»   » ಕಾಲಲ್ಲಿ ಒದ್ದು ಸಮೀರಾಚಾರ್ಯಗೆ ಬೇಷರತ್ ಕ್ಷಮೆ ಕೇಳಿದ ರಿಯಾಝ್

ಕಾಲಲ್ಲಿ ಒದ್ದು ಸಮೀರಾಚಾರ್ಯಗೆ ಬೇಷರತ್ ಕ್ಷಮೆ ಕೇಳಿದ ರಿಯಾಝ್

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಸಮೀರ್ ಆಚಾರ್ಯ ಬಳಿ ಕ್ಷಮೆ ಕೇಳಿದ ರಿಯಾಜ್ ಭಾಷಾ | FIlmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಚಂದನ್ ಶೆಟ್ಟಿ ಹಾಗೂ ದಿವಾಕರ್ ಹೇಗೋ, ಹಾಗೇ ರಿಯಾಝ್ ಹಾಗೂ ಸಮೀರಾಚಾರ್ಯ ಕೂಡ. ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆಯೊಳಗೆ ರಿಯಾಝ್ ಇಷ್ಟ ಪಡುವ ಇಬ್ಬರು ಸ್ಪರ್ಧಿಗಳ ಪೈಕಿ ಸಮೀರಾಚಾರ್ಯ ಕೂಡ ಒಬ್ಬರು.

ಇಂತಿಪ್ಪ ಸಮೀರಾಚಾರ್ಯ ಕೂತಿದ್ದ ಚೇರ್ ನ ಕಳೆದ ವಾರ ರಿಯಾಝ್ ಒದ್ದರು. ಸಾಲದಕ್ಕೆ, ''ಸಮೀರಾಚಾರ್ಯ ಅವರನ್ನ ಕೆಳಗೆ ಬೀಳಿಸಲು ಚೇರ್ ಗೆ ಪುಶ್ ಕೊಟ್ಟೆ'' ಎಂದು ಸಮರ್ಥಿಸಿಕೊಂಡರು.

ರಿಯಾಝ್ ಅವರ ಈ ನಡವಳಿಕೆ ಸುದೀಪ್ ಗೆ ಇಷ್ಟ ಆಗ್ಲಿಲ್ಲ. ಹೀಗಾಗಿ, 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ರಿಯಾಝ್ ಗೆ ಸುದೀಪ್ ಬೆಂಡೆತ್ತಿದರು. ತಮ್ಮ ತಪ್ಪಿನ ಅರಿವಾದ ಮೇಲೆ ಸಮೀರಾಚಾರ್ಯ ಅವರ ಬಳಿ ಬೇಷರತ್ ಕ್ಷಮೆ ಕೇಳಿದರು ರಿಯಾಝ್. ಮುಂದೆ ಓದಿರಿ...

'ಬಿಗ್ ಬಾಸ್' ನೀಡಿದ್ದ ಚಟುವಟಿಕೆ ಏನು.?

ಗಾರ್ಡನ್ ಏರಿಯಾದಲ್ಲಿ ಹಾಕಲಾಗಿರುವ ಕುರ್ಚಿಗಳ ಮೇಲೆ ಅನುಪಮಾ ಹಾಗೂ ಸಮೀರಾಚಾರ್ಯ ಕುಳಿತುಕೊಳ್ಳಬೇಕಿತ್ತು. ಇಬ್ಬರನ್ನು ಎದುರಾಳಿ ತಂಡದವರು 'ಬಿಗ್ ಬಾಸ್'ಗೆ ತಿಳಿಸಿದ ಸಮಯದೊಳಗೆ ಎಬ್ಬಿಸಬೇಕಿತ್ತು. ಚಟುವಟಿಕೆಯ ಅನುಸಾರ, ಸಮೀರಾಚಾರ್ಯ ಅವರನ್ನ ಎಬ್ಬಿಸಲು ರಿಯಾಝ್, ಚಂದನ್ ಶೆಟ್ಟಿ ಹಾಗೂ ನಿವೇದಿತಾ ಮೂರು ಗಂಟೆ ಸಮಯ ನಿಗದಿ ಪಡಿಸಿದ್ದರು.

ಸತ್ಯವನ್ನ ಸಮೀರಾಚಾರ್ಯ ಬಾಯ್ಬಿಟ್ರೆ ಶಿಕ್ಷೆ ಗ್ಯಾರೆಂಟಿ.!

ಸಮೀರಾಚಾರ್ಯ ಕೂತಿದ್ದ ಚೇರ್ ಒದ್ದ ರಿಯಾಝ್

ನಿವೇದಿತಾ ಕಡೆ ಸಮೀರಾಚಾರ್ಯ ವಾಲುತ್ತಿದ್ದಾಗ, ಅವರನ್ನ ಕೆಳಗೆ ಬೀಳಿಸಲು ಚೇರ್ ಒದ್ದರು ರಿಯಾಝ್. ''ಸಮೀರಾಚಾರ್ಯ ಅವರನ್ನ ತಳ್ಳಿಲ್ಲ. ಚೇರ್ ಗೆ ಪುಶ್ ಕೊಟ್ಟೆ'' ಎಂದು ರಿಯಾಝ್ ಸಮರ್ಥಿಸಿಕೊಂಡರು.

