»   » ಸುದೀಪ್ ನಿರೂಪಣೆ ಸರಿ ಇರ್ಲಿಲ್ಲ, ಜಗನ್ ಔಟ್ ಆಗಲಿಲ್ಲ, ಜನ ಬೈಯ್ಯುವುದನ್ನ ನಿಲ್ಲಿಸುತ್ತಿಲ್ಲ.!

ಸುದೀಪ್ ನಿರೂಪಣೆ ಸರಿ ಇರ್ಲಿಲ್ಲ, ಜಗನ್ ಔಟ್ ಆಗಲಿಲ್ಲ, ಜನ ಬೈಯ್ಯುವುದನ್ನ ನಿಲ್ಲಿಸುತ್ತಿಲ್ಲ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಕಳೆದ ಶನಿವಾರ ಪ್ರಸಾರವಾದ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆ ವೀಕ್ಷಕರಿಗೆ ಹಿಡಿಸಿಲ್ಲ.

ಕಳೆದ ವಾರ 'ಬಿಗ್ ಬಾಸ್' ಮನೆಯಲ್ಲಿ ತುಂಬಾ ಗಲಾಟೆ ಆಗಿತ್ತು. ಸರಿ-ತಪ್ಪು ಬಗ್ಗೆ ಸುದೀಪ್ ಪಂಚಾಯತಿ ನಡೆಸಬೇಕಿತ್ತು. ಪಂಚಾಯತಿ ನಡೆಸಲು ಬೇಕಾದಷ್ಟು ವಿಚಾರಗಳಿದ್ದರೂ, ಬೇಡದ ಜೆಕೆ-ಶ್ರುತಿ ಪ್ರಕಾಶ್ ಶಟಲ್ ಕ್ಲಾಕ್ ಬಗ್ಗೆ ಹೆಚ್ಚಿನ ಸಮಯ ವ್ಯರ್ಥ ಮಾಡಿದ ಸುದೀಪ್ ಮೇಲೆ ಈಗ ವೀಕ್ಷಕರು ಮುನಿಸಿಕೊಂಡಿದ್ದಾರೆ.

'ಬಿಗ್ ಬಾಸ್' ಕಾರ್ಯಕ್ರಮ ಶುರು ಆದ ಮೊದಲ ದಿನದಿಂದಲೂ, ಜಗನ್ ವರ್ತನೆ ವೀಕ್ಷಕರಿಗೆ ಇಷ್ಟ ಆಗುತ್ತಿಲ್ಲ. ''ಜಗನ್ ಗೆ ಬುದ್ಧಿ ಮಾತು ಹೇಳಿ, ಜಗನ್ ಹಾಗೂ ಆಶಿತಾಗೆ ಎಚ್ಚರಿಕೆ ಕೊಡಿ'' ಎಂಬ ಕಾಮೆಂಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಬಂದಿದ್ದವು. ಆದರೆ, ಜಗನ್ ಹಾಗೂ ಆಶಿತಾ 'ಸಿಹಿಮುತ್ತಿನ' ವಿಚಾರದ ಬಗ್ಗೆ ಸುದೀಪ್ ಕಾಲೆಳೆದರೇ ಹೊರತು ಕ್ಲಾಸ್ ತೆಗೆದುಕೊಳ್ಳಲಿಲ್ಲ. ಹೀಗಾಗಿ ಸುದೀಪ್ ಮೇಲೆ ವೀಕ್ಷಕರು ಕೋಪಿಸಿಕೊಂಡಿದ್ದಾರೆ.

''ಶನಿವಾರ ಪ್ರಸಾರ ಆದ ಸುದೀಪ್ ಪಂಚಾಯತಿ ಸರಿ ಇರಲಿಲ್ಲ'' ಎಂದು ಬೇಸರ ವ್ಯಕ್ತಪಡಿಸಿ ಕಲರ್ಸ್ ಸೂಪರ್ ವಾಹಿನಿಯ ಫೇಸ್ ಬುಕ್ ಪುಟದಲ್ಲಿಯೇ ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ. ಮುಂದೆ ಓದಿರಿ....

