»   » ಇಷ್ಟು ದಿನ ಚಂದನ್ ಶೆಟ್ಟಿ ಮಾಡಿದ್ದೆಲ್ಲ ಬರೀ 'ಡವ್'.!

ಇಷ್ಟು ದಿನ ಚಂದನ್ ಶೆಟ್ಟಿ ಮಾಡಿದ್ದೆಲ್ಲ ಬರೀ 'ಡವ್'.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಶ್ರುತಿ ಪ್ರಕಾಶ್ ಜೊತೆ ಚಂದನ್ ಶೆಟ್ಟಿ ಮಾಡಿದ್ದೆಲ್ಲಾ ಡವ್ | FIlmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಹೊಸ ಲವ್ ಸ್ಟೋರಿಗೆ ನಾಂದಿ ಹಾಡಿದ್ದು ಚಂದನ್ ಶೆಟ್ಟಿ. ಗಾಯಕಿ ಹಾಗೂ ನಟಿ ಶ್ರುತಿ ಪ್ರಕಾಶ್ ಮೇಲೆ ನನಗೆ ಕ್ರಶ್ ಆಗಿದೆ ಎಂದು ಎಲ್ಲರ ಮುಂದೆ ಚಂದನ್ ಶೆಟ್ಟಿ ಒಪ್ಪಿಕೊಂಡಿದ್ದರು.

ಶ್ರುತಿ ಪ್ರಕಾಶ್ ಗಾಗಿ ''ಮುಚ್ಚಿಡಲಾರೆ...'' ಹಾಡನ್ನೂ ಸಂಯೋಜಿಸಿದ್ದರು ಚಂದನ್ ಶೆಟ್ಟಿ. ಅಲ್ಲಿಗೆ, ಚಂದನ್ ಶೆಟ್ಟಿ 'ಹೃದಯದರಸಿ' ಆಗಿದ್ದಾರೆ ಶ್ರುತಿ ಪ್ರಕಾಶ್ ಅಂತ ಎಲ್ಲರೂ ಅಂದುಕೊಳ್ಳುತ್ತಿರುವಾಗಲೇ, ''ಶ್ರುತಿ ಪ್ರಕಾಶ್ ಜೊತೆ ನಾನು ಮಾಡುತ್ತಿರುವುದೆಲ್ಲ ಬರೀ ಡವ್'' ಎಂದು ಚಂದನ್ ಶೆಟ್ಟಿ ಘೋಷಿಸಿದರು. ಹಾಗಾದ್ರೆ, ಯಾವುದು ಸತ್ಯ.? ಯಾವುದು ಸುಳ್ಳು.?

ಈ ಅನುಮಾನ ವೀಕ್ಷಕರಿಗೂ ಬಂದ ಕಾರಣ, 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿಗೆ ಕಾಲರ್ ಆಫ್ ದಿ ವೀಕ್ ಪ್ರಶ್ನೆ ಕೇಳಿದರು. ಮುಂದೆ ಓದಿರಿ...

ಕಾಲರ್ ಆಫ್ ದಿ ವೀಕ್ ಕೇಳಿದ ಪ್ರಶ್ನೆ ಏನು.?

''ಸುದೀಪ್ ಮುಂದೆ ಶ್ರುತಿ ಮೇಲೆ ಫೀಲಿಂಗ್ಸ್ ಇದೆ ಅಂತ ಹೇಳ್ತೀರಾ. ಆದ್ರೆ, ರಿಯಾಝ್ ಜೊತೆ ಮಾತನಾಡುವಾಗ ಬರೀ ಡವ್ ಅಂದ್ರಿ. ಹಾಗಾದ್ರೆ, ಯಾವುದು ಸತ್ಯ.? ಇದು ಗೇಮ್ ಪ್ಲಾನಾ.?'' ಎಂದು ಚಂದನ್ ಶೆಟ್ಟಿಗೆ ಕಾಲರ್ ಆಫ್ ದಿ ವೀಕ್ ಪ್ರಶ್ನಿಸಿದರು.

ಚಂದನ್ ಶೆಟ್ಟಿಗೆ ಪರ್ಫೆಕ್ಟ್ ಹುಡುಗಿ ಯಾರು ಗೊತ್ತಾ.?

ಚಂದನ್ ಶೆಟ್ಟಿ ಕೊಟ್ಟ ಉತ್ತರ ಏನು.?

''ಡವ್ ಅಂತ ಹೇಳಿದ್ದು ನಿಜ. ಶ್ರುತಿ ಅವರ ಕೆಲ ಗುಣ ಇಷ್ಟ ಆಗಿ ಹಾಡು ಬರೆದಿದ್ದೆ. ಅದು ಬಿಟ್ಟು ವೈಯುಕ್ತಿಕವಾಗಿ ಇನ್ನೇನೂ ಇಲ್ಲ. ನಾನು ಮದುವೆ ಆಗುವ ಹುಡುಗಿ ಬಗ್ಗೆ ನನಗೆ ನನಗೇ ಆದ ಒಂದು ಇಮ್ಯಾಜಿನೇಷನ್ ಇದೆ. ಡವ್ ಅಂತ ಹೇಳಿದ್ದು ತಮಾಷೆಗಾಗಿ. ಶ್ರುತಿ ಜೊತೆ ತಮಾಷೆ ಮಾಡುತ್ತಿರುತ್ತೇನೆ ಅಷ್ಟೇ. ಅದನ್ನ ಗೇಮ್ ಗಾಗಿ ಅಂತ ಕೂಡ ತಾವು ಅಂದುಕೊಳ್ಳಬಹುದು'' ಎಂದು ವೀಕ್ಷಕರಿಗೆ ಚಂದನ್ ಶೆಟ್ಟಿ ಉತ್ತರಿಸಿದರು.

ಶ್ರುತಿ ಪ್ರಕಾಶ್ ಗೆ ಲವ್ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ.!

ರಿಯಾಝ್ ಮುಂದೆ ಚಂದನ್ ಹೇಳಿದ್ದೇನು.?

''ಶ್ರುತಿ ಜೊತೆಗೆ ಮಾಡ್ತಿರೋದೆಲ್ಲ ಬರೀ ಡವ್'' ಎಂದು ರಿಯಾಝ್ ಜೊತೆ ಮಾತನಾಡುವಾಗ ಚಂದನ್ ಶೆಟ್ಟಿ ಹೇಳಿದರು.

ಶ್ರುತಿಯನ್ನ ನಾಮಿನೇಟ್ ಮಾಡಿದ ಚಂದನ್

ಶ್ರುತಿ ಮೇಲೆ ಕ್ರಶ್ ಆಗಿದೆ ಅಂತ ಚಂದನ್ ಶೆಟ್ಟಿ ಹೇಳ್ಬಹುದು. ಆದ್ರೆ, ಅದೇ ಚಂದನ್ ಶೆಟ್ಟಿ ಕನ್ಫೆಶನ್ ರೂಮ್ ಒಳಗೆ ಹೋಗಿ ಎರಡು ಬಾರಿ ಶ್ರುತಿ ಅವರನ್ನ ನಾಮಿನೇಟ್ ಮಾಡಿ ಬಂದಿದ್ದಾರೆ. ಹೀಗಾಗಿ, ಚಂದನ್ ಶೆಟ್ಟಿ ಮನಸ್ಸಲ್ಲಿ ಏನಿದೆ, ಏನಿಲ್ಲ ಎಂದು ಯಾರಿಗೂ ಗೊತ್ತಾಗುತ್ತಿಲ್ಲ.

English summary
Bigg Boss Kannada 5: Week 12: Caller of the week questions Chandan Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X