»   » ಸೀಕ್ರೆಟ್ ರೂಮ್ ಒಳಗೆ 'ಕಿಂಗ್ ಮೇಕರ್ಸ್': ಎಲ್ಲರ ಲೆಕ್ಕಾಚಾರ ತಲೆಕೆಳಗೆ.!

ಸೀಕ್ರೆಟ್ ರೂಮ್ ಒಳಗೆ 'ಕಿಂಗ್ ಮೇಕರ್ಸ್': ಎಲ್ಲರ ಲೆಕ್ಕಾಚಾರ ತಲೆಕೆಳಗೆ.!

Posted By:
Subscribe to Filmibeat Kannada
ಸಮೀರ್ ಆಚಾರ್ಯ ಹಾಗು ಜೈ ಶ್ರೀನಿವಾಸನ್ ಈಗ ಕಿಂಗ್ ಮೇಕರ್ಸ್ | Oneindia Kannada

'ಬಿಗ್ ಬಾಸ್' ಮನೆಯೊಳಗೆ ಏನೇನು ನಡೆಯುತ್ತಿದೆ, ಯಾರ್ಯಾರ ಗೇಮ್ ಪ್ಲಾನ್ ಏನೇನು, ಯಾರ ಜೊತೆ ಯಾರ್ಯಾರು ಹೇಗೆಲ್ಲ ನಡೆದುಕೊಳ್ಳುತ್ತಾರೆ ಎಂಬುದನ್ನೆಲ್ಲ ಸೂಕ್ಷ್ಮವಾಗಿ ಅರಿತುಕೊಳ್ಳಲು 'ಸೀಕ್ರೆಟ್ ರೂಮ್' ಉತ್ತಮ ಜಾಗ.

ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆ ಸದಸ್ಯರ ಅಸಲಿ ಮುಖ ಬಯಲಾಗುವುದೇ ಸೀಕ್ರೆಟ್ ರೂಮ್ ನಲ್ಲಿ.!

ಇಂತಿಪ್ಪ ಸೀಕ್ರೆಟ್ ರೂಮ್ ಬಾಗಿಲನ್ನ ಹನ್ನೊಂದನೇ ವಾರದಲ್ಲಿ ತೆರೆದಿದ್ದಾರೆ 'ಬಿಗ್ ಬಾಸ್'. ದಿಢೀರ್ ಅಂತ ಜಯಶ್ರೀನಿವಾಸನ್ ಅವರನ್ನ ನಾಪತ್ತೆ ಮಾಡಿಸಿ, ಇದ್ದಕ್ಕಿದ್ದಂತೆ ಮಧ್ಯರಾತ್ರಿ ಸಮೀರಾಚಾರ್ಯ ರನ್ನ ಔಟ್ ಮಾಡಿಸಿ, ಇಬ್ಬರನ್ನೂ ಸೀಕ್ರೆಟ್ ರೂಮ್ ಒಳಗೆ ಕಳುಹಿಸಿದ್ದಾರೆ 'ಬಿಗ್ ಬಾಸ್'.

'ಸೀಕ್ರೆಟ್ ರೂಮ್' ಒಳಗೆ ಎಲ್ಲರನ್ನ ಸೂಕ್ಷ್ಮವಾಗಿ ಗಮನಿಸುವುದು ಮಾತ್ರ ಜಯಶ್ರೀನಿವಾಸನ್ ಹಾಗೂ ಸಮೀರಾಚಾರ್ಯ ಕೆಲಸ ಅಲ್ಲ. ಅದರ ಜೊತೆಗೆ ಮನೆಯ ಸದಸ್ಯರಿಗೆ ಈ ವಾರ 'ಬಿಗ್ ಬಾಸ್' ನೀಡಿರುವ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವ ಜವಾಬ್ದಾರಿ ಕೂಡ ಜಯಶ್ರೀನಿವಾಸನ್ ಹಾಗೂ ಸಮೀರಾಚಾರ್ಯ ಹೆಗಲ ಮೇಲಿದೆ. ಹೀಗಾಗಿ, 'ಬಿಗ್ ಬಾಸ್' ಮನೆಯ 'ಪ್ರಜಾರಾಜ್ಯ'ದಲ್ಲಿ ಸಮೀರಾಚಾರ್ಯ ಹಾಗೂ ಜಯಶ್ರೀನಿವಾಸನ್ 'ಕಿಂಗ್ ಮೇಕರ್ಸ್' ಆಗಿದ್ದಾರೆ. ಮುಂದೆ ಓದಿರಿ...

