Just In
Don't Miss!
- Lifestyle
ದಿನ ಭವಿಷ್ಯ: ನಿಮ್ಮ ರಾಶಿಗೆ ಶನಿವಾರ ದಿನ ಹೇಗಿರಲಿದೆ ನೋಡಿ
- News
ದಿಢೀರ್ ಕೋರ್ಟ್ ಮೆಟ್ಟಿಲೇರಿದ್ದಕ್ಕೆ ಕಾರಣ ನೀಡಿದ ಸಚಿವ ಕೆ. ಸುಧಾಕರ್
- Education
KSCCF Recruitment 2021: 45 ಲೆಕ್ಕಿಗರು, ಎಫ್ಡಿಎ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಮಾರ್ಚ್ ತಿಂಗಳಿನಲ್ಲಿ ಹ್ಯುಂಡೈ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ರಿಯಾಯಿತಿ
- Sports
ಐಎಸ್ಎಲ್: ಸಮಬಲ ಸಾಧಿಸಿದ ಗೋವಾ ಎಫ್ಸಿ, ಮುಂಬೈ ಎಫ್ಸಿ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 05ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಎಲ್ಲರನ್ನ ಬಿಟ್ಟು ಸಮೀರಾಚಾರ್ಯ ಅವರಿಗೆ ರಿಯಾಝ್ ಮಸಿ ಬಳಿದಿದ್ದು ಯಾಕೆ.?
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ರಿಯಾಝ್ ಬಾಷಾ ಹಾಗೂ ಸಮೀರಾಚಾರ್ಯ ಕುಚ್ಚಿಕ್ಕು ಗೆಳೆಯರು. ''ಇಡೀ ಮನೆಯಲ್ಲಿ ನಾನು ಇಷ್ಟ ಪಡುವವರು ಇಬ್ಬರೇ... ಒಬ್ರು ಸಮೀರಾಚಾರ್ಯ, ಇನ್ನೊಬ್ಬರು ಜಯಶ್ರೀನಿವಾಸನ್'' ಎಂದು ಹೇಳುತ್ತಿದ್ದವರು ರಿಯಾಝ್.
ಇಂತಿಪ್ಪ ರಿಯಾಝ್ ಅವರೇ ಸಮೀರಾಚಾರ್ಯ ಮುಖಕ್ಕೆ ಮಸಿ ಬಳಿದರು. ಇನ್ನೂ ರಿಯಾಝ್ ಮುಖಕ್ಕೆ 'ಒಂದ್ಕಾಲದ ಗಾರ್ಡನ್ ಏರಿಯಾ ಗುಂಪಿನ ಸದಸ್ಯರಾಗಿದ್ದ' ಚಂದನ್ ಶೆಟ್ಟಿ, ದಿವಾಕರ್ ಹಾಗೂ ನಿವೇದಿತಾ ಮಸಿ ಬಳಿದಿದ್ದರು.
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆದಾಗ ಒಗ್ಗಟ್ಟಿನಿಂದ ಇದ್ದವರ ಪೈಕಿ ಈಗ ಇಷ್ಟೊಂದು ಭಿನ್ನಾಭಿಪ್ರಾಯ ಬಂದಿರುವ ಬಗ್ಗೆ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಪ್ರಶ್ನಿಸಿದರು. ಅದಕ್ಕೆ ರಿಯಾಝ್ ಕೊಟ್ಟ ಸ್ಪಷ್ಟನೆ ಏನ್ ಗೊತ್ತಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಸುದೀಪ್ ಕೇಳಿದ ಪ್ರಶ್ನೆ ಏನು.
''ಆರಂಭದಲ್ಲಿ ಎರಡು ಗುಂಪುಗಳಿತ್ತು. ಈಗಲೂ ಇದ್ಯಾ ಗೊತ್ತಿಲ್ಲ. ನೀವು (ರಿಯಾಝ್) ಗಾರ್ಡನ್ ಏರಿಯಾ ಗುಂಪಿನಲ್ಲಿ ಇದ್ರಿ. ಆ ಗುಂಪಿಗೆ ನೀವೇ ನಾಯಕರು ಎಂಬಂತೆ ಚಟುವಟಿಕೆ ನಡೆಸುತ್ತಿದ್ರಿ. ನಿಮ್ಮ ಐದು ಜನರ ಗುಂಪಿನಲ್ಲಿ ಮೂರು ಮಂದಿ ನಿಮಗೆ ಮಸಿ ಬಳಿಯುತ್ತಾರೆ. ಇನ್ನೊಬ್ಬರಿಗೆ ನೀವು ಮಸಿ ಬಳಿಯುತ್ತೀರಾ. ಏನು ಪಾಠ ಇದೆ ಇದ್ರಲ್ಲಿ.?'' ಎಂದು ರಿಯಾಝ್ ಗೆ ಸುದೀಪ್ ಪ್ರಶ್ನಿಸಿದರು.
ಪರಸ್ಪರ ಹಾರ ಬದಲಾಯಿಸಿಕೊಂಡ ಕುಚ್ಚಿಕು ಗೆಳೆಯರು ರಿಯಾಝ್ ಗೆ ಮಸಿ ಬಳಿದರು.!

