»   » ಮಧ್ಯರಾತ್ರಿ 'ಶಾಕ್' ಕೊಟ್ಟ 'ಬಿಗ್ ಬಾಸ್': ಹಿಂದಿನ ಮರ್ಮ ಏನು.?

ಮಧ್ಯರಾತ್ರಿ 'ಶಾಕ್' ಕೊಟ್ಟ 'ಬಿಗ್ ಬಾಸ್': ಹಿಂದಿನ ಮರ್ಮ ಏನು.?

Posted By:
Subscribe to Filmibeat Kannada
ಬಿಗ್ ಬಾಸ್ ಕೊಟ್ಟ ಷಾಕಿಂಗ್ ಎಲಿಮಿನೇಷನ್ | ಇದರ ಮರ್ಮ ಏನು? | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಸ್ಪರ್ಧಿಗಳು ಹನ್ನೊಂದನೇ ವಾರಕ್ಕೆ ಕಾಲಿಡುತ್ತಿದ್ದಂತೆಯೇ, ಶಾಕ್ ಮೇಲೆ ಶಾಕ್... ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಿದ್ದಾರೆ 'ಬಿಗ್ ಬಾಸ್'.

ಮೊದಲನೆಯದಾಗಿ, ನಾಮಿನೇಷನ್ ಪ್ರಕ್ರಿಯೆ ಮುಗಿದ್ಮೇಲೆ.. ಯಾರ್ಯಾರು ನಾಮಿನೇಟ್ ಆಗಿದ್ದಾರೆ ಅಂತ 'ಬಿಗ್ ಬಾಸ್' ಘೋಷಿಸಲಿಲ್ಲ. ಎರಡನೆಯದಾಗಿ, ಇದ್ದಕ್ಕಿದ್ದಂತೆ 'ಬಿಗ್ ಬಾಸ್' ಮನೆಯಿಂದ ಜಯಶ್ರೀನಿವಾಸನ್ ನಾಪತ್ತೆ ಆದರು.

ಒಂದ್ಕಡೆ, ಜಯಶ್ರೀನಿವಾಸನ್ ಎಲ್ಲಿ ಹೋದರು ಎಂಬ ಪ್ರಶ್ನೆ ಸ್ಪರ್ಧಿಗಳಿಗೆ ಕಾಡುತ್ತಿದೆ. ಇನ್ನೊಂದ್ಕಡೆ, ಯಾರ್ಯಾರು ಡೇಂಜರ್ ಝೋನ್ ನಲ್ಲಿ ಇದ್ದಾರೆ ಎಂಬ ಅರಿವು ಇಲ್ಲದೇ ಆಟ ಆಡುತ್ತಿರುವ ಸ್ಪರ್ಧಿಗಳಿಗೆ ಮಧ್ಯ ರಾತ್ರಿ ಸಖತ್ತಾಗಿ ಶಾಕ್ ಕೊಟ್ಟಿದ್ದಾರೆ 'ಬಿಗ್ ಬಾಸ್'. ಮುಂದೆ ಓದಿರಿ...

ಮಧ್ಯರಾತ್ರಿ ಮೂರು ಗಂಟೆ

ಆಗಿನ್ನೂ ಮಧ್ಯರಾತ್ರಿ ಮೂರು ಗಂಟೆ... ಸ್ಪರ್ಧಿಗಳೆಲ್ಲ ಗಾಢ ನಿದ್ದೆಯಲ್ಲಿ ಇರುವಾಗಲೇ, ''ಎಲಿಮಿನೇಷನ್'' ಪ್ರಕ್ರಿಯೆಗೆ 'ಬಿಗ್ ಬಾಸ್' ಚಾಲನೆ ನೀಡಿದರು.

ಈ ಐವರಲ್ಲಿ ಒಬ್ಬರಿಗೆ ಈ ವಾರ 'ಬಿಗ್ ಬಾಸ್' ಆಟ ಅಂತ್ಯ.!

ನಾಮಿನೇಟ್ ಆಗಿದ್ದ ಕೃಷಿಯನ್ನ ಮೊದಲು ಸೇಫ್ ಮಾಡಿದರು.!

ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದ ಕೃಷಿಯನ್ನ 'ಬಿಗ್ ಬಾಸ್' ಮೊದಲು ಸೇಫ್ ಮಾಡಿದರು. ಬೆಡ್ ರೂಮ್ ನಲ್ಲಿ ಇದ್ದ ಕೃಷಿ ಜೊತೆಗೆ ಜೆಕೆ ಕೂಡ ಸುರಕ್ಷಿತರಾದರು.

ಈ ಮೂವರ ಮುಖ ನೋಡಲು ಆಗ್ತಿಲ್ಲ ಎಂದ ಜಯಶ್ರೀನಿವಾಸನ್

ನಂತರ ಮೂವರು ಸೇಫ್

ಲಿವಿಂಗ್ ಏರಿಯಾದಲ್ಲಿ ಚಂದನ್ ಶೆಟ್ಟಿ, ನಿವೇದಿತಾ ಗೌಡ ಹಾಗೂ ಅನುಪಮಾ ಗೌಡರನ್ನ 'ಬಿಗ್ ಬಾಸ್' ಸೇಫ್ ಮಾಡಿದರು.

