»   » 'ಬಿಗ್ ಬಾಸ್' ಮುಂದೆ 'ಕಾಮನ್ ಮ್ಯಾನ್' ದಿವಾಕರ್ ಇಟ್ಟಿರುವ 'ದೊಡ್ಡ' ಬೇಡಿಕೆ ಏನ್ಗೊತ್ತಾ.?

'ಬಿಗ್ ಬಾಸ್' ಮುಂದೆ 'ಕಾಮನ್ ಮ್ಯಾನ್' ದಿವಾಕರ್ ಇಟ್ಟಿರುವ 'ದೊಡ್ಡ' ಬೇಡಿಕೆ ಏನ್ಗೊತ್ತಾ.?

Posted By:
Subscribe to Filmibeat Kannada
ದಿವಾಕರ್ ವೈನ್ ಗಾಗಿ ಬಿಗ್ ಬಾಸ್ ಬಳಿ ಮನವಿ | Filmibeat Kannada

ವಾಸ್ತವ ಪ್ರಪಂಚದಲ್ಲಿ ನಮಗೆ ಏನು ಇಷ್ಟವೋ, ಅದನ್ನ ಖರೀದಿಸಿ ತಿನ್ನಬಹುದು. ಆದ್ರೆ, 'ಬಿಗ್ ಬಾಸ್' ಮನೆಯೊಳಗಿನ ಪ್ರಪಂಚದಲ್ಲಿ ಹಾಗಿಲ್ಲ. ದೈನಂದಿನ ಬಳಕೆಗೆ ಏನು ಅಗತ್ಯವೋ, ಆ ಎಲ್ಲ ಸಾಮಾನು-ಸಾಮಗ್ರಿಗಳನ್ನ ಮಾತ್ರ ಉಚಿತವಾಗಿ 'ಬಿಗ್ ಬಾಸ್' ನೀಡುತ್ತಾರೆ. ಮಿಕ್ಕೆಲ್ಲವನ್ನ 'ಬಿಗ್ ಬಾಸ್' ನೀಡುವ ಚಟುವಟಿಕೆಯಲ್ಲಿ ಗೆದ್ದು ಗಳಿಸಬೇಕು.

ಉಪ್ಪಿನಕಾಯಿ, ತುಪ್ಪ, ಮಾಂಸಾಹಾರ, ಸಿಹಿ ತಿನಿಸು... ಇವೆಲ್ಲವೂ 'ಬಿಗ್ ಬಾಸ್' ಮನೆಯಲ್ಲಿ 'ಲಕ್ಷುರಿ'. ಹೀಗಿರಬೇಕಾದರೆ, 'ಬಿಗ್ ಬಾಸ್' ಮನೆಯಲ್ಲಿ 'ವೈನ್' ಸಿಗಲು ಸಾಧ್ಯವೇ.? ಅದು ಸ್ಪರ್ಧಿ ಕೇಳಿದ ಕೂಡಲೆ.?

'ಬಿಗ್ ಬಾಸ್' ಮನೆಯಲ್ಲಿ ಸುಮಾರು 76 ದಿನಗಳ ಕಾಲ ಇದ್ದು, 'ಬಿಗ್ ಬಾಸ್' ಅಣತಿಯಂತೆ ನಡೆದುಕೊಂಡಿದ್ದ ದಿವಾಕರ್, ಇದೀಗ ಅದೇ 'ಬಿಗ್ ಬಾಸ್' ಮುಂದೆ ಒಂದು ದೊಡ್ಡ ಬೇಡಿಕೆ ಇಟ್ಟಿದ್ದಾರೆ.

ಹೊಸ ವರ್ಷದ ಪ್ರಯುಕ್ತ ತಮಗೆ ಚಿಕ್ಕ ಬಾಟಲ್ ವೈನ್ ಕಳುಹಿಸಿಕೊಡಿ ಎಂದು 'ಬಿಗ್ ಬಾಸ್' ಗೆ ಡಿಮ್ಯಾಂಡ್ ಮಾಡಿದ್ದಾರೆ 'ಕಾಮನ್ ಮ್ಯಾನ್' ದಿವಾಕರ್.! ಮುಂದೆ ಓದಿರಿ...

ಸೀಕ್ರೆಟ್ ರೂಮ್ ನಲ್ಲಿ ದಿವಾಕರ್

'ಬಿಗ್ ಬಾಸ್' ಮನೆಯಿಂದ ಹೊರ ಬಂದಿರುವ ದಿವಾಕರ್ ಸದ್ಯ ಸೀಕ್ರೆಟ್ ರೂಮ್ ನಲ್ಲಿ ಇದ್ದಾರೆ. ಸೀಕ್ರೆಟ್ ರೂಮ್ ನಲ್ಲಿ ಬೇರೆ ಯಾವ ಸ್ಪರ್ಧಿಯೂ ಇಲ್ಲದ ಕಾರಣ, ಹೊಸ ವರ್ಷದ ಪ್ರಯುಕ್ತ ತಮಗೆ ವೈನ್ ಕಳುಹಿಸಿಕೊಡಿ ಎಂದು ದಿವಾಕರ್ 'ಬಿಗ್ ಬಾಸ್' ರನ್ನ ಕೇಳಿಕೊಂಡಿದ್ದಾರೆ.