'ವಾರದ ಕಥೆ ಕಿಚ್ಚನ ಜೊತೆ' ತುಂಬಾ ಬೋರಿಂಗ್ ಆಗಿತ್ತು

''ಸುದೀಪ್, ಎಲ್ಲರ ತಪ್ಪನ್ನ ಹೇಳುವುದು ಬಿಟ್ಟು... ಜೋಡಿಗಳಿಗೆ ಲವ್ ಕನೆಕ್ಷನ್ ಮಾಡಿಸುತ್ತಿದ್ದರು. ಸಂಚಿಕೆ ತುಂಬಾ ಬೋರಿಂಗ್ ಆಗಿತ್ತು'' ಅಂತ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.

ಜಗನ್ ತಪ್ಪನ್ನ ಸುದೀಪ್ ಸೇಫ್ ಗಾರ್ಡ್ ಮಾಡಿದ್ರಾ.?

''ಜಗನ್ ಹಾಗೂ ಅವರ ತಪ್ಪನ್ನ ಸುದೀಪ್ ಸೇಫ್ ಗಾರ್ಡ್ ಮಾಡಿದರು'' ಎಂಬ ಭಾವ ವೀಕ್ಷಕರಲ್ಲಿ ಮೂಡಿದೆ.

ಸುದೀಪ್ ನಿರೂಪಣೆ ಸರಿ ಇರಲಿಲ್ಲ

''ಸುದೀಪ್ ಅವರ ಇವತ್ತಿನ ನಿರೂಪಣೆ ಸರಿ ಇರಲಿಲ್ಲ. ಅವರವರ ತಪ್ಪಿನ ಅರಿವು ಮೂಡಿಸುವ ಪ್ರಯತ್ನ ಮಾಡಲಿಲ್ಲ. ಲವ್ ಸ್ಟೋರಿ ಬಗ್ಗೆ ಹೇಳೋಕೆ ನೀವೇ ಬೇಕಿತ್ತಾ.?'' ಅಂತ ವೀಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.

ಆತ್ಮೀಯರು ಎಂಬ ಕಾರಣವೇ.?

''ಸುದೀಪ್ ಗೆ ಯಾಕೆ ಜಗನ್ ಹಾಗೂ ಜೆಕೆ ಮೇಲೆ ಸಿಕ್ಕಾಪಟ್ಟೆ ಅಕ್ಕರೆ ಅಂದ್ರೆ, ಅವರಿಬ್ಬರೂ ಸುದೀಪ್ ಹಾಗೂ 'ಬಿಗ್ ಬಾಸ್' ಡೈರೆಕ್ಟರ್ ಪರಮೇಶ್ವರ್ ಗುಂಡ್ಕಲ್ ಅವರಿಗೆ ಆತ್ಮೀಯರು'' - ಹಾಗಂತ ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಸುದೀಪ್ ಗೆ ಭಯ ಇದ್ಯಾ.?

''ಚಿಲ್ಲರೆ ಸೆಲೆಬ್ರಿಟಿಗಳನ್ನು ಕಂಡ್ರೆ ಸುದೀಪ್ ಗೆ ಭಯ ಯಾಕೆ.?'' ಈ ಪ್ರಶ್ನೆಗೆ ಸ್ವತಃ ಸುದೀಪ್ ಅವರೇ ಉತ್ತರ ಕೊಡಬೇಕು.

ಈ ಕಾಮೆಂಟ್ ನೋಡಿ...

ಕಳೆದ ಶನಿವಾರದ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ರವರ ನಿರೂಪಣೆ ಬಗ್ಗೆ ವೀಕ್ಷಕರಲ್ಲಿ ಎಷ್ಟು ಅಸಮಾಧಾನ ಮೂಡಿದೆ ಅನ್ನೋದಕ್ಕೆ ಈ ಕಾಮೆಂಟ್ ಸಾಕ್ಷಿ.

ಸುದೀಪ್ ಥಿಂಕಿಂಗ್ ಸರಿ ಇಲ್ವಾ.?

