For Quick Alerts
  ALLOW NOTIFICATIONS  
  For Daily Alerts

  ಶಾಕ್ ಆಗಲ್ಲ ಅಂದವ್ರೇ ಶಾಕ್ ಆದ್ರು: ರಿಯಾಝ್ ನ ಮಿಸ್ ಮಾಡ್ತಾವ್ರೆ ಆಚಾರ್ಯರು.!

  By Harshitha
  |

  'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಹದಿಮೂರನೇ ವಾರ ಎಲಿಮಿನೇಟ್ ಆಗಿದ್ದು 'ಕಾಮನ್ ಮ್ಯಾನ್' ರಿಯಾಝ್ ಬಾಷಾ. ರಿಯಾಝ್ ಔಟ್ ಆಗಿದ್ದಕ್ಕೆ ವೀಕ್ಷಕರ ಬಳಗದಿಂದ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿದೆ. ರಿಯಾಝ್ ಇಷ್ಟು ಬೇಗ ಔಟ್ ಆಗುವ ಸ್ಪರ್ಧಿಯೇ ಅಲ್ಲ ಎಂದು ಕೆಲವರು ಅಭಿಪ್ರಾಯ ಪಟ್ಟರೆ, ಇನ್ನೂ ಕೆಲವರು ರಿಯಾಝ್ ಔಟ್ ಆಗಿದ್ದು ಒಳ್ಳೇದಾಯ್ತು ಅಂತಿದ್ದಾರೆ.

  ವೀಕ್ಷಕರ ಮಾತು ಹಾಗಿರಲಿ, ''ಬಿಗ್ ಬಾಸ್' ಮನೆಯಿಂದ ಈ ವಾರ ಯಾರು ಔಟ್ ಆದರೆ ನಿಮಗೆ ಶಾಕ್ ಆಗುತ್ತೆ.?'' ಅಂತ ಸಮೀರಾಚಾರ್ಯ ಅವರಿಗೆ ಚಂದನ್ ಶೆಟ್ಟಿ ಪ್ರಶ್ನೆ ಮಾಡಿದ್ದರು. ಆಗ, ''ನಾನು, ನಿವೇದಿತಾ ಹಾಗೂ ರಿಯಾಝ್... ಔಟ್ ಆದರೆ ಏನೂ ಅನಿಸಲ್ಲ. ಶಾಕ್ ಆಗಲ್ಲ'' ಅಂತ ಸಮೀರಾಚಾರ್ಯ ಉತ್ತರಿಸಿದ್ದರು.

  ''ರಿಯಾಝ್ ಔಟ್ ಆದರೆ ಶಾಕ್ ಆಗಲ್ಲ'' ಅಂತ ಹೇಳಿದ್ದ ಸಮೀರಾಚಾರ್ಯ, ಅದೇ ''ರಿಯಾಝ್ ಎಲಿಮಿನೇಟ್ ಆಗಿದ್ದಾರೆ'' ಎಂದು ಸುದೀಪ್ ಘೋಷಿಸಿದಾಗ ಒಂದು ಕ್ಷಣ ಶಾಕ್ ಆದರು.

  ರಿಯಾಝ್ ಔಟ್ ಆಗಿದ್ದು ಯಾಕೆ.? ವೀಕ್ಷಕರೇ ಕೊಟ್ಟ ಹತ್ತು ಕಾರಣಗಳಿವು.!

  ವೀಕ್ಷಕರ ಎಸ್.ಎಂ.ಎಸ್ ಆಧಾರದ ಮೇರೆಗೆ ಬಾಟಂ 2 ತಲುಪಿದ್ದವರು ಸಮೀರಾಚಾರ್ಯ ಹಾಗೂ ರಿಯಾಝ್. ಇಬ್ಬರ ಪೈಕಿ ಸಮೀರ್ ಸೇಫ್ ಆದರು, ರಿಯಾಝ್ ಔಟ್ ಆದರು. ರಿಯಾಝ್ ಎಲಿಮಿನೇಟ್ ಆಗಿದ್ದಕ್ಕೆ ಸಮೀರಾಚಾರ್ಯ ಅವರಿಗೆ ಬೇಸರ ಆಗಿರುವುದಂತೂ ಸತ್ಯ.

  ಸದ್ಯ 'ಬಿಗ್ ಬಾಸ್' ಮನೆಯೊಳಗೆ ರಿಯಾಝ್ ಅವರನ್ನ ಮಿಸ್ ಮಾಡಿಕೊಳ್ಳುತ್ತಿರುವವರು ಸಮೀರಾಚಾರ್ಯ ಮಾತ್ರ.! ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆಯೊಳಗೆ ಸಮೀರಾಚಾರ್ಯ ಜೊತೆಗೆ ರಿಯಾಝ್ ಹೆಚ್ಚು ಕಾಲ ಕಳೆದಿದ್ದರು. ಈಗ ರಿಯಾಝ್ ಇಲ್ಲದ ಕಾರಣ ಸಮೀರಾಚಾರ್ಯ ಅವರಿಗೆ ಏನೋ ಕಳೆದುಕೊಂಡಂತಹ ಭಾವನೆ.

  English summary
  Bigg Boss Kannada 5: Week 14: Sameer Acharya misses his best friend Riyaz Basha, who got eliminated from #BBK5 house last week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X