ಆಡಿರುವ ಮಾತುಗಳನ್ನೇ 'ಇಲ್ಲ' ಅಂತಿದ್ದಾರಲ್ಲ ದಿವಾಕರ್.! ಯಾಕೆ ಹೀಗೆ.?

ಯಾರಿಗೂ ಹೇಳಲ್ವಂತೆ.!

''ದೇವ್ರಾಣೆ... ಸತ್ಯವಾಗ್ಲೂ... ಯಾರಿಗೂ ಹೇಳಲ್ಲ 'ಬಿಗ್ ಬಾಸ್'... ಒಂದೇ ಒಂದು ಚಿಕ್ಕ ಬಾಟಲ್ ವೈನ್... ಹ್ಯಾಪಿ ನ್ಯೂ ಇಯರ್ ಗೆ ಕೊಟ್ಟರೆ ಚೆನ್ನಾಗಿರುತ್ತೆ 'ಬಿಗ್ ಬಾಸ್'' ಎಂದು ಕ್ಯಾಮರಾ ಮುಂದೆ ದಿವಾಕರ್ ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದರು.

'ಡಬಲ್ ಗೇಮ್' ದಿವಾಕರ್: ಹೊರಗೆ ಹೇಳಿದ್ದೊಂದು, ಒಳಗೆ ಬಂದು ಮಾಡಿದ್ದೇ ಮತ್ತೊಂದು.!

ಒಬ್ಬನೇ ಇದ್ದೀನಲ್ವಾ..

''ಒಬ್ಬನೇ ಇದ್ದೀನಲ್ವಾ, ಅದಕ್ಕೆ ಕೊಡಿ.. ಇವತ್ತು ಮಾತ್ರ ಕೊಡಿ. ನಾಳೆಯಿಂದ ಬೇಡ. ಮಲಗುವ ಟೈಮ್ ಆದಾಗ ಲೈಟ್ ಆಫ್ ಮಾಡ್ತೀರಲ್ಲಾ.. ಆಗ ಕೊಡಿ ಪರ್ವಾಗಿಲ್ಲ'' - ದಿವಾಕರ್

ಅಚ್ಚರಿ ಬೆಳವಣಿಗೆ: ದಿವಾಕರ್ ಸೀಕ್ರೆಟ್ ರೂಮ್ ಗೆ, ಜಯಶ್ರೀನಿವಾಸನ್ ಮನೆಗೆ.!

ಕಿಕ್ ಇರಲ್ಲ.!

''ವೈನ್ ಏನೂ ಕಿಕ್ ಇರಲ್ಲ 'ಬಿಗ್ ಬಾಸ್'. ವೈನ್... ಗೊತ್ತಲ್ವಾ ದ್ರಾಕ್ಷಿಯಿಂದ ಮಾಡಿರುವುದು. ಚಿಕ್ಕ ಬಾಟಲ್ ಕಳುಹಿಸಿಕೊಡಿ 'ಬಿಗ್ ಬಾಸ್'. ಇವತ್ತು ಹೊಸ ವರ್ಷ ಅಲ್ವಾ, ಸೆಲೆಬ್ರೇಷನ್ ಮಾಡ್ತೀವಿ ಅದಕ್ಕೆ ಕಳುಹಿಸಿಕೊಡಿ. ನೀವು ಕೊಟ್ಟು ಬಿಟ್ಟರೆ ಖುಷಿ ಆಗ್ಬಿಡುತ್ತೇನೆ. ಎಷ್ಟು ಖುಷಿ ಆಗುತ್ತೇನೆ ಅಂದ್ರೆ ಸಾಯುವ ತನಕ ಮರೆಯೋದಿಲ್ಲ. ಊಟ ಆದ್ಮೇಲೆ ವೈನ್ ಕುಡಿದು ಆರಾಮಾಗಿ ನಿದ್ದೆ ಮಾಡುತ್ತೇನೆ'' - ದಿವಾಕರ್

ದಿವಾಕರ್ ಎಂಥ ರಾಜಕಾರಣಿ ಅಂತ ಸುದೀಪ್ ಗೂ ಗೊತ್ತಾಯ್ತು.!

ತಥಾಸ್ತು ಎನ್ನಲು ಸಾಧ್ಯವೇ.?!

ಹೊಸ ವರ್ಷದ ಪ್ರಯುಕ್ತ ಎಲ್ಲ ಸ್ಪರ್ಧಿಗಳಿಗೂ 'ಬಿಗ್ ಬಾಸ್' ಭಕ್ಷ್ಯ ಭೋಜನವನ್ನ ಕಳುಹಿಸಿಕೊಟ್ಟರು. ದಿವಾಕರ್ ಇಟ್ಟ ಬೇಡಿಕೆಗೆ 'ಬಿಗ್ ಬಾಸ್' ತಥಾಸ್ತು ಎನ್ನಲಿಲ್ಲ. ಹಾಗೆ ಮಾಡಲು ಸಾಧ್ಯವೂ ಇಲ್ಲ.

English summary
Bigg Boss Kannada 5: Week 12: Diwakar demands for Wine as part of New Year Celebration in Secret Room of Bigg Boss House.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X