»   » 'ಬಿಗ್ ಬಾಸ್' ಮನೆಯಲ್ಲಿ ನಡೆದಿದೆ ಏಳು ಕೊಲೆಗಳು.!

'ಬಿಗ್ ಬಾಸ್' ಮನೆಯಲ್ಲಿ ನಡೆದಿದೆ ಏಳು ಕೊಲೆಗಳು.!

Posted By:
Subscribe to Filmibeat Kannada

ಶೀರ್ಷಿಕೆ ನೋಡಿದ ತಕ್ಷಣ ಗಾಬರಿ ಪಡುವ ಅವಶ್ಯಕತೆ ಇಲ್ಲ. ಯಾಕಂದ್ರೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಈ ವಾರ 'ಕೊಲೆ' ಮಾಡುವ ಚಟುವಟಿಕೆಯನ್ನೇ 'ಬಿಗ್ ಬಾಸ್' ನೀಡಿದ್ದಾರೆ.

ಜೈಲಿನಿಂದ ತಪ್ಪಿಸಿಕೊಂಡು ಬಂದ ಕೊಲೆಗಾರ ಮನೆಯನ್ನು ಸೇರಿಕೊಂಡಿದ್ದಾನೆ. ಮನೆ ಸದಸ್ಯರು ಹತ್ಯೆಗೀಡಾಗದಂತೆ ಎಚ್ಚರ ವಹಿಸಬೇಕು. ಕೊಲೆಗಾರ ತನ್ನ ಬುದ್ಧಿವಂತಿಕೆಯಿಂದ ಕೊಲೆ ಮಾಡುವಲ್ಲಿ ಯಶಸ್ವಿ ಆದರೆ, ಆ ಸದಸ್ಯರ ಹೆಸರನ್ನು ಘೋಷಿಸಲಾಗುವುದು ಎಂದು ವಿಶೇಷ ಚಟುವಟಿಕೆ ಬಗ್ಗೆ 'ಬಿಗ್ ಬಾಸ್' ವಿವರಿಸಿದರು.

ಈ ವಿಶೇಷ ಚಟುವಟಿಕೆಯಲ್ಲಿ ರಿಯಾಝ್ ಮತ್ತು ಅನುಪಮಾ ಗೌಡ 'ಕೊಲೆಗಾರರಾಗಿದ್ದರು'. ಯಾರನ್ನ ಹೇಗೆ ಕೊಲೆ ಮಾಡಬೇಕು ಎಂಬುದನ್ನ ಕಾಲ ಕಾಲಕ್ಕೆ ತಿಳಿಸುವ ಸಲುವಾಗಿ 'ಬಿಗ್ ಬಾಸ್' ಒಂದು ವಿಶೇಷ ದೂರವಾಣಿಯನ್ನೂ ರಿಯಾಝ್ ಗೆ ನೀಡಿದ್ದರು. ಮುಂದೆ ಓದಿರಿ....

ಸೈಲೆಂಟ್ ಆಗಿ ನಡೆಯುತ್ತಿತ್ತು ಕೊಲೆಗಳು

ಕೊಲೆ ಅಂದ ಕೂಡಲೆ 'ಬಿಗ್ ಬಾಸ್' ಮನೆಯಲ್ಲಿ ರಕ್ತ ಹರಿಯಲಿಲ್ಲ. ಲಾಂಗ್, ಮಚ್ಚು, ಚೂರಿ, ಚಾಕು.. ಎಲ್ಲೂ ಕಾಣಲಿಲ್ಲ. ಇದಾವುದೂ ಇಲ್ಲದಂತೆ 'ಟಾಸ್ಕ್' ಮೂಲಕ ಕೊಲೆ ಆಗುತ್ತಿತ್ತು. ಅಷ್ಟಕ್ಕೂ, ಕೊಲೆ ಹೇಗೆ ಆಗುತ್ತಿದೆ ಎಂಬುದು ಗೊತ್ತಾಗದ ಕಾರಣ ಕೆಲ ಸದಸ್ಯರು ಭಯಭೀತರಾಗಿದ್ದರು.

ಅಂದು ಮೊಸರಿಗಾಗಿ ಗಲಾಟೆ ಮಾಡಿದವರೇ ಇಂದು ಸಮೀರಾಚಾರ್ಯಗೆ ತಿನ್ನಿಸಿದರು.!

ಏಳು ಜನರ ಕೊಲೆ ಆಯ್ತು

ಲಾಸ್ಯ, ಜಯಶ್ರೀನಿವಾಸನ್, ಸಮೀರಾಚಾರ್ಯ, ನಿವೇದಿತಾ, ದಿವಾಕರ್, ಸಂಯುಕ್ತ ಹಾಗೂ ರಿಯಾಝ್ ಹತ್ಯೆಗೀಡಾದರು.

ಹೀಗೆ ಮಾಡಿದ್ರೆ ಮೋಸ ಆಗಲ್ವಾ 'ಬಿಗ್ ಬಾಸ್'.? ಸ್ಪಷ್ಟನೆ ಕೊಡಿ.!

ರಿಯಾಝ್ ಮೇಲೆ ಅನುಮಾನ

ರಿಯಾಝ್ ಕೊಲೆಗಾರ ಎಂಬ ಅನುಮಾನ ಅನೇಕರಲ್ಲಿ ಮೂಡಿದ ಪರಿಣಾಮ, ಎಲ್ಲರ ದಿಕ್ಕು ತಪ್ಪಿಸಲು... ರಿಯಾಝ್ ರನ್ನೇ ಕೊಲೆ ಮಾಡಲು ಅನುಪಮಾ ಗೆ 'ಬಿಗ್ ಬಾಸ್' ಸೂಚಿಸಿದರು.

ಈ ವಾರ 'ಬಿಗ್ ಬಾಸ್' ಮನೆಯಿಂದ ಮನೆ ಕಡೆ ಹೆಜ್ಜೆ ಹಾಕುವವರು ಯಾರು.?

ಬಿಳಿ ಬಟ್ಟೆ

ಕೊಲೆಯಾದವರು ಬಿಳಿ ವಸ್ತ್ರ ಧರಿಸಿ ಗಾರ್ಡನ್ ಏರಿಯಾದಲ್ಲಿ ಇರಬೇಕಿತ್ತು. 'ಪಿಶಾಚಿ'ಗಳಾಗಿ ಜಯಶ್ರೀನಿವಾಸನ್ ಎಲ್ಲರನ್ನ ನಡುಗಿಸಲು ಆರಂಭಿಸಿದರು.

ಚಟುವಟಿಕೆ ಯಶಸ್ವಿ

'ಬಿಗ್ ಬಾಸ್' ಆದೇಶದಂತೆ ರಿಯಾಝ್ ಮತ್ತು ಅನುಪಮಾ ಏಳು ಸದಸ್ಯರನ್ನ ಕೊಲೆ ಮಾಡುವಲ್ಲಿ ಯಶಸ್ವಿ ಆದರು. ಹೀಗಾಗಿ, ಚಟುವಟಿಕೆ ಯಶಸ್ವಿಯಾಗಿ ಮುಕ್ತಾಯ ಆಯ್ತು.

English summary
Bigg Boss Kannada 5: Week 10: As the part of the task, Anupama Gowda and Riyaz becomes Killers in the house. The two killers are assigned to kill housemates and they become successful in the task.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X