»   » 'ಬಿಗ್ ಬಾಸ್' ಕೊಟ್ಟ ಚಮಕ್ ಗೆ ಸ್ಪರ್ಧಿಗಳು ಸುಸ್ತೋ ಸುಸ್ತು.!

'ಬಿಗ್ ಬಾಸ್' ಕೊಟ್ಟ ಚಮಕ್ ಗೆ ಸ್ಪರ್ಧಿಗಳು ಸುಸ್ತೋ ಸುಸ್ತು.!

Posted By:
Subscribe to Filmibeat Kannada
ಮಧ್ಯರಾತ್ರಿಯಲ್ಲಿ ಎಲ್ಲಾ ಸ್ಪರ್ಧಿಗಳಿಗೂ ಶಾಕ್ ಕೊಟ್ಟ ಬಿಗ್ ಬಾಸ್ | Filmibeat Kannada

ಮಧ್ಯರಾತ್ರಿ ಮೂರು ಗಂಟೆ ಸಮಯದಲ್ಲಿ ಸ್ಪರ್ಧಿಗಳೆಲ್ಲ ಗಾಢ ನಿದ್ದೆ ಮಾಡುತ್ತಿರುವಾಗ, ದಿಢೀರ್ ಅಂತ 'ಎಲಿಮಿನೇಷನ್' ಪ್ರಕ್ರಿಯೆಗೆ 'ಬಿಗ್ ಬಾಸ್' ಚಾಲನೆ ನೀಡಿದರು.

ಬೆಡ್ ರೂಮ್ ಹಾಗೂ ಲಿವಿಂಗ್ ಏರಿಯಾದಲ್ಲಿ ಒಬ್ಬೊಬ್ಬರನ್ನೇ ಸೇಫ್ ಮಾಡುತ್ತಾ ಬಂದ 'ಬಿಗ್ ಬಾಸ್', ಡೇಂಜರ್ ಝೋನ್ ಗೆ ಮೂವರು ಸ್ಪರ್ಧಿಗಳನ್ನ (ಸಮೀರಾಚಾರ್ಯ, ದಿವಾಕರ್ ಹಾಗೂ ಶ್ರುತಿ ಪ್ರಕಾಶ್) ತಳ್ಳಿದರು.

ಡೇಂಜರ್ ಝೋನ್ ನಲ್ಲಿ ಇದ್ದ ದಿವಾಕರ್ ಹಾಗೂ ಶ್ರುತಿ ಪ್ರಕಾಶ್ ರವರನ್ನ ಸೇಫ್ ಮಾಡಿ ಸಮೀರಾಚಾರ್ಯ ರವರನ್ನ 'ಬಿಗ್ ಬಾಸ್' ಹೊರಗೆ ಕರೆದರು. ಹಿಂದು ಮುಂದು ಯೋಚನೆ ಮಾಡದ ಸಮೀರಾಚಾರ್ಯ ಸೀದಾ ಆಚೆ ಹೊರಟರು. ಮುಂದೆ ಓದಿರಿ....

ಸಮೀರಾಚಾರ್ಯ ಔಟ್.!

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಹನ್ನೊಂದನೇ ವಾರ ಸಮೀರಾಚಾರ್ಯ ಔಟ್ ಆಗಿದ್ದಾರೆ ಎಂದು 'ಬಿಗ್ ಬಾಸ್' ಘೋಷಿಸಿದರು. ಆದ್ರೆ, ವಾಸ್ತವ ಅದಲ್ಲ. 'ಬಿಗ್ ಬಾಸ್' ಮನೆಯೊಳಗೆ ಇರುವ ಸ್ಪರ್ಧಿಗಳ ಪಾಲಿಗೆ ಮಾತ್ರ ಸಮೀರಾಚಾರ್ಯ ಔಟ್ ಆಗಿದ್ದಾರೆ.

ಮಧ್ಯರಾತ್ರಿ 'ಶಾಕ್' ಕೊಟ್ಟ 'ಬಿಗ್ ಬಾಸ್': ಹಿಂದಿನ ಮರ್ಮ ಏನು.?

ಸೀಕ್ರೆಟ್ ರೂಮ್ ನಲ್ಲಿ ಸಮೀರಾಚಾರ್ಯ

'ಬಿಗ್ ಬಾಸ್' ಮನೆಯಿಂದ ಆಚೆ ಬಂದ ಸಮೀರಾಚಾರ್ಯ ಸೀದಾ ತೆರಳಿದ್ದು ಸೀಕ್ರೆಟ್ ರೂಮ್ ಗೆ.!

ಮೊನ್ನೆ ಹಾಗೆ, ಇಂದು ಹೀಗೆ: ಅದ್ಭುತ ಅಂದ್ರೆ ಇದು ನೋಡಿ.!

ಆಚಾರ್ಯ ಜೊತೆಗೆ ಗುರೂಜಿ.!

ಅದಾಗಲೇ ಸೀಕ್ರೆಟ್ ರೂಮ್ ಒಳಗೆ ಜಯಶ್ರೀನಿವಾಸನ್ ಬಂಧಿಯಾಗಿದ್ದಾರೆ. ಈಗ ಅದೇ ಜಯಶ್ರೀನಿವಾಸನ್ ಜೊತೆಗೆ ಸಮೀರಾಚಾರ್ಯ ಕೈ ಜೋಡಿಸಿದ್ದಾರೆ.

ಸೀಕ್ರೆಟ್ ರೂಮ್ ಒಳಗೆ ಹೋದ ಜಯಶ್ರೀನಿವಾಸನ್: ಏನು ಪ್ರಯೋಜನ.?

ಭಿನ್ನಾಭಿಪ್ರಾಯ ಇಲ್ಲ, ಮನಸ್ತಾಪವೂ ಇಲ್ಲ.!

ಸಮೀರಾಚಾರ್ಯ ಮುಖ ನೋಡಲ್ಲ ಅಂತ ಈ ಹಿಂದೆ ಜಯಶ್ರೀನಿವಾಸನ್ ಹೇಳಿದ್ದರು. ಆದ್ರೀಗ, ಅದೇ ಸಮೀರಾಚಾರ್ಯ ಜೊತೆಗೆ ಜಯಶ್ರೀನಿವಾಸನ್ ಸೀಕ್ರೆಟ್ ರೂಮ್ ನಲ್ಲಿ ಎಲ್ಲರ ಆಟವನ್ನ ನೋಡುತ್ತಾ ಆತ್ಮೀಯರಾಗಿದ್ದಾರೆ.

ಈ ಐವರಲ್ಲಿ ಒಬ್ಬರಿಗೆ ಈ ವಾರ 'ಬಿಗ್ ಬಾಸ್' ಆಟ ಅಂತ್ಯ.!

ಕಣ್ಣೀರಿಟ್ಟ ರಿಯಾಝ್

ಸಮೀರಾಚಾರ್ಯ ಔಟ್ ಆದರು ಎಂದು ತಿಳಿಯುತ್ತಿದ್ದಂತೆಯೇ ರಿಯಾಝ್ ಕಣ್ಣೀರಿಟ್ಟರು. ರಿಯಾಝ್ ಭಾವುಕರಾಗಿದ್ದನ್ನು ನೋಡಿ, ''ಆಟ ಆಡಿದರೂ, ರಿಯಾಝ್ ರಲ್ಲಿ ಮನುಷ್ಯತ್ವ ಇದೆ'' ಎಂದು ಜಯಶ್ರೀನಿವಾಸನ್ ಹಾಗೂ ಸಮೀರಾಚಾರ್ಯ ಮಾತನಾಡಿಕೊಂಡರು.

ಭಾವುಕರಾದ ಚಂದನ್ ಶೆಟ್ಟಿ

ಮಧ್ಯರಾತ್ರಿ ದಿಢೀರ್ ಅಂತ ಎಲಿಮಿನೇಷನ್ ಮಾಡಿದ್ದಕ್ಕೆ ಮೊದಲೇ ಎಲ್ಲರೂ ಶಾಕ್ ನಲ್ಲಿದ್ದರು. ಹೀಗಿರುವಾಗ, ಸಮೀರಾಚಾರ್ಯ ಔಟ್ ಆಗಿದ್ದಕ್ಕೆ ಬೇಸರಗೊಂಡ ಚಂದನ್ ಶೆಟ್ಟಿ ಕಣ್ಣೀರು ಸುರಿಸಿದರು.

ಲೆಕ್ಕಾಚಾರ ಶುರುವಾಗಿದೆ

''ಸಮೀರಾಚಾರ್ಯ ಔಟ್ ಆಗಿಲ್ಲ. ಜಯಶ್ರೀನಿವಾಸನ್ ಜೊತೆಗೆ ಸೀಕ್ರೆಟ್ ರೂಮ್ ನಲ್ಲಿ ಇದ್ದಾರೆ'' ಎಂಬ ಲೆಕ್ಕಾಚಾರ ಈಗಾಗಲೇ ಹಲವರ ತಲೆಯಲ್ಲಿದೆ.

ಆಟ ಆಡಿಸುತ್ತಿದ್ದಾರೆ ಇಬ್ಬರು.!

ಯಾರಿಗೂ ಗೊತ್ತಾಗದ ಹಾಗೆ ಜಯಶ್ರೀನಿವಾಸನ್ ಹಾಗೂ ಸಮೀರಾಚಾರ್ಯ ಸೀಕ್ರೆಟ್ ರೂಮ್ ಒಳಗೆ ಇರಬಹುದು. ಆದ್ರೆ, ಸದ್ಯ ಲಕ್ಷುರಿ ಬಜೆಟ್ ಆಟದಲ್ಲಿ ಮುಖ್ಯ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರುವುದು ಇವರಿಬ್ಬರೇ.!

English summary
Bigg Boss Kannada 5: Week 11: Elimination process commenced at 3 AM at Bigg Boss house, in which Sameeracharya got evicted. After elimination, Sameer Acharya has been sent to secret room.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X