»   » ಈ ಐವರಲ್ಲಿ ಒಬ್ಬರಿಗೆ ಈ ವಾರ 'ಬಿಗ್ ಬಾಸ್' ಆಟ ಅಂತ್ಯ.!

ಈ ಐವರಲ್ಲಿ ಒಬ್ಬರಿಗೆ ಈ ವಾರ 'ಬಿಗ್ ಬಾಸ್' ಆಟ ಅಂತ್ಯ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ನಿನ್ನೆ ಮೊನ್ನೆ ಶುರುವಾದಂತಿದೆ. ಕಣ್ಣು ಮುಚ್ಚಿ ಕಣ್ತೆರೆಯುವುದರಲ್ಲಿ ಹತ್ತು ವಾರ ಕಳೆದು ಹೋಗಿದೆ. ಹನ್ನೊಂದನೇ ವಾರಕ್ಕೆ ಕಾಲಿಟ್ಟಿರುವ ಸ್ಪರ್ಧಿಗಳಿಗೆ, ವಾರದ ಆರಂಭದಲ್ಲಿಯೇ ನಾಮಿನೇಷನ್ ಬಿಸಿ ಮುಟ್ಟಿದೆ.

ಕಳೆದ ವಾರದ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಗೆದ್ದ ಪುರುಷರ ತಂಡ ಎಂದಿನಂತೆ ಕನ್ಫೆಶನ್ ರೂಮ್ ನಲ್ಲಿ ನಾಮಿನೇಷನ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಿತ್ತು. ಆದ್ರೆ, ಅದೇ ಟಾಸ್ಕ್ ನಲ್ಲಿ ಸೋತ ಮಹಿಳೆಯರು ಎಲ್ಲರ ಮುಂದೆ ನಾಮಿನೇಟ್ ಮಾಡಬೇಕಾಗಿತ್ತು.

ನಾಮಿನೇಷನ್ ಪ್ರಕ್ರಿಯೆ ಮುಗಿದ್ಮೇಲೆ, ಯಾರ್ಯಾರು ನಾಮಿನೇಟ್ ಆಗಿದ್ದಾರೆ ಅಂತ 'ಬಿಗ್ ಬಾಸ್' ಘೋಷಿಸಲಿಲ್ಲ. ಹೀಗಾಗಿ, ಈ ವಾರ ಯಾರ್ಯಾರು ಡೇಂಜರ್ ಝೋನ್ ನಲ್ಲಿ ಇದ್ದಾರೆ ಎಂಬ ಅರಿವು ಸ್ಪರ್ಧಿಗಳಿಗೆ ಇಲ್ಲ. ಮುಂದೆ ಓದಿರಿ...

ಕ್ಯಾಪ್ಟನ್ ಆಗಿ ಆಯ್ಕೆ ಆದ ರಿಯಾಝ್

ಹನ್ನೊಂದನೇ ವಾರದ ಕ್ಯಾಪ್ಟನ್ ಆಗಿ ರಿಯಾಝ್ ಆಯ್ಕೆ ಆದರು. ಹೀಗಾಗಿ, ನಾಮಿನೇಷನ್ ಪ್ರಕ್ರಿಯೆಯಲ್ಲಿ ರಿಯಾಝ್ ಸೇಫ್ ಆದರು.

ಈ ಮೂವರ ಮುಖ ನೋಡಲು ಆಗ್ತಿಲ್ಲ ಎಂದ ಜಯಶ್ರೀನಿವಾಸನ್

ಅತಿ ಹೆಚ್ಚು ಮತ ಪಡೆದ ನಿವೇದಿತಾ

ಕೃಷಿ ತಾಪಂಡ, ಶ್ರುತಿ ಪ್ರಕಾಶ್, ಅನುಪಮಾ ಗೌಡ, ಜೆಕೆ ಹಾಗೂ ದಿವಾಕರ್ (ಒಟ್ಟು ಐದು ಮಂದಿ) ನಿವೇದಿತಾ ಗೌಡ ವಿರುದ್ಧ ಮತ ಚಲಾಯಿಸಿದರು.

