»   » ಸತ್ಯವನ್ನ ಸಮೀರಾಚಾರ್ಯ ಬಾಯ್ಬಿಟ್ರೆ ಶಿಕ್ಷೆ ಗ್ಯಾರೆಂಟಿ.!

ಸತ್ಯವನ್ನ ಸಮೀರಾಚಾರ್ಯ ಬಾಯ್ಬಿಟ್ರೆ ಶಿಕ್ಷೆ ಗ್ಯಾರೆಂಟಿ.!

Posted By:
Subscribe to Filmibeat Kannada
ಸಮೀರ್ ಆಚಾರ್ಯಗೆ ವಾರ್ನಿಂಗ್ ಕೊಟ್ಟ ಸುದೀಪ್ | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಹನ್ನೊಂದನೇ ವಾರ ಎಲಿಮಿನೇಟ್ ಆಗಲು ಸಮೀರಾಚಾರ್ಯ ನಾಮಿನೇಟ್ ಆಗಿದ್ದರು. ಯಾರ್ಯಾರು ನಾಮಿನೇಟ್ ಆಗಿದ್ದಾರೆ ಅಂತ ತಿಳಿಸದೆ, ಮಧ್ಯರಾತ್ರಿ ದಿಢೀರ್ ಅಂತ 'ಎಲಿಮಿನೇಷನ್ ಪ್ರಕ್ರಿಯೆ'ಗೆ ಚಾಲನೆ ಕೊಟ್ಟ 'ಬಿಗ್ ಬಾಸ್', ಸಮೀರಾಚಾರ್ಯ ಅವರನ್ನ ಹೊರಗೆ ಕರೆದರು.

ಇದ್ದಕ್ಕಿದ್ದಂತೆಯೇ ನಾಪತ್ತೆ ಆಗಿದ್ದ ಜಯಶ್ರೀನಿವಾಸನ್ ಜೊತೆಗೆ ಸಮೀರಾಚಾರ್ಯ ಕೂಡ ಸೀಕ್ರೆಟ್ ರೂಮ್ ನಲ್ಲಿ ಇರಬಹುದು ಎಂಬ ಊಹೆ ಹಲವು ಸ್ಪರ್ಧಿಗಳಲ್ಲಿ ಇತ್ತು.

ಸ್ಪರ್ಧಿಗಳ ಊಹೆಯಂತೆ 'ಬಿಗ್ ಬಾಸ್' ಮನೆಯಿಂದ ಹೊರಬಂದ ಸಮೀರಾಚಾರ್ಯ ನೇರವಾಗಿ ಸೀಕ್ರೆಟ್ ರೂಮ್ ಒಳಗೆ ತೆರಳಿದರು. ಅಲ್ಲಿ, ಜಯಶ್ರೀನಿವಾಸನ್ ಜೊತೆ 'ಪ್ರಜಾರಾಜ್ಯ' ಟಾಸ್ಕ್ ನಲ್ಲಿ ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡರು.

ನಾಮಿನೇಟ್ ಆಗಿದ್ದ ಸಮೀರಾಚಾರ್ಯ ಗೆ ವೀಕ್ಷಕರ ಬೆಂಬಲ ಸಿಕ್ಕ ಪರಿಣಾಮ ಸೀಕ್ರೆಟ್ ರೂಮ್ಮ ನಲ್ಲಿ ಇದ್ದ ಅವರನ್ನ ವಾಪಸ್ 'ಬಿಗ್ ಬಾಸ್' ಮನೆಯೊಳಗೆ ಕಳುಹಿಸಿದರು ಕಿಚ್ಚ ಸುದೀಪ್. ಮುಂದೆ ಓದಿರಿ...

ಮೊಟ್ಟ ಮೊದಲ ಬಾರಿಗೆ

'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ 'ಬಿಗ್ ಬಾಸ್' ಮನೆ ಹಾಗೂ ಸೀಕ್ರೆಟ್ ರೂಮ್ ನಲ್ಲಿದ್ದ ಸದಸ್ಯರ ಜೊತೆ ಪ್ರತ್ಯೇಕವಾಗಿ ಪಂಚಾಯತಿ ನಡೆಸಿದರು ಕಿಚ್ಚ ಸುದೀಪ್.

ಸೇಫ್ ಆದ ಸಮೀರಾಚಾರ್ಯಗೆ ಸುದೀಪ್ ಕೊಟ್ಟ ಎಚ್ಚರಿಕೆ ಏನು.?

ಎಲಿಮಿನೇಷನ್ ನಿಂದ ಸೇಫ್ ಆಗಿದ್ದ ಸಮೀರಾಚಾರ್ಯ ಅವರನ್ನ ವಾಪಸ್ 'ಬಿಗ್ ಬಾಸ್' ಮನೆಯೊಳಗೆ ಕಳುಹಿಸುವ ಮುನ್ನ ಸುದೀಪ್ ನೀಡಿದ್ದ ಎಚ್ಚರಿಕೆ ಏನಪ್ಪಾ ಅಂದ್ರೆ....

