»   » ಬೇಸರಗೊಂಡು ಕಣ್ಣೀರಿಡುತ್ತ 'ಬಿಗ್ ಬಾಸ್' ಮನೆಯಿಂದ ಹೊರಬಂದ ಕೃಷಿ ತಾಪಂಡ.!

ಬೇಸರಗೊಂಡು ಕಣ್ಣೀರಿಡುತ್ತ 'ಬಿಗ್ ಬಾಸ್' ಮನೆಯಿಂದ ಹೊರಬಂದ ಕೃಷಿ ತಾಪಂಡ.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಹನ್ನೆರಡನೇ ವಾರ ನಟಿ ಕೃಷಿ ತಾಪಂಡ ಎಲಿಮಿನೇಟ್ ಆಗಿದ್ದಾರೆ. ಅದಾಗಲೇ ಒಮ್ಮೆ ಔಟ್ ಆಗಿ, ಎರಡನೇ ಬಾರಿ ಅವಕಾಶ ಗಿಟ್ಟಿಸಿಕೊಂಡು 'ಬಿಗ್ ಬಾಸ್' ಮನೆಯೊಳಗೆ ರೀಎಂಟ್ರಿ ಕೊಟ್ಟಿದ್ದ ಕೃಷಿ ತಾಪಂಡ ಗ್ರ್ಯಾಂಡ್ ಫಿನಾಲೆ ಹಂತವನ್ನ ತಲುಪುವಲ್ಲಿ ವಿಫಲರಾಗಿದ್ದಾರೆ.

ಸೆಕೆಂಡ್ ಚಾನ್ಸ್ ಪಡೆದುಕೊಂಡು 'ಬಿಗ್ ಬಾಸ್' ಮನೆಯೊಳಗೆ ಬಂದಿದ್ದರೂ, ಹಾಲು-ಮೊಸರಿನ ವಿಚಾರಕ್ಕೆ ಕಿರಿಕಿರಿಗೊಳ್ಳುವುದನ್ನ ಕೃಷಿ ಕಮ್ಮಿ ಮಾಡಿರಲಿಲ್ಲ. ಅನುಪಮಾ ಗೌಡ, ಶ್ರುತಿ ಪ್ರಕಾಶ್ ಹಾಗೂ ಜೆಕೆ ಜೊತೆ ಆತ್ಮೀಯವಾಗಿದ್ದ ಕೃಷಿ ವೀಕ್ಷಕರ ಮನಗೆಲ್ಲುವಲ್ಲಿ ಸೋತ ಕಾರಣ 'ಬಿಗ್ ಬಾಸ್' ಕಾರ್ಯಕ್ರಮದಿಂದ ಹೊರಬಿದ್ದಿದ್ದಾರೆ. ಮುಂದೆ ಓದಿರಿ...

ಕೃಷಿಗೆ ವೀಕ್ಷಕರ ಬೆಂಬಲ ಇಲ್ಲ.!

ನಾಮಿನೇಟ್ ಆಗಿದ್ದ ಇತರೆ ಸ್ಪರ್ಧಿಗಳಿಗೆ ಹೋಲಿಸಿದರೆ, ನಟಿ ಕೃಷಿ ತಾಪಂಡ ಅವರಿಗೆ ಕಮ್ಮಿ ವೋಟ್ ಗಳು ಬಿದ್ದಿದ್ವು. ಹೀಗಾಗಿ, ಅವರು 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಎಲಿಮಿನೇಟ್ ಆದರು.

ಮತ್ತೆ ಸೆಲೆಬ್ರಿಟಿಗೆ ಅವಕಾಶ: ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಕೃಷಿ ತಾಪಂಡ.!

ಡೇಂಜರ್ ಝೋನ್ ನಲ್ಲಿ ಇದ್ದವರು ಯಾರ್ಯಾರು.?

ಅನುಪಮಾ ಗೌಡ, ಕೃಷಿ ತಾಪಂಡ, ಜಯರಾಂ ಕಾರ್ತಿಕ್, ಶ್ರುತಿ ಪ್ರಕಾಶ್, ನಿವೇದಿತಾ ಗೌಡ ಹಾಗೂ ರಿಯಾಝ್... ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದರು.

'ಬಿಗ್ ಬಾಸ್ ಕನ್ನಡ-5': ಈ ಆರು ಮಂದಿ ಪೈಕಿ ನಿಮ್ಮ ಮತ ಯಾರಿಗೆ.?

ಎರಡನೇ ಬಾರಿ ಔಟ್ ಆದ ಕೃಷಿ

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಐದನೇ ವಾರಕ್ಕೆ ಔಟ್ ಆಗಿದ್ದ ಕೃಷಿ ತಾಪಂಡ ಆರನೇ ವಾರದ ಅಂತ್ಯಕ್ಕೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದರು. ಇದೀಗ ಎರಡನೇ ಬಾರಿಗೆ 'ಬಿಗ್ ಬಾಸ್' ಮನೆಯಿಂದ ಗೇಟ್ ಪಾಸ್ ಪಡೆದಿದ್ದಾರೆ ಕೃಷಿ ತಾಪಂಡ.

'ಬಿಗ್' ಮನೆಯಿಂದ ಎಲಿಮಿನೇಟ್ ಆದರು ಕೃಷಿ ತಾಪಂಡ.!

ಕಣ್ಣೀರಿಟ್ಟ ಕೃಷಿ

''ನೀವು ನೀವಾಗಿದ್ದರೆ ಸಾಕಾಗುವುದಿಲ್ಲ ಅಂತ ಹೇಳಿದ್ರಿ. ಆದ್ರೆ, ಇಂದು ನಾನು ಹೊರಗಡೆ ಹೋಗುವಾಗ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ 'ನಾನು ನಾನಾಗಿದ್ದರೆ ಸಾಕು' ಅಂತ. ನಾನು ನನ್ನತನವನ್ನು ಬಿಟ್ಟುಕೊಡಲಿಲ್ಲ ಎಂಬುದರ ಬಗ್ಗೆ ನನಗೆ ಖುಷಿ ಇದೆ'' ಎಂದು ಕಣ್ಣೀರಿಡುತ್ತ ಕಿಚ್ಚ ಸುದೀಪ್ ಮುಂದೆ ನುಡಿದರು ಕೃಷಿ.

ಬೇಸರ ಇದೆ

''ಇಲ್ಲಿಂದ ಹೊರಗಡೆ ಹೋಗುತ್ತಿರುವುದಕ್ಕೆ ನನಗೆ ಬೇಜಾರಿಲ್ಲ. ಆದ್ರೆ, ನಾನು ನಾನಾಗಿ ಉಳಿದುಕೊಂಡಿದ್ದರೂ, ನನ್ನನ್ನ ಇಲ್ಲಿಂದ ಕಳುಹಿಸ್ತಿದ್ದಾರಲ್ಲ, ಅವರಿಂದ ನನಗೆ ಬೇಜಾರು ಆಗುತ್ತಿದೆ. ನಾನು ನಾನಾಗಿ ಇದ್ದರೂ, ನನ್ನನ್ನ ಇಲ್ಲಿ ಸ್ವೀಕರಿಸಲಿಲ್ಲ. ಅದರ ಬಗ್ಗೆ ಬೇಸರ ಇದೆ'' ಎಂದು ಕಣ್ಣೀರು ಸುರಿಸುತ್ತ ಹೊರಬಂದರು ಕೃಷಿ ತಾಪಂಡ.

English summary
Bigg Boss Kannada 5: Week 12: Krishi Thapanda eliminated.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X