»   » ಮಹಾಭಾರತ/ರಾಮಾಯಣದ ಯಾವ ಪಾತ್ರಗಳು 'ಬಿಗ್ ಬಾಸ್' ಸ್ಪರ್ಧಿಗಳಿಗೆ ಸೂಕ್ತ.?

ಮಹಾಭಾರತ/ರಾಮಾಯಣದ ಯಾವ ಪಾತ್ರಗಳು 'ಬಿಗ್ ಬಾಸ್' ಸ್ಪರ್ಧಿಗಳಿಗೆ ಸೂಕ್ತ.?

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 :ಮಹಾಭಾರತ/ರಾಮಾಯಣದ ಯಾವ ಪಾತ್ರಗಳು ಬಿಗ್ ಬಾಸ್ ಸ್ಪರ್ಧಿಗಳಿಗೆ ಸೂಕ್ತ|Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಪ್ರತಿ ದಿನ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿದೆ. 'ಬಿಗ್ ಬಾಸ್' ಮನೆಯ ಸದಸ್ಯರು, ಅವರ ನಡವಳಿಕೆ, ವರ್ತನೆ, ಹಾಸ್ಯ ಮನೋಭಾವ... ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ವೀಕ್ಷಕರು ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ.

ಕೆಲ ವೀಕ್ಷಕರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ 'ಬಿಗ್ ಬಾಸ್' ಸ್ಪರ್ಧಿಗಳನ್ನ ರಾಮಾಯಣ/ಮಹಾಭಾರತದ ಕೆಲ ಪಾತ್ರಗಳಿಗೆ ಹೋಲಿಕೆ ಮಾಡಲು ಶುರು ಮಾಡಿದ್ದಾರೆ.

ಜಗನ್, ಆಶಿತಾ ಕಂಡ್ರೆ ಉರಿದು ಬೀಳ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.!

ಹಾಗಾದ್ರೆ, ಮಹಾಭಾರತ/ರಾಮಾಯಣದ ಯಾವ ಪಾತ್ರಗಳು 'ಬಿಗ್ ಬಾಸ್' ಸ್ಪರ್ಧಿಗಳಿಗೆ ಸೂಕ್ತ.? ಉತ್ತರ ಫೋಟೋ ಸ್ಲೈಡ್ ಗಳಲ್ಲಿ.......

'ಶ್ರೀರಾಮಚಂದ್ರ' ಯಾರು ಗೊತ್ತಾ.?

'ಬಿಗ್ ಬಾಸ್' ಮನೆಯಲ್ಲಿ ಲೈಟ್ ಆಗಿ ಲವ್ ಟ್ರ್ಯಾಕ್ ಶುರು ಮಾಡುತ್ತಿರುವ ಚಂದನ್ ಶೆಟ್ಟಿ 'ಶ್ರೀರಾಮಚಂದ್ರ' ಅಂತೆ.!

ಅಚ್ಚರಿ.! 'ಬಿಗ್ ಬಾಸ್' ಮನೆಯಿಂದ ಮೊದಲ ಸೆಲೆಬ್ರಿಟಿ ಔಟ್.!

ಹಾಗಾದ್ರೆ, ರಾವಣ ಯಾರು.? ಲಕ್ಷ್ಮಣ ಯಾರು.?

ಚಂದನ್ ಶೆಟ್ಟಿ ಲವ್ ಟ್ರ್ಯಾಕ್ ಗೆ ವಿಲನ್ ಆಗಿರುವ ಜೆಕೆ 'ರಾವಣ' ಅಂತೆ. ಇನ್ನೂ ಎಲ್ಲರನ್ನೂ ಅಣ್ಣ-ತಂಗಿ ಮನೋಭಾವದಲ್ಲಿ ನೋಡುವ ದಿವಾಕರ್ ಗೆ 'ಲಕ್ಷ್ಮಣ' ಪಾತ್ರ ಸೂಕ್ತ ಎಂಬುದು ವೀಕ್ಷಕರ ಅಭಿಪ್ರಾಯ.

'ಬಿಗ್ ಬಾಸ್' ಮನೆಯಲ್ಲಿ ಇದುವರೆಗೂ ಒಂದು ಲೆಕ್ಕ, ಇನ್ಮುಂದೆ ಒಂದು ಲೆಕ್ಕ.!

ಶ್ರೀಕೃಷ್ಣ ಯಾರು ಅಂತೀರಾ.?

ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ 'ಶ್ರೀಕೃಷ್ಣ' ಆದರೆ, 'ಭೀಷ್ಮಾಚಾರ್ಯ' ಸಮೀರಾಚಾರ್ಯ ಹಾಗೂ ರಿಯಾಝ್ 'ಕರ್ಣ'.

'ಬಿಗ್ ಬಾಸ್' ಮುಂದೆ ತಲೆ ತಗ್ಗಿಸಿದ ಸಿಹಿಕಹಿ ಚಂದ್ರು.! ಇದು ಅವಮಾನದ ವಿಚಾರ.!

ರಾಕ್ಷಸರು ಯಾರ್ಯಾರು.?

ಸಿಹಿ ಕಹಿ ಚಂದ್ರು - ಬಕಾಸುರ

ಜಗನ್ - ಕೀಚಕ

ದಯಾಳ್ - ಭಸ್ಮಾಸುರ

ನಟಿಮಣಿಯರು.?

ಅನುಪಮಾ ಗೌಡ - ಮಂಥರೆ

ಆಶಿತಾ - ಶೂರ್ಪನಖಿ

ಶ್ರುತಿ ಪ್ರಕಾಶ್ - ರಂಭೆ

ತೇಜಸ್ವಿನಿ - ಊರ್ವಶಿ

ಕೃಷಿ - ಮೇನಕೆ

ನಿವೇದಿತಾ ಗೌಡ - ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ

ಅಷ್ಟಕ್ಕೂ, ಇದನ್ನೆಲ್ಲ ಗುರು ಪಾಟೀಲ್ ಎಂಬುವವರು ಕಲರ್ಸ್ ಸೂಪರ್ ಫೇಸ್ ಬುಕ್ ಪೇಜ್ ನಲ್ಲಿಯೇ ಕಾಮೆಂಟ್ ಮಾಡಿದ್ದಾರೆ.

English summary
Bigg Boss Kannada 5: Viewers compare Ramayana/Mahabharatha characters to BBK5 Contestants.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X