»   » ಸುದೀಪ್ ಮುಂದೆ ಸಂಯುಕ್ತ ಏನು ಹೇಳಿದ್ರೋ, ಅದನ್ನೇ ಮಾಡಿ ತೋರಿಸಿದ್ರು.!

ಸುದೀಪ್ ಮುಂದೆ ಸಂಯುಕ್ತ ಏನು ಹೇಳಿದ್ರೋ, ಅದನ್ನೇ ಮಾಡಿ ತೋರಿಸಿದ್ರು.!

Posted By:
Subscribe to Filmibeat Kannada
ಸಂಯುಕ್ತ ಹೆಗ್ಡೆ ಸುದೀಪ್ ಎದುರು ಹೇಳಿದ ಹಾಗೆ ಮಾಡಿ ತೋರಿಸಿದ್ರು | Filmibeat Kannada

'ಕಿರಿಕ್ ಪಾರ್ಟಿ' ಸಿನಿಮಾ ರಿಲೀಸ್ ಆಗಿ ಇನ್ನೇನು ಒಂದು ವರ್ಷ ಆಗ್ತಾ ಬಂತು. ಈ ಒಂದು ವರ್ಷದಲ್ಲಿ ಒಳ್ಳೆಯ ವಿಷಯಗಳಿಗಿಂತ ನಟಿ ಸಂಯುಕ್ತ 'ವಿವಾದ'ಗಳಿಂದಲೇ ಸೌಂಡ್ ಮಾಡಿದ್ದು ಹೆಚ್ಚು.

ಒಂದು ತಮಿಳು ಸಿನಿಮಾ ಆಫರ್ ಗಾಗಿ ಕನ್ನಡ ಚಿತ್ರಕ್ಕೆ ಕೈಕೊಡಲು ಮುಂದಾದ ಸಂಯುಕ್ತ ಕನ್ನಡಿಗರ ಆಕ್ರೋಶಕ್ಕೆ ಕಾರಣವಾದರು. ಹಾಗೂ ಹೀಗೂ 'ಕಾಲೇಜ್ ಕುಮಾರ್' ಮುಗಿಸಿಕೊಟ್ಟು, ಚಿತ್ರ ಬಿಡುಗಡೆ ಆದ್ಮೇಲೂ ವಿವಾದ ಮಾತ್ರ ಸಂಯುಕ್ತ ರನ್ನ ಬಿಡಲಿಲ್ಲ.

ಇದೇ ಗ್ಯಾಪ್ ನಲ್ಲಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಭಾಗವಾಗಿರುವ 'ಕಿಚ್ಚನ್ ಟೈಮ್'ನಲ್ಲಿ ವಿಶೇಷ ಅತಿಥಿಯಾಗಿ ಬಂದ ಸಂಯುಕ್ತ ನಂತರ ನೇರವಾಗಿ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟರು.

'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೇಲೂ ಸಂಯುಕ್ತ 'ಕಿರಿಕ್' ನಿಲ್ಲಲಿಲ್ಲ. ಸಮೀರಾಚಾರ್ಯ ಮೇಲೆ ಕೈ ಮಾಡಿ ಕಿಕ್ ಔಟ್ ಆಗಿದ್ದಾರೆ ಸಂಯುಕ್ತ. ಅಷ್ಟಕ್ಕೂ, 'ಕಿಚ್ಚನ್ ಟೈಮ್'ನಲ್ಲಿ ಭಾಗವಹಿಸಿದ್ದಾಗ ಸಂಯುಕ್ತ ಏನು ಹೇಳಿದ್ರೋ, ಅದೇ ಆಗಿದೆ. ಏನಪ್ಪಾ ಅದು ಅಂತ ತಲೆ ಕೆರ್ಕೊಳ್ಳುವ ಮುನ್ನ ಪೂರ್ತಿ ಮ್ಯಾಟರ್ ಓದಿರಿ...

'ಕಿಚ್ಚನ್ ಟೈಮ್' ನಲ್ಲಿ ಸಂಯುಕ್ತ

'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದ ಸಂಯುಕ್ತ, 'ಕಿಚ್ಚನ್ ಟೈಮ್' ಕಾರ್ಯಕ್ರಮದಲ್ಲಿ ಮೊದಲ ಅತಿಥಿಯಾಗಿ ಭಾಗವಹಿಸಿ ಸುದೀಪ್ ಜೊತೆಗೆ ಅಡುಗೆ ಮಾಡಿದರು.

'ಬಿಗ್ ಬಾಸ್' ಮನೆಯೊಳಗೆ ಹೋಗ್ತಾರೆ ನಟಿ ಸಂಯುಕ್ತ ಹೆಗ್ಡೆ.! ಪ್ರಾಮಿಸ್.!

ಇದೇ ಟೈಮ್ ನಲ್ಲಿ...

ಇದೇ ವೇಳೆ ''ನೀವು 'ಬಿಗ್ ಬಾಸ್' ಮನೆಯೊಳಗೆ ಹೋಗ್ಬೇಕ್ರೀ'' ಎಂದು ಸುದೀಪ್ ಕೇಳಿದರು. ಆಗ ಕೈ ಮುಗಿಯುತ್ತಾ ''ಇಲ್ಲ ನನಗೆ ಕೋಪ ತುಂಬಾ ಜಾಸ್ತಿ. ಹೀಗಾಗಿ, 'ಬಿಗ್ ಬಾಸ್' ಮನೆಯೊಳಗೆ ತುಂಬಾ ಕೋಪ ಬಂದು ಬಿಟ್ಟರೆ, ಯಾರ ಮೇಲಾದರೂ ಹೊಡೆಯುವ ಸಾಧ್ಯತೆ ಇದೆ'' ಎಂದು ಆಗಲೇ ಹೇಳಿದ್ದರು ಸಂಯುಕ್ತ ಹೆಗ್ಡೆ.

