಎಲ್ಲರೂ ಜನಸಾಮಾನ್ಯರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಜನಸಾಮಾನ್ಯರ ಮಾತನ್ನು ಯಾರೂ ಕೇಳಿಸಿಕೊಳ್ಳುವುದಿಲ್ಲ. ಮನುಷ್ಯನ ಯೋಗ್ಯತೆ ತಿಳಿಯೋದು ಗುಣದಿಂದ ಸ್ಟೇಟಸ್ ನಿಂದ ಅಲ್ಲ'' ಎನ್ನುವುದು ವೀಕ್ಷಕರ ಅಭಿಪ್ರಾಯ

'ದಿವಾಕರ್ ಜಾಗದಲ್ಲಿ ಪ್ರಥಮ್ ಇದ್ದಿದ್ರೆ, ಸಿಂಗಲ್ ಆಗಿ ಎಲ್ಲರ ನೀರಿಳಿಸ್ತಾಯಿದ್ದ.!'

ಜನಸಾಮಾನ್ಯರೇ ಮೇಲು

''ಅವರೆಲ್ಲರೂ ಸೀರಿಯಲ್ ಕಲಾವಿದರಷ್ಟೇ. ಆದ್ರೆ, ಎಲ್ಲರೂ ಸೂಪರ್ ಸೆಲೆಬ್ರಿಟಿಗಳಂತೆ ಜನಸಾಮಾನ್ಯರ ಮುಂದೆ ನಡೆದುಕೊಳ್ಳುತ್ತಾರೆ. ಅವರೆಲ್ಲರಿಗಿಂತ ಜನಸಾಮಾನ್ಯರೇ ಮೇಲು'' ಅಂತ ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.

ರಿಯಾಝ್ ಹೇಳಿದ್ರಲ್ಲಿ ತಪ್ಪೇನಿದೆ.? ಸೆಲೆಬ್ರಿಟಿಗಳು ಮಾತ್ರ ಸರಿಯೇ.?

ಧಿಕ್ಕಾರ ಧಿಕ್ಕಾರ

ಜನಸಾಮಾನ್ಯರನ್ನ ಟಾರ್ಗೆಟ್ ಮಾಡುತ್ತಿರುವ ಸೆಲೆಬ್ರಿಟಿ ಸ್ಪರ್ಧಿಗಳಿಗೆ ವೀಕ್ಷಕರು ಧಿಕ್ಕಾರ ಕೂಗಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿ ಮೂಲೆಗುಂಪಾಗುತ್ತಿದ್ದಾರಾ 'ಜನಸಾಮಾನ್ಯ' ಸ್ಪರ್ಧಿಗಳು.?

ಜನಸಾಮಾನ್ಯರಿಂದಲೇ ಎಲ್ಲ

''ಜನಸಾಮಾನ್ಯರು ಯಾಕೆ ಲೆಕ್ಕಕ್ಕೆ ಇಲ್ಲ.? ಜನಸಾಮಾನ್ಯರಿಲ್ಲದೆ ಅವರೆಲ್ಲ ಸ್ಟಾರ್ ಗಳಾಗಿ ಬೆಳೆದಿದ್ದು ಹೇಗೆ.?'' ಎಂಬುದು ವೀಕ್ಷಕರ ಪ್ರಶ್ನೆ.

ಪ್ರತಿ ಬಾರಿ ದಿವಾಕರ್ ಮೇಲೆ ಏಕೆ ಸೆಲೆಬ್ರಿಟಿಗಳ ಕೆಂಗಣ್ಣು.?

ಇವರನ್ನೆಲ್ಲ ಎಲಿಮಿನೇಟ್ ಮಾಡಿ

''ಜಗನ್, ದಯಾಳ್ ಹಾಗೂ ಸಿಹಿ ಕಹಿ ಚಂದ್ರು ರವರನ್ನ ಮೊದಲು ಎಲಿಮಿನೇಟ್ ಮಾಡಿ'' ಎಂಬುದು ವೀಕ್ಷಕರ ಆಗ್ರಹ.

ಸಿಹಿ ಕಹಿ ಚಂದ್ರು ವರ್ತನೆ ಬಗ್ಗೆ ಬೇಸರ

ದಿವಾಕರ್ ಮೇಲೆ ಕೂಗಾಡಿದ ಸಿಹಿ ಕಹಿ ಚಂದ್ರು ರವರ ವರ್ತನೆ ವೀಕ್ಷಕರಿಗೆ ಬೇಸರ ತಂದಿದೆ ಎಂಬುದಕ್ಕೆ ಈ ಕಾಮೆಂಟ್ ಸಾಕ್ಷಿ.

ಸುದೀಪ್ ಮಾತನಾಡಬೇಕು

ಸೆಲೆಬ್ರಿಟಿಗಳೆಲ್ಲ ಒಂದಾಗಿ ಜನಸಾಮಾನ್ಯರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಈ ಬಗ್ಗೆ ಸುದೀಪ್ ಮಾತನಾಡಲೇಬೇಕು ಅಂತ ವೀಕ್ಷಕರು ಪಟ್ಟು ಹಿಡಿದಿದ್ದಾರೆ.

ಜನಸಾಮಾನ್ಯರನ್ನು ಹೀಗಾ ನಡೆಸಿಕೊಳ್ಳುವುದು.?

ಜನಸಾಮಾನ್ಯರಿಂದ ಧಾರಾವಾಹಿಗಳಿಗೆ ಟಿ.ಆರ್.ಪಿ ಬೇಕು. ಸಿನಿಮಾಗಳಿಗೆ ಕಲೆಕ್ಷನ್ ಬೇಕು. ಆದ್ರೆ, 'ಬಿಗ್ ಬಾಸ್' ಮನೆಯೊಳಗೆ ಜನಸಾಮಾನ್ಯರನ್ನು ನಡೆಸಿಕೊಳ್ಳುವುದು ಹೀಗಾ.? ಎಂದು ಪ್ರಶ್ನೆ ಕೇಳುತ್ತಿದ್ದಾರೆ ವೀಕ್ಷಕರು.

ಸುದೀಪ್ ರಿಪೇರಿ ಮಾಡಬೇಕು

ಬರುವ ಶನಿವಾರ ಎಲ್ಲ ಸೆಲೆಬ್ರಿಟಿಗಳನ್ನು ಸುದೀಪ್ ರಿಪೇರಿ ಮಾಡಲೇಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ ವೀಕ್ಷಕರು.

ಪ್ರಥಮ್ ಇರಬೇಕಿತ್ತು.!

ಇವೆಲ್ಲದರ ಮಧ್ಯೆ, ದಿವಾಕರ್ ಸ್ಥಾನದಲ್ಲಿ ಏನಾದರೂ ಪ್ರಥಮ್ ಇದ್ದಿದ್ರೆ, ಸಿಂಗಲ್ ಆಗಿ ಎಲ್ಲರ ನೀರಿಳಿಸಿಬಿಡ್ತಿದ್ದ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

English summary
Bigg Boss Kannada 5: Week 2: Viewers are annoyed with celebrity contestants.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X