»   » ಅಷ್ಟರಲ್ಲೇ ಜಸ್ಟ್ ಮಿಸ್ ಆದ ಚಂದನ್: ಈ ವಾರವೂ ಶೆಟ್ರಿಗೆ ತಲೆನೋವಿಲ್ಲ.!

ಅಷ್ಟರಲ್ಲೇ ಜಸ್ಟ್ ಮಿಸ್ ಆದ ಚಂದನ್: ಈ ವಾರವೂ ಶೆಟ್ರಿಗೆ ತಲೆನೋವಿಲ್ಲ.!

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ನಾಲ್ಕನೇ ವಾರದ ನಾಮಿನೇಷನ್ ನಲ್ಲಿ ಚಂದನ್ ಶೆಟ್ಟಿ ಸೇಫ್ | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆಗಿ ಮೂರು ವಾರಗಳು ಕಳೆದಿವೆ. ನಾಲ್ಕನೇ ವಾರದ ನಾಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದೆ. ಆದರೂ, ಇಲ್ಲಿಯವರೆಗೂ ಒಂದೇ ಒಂದು ಬಾರಿ ಕೂಡ ಚಂದನ್ ಶೆಟ್ಟಿ ನಾಮಿನೇಟ್ ಆಗಿಲ್ಲ.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸತತವಾಗಿ ನಾಲ್ಕು ವಾರ ನಾಮಿನೇಟ್ ಆಗದೆ ಸೇಫ್ ಆಗಿರುವ ಏಕೈಕ ವ್ಯಕ್ತಿ ಅಂದ್ರೆ ಅದು ಚಂದನ್ ಶೆಟ್ಟಿ.

ಹಾಗ್ನೋಡಿದ್ರೆ, ಈ ವಾರ ಇಮ್ಯೂನಿಟಿ ಪಡೆಯದೆ, ಯಾರಿಂದ ನಾಮಿನೇಟ್ ಕೂಡ ಆಗದೆ ಇರುವುದು ಚಂದನ್ ಶೆಟ್ಟಿ ಮಾತ್ರ.! ಮುಂದೆ ಓದಿರಿ...

ಇಲ್ಲಿಯವರೆಗೂ ಡೇಂಜರ್ ಝೋನ್ ಗೆ ಬಂದಿಲ್ಲ

ಸೆಲೆಬ್ರಿಟಿ ಸ್ಪರ್ಧಿಗಳ ಜೊತೆಗೆ ಚಂದನ್ ಶೆಟ್ಟಿ ಅಷ್ಟಾಗಿ ಸೇರಲ್ಲ. ಕೃಷಿ ತಾಪಂಡ, ಅನುಪಮಾ ಗೌಡ ಜೊತೆಗೆ ಭಿನ್ನಾಭಿಪ್ರಾಯ ಇದ್ದರೂ, ಇಲ್ಲಿಯವರೆಗೂ ಡೇಂಜರ್ ಝೋನ್ ಗೆ ಚಂದನ್ ಶೆಟ್ಟಿ ಬಂದಿಲ್ಲ.

ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡುವ ಚಂದನ್

ಜನಸಾಮಾನ್ಯ ಸ್ಪರ್ಧಿಗಳ ಜೊತೆಗೆ ಹೆಚ್ಚು ಕಾಲ ಕಳೆಯುವ ಚಂದನ್ ಶೆಟ್ಟಿ, ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದ್ದಾರೆ. ಯಾವುದೇ ವಾದ, ವಿವಾದ, ಗುಂಪನ್ನು ಪ್ರತಿನಿಧಿಸದೆ ಚಂದನ್ ಶೆಟ್ಟಿ ಪ್ರಜ್ಞಾಪೂರ್ವಕವಾಗಿ, ಅಷ್ಟೇ ಸೇಫ್ ಆಗಿ ಆಟ ಆಡುತ್ತಿದ್ದಾರೆ.

ಈ ವಾರವೂ ಚಂದನ್ ಶೆಟ್ಟಿಗೆ ತಲೆಬಿಸಿ ಇಲ್ಲ

ಅಷ್ಟಕ್ಕೂ, ಈ ವಾರ ಚಂದನ್ ಶೆಟ್ಟಿ ರವರನ್ನ ಅನುಪಮಾ ಗೌಡ ನಾಮಿನೇಟ್ ಮಾಡಿದ್ರು. ಆದ್ರೆ, ತಮಗೆ ಸಿಕ್ಕ ಸೂಪರ್ ಅಧಿಕಾರವನ್ನು ಬಳಸಿದ ಸಮೀರಾಚಾರ್ಯ, ಅನುಪಮಾ ಗೌಡ ಮಾಡಿದ ವೋಟುಗಳನ್ನು ರದ್ದುಗೊಳಿಸಿದರು. ಹೀಗಾಗಿ, ಚಂದನ್ ಶೆಟ್ಟಿಗೆ ಈ ವಾರ ಕೂಡ ಎಲಿಮಿನೇಷನ್ ತಲೆಬಿಸಿ ಇಲ್ಲ.

ಮೂರು ವಾರ ಸೇಫ್ ಆಗಿದ್ದ ತೇಜಸ್ವಿನಿ

ನಿಜ ಹೇಳ್ಬೇಕಂದ್ರೆ, ನಟಿ ತೇಜಸ್ವಿನಿ ಕೂಡ ಮೂರು ವಾರಗಳ ಕಾಲ ನಾಮಿನೇಟ್ ಆಗಿರಲಿಲ್ಲ. ಆದ್ರೆ, ನಾಲ್ಕನೇ ವಾರ ತೇಜಸ್ವಿನಿ ಡೇಂಜರ್ ಝೋನ್ ಗೆ ಬಂದಿದ್ದಾರೆ.

English summary
Bigg Boss Kannada 5: Week 4: Chandan Shetty is safe
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada