ಸಮೀರಾಚಾರ್ಯ ಮೇಲೆ ಹಲ್ಲೆ ಮಾಡಿದ ಸಂಯುಕ್ತ: ಹೊರಹಾಕಿದ 'ಬಿಗ್ ಬಾಸ್'.!
Recommended Video

'ಕಿರಿಕ್ ಪಾರ್ಟಿ' ಸಿನಿಮಾ ಖ್ಯಾತಿಯ ಸಂಯುಕ್ತ ಹೆಗ್ಡೆ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟು ಒಂದು ವಾರ ಕಳೆದಿದೆ ಅಷ್ಟೇ. ಅಷ್ಟು ಬೇಗ ಒಂದಾದಮೇಲೊಂದರಂತೆ 'ಕಿರಿಕ್' ಮಾಡಿಕೊಳುತ್ತಲೇ ಇದ್ದ ಸಂಯುಕ್ತ ಹೆಗ್ಡೆಗೆ ಇದೀಗ ಗೇಟ್ ಪಾಸ್ ಸಿಕ್ಕಿದೆ.
ಸಮೀರಾಚಾರ್ಯ ಮೇಲೆ ಹಲ್ಲೆ ಮಾಡಿದ ಸಂಯುಕ್ತ ರವರನ್ನ 'ಬಿಗ್ ಬಾಸ್' ಹೊರ ಹಾಕಿದ್ದಾರೆ. ಅಷ್ಟಕ್ಕೂ, ಸಂಯುಕ್ತ 'ಬಿಗ್ ಬಾಸ್' ಮನೆಯೊಳಗೆ ಬಂದಿದ್ದು ವಿಶೇಷ ಅತಿಥಿಯಾಗಿ ಹೊರತು ಸ್ಪರ್ಧಿಯಾಗಲ್ಲ.

ಸ್ಪರ್ಧಿಯಾಗಲಿ, ವಿಶೇಷ ಅತಿಥಿಯಾಗಲಿ... ಎಲ್ಲರಿಗೂ 'ಬಿಗ್ ಬಾಸ್' ಮನೆಯ ಮೂಲ ನಿಯಮಗಳು ಒಂದೇ.! 'ಬಿಗ್ ಬಾಸ್' ಮನೆಯ ಮೂಲ ನಿಯಮಗಳ ಪ್ರಕಾರ, ಯಾರೂ ಯಾರ ಮೇಲೂ ದೈಹಿಕವಾಗಿ ಹಲ್ಲೆ ಮಾಡುವಂತಿಲ್ಲ. ಆದ್ರೆ, ಇದನ್ನು ಉಲ್ಲಂಘಿಸಿದ ಸಂಯುಕ್ತ, ಸಮೀರಾಚಾರ್ಯ ಮೇಲೆ ಹಲ್ಲೆ ಮಾಡಿದರು.
ಚಟುವಟಿಕೆ ಚಾಲ್ತಿಯಲ್ಲಿದ್ದಾಗ, ಸಂಯುಕ್ತ ರನ್ನ ಸಮೀರಾಚಾರ್ಯ ಮುಟ್ಟಿದ್ದರಂತೆ. ''ಇದರಿಂದ ರೊಚ್ಚಿಗೆದ್ದು, ಕೈ ಮಾಡಿದೆ'' ಎನ್ನುವುದು ಸಂಯುಕ್ತ ರವರ ವಾದ.
ಇಬ್ಬರ ನಡುವೆ ಸಂಧಾನ ನಡೆಸಲು 'ಬಿಗ್ ಬಾಸ್' ಪ್ರಯತ್ನ ಪಟ್ಟರೂ, ಅದು ಸಾಧ್ಯವಾಗಲಿಲ್ಲ. ಮನೆಯ ಮೂಲ ನಿಯಮ ಮುರಿದ ಕಾರಣ, ಸಂಯುಕ್ತಗೆ ಗೇಟ್ ಕಡೆ ದಾರಿ ತೋರಿಸಿದರು 'ಬಿಗ್ ಬಾಸ್'.
'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿಯೇ ದೈಹಿಕ ಹಲ್ಲೆ ನಡೆಸಿ ಹೊರಬಂದ ಎರಡನೇ ಸ್ಪರ್ಧಿ ಈ ಸಂಯುಕ್ತ. ಹುಚ್ಚ ವೆಂಕಟ್ ನಂತರ 'ಬಿಗ್ ಬಾಸ್' ಮನೆಯೊಳಗೆ ದೈಹಿಕ ಹಲ್ಲೆ ಮಾಡಿ 'ಕುಖ್ಯಾತಿ' ಗಳಿಸಿದ್ದಾರೆ ಸಂಯುಕ್ತ ಹೆಗ್ಡೆ.


Click it and Unblock the Notifications











