ಎಲ್ಲ ಗುಟ್ಟು ರಟ್ಟಾಯ್ತು: ಯಾವ ಸೀಕ್ರೆಟ್ ಕೂಡ ಉಳಿದಿಲ್ಲ.!

By Harshitha

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಹನ್ನೊಂದನೇ ವಾರ ಟ್ವಿಸ್ಟ್ ಮೇಲೆ ಟ್ವಿಸ್ಟ್ ಗಳನ್ನ 'ಬಿಗ್ ಬಾಸ್' ನೀಡಿದರು. ಕನ್ಫೆಶನ್ ರೂಮ್ ಒಳಗೆ ಹೋದ ಜಯಶ್ರೀನಿವಾಸನ್, ಅಲ್ಲಿಂದ ವಾಪಸ್ ಬರಲೇ ಇಲ್ಲ.

ಮಧ್ಯರಾತ್ರಿ ಎಲಿಮಿನೇಟ್ ಆದ ಸಮೀರಾಚಾರ್ಯ ವಾರದ ಕೊನೆಯಲ್ಲಿ ವಾಪಸ್ ಬಂದರೆ, ದಿವಾಕರ್ ಔಟ್ ಆದರು. ಒಂದು ವಾರ ಸೀಕ್ರೆಟ್ ರೂಮ್ ನಲ್ಲಿ ಇದ್ದು ಬಂದ್ಮೇಲೆ, ''ಮನೆಗೆ ಹೋಗಿದ್ದೆ'' ಅಂತೆಲ್ಲ ದಿವಾಕರ್ ಓಳು ಬಿಟ್ಟಿದ್ದರು. ಅದನ್ನ ಸ್ಪರ್ಧಿಗಳು ಕೂಡ ನಂಬಿದ್ದರು. ಆದ್ರೆ, ದಿವಾಕರ್ ಗುಟ್ಟಾಗಿ ಇಟ್ಟಿದ್ದ ಸೀಕ್ರೆಟ್ ತುಂಬಾ ದಿನ ಉಳಿಯಲೇ ಇಲ್ಲ. ಸುದೀಪ್ ಮುಂದೆಯೇ ದಿವಾಕರ್ ಗುಟ್ಟು ರಟ್ಟಾಯ್ತು.

'ಬಿಗ್ ಬಾಸ್' ಮನೆಯಲ್ಲಿ ಹನ್ನೊಂದನೇ ವಾರ ಏನೇನ್ ಆಯ್ತು ಎಂಬ ಕ್ಲಾರಿಟಿ ಸದ್ಯ ಎಲ್ಲ ಸ್ಪರ್ಧಿಗಳಿಗೆ ಸಿಕ್ಕಿದೆ. ಮುಂದೆ ಓದಿರಿ...

ಸುದೀಪ್ ಮುಂದೆ ತಗಲಾಕೊಂಡ ದಿವಾಕರ್.!

ಸುದೀಪ್ ಮುಂದೆ ತಗಲಾಕೊಂಡ ದಿವಾಕರ್.!

ಎಲ್ಲ ಸ್ಪರ್ಧಿಗಳ ಕುಟುಂಬದವರಿಗೆ ಕಳೆದ ವಾರ 'ಬಿಗ್ ಬಾಸ್' ಮನೆಯೊಳಗೆ ಎಂಟ್ರಿಕೊಡುವ ಅವಕಾಶ ಇತ್ತು. ಮೂರು ತಿಂಗಳ ಬಳಿಕ ಮನೆಯವರನ್ನ ಭೇಟಿ ಮಾಡಿದ ಅನುಭವ ಹೇಗಿತ್ತು ಎಂದು ಎಲ್ಲರಿಗೂ ಸುದೀಪ್ ಕೇಳಿದಾಗ, ''ನನ್ನ ಹೆಂಡತಿಯನ್ನ ಬಿಟ್ಟು ಮೂರು ತಿಂಗಳು ಇದ್ದದ್ದು ಇದೇ ಮೊದಲು. ಹೀಗಾಗಿ ತುಂಬಾ ಮಾತನಾಡಿದೆ'' ಎಂದುಬಿಟ್ಟು ತಗಲಾಕೊಂಡರು ದಿವಾಕರ್.