ಸುದೀಪ್ ಅವರ ಆಲೋಚನಾ ಸಾಮರ್ಥ್ಯದ ಬಗ್ಗೆ ವೀಕ್ಷಕರು ಪ್ರಶ್ನೆ ಮಾಡಿ ಕಾಮೆಂಟ್ ಹಾಕಿದ್ದಾರೆ.

ಇದು ಅವಶ್ಯಕತೆ ಇತ್ತಾ.?

''ಜೆಕೆ ಹಾಗೂ ಶ್ರುತಿಗೆ ಅಷ್ಟು ರೇಗಿಸುವ ಅವಶ್ಯಕತೆ ಏನಿತ್ತು.? ಸಂಚಿಕೆ ನೋಡಿ ತುಂಬಾ ನಿರಾಸೆ ಆಯ್ತು'' ಅನ್ನೋದು ವೀಕ್ಷಕರ ಅಭಿಪ್ರಾಯ.

ಒಂದೇ ತಕ್ಕಡಿಯಲ್ಲಿ ತೂಗಬೇಕು

''ಜೆಕೆ ತಮಗೆ ಚೆನ್ನಾಗಿ ಗೊತ್ತು ಅಂತ ಪದೇ ಪದೇ ಹೇಳುವ ಸುದೀಪ್, ಎಲ್ಲ ಸ್ಪರ್ಧಿಗಳನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಒಳ್ಳೆಯದ್ದು'' ಅಂತ ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.

ಇದು ಅನ್ಯಾಯ.!

''ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ಕಾಮನ್ ಮ್ಯಾನ್ ಗಳನ್ನ ಮಾತನಾಡಿಸಲೇ ಇಲ್ಲ. ಇದು ಅನ್ಯಾಯ'' ಎಂಬುದು ವೀಕ್ಷಕರ ವಾದ.

ಯಾರಿಗೆ ಎಷ್ಟು ಎಸ್.ಎಂ.ಎಸ್ ಬಂದಿತ್ತು.?

''ಜಗನ್ ಈ ವಾರ ಎಲಿಮಿನೇಟ್ ಆಗಬೇಕಿತ್ತು. ಆದ್ರೆ, ಆಗಲಿಲ್ಲ. ಹೀಗಾಗಿ ಕಲರ್ಸ್ ಸೂಪರ್ ವಾಹಿನಿ ವೀಕ್ಷಕರ ಎಸ್.ಎಂ.ಎಸ್ ವಿವರಗಳನ್ನು ಬಹಿರಂಗಗೊಳಿಸಬೇಕು'' ಎಂಬುದು ವೀಕ್ಷಕರ ವಾದ.

ವೀಕ್ಷಕರಲ್ಲಿ ಮೂಡಿದ ಅನುಮಾನ

''ಜಗನ್ ಗೆ ಅವರ ಕುಟುಂಬ ಬಿಟ್ಟು ಇನ್ಯಾರು ವೋಟ್ ಮಾಡಿರಬಹುದು.?'' ಎಂಬ ಅನುಮಾನ ವೀಕ್ಷಕರಲ್ಲಿ ಕಾಡುತ್ತಿದೆ.

ದಯವಿಟ್ಟು ಪ್ರೀತಿ, ಪ್ರೇಮ ತೋರಿಸಬೇಡಿ

''ಬಿಗ್ ಬಾಸ್' ಕಾರ್ಯಕ್ರಮಗಳನ್ನು ಮಕ್ಕಳಿಂದ ಹಿಡಿದು ಎಲ್ಲರೂ ನೋಡುವುದರಿಂದ ಡೋಂಗಿ ಪ್ರೀತಿ, ಪ್ರೇಮವನ್ನ ತೋರಿಸಬೇಡಿ'' ಎಂದು ವೀಕ್ಷಕರು ಒತ್ತಾಯಿಸಿದ್ದಾರೆ.

English summary
Bigg Boss Kannada 5: Week 4: Viewers express their displeasure towards Sudeep's 'Vaarada Kathe Kicchana Jothe'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada