»   » ದಿವಾಕರ್ ಕೈಯಲ್ಲಿ ಐದು ಲಕ್ಷ ಹಣ: ನಡೆಯುತ್ತಾ ಕುದುರೆ ವ್ಯಾಪಾರ.?

ದಿವಾಕರ್ ಕೈಯಲ್ಲಿ ಐದು ಲಕ್ಷ ಹಣ: ನಡೆಯುತ್ತಾ ಕುದುರೆ ವ್ಯಾಪಾರ.?

Posted By:
Subscribe to Filmibeat Kannada

'ಬಿಗ್ ಬಾಸ್' ಮನೆ ಇದೀಗ ರಾಜಕೀಯ ರಣರಂಗವಾಗಿ ಪರಿಣಮಿಸಿದೆ. 'ಪ್ರಜಾರಾಜ್ಯ' ಚಟುವಟಿಕೆ ಚಾಲ್ತಿಯಲ್ಲಿ ಇರುವ ಕಾರಣ, 'ಬಿಗ್ ಬಾಸ್' ಮನೆಯಲ್ಲಿ ಎರಡು ರಾಜಕೀಯ ಪಕ್ಷಗಳು ತಲೆಯೆತ್ತಿವೆ.

'ಬಿಗ್ ಬಾಸ್' ಮನೆಯ ಅಧಿಕಾರ ಚುಕ್ಕಾಣಿ ಹಿಡಿಯಲು ಎರಡು ಪಕ್ಷಗಳ ನಡುವೆ ಸದ್ಯದಲ್ಲಿಯೇ ಚುನಾವಣೆ ನಡೆಯಲಿದೆ. ಈ ಚುನಾವಣೆಗಾಗಿ 'ಬಿಗ್ ಬಾಸ್' ಹತ್ತು ಲಕ್ಷ ಮೀಸಲಿಟ್ಟಿದ್ದರು.

Bigg Boss Kannada 5: Week 11: Who wins Bigg Boss elections.?

ಸೀಕ್ರೆಟ್ ರೂಮ್ ನಲ್ಲಿ ಇರುವ 'ಕಿಂಗ್ ಮೇಕರ್ಸ್' ನಿರ್ಣಯದಂತೆ ಚುನಾವಣೆಗೆ ಮೀಸಲಾಗಿದ್ದ ಹತ್ತು ಲಕ್ಷದಲ್ಲಿ ಎರಡು ಪಕ್ಷಗಳಿಗೆ ತಲಾ ಐದು ಲಕ್ಷವನ್ನ 'ಬಿಗ್ ಬಾಸ್' ಹಂಚಿದ್ದಾರೆ.

ಸೀಕ್ರೆಟ್ ರೂಮ್ ಒಳಗೆ 'ಕಿಂಗ್ ಮೇಕರ್ಸ್': ಎಲ್ಲರ ಲೆಕ್ಕಾಚಾರ ತಲೆಕೆಳಗೆ.!

ಚುನಾವಣೆಯಲ್ಲಿ ಗೆಲ್ಲಬೇಕು ಅಂದ್ರೆ ಬಹುಮತ ಪಡೆಯಬೇಕು. ಎರಡೂ ಪಕ್ಷದಲ್ಲಿ ನಾಲ್ಕು ಸದಸ್ಯರಿದ್ದಾರೆ. ಒಂದು ಪಕ್ಷ ಬಹುಮತ ಪಡೆಯಲು ಐದು ಮತ ಬೇಕು. ಎದುರಾಳಿ ಪಕ್ಷದಿಂದ ಸದಸ್ಯರನ್ನು ಸೆಳೆಯಲು.. ಕುದುರೆ ವ್ಯಾಪಾರ ಮಾಡಲು 'ಬಿಗ್ ಬಾಸ್' ದುಡ್ಡು ನೀಡಿದ್ರಾ.? ಗೊತ್ತಿಲ್ಲ.

Bigg Boss Kannada 5: Week 11: Who wins Bigg Boss elections.?

ಆದ್ರೆ, ಪಕ್ಷದ ಮುಖಂಡರಾದ ದಿವಾಕರ್ ಹಾಗೂ ಶ್ರುತಿ ಕೈಯಲ್ಲಿ 'ಪಕ್ಷದ ನಿಧಿ' ರೂಪದಲ್ಲಿ ತಲಾ ಐದು ಲಕ್ಷ ಸೇರಿದೆ. ಬಹುಮತ ಪಡೆಯಲು 'ಬಿಗ್ ಬಾಸ್' ಮನೆಯಲ್ಲಿ ಸದಸ್ಯರು ಏನೆಲ್ಲ ತಂತ್ರ, ಪ್ರತಿತಂತ್ರ ರೂಪಿಸುತ್ತಾರೆ ಎಂಬುದು ಮುಂದಿನ ಆಟ.

'ಡಬಲ್ ಗೇಮ್' ದಿವಾಕರ್: ಹೊರಗೆ ಹೇಳಿದ್ದೊಂದು, ಒಳಗೆ ಬಂದು ಮಾಡಿದ್ದೇ ಮತ್ತೊಂದು.!

ಯಾವ ಪಕ್ಷಕ್ಕೆ ಬಹುಮತ ಸಿಕ್ಕರೂ, ಯಾರಿಗೆ ಅಧಿಕಾರ ಲಭಿಸಬೇಕು ಎಂಬ ನಿರ್ಧಾರ 'ಕಿಂಗ್ ಮೇಕರ್ಸ್' ಸಮೀರಾಚಾರ್ಯ ಹಾಗೂ ಜಯಶ್ರೀನಿವಾಸನ್ ಕೈಯಲ್ಲಿದೆ. ಈ ಸತ್ಯ 'ಬಿಗ್ ಬಾಸ್' ಮನೆಯೊಳಗೆ ಇರುವವರಿಗೆ ಗೊತ್ತಿಲ್ಲ ಅಷ್ಟೇ.!

English summary
Bigg Boss Kannada 5: Week 11: Bigg Boss releases Rs.5 Lakhs each as Party Fund to two parties headed by Diwakar and Shruthi Prakash to compete in Elections as part of 'Prajarajya' luxury budget task.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X