»   » 'ಬಿಗ್ ಬಾಸ್' ಮನೆಯಲ್ಲಿದ್ದಾರೆ ಹಾಲು ಕಳ್ಳರು: ಛೀಮಾರಿ ಹಾಕಿದ ವೀಕ್ಷಕರು.!

'ಬಿಗ್ ಬಾಸ್' ಮನೆಯಲ್ಲಿದ್ದಾರೆ ಹಾಲು ಕಳ್ಳರು: ಛೀಮಾರಿ ಹಾಕಿದ ವೀಕ್ಷಕರು.!

Posted By:
Subscribe to Filmibeat Kannada
Bigg Boss Kannada Season 5 : ಹಾಲು ಬಚ್ಚಿಟ್ಟಿದ್ದಕ್ಕೆ ಸೆಲೆಬ್ರಿಟಿಗಳ ಮೇಲೆ ಗರಂ ಆದ ವೀಕ್ಷಕರು

ಒಂದೇ ಒಂದು ಲೋಟ ಹಾಲು ಕೇಳಿದ್ದಕ್ಕೆ, 'ಬಿಗ್ ಬಾಸ್' ಮನೆಯಲ್ಲಿ ಅಲ್ಲೋಲ ಕಲ್ಲೋಲವೇ ನಡೆದು ಹೋಗಿದೆ.

ಸಮೀರಾಚಾರ್ಯ ಒಂದು ಲೋಟ ಹಾಲು ಕೇಳಿದಾಗ, ಪ್ಯಾಕೆಟ್ ಗಟ್ಟಲೆ ಹಾಲನ್ನ ಮುಚ್ಚಿಟ್ಟಿದ್ದರೂ (ಎತ್ತಿಟ್ಟಿದ್ದರೂ), ಅದನ್ನ ಕೊಡಲು 'ಸೆಲೆಬ್ರಿಟಿ' ಸ್ಪರ್ಧಿಗಳು ರೆಡಿ ಇರಲಿಲ್ಲ. ಇದೇ ವಿಚಾರಕ್ಕೆ ಪಂಚಾಯತಿ ಕೂಡ ನಡೆಯಿತು.

ಮಾಡಿದ ತಪ್ಪನ್ನ ಒಪ್ಪಿಕೊಳ್ಳದೆ, ಸಮರ್ಥನೆ ಕೊಡಲು ಶುರು ಮಾಡಿದ ಸೆಲೆಬ್ರಿಟಿ ಸ್ಪರ್ಧಿಗಳನ್ನ ಸುದೀಪ್ ಕೂಡ ತರಾಟೆಗೆ ತೆಗೆದುಕೊಂಡರು. ಇಷ್ಟೆಲ್ಲ ಬೆಳವಣಿಗೆಯನ್ನು ಗಮನಿಸಿದ 'ಬಿಗ್ ಬಾಸ್' ವೀಕ್ಷಕರು ಸಿಕ್ಕಾಪಟ್ಟೆ ಗರಂ ಆಗಿದ್ದಾರೆ.

ಹಾಲಿಗಾಗಿ ಕೋಲಾಹಲ: ಹಾಲು ಮುಚ್ಚಿಟ್ಟ ಮಹಾನುಭಾವರಿಗೆ ಸುದೀಪ್ ಚಾಟಿಯೇಟು.!

ಹಾಲನ್ನ ಮುಚ್ಚಿಟ್ಟ (ಎತ್ತಿಟ್ಟ) ಸ್ಪರ್ಧಿಗಳಿಗೆ ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಪುಟದಲ್ಲಿಯೇ 'ಬಿಗ್ ಬಾಸ್' ವೀಕ್ಷಕರು ಛೀಮಾರಿ ಹಾಕುತ್ತಿದ್ದಾರೆ. ಮುಂದೆ ಓದಿರಿ....

ನಾಚಿಕೆ ಆಗಬೇಕು.!

ಹಾಲನ್ನ ಮುಚ್ಚಿಟ್ಟು ರಾದ್ಧಾಂತ ಮಾಡಿದ 'ಬಿಗ್ ಬಾಸ್' ಸ್ಪರ್ಧಿಗಳ ಬಗ್ಗೆ ವೀಕ್ಷಕರು ಎಷ್ಟು ಗರಂ ಆಗಿದ್ದಾರೆ ಅನ್ನೋದಕ್ಕೆ ಈ ಕಾಮೆಂಟ್ ಸಾಕ್ಷಿ.

''ಹಾಲು ಕುಡಿದ ಮಕ್ಳೇ ಬದುಕಲ್ಲ, ಇನ್ನೂ ಹಾಲು ಕದ್ದವು ಬದುಕ್ತಾವಾ.?!''

ಇವರಿಗೆಲ್ಲ ಮಾನವೀಯತೆ ಇದ್ಯಾ.?

''ಹಸಿದಾಗ ಅನ್ನ, ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚಂದವೋ.!!'' ಎನ್ನುತ್ತಾ ಸೆಲೆಬ್ರಿಟಿ ಸ್ಪರ್ಧಿಗಳ ಮಾನವೀಯತೆ ಬಗ್ಗೆ ವೀಕ್ಷಕರು ಅಸಮಾಧಾನಗೊಂಡಿದ್ದಾರೆ.

ಜಗನ್, ಆಶಿತಾ ಕಂಡ್ರೆ ಉರಿದು ಬೀಳ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.!

ಹಾಲು ಕುಡಿದಷ್ಟೇ ಸಂತಸವಾಗಿದೆ

ಹಾಲು ಮುಚ್ಚಿಟ್ಟ ದಯಾಳ್ ಎಲಿಮಿನೇಟ್ ಆಗಿದ್ದು, ವೀಕ್ಷಕರಿಗೆ ಹಾಲು ಕುಡಿದಷ್ಟೇ ಸಂತಸವಾಗಿದ್ಯಂತೆ.

ಈ ಪ್ರಶ್ನೆಗೆ ಸ್ಪರ್ಧಿಗಳ ಬಳಿ ಉತ್ತರ ಇದ್ಯಾ.?

'ಬಿಗ್ ಬಾಸ್' ಮನೆಯೊಳಗೆ ಪ್ರತಿಯೊಬ್ಬ ಸ್ಪರ್ಧಿ ಆಡುವ ಮಾತನ್ನೂ ವೀಕ್ಷಕರು ಸೂಕ್ಷ್ಮವಾಗಿ ಗಮನಿಸುತ್ತಾರೆ ಅನ್ನೋದಕ್ಕೆ ಈ ಕಾಮೆಂಟ್ ಉತ್ತಮ ಉದಾಹರಣೆ

ಸುಳ್ಳು ಹೇಳುವ ಬಾಯಿಗೆ ಏನು ಹೇಳಬೇಕು.?

ಹಾಲಿನ ವಿಚಾರಕ್ಕೆ ಸಮೀರಾಚಾರ್ಯ ಕೋಪಗೊಂಡಿದ್ದಾರೋ, ಇಲ್ವೋ ಗೊತ್ತಿಲ್ಲ. ಆದ್ರೆ, ಜನಸಾಮಾನ್ಯರಂತೂ ಬೇಸರಗೊಂಡಿದ್ದಾರೆ.

ಹಾಲು ಕಳ್ಳರಿದ್ದಾರೆ.!

''ಬಿಗ್ ಬಾಸ್' ಮನೆಯಲ್ಲಿ ಹಾಲು ಕಳ್ಳರಿದ್ದಾರೆ. ಎಚ್ಚರಿಕೆ.!'' ಎಂಬ ಟ್ರೋಲ್ ಗಳು ಶುರು ಆಗಿದೆ.

ಚಿತ್ರಕೃಪೆ: ಟ್ರೋಲ್ ಅಣ್ತಮ್ಮಾಸ್

ಎಂಥಾ ಮನುಷ್ಯ.!?

ನೇರವಾಗಿ ಮಾತನಾಡುವ ದಯಾಳ್ ಮೇಲೆ ವೀಕ್ಷಕರ ಕಣ್ಣು ಕೆಂಪಾಗಿದೆ.

ಮನುಷ್ಯತ್ವ ಇಲ್ಲದವರಿಗೆ ಧಿಕ್ಕಾರ

ಸೆಲೆಬ್ರಿಟಿ ಸ್ಪರ್ಧಿಗಳ ವರ್ತನೆ ನೋಡಿ 'ಬಿಗ್ ಬಾಸ್' ವೀಕ್ಷಕರು ಧಿಕ್ಕಾರ ಕೂಗುತ್ತಿದ್ದಾರೆ.

