»   » ಎಷ್ಟೇ ತಿರುಗುಮುರುಗು ಮಾಡಿದರೂ ಸ್ಪರ್ಧಿಗಳ ಲೆಕ್ಕಾಚಾರ ಕರೆಕ್ಟ್ ಆಗಿದೆ.!

ಎಷ್ಟೇ ತಿರುಗುಮುರುಗು ಮಾಡಿದರೂ ಸ್ಪರ್ಧಿಗಳ ಲೆಕ್ಕಾಚಾರ ಕರೆಕ್ಟ್ ಆಗಿದೆ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಹನ್ನೊಂದನೇ ವಾರ ಒಂದರ ಮೇಲೊಂದರಂತೆ 'ಬಿಗ್ ಬಾಸ್' ಹಲವು ಟ್ವಿಸ್ಟ್ ಗಳನ್ನು ನೀಡಿದ್ದರು. ಕನ್ಫೆಶನ್ ರೂಮ್ ನಿಂದ ಜಯಶ್ರೀನಿವಾಸನ್ ನಾಪತ್ತೆ ಆದರು. ಮಧ್ಯರಾತ್ರಿ ಎಲಿಮಿನೇಷನ್ ನಿಂದಾಗಿ ಸಮೀರಾಚಾರ್ಯ ಹೊರ ಬಂದರು. ಜಯಶ್ರೀನಿವಾಸನ್ ಹಾಗೂ ಸಮೀರಾಚಾರ್ಯ ಸೀಕ್ರೆಟ್ ರೂಮ್ ನಲ್ಲಿ 'ಕಿಂಗ್ ಮೇಕರ್ಸ್' ಪಟ್ಟಕ್ಕೇರಿದರು. ವಾರದ ಕೊನೆಯಲ್ಲಿ ಸಮೀರಾಚಾರ್ಯ ಸೇಫ್ ಅಂತ ಅನೌನ್ಸ್ ಆಯ್ತು. ಸೀಕ್ರೆಟ್ ರೂಮ್ ನಿಂದ ಜಯಶ್ರೀನಿವಾಸನ್ ಹೊರಬಿದ್ದರು. ಮೇನ್ ಹೌಸ್ ನಿಂದ ದಿವಾಕರ್ ಔಟ್ ಆಗಿ ಸೀಕ್ರೆಟ್ ರೂಮ್ ಸೇರಿದರು.

ಇಷ್ಟೆಲ್ಲ ತಿರುಗುಮುರುಗು ಮಾಡಿದರೂ, 'ಬಿಗ್ ಬಾಸ್' ಲೆಕ್ಕಾಚಾರ ಸ್ಪರ್ಧಿಗಳಿಗೆ ಕ್ಲಿಯರ್ ಆಗಿದೆ.

Bigg Boss Kannada 5: Week 12: Contestants guesses right: Diwakar is in secret room

ಇದು ಪಕ್ಷಪಾತ ಮಾಡಿದಂತೆ ಅಲ್ವಾ 'ಬಿಗ್ ಬಾಸ್'.!? ಕ್ಲಾರಿಟಿ ಕೊಡಿ..

ಇದ್ದಕ್ಕಿದ್ದಂತೆ ನಾಪತ್ತೆ ಆದ ಜಯಶ್ರೀನಿವಾಸನ್ ಸೀಕ್ರೆಟ್ ರೂಮ್ ಗೆ ತೆರಳಿದ್ದಾರೆ. ಮಧ್ಯರಾತ್ರಿ ಎಲಿಮಿನೇಷನ್ ಮಾಡಲು ಸಾಧ್ಯ ಇಲ್ಲ. ಹೀಗಾಗಿ ಸಮೀರಾಚಾರ್ಯ ಕೂಡ ಸೀಕ್ರೆಟ್ ರೂಮ್ ಗೆ ತೆರಳಿ ಜಯಶ್ರೀನಿವಾಸನ್ ಜೊತೆ ಇದ್ದಾರೆ ಎಂಬ ಭಾವನೆ ಕಳೆದ ವಾರವೇ ಎಲ್ಲ ಸ್ಪರ್ಧಿಗಳ ತಲೆಯಲ್ಲಿ ಮೂಡಿತ್ತು.

ಸೀಕ್ರೆಟ್ ರೂಮ್ ಒಳಗೆ 'ಕಿಂಗ್ ಮೇಕರ್ಸ್': ಎಲ್ಲರ ಲೆಕ್ಕಾಚಾರ ತಲೆಕೆಳಗೆ.!

'ಪ್ರಜಾರಾಜ್ಯ' ಟಾಸ್ಕ್ ನಲ್ಲಿ ನಿರ್ಣಯಗಳು ಕೊಂಚ ಏರುಪೇರು ಆದಾಗ ಇವರಿಬ್ಬರೇ (ಜಯಶ್ರೀನಿವಾಸನ್ ಹಾಗೂ ಸಮೀರಾಚಾರ್ಯ) ನಿರ್ಧಾರಗಳನ್ನ ತೆಗೆದುಕೊಳ್ಳುತ್ತಿರಬಹುದು ಎಂದೂ ಸ್ಪರ್ಧಿಗಳು ಅಂದಾಜಿಸಿದ್ದರು.

ಅಚ್ಚರಿ ಬೆಳವಣಿಗೆ: ದಿವಾಕರ್ ಸೀಕ್ರೆಟ್ ರೂಮ್ ಗೆ, ಜಯಶ್ರೀನಿವಾಸನ್ ಮನೆಗೆ.!

ಹಾಗೇ, ದಿವಾಕರ್ ಅವರ ಎಲಿಮಿನೇಷನ್ ನ ನಂಬಲು ಕೂಡ ಸ್ಪರ್ಧಿಗಳು ತಯಾರಿಲ್ಲ. ''ಹಂಡ್ರೆಡ್ ಪರ್ಸೆಂಟ್ ದಿವಾಕರ್ ಔಟ್ ಆಗಿಲ್ಲ. ದಿವಾಕರ್ ಹೋಗಲು ಚಾನ್ಸ್ ಇಲ್ಲ. 'ಅದ್ಭುತವಾಗಿ ಆಡಿದ್ದೀರಾ' ಅಂತ ಸುದೀಪ್ ಹೇಳಿದ್ದಾರೆ. ಹೀಗಿರುವಾಗ ಔಟ್ ಆಗಲು ಹೇಗೆ ಸಾಧ್ಯ. ಜಯಶ್ರೀನಿವಾಸನ್ ಜೊತೆ ದಿವಾಕರ್ ವಾಪಸ್ ಬರ್ತಾರೆ'' ಅಂತಲೇ ಈಗಲೂ 'ಬಿಗ್ ಬಾಸ್' ಸ್ಪರ್ಧಿಗಳು ಊಹಿಸುತ್ತಿದ್ದಾರೆ.

ದಿವಾಕರ್ ಔಟ್ ಆಗಿಲ್ಲ, ಸೀಕ್ರೆಟ್ ರೂಮ್ ನಲ್ಲಿ ಇರಬಹುದು ಎಂಬ ಊಹೆ ಸರಿಯಾಗಿದೆ. ಆದ್ರೆ, ಜಯಶ್ರೀನಿವಾಸನ್ ಎಲಿಮಿನೇಟ್ ಆಗಿರುವುದನ್ನ ಮಾತ್ರ ಯಾರೂ ಇಲ್ಲಿಯವರೆಗೂ ಊಹಿಸಿಲ್ಲ.

English summary
Bigg Boss Kannada 5: Week 12: Contestants guesses right, Diwakar is in secret room.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X