Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಬಿಗ್ ಬಾಸ್' ಮೋಸ ಮಾಡಿದ್ರಾ.!? ಅನುಪಮಾ ಗೌಡ ಮಾಡಿದ್ದು ಇದೆಂಥಾ ಆರೋಪ.?!

''ಬಿಗ್ ಬಾಸ್' ಮೋಸ ಮಾಡಿದ್ದಾರಂತೆ. ಚಟುವಟಿಕೆಯಲ್ಲಿ ಗೆದ್ದವರನ್ನು ಕ್ಯಾಪ್ಟನ್ ಮಾಡದೆ, ಬೇರೆಯವರನ್ನು ಕ್ಯಾಪ್ಟನ್ ಮಾಡಿದ 'ಬಿಗ್ ಬಾಸ್' ನಿರ್ಧಾರ ಸರಿಯಿಲ್ಲವಂತೆ'' - ಹಾಗಂತ ನಾವು ಹೇಳ್ತಾಯಿಲ್ಲ. ಬದಲಾಗಿ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಸ್ಪರ್ಧಿಯಾಗಿರುವ ಅನುಪಮಾ ಗೌಡ ಹೇಳಿದ್ದಾರೆ.!
ಕ್ಯಾಪ್ಟನ್ ಆಯ್ಕೆಗಾಗಿ ನೀಡಿದ್ದ ಟಾಸ್ಕ್ ನಲ್ಲಿ ಅನುಪಮ ಗೌಡ ವಿಜೇತರಾದರೂ, ಅವರು ಕ್ಯಾಪ್ಟನ್ ಆಗಲಿಲ್ಲ. ಹೀಗಾಗಿ ''ಇದು ಮೋಸ'' ಅಂತ ಅನುಪಮಾ ಗೌಡ ಆರೋಪ ಮಾಡಿದ್ದಾರೆ. ಸಾಲದಕ್ಕೆ 'ಬಿಗ್ ಬಾಸ್'ಗೆ ''ಐ ಹೇಟ್ ಯು'' ಎಂದಿದ್ದಾರೆ.
ಅಷ್ಟಕ್ಕೂ, ಆಗಿದ್ದೇನು ಅಂತ ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

ಕ್ಯಾಪ್ಟನ್ ಆಯ್ಕೆಗಾಗಿ ವಿಶಿಷ್ಟ ಚಟುವಟಿಕೆ
ಈ ವಾರದ ಮನೆಯ ಕ್ಯಾಪ್ಟನ್ ಆಯ್ಕೆಗಾಗಿ 'ಬಿಗ್ ಬಾಸ್' ಒಂದು ಚಟುವಟಿಕೆ ನೀಡಿದ್ದರು. ಗಾರ್ಡನ್ ಏರಿಯಾದಲ್ಲಿ ಹದಿಮೂರು ಬ್ಲಾಕ್ ಗಳಿದ್ದು, ಸ್ಪರ್ಧಿಗಳಿಗೆ ಸಿಕ್ಕ ಚೀಟಿಯ ನಂಬರ್ ಅಧಾರದಲ್ಲಿ ನಿಂತು, ನೀಡಲಾದ ತುಣುಕುಗಳನ್ನ ಉಪಯೋಗಿಸಿ ಭಾವಚಿತ್ರವೊಂದನ್ನು ರಚಿಸಬೇಕಿತ್ತು. ಮನೆಯ ಒಬ್ಬ ಸದಸ್ಯರ ಭಾವಚಿತ್ರವನ್ನ ಯಾವುದೇ ಒಬ್ಬ ಸದಸ್ಯ ಪೂರ್ಣಗೊಳಿಸಿದಾಗ ಚಟುವಟಿಕೆ ಅಲ್ಲಿಗೆ ಮುಗಿಯುತ್ತಿತ್ತು.
ಜಗನ್ ಜೊತೆ ಪ್ರೀತಿ ಮುರಿದು ಬಿದ್ದಿದ್ದೇಕೆ.? ಅನುಪಮಾ ಗೌಡ ಕಣ್ಣೀರಧಾರೆ.!

ಅನುಪಮಾಗೆ ಸಿಕ್ಕಿದ್ದು ರಿಯಾಝ್ ಭಾವಚಿತ್ರ
ಅನುಪಮಾ ಗೌಡಗೆ 1 ನೇ ಬ್ಲಾಕ್ ಸಿಕ್ಕಿದ್ದು, ಅವರು ರಿಯಾಝ್ ಭಾವಚಿತ್ರವನ್ನ ಪೂರ್ಣಗೊಳಿಸಬೇಕಿತ್ತು.
'ಬಿಗ್ ಬಾಸ್' ಮನೆಯಲ್ಲಿದ್ದಾರೆ ಹಾಲು ಕಳ್ಳರು: ಛೀಮಾರಿ ಹಾಕಿದ ವೀಕ್ಷಕರು.!

ಮೊದಲು ಪೂರ್ಣಗೊಳಿಸಿದ ಅನುಪಮಾ
''ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಗಾಗಿ ನೀಡಲಾಗಿದ್ದ ತುಣುಕುಗಳನ್ನು ಉಪಯೋಗಿಸಿ, ಚಟುವಟಿಕೆಯನ್ನ ಅನುಪಮಾ ಮೊದಲು ಪೂರ್ಣಗೊಳಿಸಿದರು. ರಿಯಾಝ್ ಭಾವಚಿತ್ರವನ್ನ ಅನುಪಮಾ ಗೌಡ ಸರಿಯಾಗಿ ಜೋಡಿಸಿದರು. ಹೀಗಾಗಿ, ರಿಯಾಝ್ ಈ ವಾರ ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ'' ಎಂದು 'ಬಿಗ್ ಬಾಸ್' ಘೋಷಿಸಿದರು.
'ಅಕ್ಕ' ಅನುಪಮಾ ಮೇಲೆ ರಿಯಾಝ್ ಗೆ ಕೆಂಡದಷ್ಟು ಕೋಪ.! ಯಾಕೆ.?