ತಪ್ಪಿನ ಅರಿವು ಆಗಲೇಬೇಕು

ಮಾಡಿದ ತಪ್ಪಿನ ಅರಿವು ಸೆಲೆಬ್ರಿಟಿ ಸ್ಪರ್ಧಿಗಳಿಗೆ ಆಗಲೇಬೇಕು ಅನ್ನೋದು ವೀಕ್ಷಕರ ಆಗ್ರಹ.

ನೈತಿಕತೆ ಎಲ್ಲಿಗೆ ಹೋಯ್ತು.?

''ಟಾಸ್ಕ್ ನಲ್ಲಿ 'ನೈತಿಕತೆ' ಬಗ್ಗೆ ಮಾತನಾಡಿದ ದಯಾಳ್ ರವರಿಗೆ, ಹಾಲನ್ನು ಎತ್ತಿಡುವಾಗ 'ನೈತಿಕತೆ' ನೆನಪಾಗಲಿಲ್ವಾ.?'' - ಇದು ವೀಕ್ಷಕರ ಪ್ರಶ್ನೆ

ಕೊಟ್ಟಿದ್ದು ಕೆಟ್ಟ ಸಮರ್ಥನೆ

ಹಾಲನ್ನ ಮುಚ್ಚಿಟ್ಟು ನಂತರ ಅದಕ್ಕೆ ಕೊಟ್ಟ ಕೆಟ್ಟ ಸಮರ್ಥನೆ ವೀಕ್ಷಕರಲ್ಲಿ ಬೇಸರ ತಂದಿದೆ.

ಇದನ್ನೇ 'ಕಾಮನ್ ಮ್ಯಾನ್' ಮಾಡಿದ್ರೆ.?

''ದಿವಾಕರ್, ಸಮೀರಾಚಾರ್ಯ ಹಾಗೂ ರಿಯಾಝ್ ಹಾಲನ್ನ ಮುಚ್ಚಿಟ್ಟಿದ್ರೆ, ಹೀಗೆ ಎಲ್ಲರೂ ಸಪೋರ್ಟ್ ಮಾಡ್ತಿದ್ರಾ.?'' ಎಂಬ ಪ್ರಶ್ನೆ ವೀಕ್ಷಕರ ತಲೆಯಲ್ಲಿ ಕೊರೆಯುತ್ತಿದೆ.

ಖುಷಿಯ ವಿಚಾರ ಅಂದ್ರೆ...

ಸಮರ್ಥನೆ ಮಾಡಿಕೊಳ್ಳುವಾಗ ಅನುಪಮಾ ಗೌಡ ತಗಲಾಕೊಂಡಾಗ, 'ಬಿಗ್ ಬಾಸ್' ವೇದಿಕೆಯಲ್ಲಿ ಕುಳಿತಿದ್ದ ವೀಕ್ಷಕರು ಶಿಳ್ಳೆ-ಚಪ್ಪಾಳೆ ಹೊಡೆದರು. ಈ ಬಗ್ಗೆ ವೀಕ್ಷಕರು ಸಂತಸಗೊಂಡಿದ್ದಾರೆ.

ಟ್ರೋಲ್ ಆದ ಅನುಪಮಾ ಗೌಡ

'ಬಿಗ್ ಬಾಸ್' ಮನೆಯೊಳಗೆ ಅನುಪಮಾ ಗೌಡ ಕಣ್ಣೀರು ಸುರಿಸಿದ್ದು ಕೂಡ ಟ್ರೋಲ್ ಆಗಿದೆ.

ಮರ್ಯಾದೆ ಹೋಗಿದ್ದಕ್ಕೆ...

''ದಯಾಳ್ ಎಲಿಮಿನೇಟ್ ಆಗಿದ್ದಕ್ಕೆ, ಅನುಪಮಾ ಅತ್ತಿದ್ದು ಅಲ್ಲ. ಹಾಲಿ ಪ್ಯಾಕೆಟ್ ಮುಚ್ಚಿಟ್ಟು ಮರ್ಯಾದೆ ಹೋಗಿದ್ದಕ್ಕೆ'' ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

ರಿಯಲ್ ಹೀರೋಗಳು ಯಾರು.?

ವೀಕ್ಷಕರ ಪ್ರಕಾರ, 'ಬಿಗ್ ಬಾಸ್' ಮನೆಯ ರಿಯಲ್ ಹೀರೋಗಳು ಅಂದ್ರೆ ಇವರೇ..!

English summary
Bigg Boss Kannada 5: Week 3: Viewers are annoyed with celebrity contestants for hiding milk.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X