»   » ವೀಕ್ಷಕರು ಹೀಗೆ ಹೇಳ್ತಾವ್ರೆ, 'ಬಿಗ್ ಬಾಸ್' ಒಸಿ ಕೇಳಿಸಿಕೊಳ್ಳಿ...

ವೀಕ್ಷಕರು ಹೀಗೆ ಹೇಳ್ತಾವ್ರೆ, 'ಬಿಗ್ ಬಾಸ್' ಒಸಿ ಕೇಳಿಸಿಕೊಳ್ಳಿ...

Posted By:
Subscribe to Filmibeat Kannada
ವೀಕ್ಷಕರು ಹೀಗೆ ಹೇಳ್ತಾವ್ರೆ, 'ಬಿಗ್ ಬಾಸ್' ಒಸಿ ಕೇಳಿಸಿಕೊಳ್ಳಿ | Filmibeat Kannada

ಸೆಲೆಬ್ರಿಟಿ ಸ್ಪರ್ಧಿಗಳು ಅಂತ ಕರೆಯಿಸಿಕೊಳ್ಳುವವರು 'ಬಿಗ್ ಬಾಸ್' ಮನೆಯಲ್ಲಿ ಸದಾ ಕಾಲ ಊಟ, ಅಡುಗೆ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರತಿ ಬಾರಿ ಜನಸಾಮಾನ್ಯ ಸ್ಪರ್ಧಿಗಳ ವಿರುದ್ಧ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. ಇದನ್ನೆಲ್ಲ ಸಹಿಸಲು ಆಗದ ವೀಕ್ಷಕರೊಬ್ಬರು ಕಲರ್ಸ್ ಸೂಪರ್ ಆಫೀಶಿಯಲ್ ಪೇಜ್ ನಲ್ಲಿಯೇ ಕಾಮೆಂಟ್ ಮಾಡಿದ್ದಾರೆ.

ಅಡುಗೆ ಸಾಮಾನು ಮೇಲೆ ನಿಗಾ ಇಟ್ರೆ ಅನುಪಮಾಗೆ ಹಿಂಸೆ, ಹೊಟ್ಟೆ ಉರಿ.!

Bigg Boss Kannada 5: Viewers request to Bigg Boss

''ಬರೀ ತಿನ್ನುವ ವಿಷಯಕ್ಕೆ ಮಾತನಾಡುವ ಕೃಷಿ, ಅನುಪಮಾ ಗೌಡ, ಆಶಿತಾಗೆ ತಿನ್ನುವ ಟಾಸ್ಕ್ ಕೊಡಿ. ಬೆಳಗ್ಗೆಯಿಂದ ಸಂಜೆಯವರೆಗೂ ಸಾಕಾಗುಷ್ಟು ತಿನ್ನುತ್ತಿರಬೇಕು. ಆ ತರಹ ಟಾಸ್ಕ್ ಕೊಡಿ. ಇನ್ನೊಂದು ಸಲ ಅಡುಗೆ ಮನೆ ಡಿಪಾರ್ಟ್ಮೆಂಟ್ ಬಗ್ಗೆ ತಿನ್ನುವ ವಿಷಯಕ್ಕೆ ಮಾತನಾಡಬಾರದು. ಹಾಗೆ ಮಾಡಿ 'ಬಿಗ್ ಬಾಸ್'' ಎಂದು ವೀಕ್ಷಕರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಹೊಟ್ಟೆ ಉರ್ಕೊಳ್ಳುವ 'ಡವ್ ರಾಣಿ' ಅನುಪಮಾಗೆ ಬೆಂಡೆತ್ತಿದ ನೆಟ್ಟಿಗರು.!

Bigg Boss Kannada 5: Viewers request to Bigg Boss

ಸಮೀರಾಚಾರ್ಯ ಹಾಲು-ಹಣ್ಣು ಕೇಳುವುದೇ ತಪ್ಪು ಎಂಬಂತೆ ಮಾತನಾಡುವ ಕೃಷಿ, ಅನುಪಮಾ ಗೌಡ ಹಾಗೂ ಆಶಿತಾ ಬಗ್ಗೆ ವೀಕ್ಷಕರಿಗೆ ಎಷ್ಟು ಅಸಮಾಧಾನ ಇದೆ ಅನ್ನೋದಕ್ಕೆ ಈ ಕಾಮೆಂಟ್ ಸಾಕ್ಷಿ.

ಈಗಾಗಲೇ, ಹಾಲನ್ನ ಒಮ್ಮೆ ಮುಚ್ಚಿಟ್ಟು ದೊಡ್ಡ ರಾದ್ಧಾಂತಕ್ಕೆ ಅನುಪಮಾ ಗೌಡ ಸಾಕ್ಷಿಯಾಗಿದ್ದರೂ, 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಬುದ್ಧಿ ಮಾತು ಹೇಳಿದ್ದರೂ, ಅದನ್ನ ಸೆಲೆಬ್ರಿಟಿ ಸ್ಪರ್ಧಿಗಳು ಅರ್ಥೈಸಿಕೊಂಡಂತೆ ಕಾಣುತ್ತಿಲ್ಲ.

English summary
Bigg Boss Kannada 5: Week 5: Viewers request to Bigg Boss.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada