»   » ಎರಡನೇ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆದ ಶ್ರುತಿ ಪ್ರಕಾಶ್

ಎರಡನೇ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆದ ಶ್ರುತಿ ಪ್ರಕಾಶ್

Posted By:
Subscribe to Filmibeat Kannada

ಕನ್ನಡತಿ ಆಗಿ ಮುಂಬೈನಲ್ಲಿ ಜನಪ್ರಿಯತೆ ಪಡೆದಿರುವ ಗಾಯಕಿ ಹಾಗೂ ನಟಿ ಶ್ರುತಿ ಪ್ರಕಾಶ್ ಎರಡನೇ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.

ಮನೆಯ ಎಲ್ಲ ಸದಸ್ಯರಿಗೂ ಕ್ಯಾಪ್ಟನ್ ಆಗುವ ಅವಕಾಶ ಸಿಗಲಿ ಎಂಬ ಉದ್ದೇಶದಿಂದ 'ಆಡಿಸಿ ನೋಡು ಬೀಳಿಸಿ ನೋಡು' ಎಂಬ ಟಾಸ್ಕ್ ನ 'ಬಿಗ್ ಬಾಸ್' ನೀಡಿದರು.

ಸುರಸುಂದರಿ, ಹೊರನಾಡ ಕನ್ನಡತಿ ಶ್ರುತಿ ಪ್ರಕಾಶ್ ಬಗ್ಗೆ ನಿಮಗೆಷ್ಟು ಗೊತ್ತು.?

Bigg Boss Kannada 5: Week 2 : Shruti Prakash becomes captain

ಟಾಸ್ಕ್ ಅನುಸಾರ ಕೊಡಲಾಗಿರುವ ಚೆಂಡನ್ನು ಎಲ್ಲರೂ ಬ್ಯಾಲೆನ್ಸ್ ಮಾಡಬೇಕಿತ್ತು. ಕೊನೆಯವರೆಗೂ ಚೆಂಡನ್ನು ಬ್ಯಾಲೆನ್ಸ್ ಮಾಡುವಲ್ಲಿ ಶ್ರುತಿ ಪ್ರಕಾಶ್ ಯಶಸ್ವಿ ಆಗಿ ಕ್ಯಾಪ್ಟನ್ ಪಟ್ಟಕ್ಕೇರಿದರು.

ಶ್ರುತಿ ಪ್ರಕಾಶ್ ರವರಿಗೆ ಕೊನೆಯವರೆಗೂ ಉತ್ತಮ ಸ್ಪರ್ಧೆ ನೀಡಿದ್ದು ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್. ಕಡೆಯ ಕ್ಷಣದಲ್ಲಿ ಜಯಶ್ರೀನಿವಾಸನ್ ಚೆಂಡನ್ನು ಕೆಳಗೆ ಬೀಳಿಸಿದರಿಂದ ಶ್ರುತಿ ಪ್ರಕಾಶ್ ಕ್ಯಾಪ್ಟನ್ ಆದರು.

ಶ್ರುತಿ ಪ್ರಕಾಶ್ ಕ್ಯಾಪ್ಟನ್ ಆಗಿರುವುದರಿಂದ ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸೇಫ್ ಆಗಿದ್ದಾರೆ.

English summary
Bigg Boss Kannada 5: Week 2 : Shruti Prakash becomes captain.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X