ರಿಯಾಝ್ ಮಾಡಿದ್ದು ತಪ್ಪು

''ಹೊರಗಡೆ ಕಾಣಿಸಿದ ಪ್ರಕಾರ ನೀವು ಒದ್ರಿ'' ಎಂದು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಹೇಳಿದಾಗ, ''ಆ ತರಹ ಏನಿಲ್ಲ ಸರ್, ದಯವಿಟ್ಟು ಕ್ಷಮಿಸಿ, ಚೇರ್ ಇನ್ನೇನು ಬೀಳುವ ತರಹ ಇತ್ತು. ಅದಕ್ಕೆ ಪುಶ್ ಕೊಟ್ಟೆ'' ಎಂದು ರಿಯಾಝ್ ವಿವರಿಸಿದರು.

ದಿವಾಕರ್ ಹೇಳಿದ್ದೇನು.?

ಸೀಕ್ರೆಟ್ ರೂಮ್ ನಿಂದ ವಾಪಸ್ ಬಂದಿದ್ದ ದಿವಾಕರ್, ''ರಿಯಾಝ್ ಒದ್ದರು. ನೋಡುಗನಾಗಿ ನಾನು ನೋಡಿದಾಗ ಅವರು ಒದ್ದರು'' ಎಂದರು

ವ್ಯಕ್ತಿತ್ವದ ಮಾತು

''ಒದ್ದ ಮೇಲೆ ಪುಶ್ ಕೊಟ್ಟೆ ಅಂತ ಕವರ್ ಅಪ್ ಮಾಡಿದ್ರಿ. ಇದು ತಪ್ಪು. ಇವೆಲ್ಲ ನಿಮ್ಮ ವ್ಯಕ್ತಿತ್ವ ನಿರ್ಧಾರ ಮಾಡುವ ಸಮಯ. ಆಟದಲ್ಲಿ ಆವೇಶದಲ್ಲಿ ಒದ್ರಿ. ಕುರ್ಚಿ ಬಿತ್ತು. ''ಆಟ ಮುಗಿಯಿತು, ಕುರ್ಚಿಯಿಂದ ಬಿದ್ರು'' ಅಂತ 'ಬಿಗ್ ಬಾಸ್' ಹತ್ತಿರ ಬಂದು ಹೇಳ್ತೀರಾ. ಅಲ್ಲಿ ನಮಗೆ ನಿಮ್ಮ ಪಶ್ಚಾತ್ತಾಪ ಕಾಣಿಸಲಿಲ್ಲ'' ಎಂದು ಅಸಮಾಧಾನ ವ್ಯಕ್ತಪಡಿಸಿದರು ಸುದೀಪ್

ಬೀಳುವವರಲ್ಲ ಸಮೀರಾಚಾರ್ಯ

''ದಯವಿಟ್ಟು ಕ್ಷಮಿಸಿ. ನಾನು ಪುಶ್ ಕೊಟ್ಟೆ ಅಷ್ಟೇ. ಒದ್ದಿದ್ರೆ, ಪಶ್ಚಾತ್ತಾಪ ಆಗಿರೋದು. ಈಗ ನನಗೆ ಪಶ್ಚಾತ್ತಾಪ ಆಗುತ್ತಿದೆ'' ಎಂದರು ರಿಯಾಝ್. ಆಗ, ''ನೂರು ಚಿಲ್ಲರೆ ಕೆಜಿ ಇರುವ ಸಮೀರಾಚಾರ್ಯ, ಒಂದು ಪುಶ್ ಗೆ ಬೀಳುವವರಲ್ಲ. ಸ್ವಲ್ಪ ವಾಲಿದರೂ ಬೀಳುವವರಲ್ಲ'' ಅಂತ ಬೆಂಡೆತ್ತಿದರು ಸುದೀಪ್.

ಕ್ಷಮೆ ಕೇಳಿದ ರಿಯಾಝ್

''ನಾನು ಮಾಡಿದ ತಿಳಿಯಲಾರದ ತಪ್ಪನ್ನ ಹೊಟ್ಟೆಗೆ ಹಾಕಿಕೊಳ್ಳಿ. ದಯವಿಟ್ಟು ಕ್ಷಮಿಸಿ...'' ಎಂದು ಸಮೀರಾಚಾರ್ಯ ಅವರ ಬಳಿ ಕ್ಷಮೆ ಕೇಳಿದರು ರಿಯಾಝ್

English summary
Bigg Boss Kannada 5: Week 12: Riyaz Basha apologizes Sameer Acharya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X