ಇಕ್ಕಟ್ಟಿಗೆ ಸಿಲುಕಿಸಿದ ಸುದೀಪ್

ಇಕ್ಕಟ್ಟಿಗೆ ಸಿಲುಕಿಸಿದ ಸುದೀಪ್

''ಕಳೆದ ವಾರ ಮನೆಗೆ ಹೋಗಿ ಬಂದ್ರಲ್ಲ.! ಮನೆಗೆ ಹೋಗಿದ್ರಿ, ಆದ್ರೆ ಹೆಂಡತಿ ಸಿಕ್ಕಿರಲಿಲ್ಲ.! ಓಕೆ'' ಎಂದು ಹೇಳಿ ಅದಾಗಲೇ ಓಳು ಬಿಟ್ಟಿದ್ದ ದಿವಾಕರ್ ಅವರನ್ನ ಇಕ್ಕಟ್ಟಿಗೆ ಸಿಲುಕಿಸಿದರು ದಿವಾಕರ್.

'ಬಿಗ್ ಬಾಸ್' ಮನೆಯೊಳಗೆ ಸುದೀಪ್ ಬಂದಾಗ...

'ಬಿಗ್ ಬಾಸ್' ಮನೆಯೊಳಗೆ ಸುದೀಪ್ ಬಂದಾಗ...

ಇನ್ನೂ 'ಬಿಗ್ ಬಾಸ್' ಮನೆಯೊಳಗೆ ಸುದೀಪ್ ಬಂದಾಗ, ಸೀಕ್ರೆಟ್ ರೂಮ್ ನಲ್ಲಿ ಇದ್ದ ಅನುಭವವನ್ನ ದಿವಾಕರ್ ಅವರೇ ಬಿಚ್ಚಿಟ್ಟರು. ಹಾಗೇ, ಹೊಸ ವರ್ಷದ ದಿನ ವೈನ್ ಗಾಗಿ ದಿವಾಕರ್ ಇಟ್ಟ ಬೇಡಿಕೆಯನ್ನ ಸುದೀಪ್ ಅನುಕರಣೆ ಮಾಡಿದರು. ಅಲ್ಲಿಗೆ, ದಿವಾಕರ್ ಔಟ್ ಆಗಿರಲಿಲ್ಲ.. ಸೀಕ್ರೆಟ್ ರೂಮ್ ನಲ್ಲಿ ಇದ್ದರು ಎಂಬ ಸತ್ಯ ಎಲ್ಲರಿಗೂ ಗೊತ್ತಾಯ್ತು.

ಯಾವುದೇ ಗುಟ್ಟು ಗುಟ್ಟಾಗಿ ಉಳಿದಿಲ್ಲ

ಯಾವುದೇ ಗುಟ್ಟು ಗುಟ್ಟಾಗಿ ಉಳಿದಿಲ್ಲ

ಜಯಶ್ರೀನಿವಾಸನ್ ಎಲಿಮಿನೇಷನ್ ಬಗ್ಗೆ ಕೂಡ ಸುದೀಪ್ ಬಾಯ್ಬಿಟ್ಟರು. ಹಾಗೇ, ಜಯಶ್ರೀನಿವಾಸನ್ ಜೊತೆಗೆ ಸಮೀರಾಚಾರ್ಯ ಸೀಕ್ರೆಟ್ ರೂಮ್ ನಲ್ಲಿ ಇದ್ದದ್ದು ಅದಾಗಲೇ ಸ್ಪರ್ಧಿಗಳಿಗೆ ಗೊತ್ತಾಗಿದೆ. ಹೀಗಾಗಿ, ಸದ್ಯ 'ಬಿಗ್ ಬಾಸ್' ಮನೆಯೊಳಗೆ ಯಾವುದೇ ಗುಟ್ಟು ಗುಟ್ಟಾಗಿ ಉಳಿದಿಲ್ಲ. ಎಲ್ಲವೂ ರಟ್ಟಾಗಿದೆ.!

More from Filmibeat

English summary
Bigg Boss Kannada 5: Week 13: Host Kiccha Sudeep reveals all secrets and twists which happened in Week 11 of #BBK5.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X