»   » ದಿವಾಕರ್ ಎಂಥ ರಾಜಕಾರಣಿ ಅಂತ ಸುದೀಪ್ ಗೂ ಗೊತ್ತಾಯ್ತು.!

ದಿವಾಕರ್ ಎಂಥ ರಾಜಕಾರಣಿ ಅಂತ ಸುದೀಪ್ ಗೂ ಗೊತ್ತಾಯ್ತು.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಹನ್ನೊಂದನೇ ವಾರ ಸ್ಪರ್ಧಿಗಳಿಗೆಲ್ಲಾ 'ಪ್ರಜಾರಾಜ್ಯ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನ 'ಬಿಗ್ ಬಾಸ್' ನೀಡಿದ್ದರು. ಈ ಚಟುವಟಿಕೆ ಅನುಸಾರ, ಸ್ಪರ್ಧಿಗಳು ರಾಜಕಾರಣಿಗಳಾಗಿ, 'ಬಿಗ್ ಬಾಸ್' ಮನೆಯ ಅಧಿಕಾರ ಚುಕ್ಕಾಣಿ ಹಿಡಿಯಲು ತಂತ್ರ-ಪ್ರತಿ ತಂತ್ರ ರೂಪಿಸಿದರು.

ಟಾಸ್ಕ್ ಮುಗಿದ ಬಳಿಕ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ 'ಯಾರು ಒಳ್ಳೆಯ ರಾಜಕಾರಣಿ.?' ಎಂದು ಎಲ್ಲರಿಗೂ ಸುದೀಪ್ ಪ್ರಶ್ನಿಸಿದರು. ಒಬ್ಬೊಬ್ಬರು ಒಂದೊಂದು ರೀತಿ ಉತ್ತರ ಕೊಟ್ಟರು.

ಆದ್ರೆ, 'ಬಿಗ್ ಬಾಸ್' ಮನೆಯಲ್ಲಿ ಇರುವ ಸ್ಪರ್ಧಿಗಳ ಪೈಕಿ ದಿವಾಕರ್ 'ಒಳ್ಳೆಯ ರಾಜಕಾರಣಿ' ಎಂಬ ಸತ್ಯ ಸಂಗತಿ ಸುದೀಪ್ ಮುಂದೆಯೇ ಬಯಲಾಯಿತು. ಅದು ಹೇಗೆ ಅಂದ್ರಾ.? ಪೂರ್ತಿ ಮ್ಯಾಟರ್ ಓದಿರಿ...

ದಿವಾಕರ್ ಗೆ ಪ್ರಶ್ನಿಸಿದ ಕಾಲರ್ ಆಫ್ ದಿ ವೀಕ್.!

'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ದಿವಾಕರ್ ಗೆ ''ನಿಮ್ಮ ಪಕ್ಷದ ಮುಖಂಡರು ಯಾರು ಆಗಬೇಕು ಅಂತ ಕೇಳಿದಾಗ, ಹೊರಗಡೆ ನಿವೇದಿತಾಗೆ ಸಪೋರ್ಟ್ ಮಾಡ್ತೀನಿ ಅಂತ ಹೇಳಿ ಒಳಗಡೆ ಬಂದ್ಮೇಲೆ ನಿಮಗೆ ನೀವೇ ವೋಟ್ ಮಾಡಿಕೊಂಡ್ರಿ. ಇದು ಯಾಕೆ.?'' ಎಂದು 'ಕಾಲರ್ ಆಫ್ ದಿ ವೀಕ್' ಪ್ರಶ್ನಿಸಿದರು.

'ಡಬಲ್ ಗೇಮ್' ದಿವಾಕರ್: ಹೊರಗೆ ಹೇಳಿದ್ದೊಂದು, ಒಳಗೆ ಬಂದು ಮಾಡಿದ್ದೇ ಮತ್ತೊಂದು.!

ದಿವಾಕರ್ ಕೊಟ್ಟ ಉತ್ತರ ಏನು.?

''ಒಳಗಡೆ ಹೋದ ಮೇಲೆ ನಿಮಗೆ ನೀವೇ ವೋಟ್ ಮಾಡಿಕೊಳ್ಳಬಹುದು ಅಂತ ಹೇಳಿದರು. ಅದಕ್ಕೆ ನನಗೆ ನಾನೇ ವೋಟ್ ಮಾಡಿಕೊಂಡೆ'' ಎಂದು ದಿವಾಕರ್ ಸಬೂಬು ನೀಡಿದರು.

'ಎಕ್ಸ್ ಟ್ರಾ ಮೆಣಸಿನಕಾಯಿ' ಹಾಕುವ ದಿವಾಕರ್ ಗೆ ಇದೆಲ್ಲ ಯಾಕೆ ಬೇಕು.?

ಆಸೆ ಇತ್ತಂತೆ.!

''ಅದನ್ನ ಹೊರಗಡೆ ಹೇಳಬಹುದಿತ್ತು'' ಎಂದು 'ಕಾಲರ್ ಆಫ್ ದಿ ವೀಕ್' ಮರು ಪ್ರಶ್ನೆ ಮಾಡಿದಾಗ, ''ನಾನು ಎಲೆಕ್ಷನ್ ನಲ್ಲಿ ನಿಂತು ಗೆಲ್ಲಬೇಕು ಅಂತ ಆಸೆ ಇತ್ತು. ಅದಕ್ಕೆ ನನಗೆ ನಾನೇ ವೋಟ್ ಮಾಡಿಕೊಂಡೆ'' ಎಂದರು ದಿವಾಕರ್.

ಅಚ್ಚರಿ ಬೆಳವಣಿಗೆ: ದಿವಾಕರ್ ಸೀಕ್ರೆಟ್ ರೂಮ್ ಗೆ, ಜಯಶ್ರೀನಿವಾಸನ್ ಮನೆಗೆ.!

ತಗಲಾಕೊಂಡ ದಿವಾಕರ್.!

''ನಿಮಗೆ ನೀವು ವೋಟ್ ಹಾಕಿಕೊಳ್ಳಬಹುದು ಅಂತ ಹೊರಗಡೆಯೇ ಹೇಳಿದ್ದರು'' ಸುದೀಪ್ ಹೇಳಿದಾಗ, ''ಹೌದಾ.?'' ಎಂದು ಆಶ್ಚರ್ಯ ವ್ಯಕ್ತಪಡಿಸಿದರು ದಿವಾಕರ್.

ಯಾರು 'ಒಳ್ಳೆ'ಯ 'ರಾಜಕಾರಣಿ'.?

''ಈಗ ಒಂದು ಪ್ರಶ್ನೆ ಕೇಳುತ್ತೇನೆ. ಒಳ್ಳೆಯ ರಾಜಕಾರಣಿ ಯಾರು.? ಉತ್ತರ ಬೇಡ. ಪ್ರಶ್ನೆ ಕೇಳಬೇಕು ಎನ್ನಿಸಿತು, ಕೇಳ್ದೆ'' ಎಂದು 'ಒಳಗೆ ಒಂದು ಹೊರಗೆ ಇನ್ನೊಂದು ಮಾಡಿದ ದಿವಾಕರ್'ಗೆ ಚಮಕ್ ಕೊಟ್ಟರು ಸುದೀಪ್.

English summary
Bigg Boss Kannada 5: Week 11: Caller of the week questions Diwakar for voting himself in 'Prajarajya' task.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X