ಓಪನ್ ಫೀಡ್ ಬ್ಯಾಕ್ ಕೊಟ್ಟಿದ್ದೇ ಸಮಸ್ಯೆ ಆಯ್ತಾ.?
''ಗುಂಪು ಮಾಡಿದ್ದು ನಿಜ. ನಮ್ಮ ಗುಂಪಿನಲ್ಲಿ ಇರುವವರು ಬೇರೆಯವರ ಬಳಿ ಬೆರಳು ತೋರಿಸಿಕೊಳ್ಳಬಾರದು ಅಂತ ನಾನು ಓಪನ್ ಆಗಿ ಫೀಡ್ ಬ್ಯಾಕ್ ಕೊಡುತ್ತಿದ್ದೆ. ಆದ್ರೆ, ಈ ವಾರ ಮಸಿ ಬಳಿಯಲು ಬಲವಾದ ಕಾರಣ ಯಾರ ಬಳಿಯೂ ಇರಲಿಲ್ಲ'' ಎಂದರು ರಿಯಾಝ್.
ಕಾಲಲ್ಲಿ ಒದ್ದು ಸಮೀರಾಚಾರ್ಯಗೆ ಬೇಷರತ್ ಕ್ಷಮೆ ಕೇಳಿದ ರಿಯಾಝ್

ಮೊದಲೇ ಹೇಳಿದ್ದರಂತೆ
''ಮಸಿ ಬಳಿಯುವ ಮುನ್ನವೇ 'ನಿಮಗೆ ಮಸಿ ಬಳಿಯುತ್ತೇನೆ' ಅಂತ ಸಮೀರಾಚಾರ್ಯ ಅವರಿಗೆ ಹೇಳಿದ್ದೆ. ಅವರಿಗೆ ಒಳ್ಳೆ ಉದ್ದೇಶದಿಂದಲೇ ಮಸಿ ಬಳಿದೆ'' - ರಿಯಾಝ್
ರಿಯಾಝ್ ಔಟ್ ಆಗಿದ್ದು ಯಾಕೆ.? ವೀಕ್ಷಕರೇ ಕೊಟ್ಟ ಹತ್ತು ಕಾರಣಗಳಿವು.!

ಕೊಟ್ಟ ಕಾರಣ ಒಪ್ಪುತ್ತೇನೆ
''ಕ್ಯಾಪ್ಟನ್ ಆಗಿ ಇನ್ನೂ ಚೆನ್ನಾಗಿ ಪರ್ಫಾಮ್ ಮಾಡಬಹುದಿತ್ತು ಅಂತ ರಿಯಾಝ್ ಕಾರಣ ಕೊಟ್ಟರು. ಅದನ್ನ ನಾನು ಸ್ವೀಕರಿಸುತ್ತೇನೆ'' ಎಂದರು ಸಮೀರಾಚಾರ್ಯ

ಎಲಿಮಿನೇಟ್ ಆದ ರಿಯಾಝ್
ನಿಯಮಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದ ರಿಯಾಝ್, ಸದ್ಯ 'ಬಿಗ್ ಬಾಸ್' ಮನೆಯಿಂದ ಔಟ್ ಆಗಿದ್ದಾರೆ.