»   » ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿಯೇ.! ಅವರು ಮಾಡಿದ್ರೆ ಮೋಸ, ಇವರು ಮಾಡಿದ್ರೆ.?

ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿಯೇ.! ಅವರು ಮಾಡಿದ್ರೆ ಮೋಸ, ಇವರು ಮಾಡಿದ್ರೆ.?

Posted By:
Subscribe to Filmibeat Kannada
Bigg Boss Kannada Season 5 : ಸೆಲೆಬ್ರಿಟಿ ಸ್ಪರ್ಧಿಗಳ ಪ್ರಕಾರ ಅವರೇ ಸರಿ | Filmibeat Kannada

ಅದು ಕೋಪವೋ ಇಲ್ಲ ತಪ್ಪು ತಿಳುವಳಿಕೆಯೋ ಅಥವಾ ಗೇಮ್ ಪ್ಲಾನೋ... ಗೊತ್ತಿಲ್ಲ. ಒಟ್ನಲ್ಲಿ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸೆಲೆಬ್ರಿಟಿ ಸ್ಪರ್ಧಿಗಳು ಹಾಗೂ ಜನಸಾಮಾನ್ಯ ಸ್ಪರ್ಧಿಗಳ ಮಧ್ಯೆ ಕಂದಕ ಮೂಡಿರುವುದಂತೂ ಸತ್ಯ. ಅವರಿಗೆ ಇವರನ್ನ ಕಂಡ್ರೆ ಆಗಲ್ಲ. ಇವರಿಗೆ ಅವರನ್ನ ಕಂಡ್ರೆ ಆಗ್ಬರಲ್ಲ.!

ಹೀಗಿರುವಾಗಲೇ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಐದನೇ ವಾರ ಓಪನ್ ನಾಮಿನೇಷನ್ ನಡೆಯಿತು. ಸ್ಪರ್ಧಿಗಳ ಭಾವಚಿತ್ರದಿಂದ ನಾಲ್ಕು ಬ್ಲಾಕ್ ಗಳನ್ನು ತೆಗೆದು ಬೆಂಕಿಗಾಹುತಿ ಮಾಡುವ ಮೂಲಕ ನಾಮಿನೇಟ್ ಮಾಡಬೇಕಿತ್ತು. ಇದರಲ್ಲಿ 'ಬಿಗ್ ಬಾಸ್' ಮನೆ ಅಕ್ಷರಶಃ ಇಬ್ಭಾಗ ಆಗಿರುವುದು ಸ್ಪರ್ಧಿಗಳಿಗೆ ಗೋಚರಿಸಿತು. ಜನಸಾಮಾನ್ಯ ಸ್ಪರ್ಧಿಗಳನ್ನ ಸೆಲೆಬ್ರಿಟಿ ಸ್ಪರ್ಧಿಗಳು ಟಾರ್ಗೆಟ್ ಮಾಡಿದರೆ, ಸೆಲೆಬ್ರಿಟಿ ಸ್ಪರ್ಧಿಗಳ ವಿರುದ್ಧ ಜನಸಾಮಾನ್ಯ ಸ್ಪರ್ಧಿಗಳು ವೋಟ್ ಮಾಡಿದರು.

ಆದರೆ, ತಾವು ಯಾರನ್ನ ನಾಮಿನೇಟ್ ಮಾಡಿದ್ವಿ ಎಂಬ ಅರಿವು ಇಲ್ಲದೆ, ಜನಸಾಮಾನ್ಯ ಸ್ಪರ್ಧಿಗಳು ಮಾತ್ರ ನಮ್ಮನ್ನೇ ಟಾರ್ಗೆಟ್ ಮಾಡಿದರು ಎಂದು ಸೆಲೆಬ್ರಿಟಿ ಸ್ಪರ್ಧಿಗಳು ಚರ್ಚೆ ಮಾಡುತ್ತಿದ್ದರು.! ಮುಂದೆ ಓದಿರಿ....

ಮನೆ ಇಬ್ಭಾಗ ಆಗಿದೆ.!

ಓಪನ್ ನಾಮಿನೇಷನ್ ಪ್ರಕ್ರಿಯೆ ಮುಗಿದ ಬಳಿಕ, ''ಎಷ್ಟು ಬೇಡ, ಬೇಡ ಅಂತ ಹೇಳಿದ್ರೂ... 'ಬಿಗ್ ಬಾಸ್' ಮನೆ ಎರಡು ಭಾಗ ಆಗ್ಹೋಗಿದೆ'' ಅಂತ ಸಿಹಿ ಕಹಿ ಚಂದ್ರು ಕಾಮೆಂಟ್ ಮಾಡಿದರು.