'ಬಿಗ್ ಬಾಸ್' ಸ್ಪರ್ಧಿಗಳ 'ವಿಚಿತ್ರ' ನಡವಳಿಕೆ ಕಂಡು ಬೇಸತ್ತ ಕಿಚ್ಚ ಸುದೀಪ್.!

ಸಮೀರಾಚಾರ್ಯ ವಿರುದ್ಧ ನಿಲ್ಲದ ಸಮರ

ಜೆಕೆ, ಅನುಪಮಾ, ಶ್ರುತಿ ಹಾಗೂ ಕೃಷಿ... ಸಮೀರಾಚಾರ್ಯ ರನ್ನ 'ಬಿಗ್ ಬಾಸ್' ಮನೆಯಿಂದ ಹೊರ ಹಾಕಲು ಇಚ್ಛಿಸಿದರು.


ಎರಡನೇ ಅವಕಾಶ ಗಿಟ್ಟಿಸಿಕೊಂಡ ಕೃಷಿ ಇದೆಲ್ಲ ನಿಮಗೆ ಬೇಕಿತ್ತಾ.?

ಡೇಂಜರ್ ಝೋನ್ ನಲ್ಲಿ ಕೃಷಿ

ನಿವೇದಿತಾ, ದಿವಾಕರ್ ಹಾಗೂ ಸಮೀರಾಚಾರ್ಯ ವೋಟ್ ಮಾಡಿದ್ರಿಂದಾಗಿ ಕೃಷಿ ಡೇಂಜರ್ ಝೋನ್ ಗೆ ಬಂದರು.

ಸೂಕ್ಷ್ಮತೆ ಇಲ್ಲದೆ ನಡೆದುಕೊಂಡ ಕೃಷಿ ತಾಪಂಡಗೆ ಭಾರಿ ಮುಖಭಂಗ.!

ಜಯಶ್ರೀನಿವಾಸನ್ ವಿರುದ್ಧ ಎರಡು ವೋಟ್ಸ್

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಮಾತ್ರ ಮತ ಹಾಕಿದರೂ, ಜಯಶ್ರೀನಿವಾಸನ್ ನಾಮಿನೇಟ್ ಆಗಿದ್ದಾರೆ.

ದಿವಾಕರ್ ಮಿಸ್ ಆಗಲಿಲ್ಲ

ದಿವಾಕರ್ ನಡವಳಿಕೆ ಜಯಶ್ರೀನಿವಾಸನ್ ಹಾಗೂ ರಿಯಾಝ್ ಗೆ ಇಷ್ಟ ಆಗುತ್ತಿಲ್ಲ. ಹೀಗಾಗಿ ಇವರಿಬ್ಬರೂ ದಿವಾಕರ್ ರನ್ನ ನಾಮಿನೇಟ್ ಮಾಡಿದರು.

ಐವರಲ್ಲಿ ಯಾರು ಮನೆಗೆ.?

ಜಯಶ್ರೀನಿವಾಸನ್, ಸಮೀರಾಚಾರ್ಯ, ನಿವೇದಿತಾ ಗೌಡ, ದಿವಾಕರ್ ಮತ್ತು ಕೃಷಿ ತಾಪಂಡ.. ಈ ವಾರ ನಾಮಿನೇಟ್ ಆಗಿದ್ದಾರೆ. ಈ ಐವರಲ್ಲಿ ನಿಮ್ಮ ಮತ ಯಾರಿಗೆ.? ನಿಮ್ಮ ಆಯ್ಕೆಯನ್ನ ನಮಗೆ ತಿಳಿಸಿ... ಕಾಮೆಂಟ್ ಮಾಡಿ...

English summary
Bigg Boss Kannada 5: Week 11: Diwakar, Sameeracharya, Jayasreenivasan, Niveditha Gowda and Krishi Thapanda are nominated for this week's elimination.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X