»   » ಆಡಿರುವ ಮಾತುಗಳನ್ನೇ 'ಇಲ್ಲ' ಅಂತಿದ್ದಾರಲ್ಲ ದಿವಾಕರ್.! ಯಾಕೆ ಹೀಗೆ.?

ಆಡಿರುವ ಮಾತುಗಳನ್ನೇ 'ಇಲ್ಲ' ಅಂತಿದ್ದಾರಲ್ಲ ದಿವಾಕರ್.! ಯಾಕೆ ಹೀಗೆ.?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಆರಂಭದ ದಿನಗಳಲ್ಲಿ ಇದ್ದಂತೆ ದಿವಾಕರ್ ಈಗಿಲ್ಲ. ಅಂದು ಕಾಮನ್ ಮ್ಯಾನ್ ದಿವಾಕರ್ ನ ಜನ ಇಷ್ಟ ಪಡುತ್ತಿದ್ದರು. ಪದೇ ಪದೇ ನಾಮಿನೇಟ್ ಆಗುತ್ತಿದ್ದ ದಿವಾಕರ್, ವೀಕ್ಷಕರ ಬೆಂಬಲದಿಂದ ಸೇಫ್ ಆಗುತ್ತಿದ್ದರು.

ಸೇಫ್ ಆಗುತ್ತಾ ಬಂದಂತೆ ದಿವಾಕರ್ ರವರಲ್ಲಿ ಆತ್ಮ ವಿಶ್ವಾಸ ಹೆಚ್ಚಾಯ್ತಾ.? ಗೊತ್ತಿಲ್ಲ. ಆದ್ರೆ, ಅನೇಕ ಬಾರಿ ಜಗಳಕ್ಕೆ ನಾಂದಿ ಹಾಡಿದರು. ಅನವಶ್ಯಕವಾಗಿ ರಿಯಾಝ್ ಜೊತೆ ಯುದ್ಧಕ್ಕೆ ಇಳಿದರು. ನಿವೇದಿತಾ ಜೊತೆ ವಾದ ಮಾಡಿದರು. ಜಯಶ್ರೀನಿವಾಸನ್ ಜೊತೆ ವಾಕ್ಸಮರ ನಡೆಸಿದರು. ''ಹೇರ್ ಸ್ಟೈಲ್ ಬದಲಾದಂತೆ ದಿವಾಕರ್ ಬುದ್ಧಿ ಕೂಡ ಬದಲಾಗಿದೆ'' ಎಂಬ ಮಾತು ಸುದೀಪ್ ಬಾಯಿಂದ ಕೂಡ ಬಂದಿತ್ತು.

ಈಗ ದಿವಾಕರ್ ಬಗ್ಗೆ ನಾವು ಇಷ್ಟೆಲ್ಲ ಹೇಳಲು ಕಾರಣ, ಅವರು ಆಡಿರುವ ಒಂದು ಮಾತು. ರಿಯಾಝ್ ವಿರುದ್ಧ ಸಿಡಿದೆದ್ದಾಗ, ''ಸ್ಕೌಂಡ್ರೆಲ್'' ಎಂಬ ಪದ ದಿವಾಕರ್ ಬಾಯಿಂದ ಬಂದಿದೆ. ಆದ್ರೆ, ಅದನ್ನ ತಾವು ಹೇಳಿಲ್ಲ ಎಂದು ಸುದೀಪ್ ಮುಂದೆ ನುಡಿದಿದ್ದಾರೆ ದಿವಾಕರ್. ಮುಂದೆ ಓದಿರಿ...