'ಬಿಗ್' ಮನೆಯೊಳಗೆ 'ಕಿರಿಕ್' ಹುಡುಗಿ ಸಂಯುಕ್ತ ಮಾಡಿದ 'ಕಿರಿಕ್'ಗಳು ಒಂದೆರಡಲ್ಲ.!

ಸಂಯುಕ್ತಗೆ 'ಕೈ ಮಾಡಿ' ಅಭ್ಯಾಸ ಇದೆ

''ಕೋಪ ಬಂದಾಗ ಹೊಡೆದಿದ್ದೇನೆ'' ಎಂದು 'ಕಿಚ್ಚನ್ ಟೈಮ್' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಎದುರಿಗೆ ಸಂಯುಕ್ತ ಒಪ್ಪಿಕೊಂಡಿದ್ದರು.

'ಕಿರಿಕ್' ಸಂಯುಕ್ತಾಗೆ ಕ್ಲಾಸ್ ತಗೊಂಡ ಪ್ರಥಮ್ ಮತ್ತು ಕೀರ್ತಿ!

ಇಷ್ಟೆಲ್ಲ ಹೇಳಿದ್ಮೇಲೂ...

''ಬಿಗ್ ಬಾಸ್' ಮನೆಯೊಳಗೆ ನಿಮ್ಮನ್ನ ಕಳುಹಿಸಬೇಕು'' ಎಂದು ಸುದೀಪ್ ಮತ್ತೆ ಕೇಳಿದಾಗ, ''ಕಳುಹಿಸಿ ಸರ್, ಹೋಗೋಣ'' ಎಂದು ಗ್ರೀನ್ ಸಿಗ್ನಲ್ ಕೊಟ್ಟರು ಸಂಯುಕ್ತ.

ಸಮೀರಾಚಾರ್ಯ ಮೇಲೆ ಸಂಯುಕ್ತಾ ಹಲ್ಲೆ: ಪತ್ನಿ ಶ್ರಾವಣಿ ಆಕ್ರೋಶ

ಮೈನಸ್ ಪಾಯಿಂಟ್ ನ ಅರಿವು ಇದ್ದರೂ...

ಸಂಯುಕ್ತಗೆ ತಮ್ಮ ಕೆಟ್ಟು ಕೋಪದ ಅರಿವಿದೆ. 'ಬಿಗ್ ಬಾಸ್' ಮನೆಯೊಳಗೆ ನೂರಾರು ಕ್ಯಾಮರಾಗಳು ತಮ್ಮ ಚಲನವಲನಗಳನ್ನ ಸೆರೆ ಹಿಡಿಯುತ್ತವೆ ಎಂಬ ಪ್ರಜ್ಞೆ ಕೂಡ ಅವರಿಗಿದೆ. ಹೀಗಿದ್ದರೂ, ಉಗ್ರಪ್ರತಾಪ ಪ್ರದರ್ಶಿಸಿ... ರಿಯಾಲಿಟಿ ಶೋನಲ್ಲಿ ಇನ್ನೊಬ್ಬರ ಮೇಲೆ ಕೈ ಮಾಡಿದ್ದಾರೆ ಸಂಯುಕ್ತ.

''ನಟಿ ಸಂಯುಕ್ತ ಸ್ತ್ರೀ ಕುಲಕ್ಕೆ ಕಳಂಕ'' ಎಂದ ನಟ ಜಗ್ಗೇಶ್

ಕಳುಹಿಸಿದ್ದು ಯಾಕೆ.?

''ತಮಗೆ ಸಿಕ್ಕಾಪಟ್ಟೆ ಕೋಪ. ಕೋಪ ಬಂದಾಗ ಹೊಡೆಯುತ್ತೇನೆ'' ಅಂತ ಹೇಳಿದ್ಮೇಲೂ 'ಬಿಗ್ ಬಾಸ್' ಆಯೋಜಕರು ಸಂಯುಕ್ತರನ್ನ 'ವಿಶೇಷ ಅತಿಥಿ'ಯಾಗಿ ಒಳಗೆ ಕಳುಹಿಸಿದ್ದಾರೆ. 'ಟಿ.ಆರ್.ಪಿ'ಗಾಗಿ ಹೀಗೆ ಮಾಡಿದ್ರಾ.?

ಇಬ್ಬರ ಜೊತೆ ಕಿತ್ತಾಡಿ ಮೂರನೇಯವರಿಗೆ ಹೊಡೆದ 'ಕಿರಿಕ್' ಸಂಯುಕ್ತ.!

ಕಪ್ಪು ಚುಕ್ಕೆ ಬಂತಲ್ಲ.!

'ಬಿಗ್ ಬಾಸ್ ಕನ್ನಡ' ಇತಿಹಾಸದಲ್ಲಿಯೇ, ಇದು ಮೂರನೇ ಬಾರಿಗೆ ದೈಹಿಕ ಹಲ್ಲೆ ನಡೆದಿರುವುದು. ಇದು ಕಾರ್ಯಕ್ರಮಕ್ಕೂ, ಸಂಯುಕ್ತ ಜೀವನಕ್ಕೂ ಕಪ್ಪು ಚುಕ್ಕೆ ಅಲ್ಲದೇ ಮತ್ತೇನು.?!

English summary
Bigg Boss Kannada 5: Week 10: What Samyuktha Hegde said in front of Sudeep in 'Kicchan Time' did the same inside Bigg Boss house.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X