ಬಾಯಿ ಬಿಟ್ಟರೆ ನಾಮಿನೇಟ್ ಆಗುವುದು ಗ್ಯಾರೆಂಟಿ

''ಸೀಕ್ರೆಟ್ ರೂಮ್ ಒಳಗೆ ಇದ್ದದ್ದು, ಇಲ್ಲಿ ನಡೆದಿದ್ದು, ಜಯಶ್ರೀನಿವಾಸನ್ ಜೊತೆಗೆ ಇದ್ದದ್ದನ್ನ 'ಬಿಗ್ ಬಾಸ್' ಮನೆಯೊಳಗೆ ಚರ್ಚೆ ಮಾಡುವ ಹಾಗಿಲ್ಲ. ಚರ್ಚೆ ಮಾಡಿದ್ದಲ್ಲಿ ನೇರವಾಗಿ ನಾಮಿನೇಟ್ ಆಗುತ್ತೀರಾ'' ಎಂದು ಸಮೀರಾಚಾರ್ಯ ಅವರಿಗೆ ಸುದೀಪ್ ಎಚ್ಚರಿಕೆ ನೀಡಿದರು.

ಅಚ್ಚರಿ ಬೆಳವಣಿಗೆ: ದಿವಾಕರ್ ಸೀಕ್ರೆಟ್ ರೂಮ್ ಗೆ, ಜಯಶ್ರೀನಿವಾಸನ್ ಮನೆಗೆ.!

'ಬಿಗ್ ಬಾಸ್' ಮನೆಯೊಳಗೆ ಪ್ರತ್ಯಕ್ಷ

ವಾರದ ಪಂಚಾಯತಿ ನಡೆಯುತ್ತಿರುವಾಗಲೇ, 'ಬಿಗ್ ಬಾಸ್' ಮನೆಯೊಳಗೆ ಸಮೀರಾಚಾರ್ಯ ಪ್ರತ್ಯಕ್ಷವಾದರು. ''ನಮಗೆ ಗೊತ್ತಿತ್ತು'' ಎಂಬಂತೆಯೇ ಸ್ಪರ್ಧಿಗಳು ಪ್ರತಿಕ್ರಿಯೆ ನೀಡಿದರು.

'ಬಿಗ್ ಬಾಸ್' ಕೊಟ್ಟ ಚಮಕ್ ಗೆ ಸ್ಪರ್ಧಿಗಳು ಸುಸ್ತೋ ಸುಸ್ತು.!

ಸುದೀಪ್ ಪ್ರಶ್ನಿಸಿದಾಗ...

''ತಾವು ಸೀಕ್ರೆಟ್ ರೂಮ್ ನಲ್ಲಿ ಇರಬಹುದು ಅಂತ ಮಿಕ್ಕವರ ಊಹೆ.?'' ಎಂದು ಎಲ್ಲರ ಮುಂದೆ ಸುದೀಪ್ ಪ್ರಶ್ನಿಸಿದಾಗ, ''ದೃಷ್ಟಿಕೋನ ಹಲವಾರು ಇದೆ. ಆದ್ರೆ ಏನು ನೋಡಿದ್ದೇನೆ, ಎಲ್ಲಿ ಇದ್ದೆ ಅಂತ ನನಗೆ ಗೊತ್ತು. ಅದು ಬಿಟ್ಟು ಬೇರೆ ಏನೂ ಹೇಳೋಕೆ ನಾನು ಇಚ್ಛೆ ಪಡುವುದಿಲ್ಲ'' ಎಂದು ಉತ್ತರಿಸಿದರು ಸಮೀರಾಚಾರ್ಯ

ಮಧ್ಯರಾತ್ರಿ 'ಶಾಕ್' ಕೊಟ್ಟ 'ಬಿಗ್ ಬಾಸ್': ಹಿಂದಿನ ಮರ್ಮ ಏನು.?

ಯಶಸ್ವಿ ಆಗುತ್ತಾರಾ ಸಮೀರಾಚಾರ್ಯ

ತಾವು ಸೀಕ್ರೆಟ್ ರೂಮ್ ನಲ್ಲಿ ಇದ್ದ ಗುಟ್ಟನ್ನು ಗುಟ್ಟಾಗಿಯೇ ಇಟ್ಟುಕೊಳ್ಳುವಲ್ಲಿ ಸಮೀರಾಚಾರ್ಯ ಯಶಸ್ವಿ ಆಗುತ್ತಾರಾ.? ಈ ಅಗ್ನಿ ಪರೀಕ್ಷೆಯನ್ನ ಸಮೀರಾಚಾರ್ಯ ಹೇಗೆ ಎದುರಿಸುತ್ತಾರೆ ಎಂಬುದೇ ಮುಂದಿನ ಕುತೂಹಲ.

ಸೀಕ್ರೆಟ್ ರೂಮ್ ಒಳಗೆ 'ಕಿಂಗ್ ಮೇಕರ್ಸ್': ಎಲ್ಲರ ಲೆಕ್ಕಾಚಾರ ತಲೆಕೆಳಗೆ.!

ಜಯಶ್ರೀನಿವಾಸನ್ ಕಥೆ ಗೊತ್ತಿಲ್ಲ

ಸಮೀರಾಚಾರ್ಯ ಏನೋ ಸೇಫ್ ಆದರು. ಆದ್ರೆ, ಅವರ ಜೊತೆ ಸೀಕ್ರೆಟ್ ರೂಮ್ ನಲ್ಲಿ ಇದ್ದ ಜಯಶ್ರೀನಿವಾಸನ್ ಕಥೆ ಏನಾಯ್ತು ಅನ್ನೋದು ಸಮೀರಾಚಾರ್ಯಗೆ ಗೊತ್ತಿಲ್ಲ. ಜಯಶ್ರೀನಿವಾಸನ್ ಎಲಿಮಿನೇಟ್ ಆಗಿರುವ ಸಂಗತಿ ಕೂಡ ಸಮೀರಾಚಾರ್ಯಗೆ ತಿಳಿದಿಲ್ಲ.

English summary
Bigg Boss Kannada 5: Week 11: Sameer Acharya should maintain secret about his stay in secret room.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X