ನಾಮಿನೇಷನ್ ಬಗ್ಗೆ ಸುದೀಪ್ ಪಂಚಾಯತ

ವಾರದ ಇಡೀ ಕಥೆಯನ್ನ ಇಟ್ಟುಕೊಂಡು ಸುದೀಪ್ ಪಂಚಾಯತಿ ನಡೆಸುತ್ತಿದ್ದಾಗ, ನಾಮಿನೇಷನ್ ಟಾಪಿಕ್ ಬಂತು. ಕ್ಯಾಪ್ಟನ್ ಆಗಿದ್ದ ರಿಯಾಝ್, ದಿವಾಕರ್ ಅವರನ್ನ ನೇರವಾಗಿ ನಾಮಿನೇಟ್ ಮಾಡಿದ್ದರು. ಆದ್ರೆ, ಅದಕ್ಕೆ ರಿಯಾಝ್ ಕೊಟ್ಟ ಕಾರಣ ಸರಿಯಿಲ್ಲ ಎಂದು ದಿವಾಕರ್ ಕೂಗಾಡಿದ್ದರು. ಈ ಬಗ್ಗೆ ಸುದೀಪ್ ಚರ್ಚೆ ಮಾಡುತ್ತಿದ್ದಾಗ ಇಡೀ ಘಟನೆಯನ್ನ ರಿಯಾಝ್ ವಿವರಿಸಿದರು. ಜೊತೆಗೆ ದಿವಾಕರ್ ''ಸ್ಕೌಂಡ್ರೆಲ್'' ಎಂದು ಹೇಳಿದ್ದನ್ನ ರಿಯಾಝ್ ಉಲ್ಲೇಖಿಸಿದರು.

ದಿವಾಕರ್ ಗೆ ಕ್ಲಾಸ್ ಲೆಸ್ ಈಡಿಯೆಟ್ ಎಂದ ರಿಯಾಝ್.!

ದಿವಾಕರ್ ಹೇಳಿದ್ದೇನು.?

''ರಿಯಾಝ್ ಕೊಟ್ಟ ಕಾರಣ ಡಬ್ಬಾ ಎಂದು ಹೇಳಿದೆ. ಆದ್ರೆ, ನಾನು ಇಂಗ್ಲೀಷ್ ನಲ್ಲಿ ಬೈಯ್ದಿದ್ದು ಇದ್ಯಾ ನೋಡಿ.... ಹಾಗ್ನೋಡಿದ್ರೆ, ರಿಯಾಝ್ ಅವರೇ ನನಗೆ ಬೈಯ್ದಿದ್ದು. ನಾನು ಅವರಿಗೆ ಇಂಗ್ಲೀಷ್ ನಲ್ಲಿ ಬೈಯ್ದಿಲ್ಲ'' ಎಂದು ಕಡ್ಡಿ ತುಂಡು ಮಾಡಿದ ಹಾಗೆ ದಿವಾಕರ್ ಹೇಳಿದರು.

ರಿಯಾಝ್ ಮತ್ತು ದಿವಾಕರ್ ನಡುವೆ ಮೂಡಿದೆ ಮನಸ್ತಾಪ.!

ಸುದೀಪ್ ಕೊಟ್ಟ ಪ್ರತಿಕ್ರಿಯೆ ಏನು.?

''ಯಾರು ಬೈಯ್ದಿದ್ದೀರಾ ಅಂತ ಜನ ನೋಡಿದ್ದಾರೆ. ಈಗ ಬಳಸಿಲ್ಲ ಅಂತ ಹೇಳ್ತಿರೋದನ್ನೂ ಜನ ನೋಡ್ತಿದ್ದಾರೆ. ಕೆಲವೊಂದು ಬಾರಿ ನೀವು ಬಳಸಿರುವ ಪದಗಳು ನಿಮಗೆ ಗೊತ್ತಿರುವುದಿಲ್ಲ. ''ನಾನು ಹೇಳಿಲ್ಲ ಅಂತೀರಾ. ಆದ್ರೆ ಹೇಳಿರ್ತೀರಾ. ಹೇಳಿದ್ಮೇಲೆ, ಪ್ರತಿಕ್ರಿಯೆ ಬರುತ್ತೆ. ಪ್ರತಿಕ್ರಿಯೆ ಬಂದ್ಮೇಲೆ ಅದೇ ದೊಡ್ಡ ಗಲಾಟೆಗೆ ಕಾರಣ ಆಗುತ್ತೆ. ಹುಷಾರಾಗಿರಿ..'' ಎಂದು ಖಡಕ್ ಆಗಿ ನುಡಿದರು ಕಿಚ್ಚ ಸುದೀಪ್.

ಮಾಡೋದೆಲ್ಲ ಮಾಡಿ ಈಗ ಕ್ಷಮೆ ಕೇಳಿದ್ರೆ ಸರಿ ಹೋಗುತ್ತಾ.?

ಅಷ್ಟಕ್ಕೂ ಆಗಿದ್ದೇನು.?