ಈ ವಾರದ ಟಾಸ್ಕ್ ಏನು.?

ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ನಡೆಸುವ ಆಡಳಿತವೇ 'ಪ್ರಜಾಪ್ರಭುತ್ವ'. ಈ ಪ್ರಜಾಪ್ರಭುತ್ವದ ಮಹತ್ವ ತಿಳಿಸುವ ಸಲುವಾಗಿ ಈ ವಾರ 'ಪ್ರಜಾರಾಜ್ಯ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನೀಡಿದ್ದಾರೆ 'ಬಿಗ್ ಬಾಸ್'. ಈ ಚಟುವಟಿಕೆಯ ಅನುಸಾರ, ಮನೆಯ ಸದಸ್ಯರನ್ನು ಎರಡು ತಂಡ (ರಾಜಕೀಯ ಪಕ್ಷ)ಗಳಾಗಿ ವಿಭಜಿಸಲಾಗಿದೆ. ಒಂದು ತಂಡ (ಪಕ್ಷ)ದಲ್ಲಿ ರಿಯಾಝ್, ಚಂದನ್ ಶೆಟ್ಟಿ, ನಿವೇದಿತಾ, ದಿವಾಕರ್ ಇದ್ದರೆ ಮತ್ತೊಂದು ತಂಡ (ಪಕ್ಷ)ದಲ್ಲಿ ಜೆಕೆ, ಅನುಪಮಾ, ಕೃಷಿ ಹಾಗೂ ಶ್ರುತಿ ಇದ್ದಾರೆ.


ಮಧ್ಯರಾತ್ರಿ 'ಶಾಕ್' ಕೊಟ್ಟ 'ಬಿಗ್ ಬಾಸ್': ಹಿಂದಿನ ಮರ್ಮ ಏನು.?

ಮುಖಂಡರ ಆಯ್ಕೆ

ತಮ್ಮ ತಮ್ಮ ರಾಜಕೀಯ ಪಕ್ಷಗಳಿಗೆ, ಪಕ್ಷದ ಸದಸ್ಯರೇ ಪಕ್ಷದ ಮುಖಂಡರನ್ನು ಆಯ್ಕೆ ಮಾಡಬೇಕಿತ್ತು. ಇದಕ್ಕಾಗಿ ಚರ್ಚೆ ನಡೆದ ಬಳಿಕ ಗುಪ್ತ ಮತದಾನ ಕೂಡ ನಡೆಸಲಾಯ್ತು.


ಮೊನ್ನೆ ಹಾಗೆ, ಇಂದು ಹೀಗೆ: ಅದ್ಭುತ ಅಂದ್ರೆ ಇದು ನೋಡಿ.!

ಚುನಾವಣೆ ವೀಕ್ಷಿಸಿದ ಬಳಿಕ

ಮುಖಂಡರ ಆಯ್ಕೆಗಾಗಿ ನಡೆದ ಗುಪ್ತ ಮತದಾನವನ್ನ ಸೀಕ್ರೆಟ್ ರೂಮ್ ನಿಂದ ಜಯಶ್ರೀನಿವಾಸನ್ ಹಾಗೂ ಸಮೀರಾಚಾರ್ಯ ವೀಕ್ಷಿಸಿ, ಎಲ್ಲರ ಲೆಕ್ಕಾಚಾರವನ್ನ ತಲೆಕೆಳಗೆ ಮಾಡಿದರು.

'ಬಿಗ್ ಬಾಸ್' ಕೊಟ್ಟ ಚಮಕ್ ಗೆ ಸ್ಪರ್ಧಿಗಳು ಸುಸ್ತೋ ಸುಸ್ತು.!

ನಿವೇದಿತಾ ಆಗಬೇಕಿತ್ತು.!

ಒಂದು ರಾಜಕೀಯ ಪಕ್ಷಕ್ಕೆ ನಿವೇದಿತಾ ಮುಖಂಡರಾಗಿ ಆಯ್ಕೆ ಆಗಬೇಕಿತ್ತು. ನಿವೇದಿತಾ ಪರ ಮೂರು ಮತಗಳು ಚಲಾವಣೆ ಆಗಿತ್ತು. ಆದ್ರೆ, ದಿವಾಕರ್ ಉಲ್ಟಾ ಹೊಡೆದ ಪರಿಣಾಮ, ಮಜಾ ತೆಗೆದುಕೊಳ್ಳಲು ದಿವಾಕರ್ ರವರನ್ನೇ ಮುಖಂಡರನ್ನಾಗಿ ಮಾಡಲು ಜಯಶ್ರೀನಿವಾಸನ್ ಹಾಗೂ ಸಮೀರಾಚಾರ್ಯ ನಿರ್ಧರಿಸಿದರು.


'ಡಬಲ್ ಗೇಮ್' ದಿವಾಕರ್: ಹೊರಗೆ ಹೇಳಿದ್ದೊಂದು, ಒಳಗೆ ಬಂದು ಮಾಡಿದ್ದೇ ಮತ್ತೊಂದು.!

ಜೆಕೆ ಕೂಡ ಆಗಲಿಲ್ಲ.!

ಇನ್ನೊಂದು ರಾಜಕೀಯ ಪಕ್ಷಕ್ಕೆ ಜಯರಾಂ ಕಾರ್ತಿಕ್ ಮುಖಂಡರಾಗಿ ಆಯ್ಕೆ ಆಗಬೇಕಿತ್ತು. ಆದ್ರೆ, ಜೆಕೆ ಕೈಯಲ್ಲಿ ಅಧಿಕಾರ ಕೊಡದೆ ಶ್ರುತಿಗೆ 'ಮುಖಂಡ' ಪಟ್ಟವನ್ನ ಜಯಶ್ರೀನಿವಾಸನ್ ಹಾಗೂ ಸಮೀರಾಚಾರ್ಯ ನೀಡಿದರು.

'ಎಕ್ಸ್ ಟ್ರಾ ಮೆಣಸಿನಕಾಯಿ' ಹಾಕುವ ದಿವಾಕರ್ ಗೆ ಇದೆಲ್ಲ ಯಾಕೆ ಬೇಕು.?

ಎಲ್ಲರಿಗೂ ಶಾಕ್.!

ಪಕ್ಷದ ಸದಸ್ಯರ ಜೊತೆಗೆ ಚರ್ಚೆ ನಡೆದಂತೆ ನಿವೇದಿತಾ ಹಾಗೂ ಜೆಕೆ 'ಮುಖಂಡ'ರಾಗಬೇಕಿತ್ತು. ಆದ್ರೆ, ಅದು ಆಗದೇ ಬೇರೇನೋ ಆಗಿದ್ರಿಂದಾಗಿ ಎಲ್ಲರಿಗೂ ಶಾಕ್ ಆಯ್ತು. ''ಇದು ಹೇಗೆ ಸಾಧ್ಯ.?'' ಎಂಬ ಹುಳ ಎಲ್ಲರ ತಲೆಯನ್ನ ಕೊರೆಯಲು ಆರಂಭಿಸಿತು.

ಮಜಾ ತೆಗೆದುಕೊಳ್ಳುತ್ತಿದ್ದಾರೆ

ಸದ್ಯ ಎಲ್ಲರ ಆಟವನ್ನು ವೀಕ್ಷಿಸುತ್ತಾ, ಇಡೀ ಆಟವನ್ನ ಕಂಟ್ರೋಲ್ ನಲ್ಲಿ ಇಟ್ಟುಕೊಂಡು ಸಮೀರಾಚಾರ್ಯ ಹಾಗೂ ಜಯಶ್ರೀನಿವಾಸನ್ ಮಜಾ ತೆಗೆದುಕೊಳ್ಳುತ್ತಿದ್ದಾರೆ.

English summary
Bigg Boss Kannada 5: Week 11: Sameer Acharya and Jayasreenivasan becomes king makers in 'Prajarajya' task.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X