»   » ಹೊರಗಡೆ ಹೋಗಿ ಬಂದ್ಮೇಲೆ ಕೃಷಿ ನಾಟಕ ಮಾಡುತ್ತಿದ್ದಾರಾ.?

ಹೊರಗಡೆ ಹೋಗಿ ಬಂದ್ಮೇಲೆ ಕೃಷಿ ನಾಟಕ ಮಾಡುತ್ತಿದ್ದಾರಾ.?

Posted By:
Subscribe to Filmibeat Kannada

ಒಮ್ಮೆ ಎಲಿಮಿನೇಟ್ ಆಗಿ, ಒಂದು ವಾರ ಹೊರಗಡೆ ಇದ್ದ ಕೃಷಿಗೆ 'ಬಿಗ್ ಬಾಸ್' ಮನೆಯೊಳಗಿನ ವಾತಾವರಣ ಹಾಗೂ ಹೊರ ಜಗತ್ತಿನ ಪ್ರತಿಕ್ರಿಯೆ... ಎರಡೂ ಗೊತ್ತಾಗಿದೆ.

ಎರಡನ್ನೂ ತಿಳಿದುಕೊಂಡಿರುವ ಕೃಷಿ ತಾಪಂಡ ಸದ್ಯ 'ಬಿಗ್ ಬಾಸ್' ಮನೆಯೊಳಗೆ ನಾಟಕ ಮಾಡುತ್ತಿದ್ದಾರಾ.? ಹೀಗೊಂದು ಅನುಮಾನ ದಿವಾಕರ್ ಹಾಗೂ ಚಂದನ್ ಶೆಟ್ಟಿ ತಲೆಯಲ್ಲಿ ಮೂಡಿದೆ.

Bigg Boss Kannada 5: Week 10: Chandan Shetty and Diwakar and speaks about Krishi

''ಹೊರಗಡೆ ಹೋಗಿ ಬಂದ್ಮೇಲೆ ಅಡುಗೆ ಮನೆಯ ಸೀಕ್ರೆಟ್ ನ ಕೃಷಿ ತಿಳಿದುಕೊಂಡು ಬಂದಿದ್ದಾರೆ. ತಂದು ತುತ್ತು ತಿನಿಸುವುದು ಆಕೆಯ ಒಳ್ಳೆಯ ಗುಣವೋ ಅಥವಾ ಬೇಕು ಅಂತ ಮಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ'' ಅಂತ ಚಂದನ್ ಶೆಟ್ಟಿ ಹೇಳಿದರೆ, ''ಮೊದಲು ಕೃಷಿ ಹಾಗೆ ನಡೆದುಕೊಳ್ಳುತ್ತಿರಲಿಲ್ಲ'' ಅನ್ನೋದು ದಿವಾಕರ್ ಅಭಿಪ್ರಾಯ.

ಅಂದು ಮೊಸರಿಗಾಗಿ ಗಲಾಟೆ ಮಾಡಿದವರೇ ಇಂದು ಸಮೀರಾಚಾರ್ಯಗೆ ತಿನ್ನಿಸಿದರು.!

''ಹೊರಗಡೆ ಹೋಗಿ ಬಂದ್ಮೇಲೆ ಊಟದ ವಿಚಾರದಲ್ಲಿ ಎಲ್ಲರನ್ನೂ ಕೇರ್ ಮಾಡುವುದು ಜಾಸ್ತಿ ಆಗಿದೆ. ಸಮೀರಾಚಾರ್ಯ ಅವರಿಗೆ ಫೋರ್ಸ್ ಮಾಡಿ ತಿನಿಸುತ್ತಾರೆ. ಎಲ್ಲರನ್ನೂ ಕೇರ್ ಮಾಡಬೇಕು ಅಂತ ತಿಳಿದುಕೊಂಡು ಬಂದಿರಬೇಕು'' ಅಂತಾರೆ ಚಂದನ್ ಶೆಟ್ಟಿ.

ಚಂದನ್ ಶೆಟ್ಟಿ, ದಿವಾಕರ್ ಅಂತೆ ನಿಮಗೂ ಕೃಷಿ ಬಗ್ಗೆ ಹಾಗೆ ಅನ್ಸುತ್ತಾ.? ಕೃಷಿ ತಾಪಂಡ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ನಮಗೆ ತಿಳಿಸಿ... ಫಿಲ್ಮಿಬೀಟ್ ಕನ್ನಡ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ...

English summary
Bigg Boss Kannada 5: Week 10: Chandan Shetty and Diwakar and speaks about Krishi Thapanda.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X