ನಾಮಿನೇಷನ್ ಪ್ರಕ್ರಿಯೆಯಲ್ಲಿ, ದಿವಾಕರ್ ಅವರನ್ನ ರಿಯಾಝ್ ನೇರವಾಗಿ ನಾಮಿನೇಟ್ ಮಾಡಿದರು. ''ದಿವಾಕರ್ ಹಿಂದೆ ಒಂಥರಾ, ಮುಂದೆ ಒಂಥರಾ ಇರುತ್ತಾರೆ'' ಎಂದು ರಿಯಾಝ್ ಕೊಟ್ಟ ಕಾರಣ ಸರಿಯಿಲ್ಲ ಎಂದು ದಿವಾಕರ್ ಕೋಪಿಸಿಕೊಂಡರು.

'ನಾಟಕ' ಮಾಡುವ ರಿಯಾಝ್ ಗೆ 'ಥೂ' ಎಂದ ದಿವಾಕರ್.!

ಅಂದು ದಿವಾಕರ್ ಬಾಯಿಂದ ಬಂದ ಮಾತುಗಳಿವು...

'ಏನೇ ಇದ್ದರೂ ಎದುರುಗಡೆ ಮಾತನಾಡುತ್ತೇನೆ. ಆ ತರಹ ಬುದ್ಧಿ ನಿಮಗೆ ಇದೆ. ನನಗೆ ಇಲ್ಲ. ಕೊಟ್ಟ ಕಾರಣ ಸರಿಯಿಲ್ಲ. ಡಬ್ಬ ತರಹ ಇದೆ. ನಾಮಿನೇಷನ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಆದ್ರೆ, ಕೆಲಸಕ್ಕೆ ಬಾರದ ಕಾರಣ ಕೊಟ್ಟರು. ಬರೀ ತಲೆಗೆ ಹುಳ ಬಿಡುತ್ತಾರೆ. ಅವರಿವರ ತಲೆ ಕೆಡಿಸುತ್ತಾರೆ. ಬರೀ ಡವ್ ಮಾಡ್ತಾರೆ. ಅವರ ಮಾತನ್ನ ನಂಬಬಾರದು'' ಎನ್ನುವ ಬೆಂಕಿ ಉಂಡೆಗಳನ್ನುಗುಳಿದರು ದಿವಾಕರ್.

ರಿಯಾಝ್ ಹೇಳಿದ್ದೇನು.?

ದಿವಾಕರ್ ಮಾತುಗಳಿಗೆ ಮೊದಮೊದಲು ಪ್ರತಿಕ್ರಿಯೆ ಕೊಡದ ರಿಯಾಝ್ ಬಳಿಕ, ''ಕ್ಲಾಸ್ ಲೆಸ್ ಈಡಿಯೆಟ್ ಅಂತಾರಲ್ಲ ಅದು ಇವರೇ.! ಸ್ಟುಪಿಡ್ ಫೆಲೋ...'' ಎಂದು ದಿವಾಕರ್ ಗೆ ಬೈಯ್ದರು.

ಆಗ 'ಸ್ಕೌಂಡ್ರೆಲ್' ಎಂದ ದಿವಾಕರ್.!

ಅದಕ್ಕೆ ದಿವಾಕರ್ ಕೂಡ, ''ಸ್ಕೌಂಡ್ರೆಲ್ ತಾವೇ... ಯಾಮಾರಿಸುವುದು, ತಲೆಗೆ ಹುಳ ಬಿಡುವುದು, ತಂದಿಡುವುದು, ದೂರ ಮಾಡುವುದು ಎಲ್ಲ ನೀವೇ'' ಎಂದು ದಿವಾಕರ್ ತಿರುಗಿಬಿದ್ದರು.

ಅಂದು ಹೇಳಿ, ಇಂದು ಹೇಳಿಲ್ಲ ಅಂತಿದ್ದಾರೆ.!

ಅಂದು 'ಸ್ಕೌಂಡ್ರೆಲ್' ಅಂತ ದಿವಾಕರ್ ಹೇಳಿದ್ದಾರೆ. ಆದ್ರೆ, ಇಂದು ಅದೇ ದಿವಾಕರ್ 'ಹಾಗೆ ಹೇಳಿಲ್ಲ' ಅಂತ ಮಾತು ಬದಲಾಯಿಸಿದ್ದಾರೆ. ಹೀಗೆ ಯಾಕೆ.? 'ಬಿಗ್ ಬಾಸ್' ಬಲ್ಲ.!

English summary
Bigg Boss Kannada 5: Week 11: Diwakar denies of using Abusive words to Riyaz Basha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X