'ಬಿಗ್ ಬಾಸ್' ಸ್ಪರ್ಧಿಗಳ 'ವಿಚಿತ್ರ' ನಡವಳಿಕೆ ಕಂಡು ಬೇಸತ್ತ ಕಿಚ್ಚ ಸುದೀಪ್.!

ಡೇಂಜರ್ ಝೋನ್

ಗಾರ್ಡನ್ ಏರಿಯಾಗೆ ಬಂದ ಸಮೀರಾಚಾರ್ಯ, ದಿವಾಕರ್ ಹಾಗೂ ಶ್ರುತಿ ಪ್ರಕಾಶ್ ಪೈಕಿ ಒಬ್ಬರಿಗೆ ಮನೆಯಿಂದ ನಿರ್ಗಮಿಸುವ ಸಮಯ ಬಂದಿದೆ ಎಂದು 'ಬಿಗ್ ಬಾಸ್' ಘೋಷಿಸಿದರು.

ಎರಡನೇ ಅವಕಾಶ ಗಿಟ್ಟಿಸಿಕೊಂಡ ಕೃಷಿ ಇದೆಲ್ಲ ನಿಮಗೆ ಬೇಕಿತ್ತಾ.?

ಯಾರು ಔಟ್ ಆಗಬಹುದು.?

ಸಮೀರಾಚಾರ್ಯ, ದಿವಾಕರ್ ಹಾಗೂ ಶ್ರುತಿ ಪ್ರಕಾಶ್ ಪೈಕಿ ಯಾರು ಔಟ್ ಆಗಿದ್ದಾರೆ ಎಂದು 'ಬಿಗ್ ಬಾಸ್' ಇನ್ನೂ ಘೋಷಿಸಿಲ್ಲ (ಇಂದು ಪ್ರಸಾರ ಆಗುವ ಸಂಚಿಕೆಯಲ್ಲಿ ಗೊತ್ತಾಗಲಿದೆ)

ಸೂಕ್ಷ್ಮತೆ ಇಲ್ಲದೆ ನಡೆದುಕೊಂಡ ಕೃಷಿ ತಾಪಂಡಗೆ ಭಾರಿ ಮುಖಭಂಗ.!

ಇದು ಎಲಿಮಿನೇಷನ್ ಅಲ್ಲ.!

ಕಳೆದ ಸೀಸನ್ ನಲ್ಲಿ ನಡೆದಂತೆ ಈ ಬಾರಿ ಖಂಡಿತ 'ಮಧ್ಯರಾತ್ರಿ ಎಲಿಮಿನೇಷನ್ ಪ್ರಕ್ರಿಯೆ' ನಡೆಸಲು ಸಾಧ್ಯ ಇಲ್ಲ. ಯಾಕಂದ್ರೆ, ನಾಮಿನೇಟ್ ಆಗಿರುವ ಐವರಲ್ಲಿ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಸೇಫ್ ಮಾಡಲು ವೀಕ್ಷಕರಿಗೆ ಶುಕ್ರವಾರದ ವರೆಗೂ ಸಮಯಾವಕಾಶ ಇದೆ. ಹೀಗಾಗಿ, ವಾರದ ಮಧ್ಯೆ ಔಟ್ ಮಾಡಿದರೆ 'ಬಿಗ್ ಬಾಸ್' ಪಕ್ಷಪಾತ ಮಾಡಿದಂತೆ.!

ಶ್ರುತಿ ನಾಮಿನೇಟ್ ಆಗಿಲ್ಲ.!

ಸದ್ಯ ಶ್ರುತಿ ಪ್ರಕಾಶ್ ಡೇಂಜರ್ ಝೋನ್ ನಲ್ಲಿ ಇದ್ದಾರೆ ಎಂಬಂತೆ ಬಿಂಬಿಸಲಾಗಿದೆ. ಆದ್ರೆ, ಶ್ರುತಿ ಪ್ರಕಾಶ್ ಈ ವಾರ ನಾಮಿನೇಟ್ ಆಗಿಲ್ಲ ಎಂಬುದೇ ವಾಸ್ತವ. ಹೀಗಾಗಿ, ಅವರನ್ನ ಎಲಿಮಿನೇಟ್ ಮಾಡುವುದು ಅಸಾಧ್ಯ.

ಸೀಕ್ರೆಟ್ ರೂಮ್ ಗೆ ಹೋಗಬಹುದಾ.?

ಈಗಾಗಲೇ ಜಯಶ್ರೀನಿವಾಸನ್ ಸೀಕ್ರೆಟ್ ರೂಮ್ ನಲ್ಲಿ ಇದ್ದಾರೆ. ಜಯಶ್ರೀನಿವಾಸನ್ ಜೊತೆ ಸಮೀರಾಚಾರ್ಯ ಅಥವಾ ದಿವಾಕರ್ ರವರನ್ನ ಸೀಕ್ರೆಟ್ ರೂಮ್ ಒಳಗೆ ಕಳುಹಿಸಬಹುದಾ.? ಮಧ್ಯರಾತ್ರಿ 'ಬಿಗ್ ಬಾಸ್' ಕೊಟ್ಟ ಚಮಕ್ ಹಿಂದಿನ ಮರ್ಮ ಇಂದು ತಿಳಿಯಲಿದೆ.

English summary
Bigg Boss Kannada 5: Week 11: Elimination process commenced at 3 AM at Bigg Boss house. Shruti Prakash, Diwakar and Sameeracharya are in bottom three. Will the elimination process happen and eliminated contestant sent to secret room.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X