ಶಾಕ್ ಆದ ಅನುಪಮಾ ಗೌಡ
ಎರಡನೇ ಬಾರಿ ಕ್ಯಾಪ್ಟನ್ ಆಗುವ ಖುಷಿಯಲ್ಲಿದ್ದ ಅನುಪಮಾಗೆ 'ಬಿಗ್ ಬಾಸ್' ಬಿಗ್ ಶಾಕ್ ಕೊಟ್ಟುಬಿಟ್ಟರು. ''ರಿಯಾಝ್ ಕ್ಯಾಪ್ಟನ್ ಅಗಿ ಆಯ್ಕೆ ಆಗಿದ್ದಾರೆ'' ಎಂದು 'ಬಿಗ್ ಬಾಸ್' ಘೋಷಿಸುತ್ತಿದ್ದಂತೆಯೇ ಅನುಪಮಾ ''ಇದು ಮೋಸ'' ಅಂತ ಹೇಳಲು ಶುರು ಮಾಡಿದರು.
'ಬಿಗ್ ಬಾಸ್' ಮನೆಗೆ ತೆರಳಿದ ನಟಿ ಅನುಪಮಾ ಗೌಡ ಕಣ್ಣೀರಿನ ಕಥೆ ಇದು!

ಇದು ಮೋಸ ತಾನೆ.?
''ಬಿಗ್ ಬಾಸ್' ಇದು ಮೋಸ... ನಾನು ತಾನೆ ಟಾಸ್ಕ್ ಮಾಡಿದ್ದು... ಇವರು (ರಿಯಾಝ್) ಕ್ಯಾಪ್ಟನ್ ಆಗೋಕೆ ನಾನು ಯಾಕೆ ಕಷ್ಟ ಪಡಬೇಕಿತ್ತು.?'' ಎಂದು ಅನುಪಮಾ ಗೌಡ ನಗುತ್ತಲೇ ಕ್ಯಾಮರಾ ಮುಂದೆ ಹೇಳಲು ಶುರು ಮಾಡಿದರು.

ಮೊದಲೇ ರೂಲ್ಸ್ ಹೇಳಬೇಕಿತ್ತು.!
''ಇದು ಮೋಸ ತಾನೆ... ನಾನು ತಾನೆ ಟಾಸ್ಕ್ ನ ಕಂಪ್ಲೀಟ್ ಮಾಡಿದ್ದು, ನಾನು ತಾನೆ ಕ್ಯಾಪ್ಟನ್ ಆಗಬೇಕಿತ್ತು. ರೂಲ್ಸ್ ನ ಮೊದಲೇ ನನಗೆ ಹೇಳಬೇಕಿತ್ತು'' ಎಂದು ಅನುಪಮಾ ಗೌಡ ಕ್ಯಾಮರಾ ಮುಂದೆ ಹೇಳಿದರು.

ಇದು ಮೋಸ... ಇದು ಮೋಸ...
''ಕ್ಯಾಪ್ಟನ್ ಆಗಬೇಕಿತ್ತು ಅಂತ ನನಗೇನೂ ಇರ್ಲಿಲ್ಲ'' ಅಂತ ಶ್ರುತಿ ಬಳಿ ಹೇಳಿದರೂ, ''ಇದು ಮೋಸ... ಇದು ಮೋಸ'' ಅಂತ ಪದೇ ಪದೇ ಕ್ಯಾಮರಾ ಮುಂದೆ ಬಂದು ಅನುಪಮಾ ಹೇಳುತ್ತಿದ್ದರು. ಜೊತೆಗೆ 'ಬಿಗ್ ಬಾಸ್'ಗೆ ''ಐ ಹೇಟ್ ಯು'' ಎಂದುಬಿಟ್ಟರು ಅನುಪಮಾ ಗೌಡ.

ಅನುಪಮಾ ಕಾಲೆಳೆದ ಚಂದನ್
''ನಾನು ಆಲ್ರೆಡಿ ಕ್ಯಾಪ್ಟನ್ ಆಗಿದ್ದೇನೆ. ನನಗೇನೂ ಸಮಸ್ಯೆ ಇಲ್ಲ'' ಅಂತ ಅನುಪಮಾ ಗೌಡ ಹೇಳಿದಾಗ, ''ಆದರೂ ಒಂಥರಾ ಖುಷಿ ಆಗುತ್ತೆ'' ಅಂತ ಚಂದನ್ ಶೆಟ್ಟಿ ಕಾಲೆಳೆದರು.

ಇವರೆಲ್ಲರಿಗೂ ಖುಷಿ ಆಗಿದೆ
ರಿಯಾಝ್ ಕ್ಯಾಪ್ಟನ್ ಆಗಿದ್ದು ಸಮೀರಾಚಾರ್ಯ, ದಿವಾಕರ್, ಜಯಶ್ರೀನಿವಾಸನ್ ಹಾಗೂ ಚಂದನ್ ಶೆಟ್ಟಿಗೆ ಖುಷಿ ಕೊಟ್ಟಿದೆ.