»   » 'ಎಕ್ಸ್ ಟ್ರಾ ಮೆಣಸಿನಕಾಯಿ' ಹಾಕುವ ದಿವಾಕರ್ ಗೆ ಇದೆಲ್ಲ ಯಾಕೆ ಬೇಕು.?

'ಎಕ್ಸ್ ಟ್ರಾ ಮೆಣಸಿನಕಾಯಿ' ಹಾಕುವ ದಿವಾಕರ್ ಗೆ ಇದೆಲ್ಲ ಯಾಕೆ ಬೇಕು.?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಮೊದಲೆರಡು ವಾರ ಗದ್ದಲ, ಗಲಾಟೆ, ಜಗಳಗಳಿಂದಲೇ ಗುರುತಿಸಿಕೊಂಡ 'ಕಾಮನ್ ಮ್ಯಾನ್' ದಿವಾಕರ್ ಕಳೆದ ಕೆಲ ದಿನಗಳಿಂದ ಸಣ್ಣಪುಟ್ಟ ವಿಷಯಕ್ಕೆ ಕ್ಯಾತೆ ತೆಗೆಯುತ್ತಿದ್ದಾರೆ.

ರಿಯಾಝ್, ಸಮೀರಾಚಾರ್ಯ ಜೊತೆಗೆ ಆಗಾಗ ವಾಕ್ಸಮರ ನಡೆಸುವ ದಿವಾಕರ್ ಇದೀಗ 'ಡಾಲ್' ನಿವೇದಿತಾ ಗೌಡ ಜೊತೆ ವಾಗ್ಯುದ್ಧ ನಡೆಸಿದ್ದಾರೆ.

Bigg Boss Kannada 5: Week 11: Diwakar gets irritated with Niveditha Gowda

ಇದ್ದಕ್ಕಿದ್ದಂತೆ ಕನ್ಫೆಶನ್ ರೂಮ್ ನಿಂದ ಜಯಶ್ರೀನಿವಾಸನ್ ಮಯವಾದ ಮೇಲೆ ನಿವೇದಿತಾಗೆ ಸ್ವಲ್ಪ ಟೆನ್ಷನ್ ಆಗಿತ್ತು. ಅದಾಗಲೇ, ಚಂದನ್ ಶೆಟ್ಟಿ ಹಾಗೂ ಕೃಷಿ ತಾಪಂಡ ಕನ್ಫೆಶನ್ ರೂಮ್ ಒಳಗೆ ಹೋಗಿ ಬಂದಿದ್ರಿಂದ, ಎಲ್ಲರನ್ನೂ ಕನ್ಫೆಶನ್ ರೂಮ್ ಒಳಗೆ ಕರೆಯಬಹುದು ಎಂಬ ಕುತೂಹಲ ನಿವೇದಿತಾಗೆ ಇತ್ತು. ಇದನ್ನೇ ತಮ್ಮ ಆತ್ಮೀಯ ಗೆಳೆಯ ಚಂದನ್ ಶೆಟ್ಟಿ ಜೊತೆ ಮಾತನಾಡುತ್ತಿದ್ದರು ನಿವೇದಿತಾ ಗೌಡ.

'ನಾಟಕ' ಮಾಡುವ ರಿಯಾಝ್ ಗೆ 'ಥೂ' ಎಂದ ದಿವಾಕರ್.!

ಚಂದನ್ ಶೆಟ್ಟಿ ಪಕ್ಕದಲ್ಲಿಯೇ ಇದ್ದ ದಿವಾಕರ್ ಗೆ ನಿವೇದಿತಾ ಕೌತುಕ ಸಹಿಸಲು ಆಗಲಿಲ್ಲ. ''ಇಪ್ಪತ್ತು ಬಾರಿ ಹೇಳಿದ್ದನ್ನೇ ಹೇಳ್ತೀಯಾ... ಇರಿಟೇಟ್ ಆಗುತ್ತೆ... ತಲೆ ನೋವು ಬರುತ್ತೆ... ತಲೆಗೆ ಹುಳ ಬಿಡಬೇಡ, ಮೈಸೂರು ರಾಣಿ ಸುಮ್ನೆ ಇರಮ್ಮ... ಜಾಸ್ತಿ ಡವ್ ಮಾಡಿದರೆ ಉರಿದು ಹೋಗುತ್ತೆ'' ಅಂತೆಲ್ಲ ನಿವೇದಿತಾಗೆ ದಿವಾಕರ್ ಹೇಳಿದರು.

Bigg Boss Kannada 5: Week 11: Diwakar gets irritated with Niveditha Gowda

ಮಾಡೋದೆಲ್ಲ ಮಾಡಿ ಈಗ ಕ್ಷಮೆ ಕೇಳಿದ್ರೆ ಸರಿ ಹೋಗುತ್ತಾ.?

ಕಿರಿಕಿರಿಗೊಂಡಿದ್ದ ದಿವಾಕರ್ ಗೆ, ''ನನ್ನಿಷ್ಟ.. ನಾನು ಡವ್ ಮಾಡ್ತೀನಿ. ನಿಮಗೇನು ಪ್ರಾಬ್ಲಂ'' ಅಂತ ಮಾತಲ್ಲೇ ಪೆಟ್ಟು ಕೊಟ್ಟರು ನಿವೇದಿತಾ.

ಹಾಗ್ನೋಡಿದ್ರೆ, 'ಎಕ್ಸ್ ಟ್ರಾ ಮೆಣಸಿನಕಾಯಿ ಹಾಕುವ ಕೆಲಸ ಮಾಡಬೇಡಿ' ಎಂದು ದಿವಾಕರ್ ಗೆ ಸುದೀಪ್ ಸಲಹೆ ನೀಡಿದ್ದರು. ಆದ್ರೆ ಈಗ ಎಲ್ಲದಕ್ಕೂ ಉರಿದುಕೊಳ್ಳುತ್ತಿದ್ದಾರೆ ದಿವಾಕರ್. ಇನ್ನೇನು ಗ್ರ್ಯಾಂಡ್ ಫಿನಾಲೆ ಹತ್ತಿರ ಬರುತ್ತಿರುವಾಗ ದಿವಾಕರ್ ಗೆ ಇದೆಲ್ಲ ಯಾಕೆ ಬೇಕು.?

English summary
Bigg Boss Kannada 5: Week 11: Diwakar gets irritated with Niveditha Gowda

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X