ಚಾಕಲೇಟ್ ಕಳ್ಳರು, ಇವರೆಂಥಾ ಸೆಲೆಬ್ರಿಟಿಗಳು.! 'ಚೀಪ್' ಅವರೋ.. ಇವರೋ..?

ದಡ್ಡರಾಗುತ್ತಿದ್ದೇವೆ.!

''ಇಬ್ಭಾಗ ಆಗ್ಹೋಗಿದೆ. ಅದನ್ನ ಬದಲಾಯಿಸಲು ಆಗಲ್ಲ. ಬದಲಾಯಿಸುವ ಪ್ರಯತ್ನದಲ್ಲಿ ನಾವು ದಡ್ಡರಾಗುತ್ತಿದ್ದೇವೆ'' ಎಂದು ಸಿಹಿ ಚಂದ್ರುಗೆ ಜಗನ್ನಾಥ್ ಹೇಳಿದರು. ಜೊತೆಗೆ, ''ಪ್ರತಿ ವಾರ ಓಪನ್ ನಾಮಿನೇಷನ್ ಇದ್ದರೆ ಚೆನ್ನಾಗಿರುತ್ತೆ. ಆದ್ರೆ ಇರಲ್ಲ ಅಂದುಕೊಳ್ಳುತ್ತೇನೆ'' ಎಂದೂ ಹೇಳಿದರು.

ಜಗನ್ ಅರಿವಿಗೆ ಬರಲಿಲ್ವಾ.?

''ಕ್ಲೀನ್ ಆಗಿ ಅವರೆಲ್ಲರೂ (ಜನಸಾಮಾನ್ಯ ಸ್ಪರ್ಧಿಗಳು) ಯಾರ ವಿರುದ್ಧ ಯಾರು ವೋಟ್ ಮಾಡಬೇಕು ಅಂತ ಅಲ್ಲಲ್ಲೇ ಹಿಡಿದುಕೊಂಡರು'' ಎಂದು ಜಗನ್ನಾಥ್ ಹೇಳಿದರು. ಆದ್ರೆ, ತಮ್ಮ ಗುಂಪು (ಸೆಲೆಬ್ರಿಟಿ ಸ್ಪರ್ಧಿ) ಕೂಡ ಜನಸಾಮಾನ್ಯ ಸ್ಪರ್ಧಿಗಳನ್ನ ಟಾರ್ಗೆಟ್ ಮಾಡಿದ್ದು ಅವರ ಅರಿವಿಗೆ ಬರಲಿಲ್ವಾ.?

ಚಂದ್ರುಗ್ಯಾಕೆ ಇಷ್ಟೊಂದು ಅನುಮಾನ .? 'ಬಿಗ್ ಬಾಸ್' ಯಾರಿಗೆ ಯಾಕೆ ಮೋಸ ಮಾಡ್ತಾರೆ.?

ಗಮನಿಸಿದ ಚಂದ್ರು

''ನಾವು ಕೂಡ ಅವರ ಮೇಲೆ ಡಾಮಿನೇಟ್ ಮಾಡಿದ್ವಿ. ನಾವು ಕೂಡ ಅವರನ್ನೇ ನಾಮಿನೇಟ್ ಮಾಡಿದ್ದು'' ಎಂದು ವಾಸ್ತವವನ್ನ ಸಿಹಿ ಕಹಿ ಚಂದ್ರು ವಿವರಿಸಿದರು.

'ಬಿಗ್ ಬಾಸ್' ಮನೆಯಲ್ಲಿ ಬೆಂಕಿಗೆ ಬಿದ್ದ ಅತಿ ಹೆಚ್ಚು ಮುಖಗಳಿವು.!

ಕೊಟ್ಟ ಕಾರಣ ಸರಿ ಇರಲಿಲ್ವಂತೆ.!

ಜನಸಾಮಾನ್ಯ ಸ್ಪರ್ಧಿಗಳು, ಸೆಲೆಬ್ರಿಟಿ ಸ್ಪರ್ಧಿಗಳನ್ನು ನಾಮಿನೇಟ್ ಮಾಡುವಾಗ ಅವರು ಕೊಟ್ಟ ಕಾರಣಗಳು ಸರಿಯಿರಲಿಲ್ಲ ಅಂತ ಆಶಿತಾ ಹೇಳ್ತಾರೆ. ಹಾಗಾದ್ರೆ, ಸೆಲೆಬ್ರಿಟಿ ಸ್ಪರ್ಧಿಗಳು ಕೊಟ್ಟ ಕಾರಣ ಸರಿ ಇತ್ತೇ.? ವೀಕ್ಷಕರೇ ನಿರ್ಧಾರ ಮಾಡಬೇಕು.!

ಇದು ಮೋಸ ಅಂತೆ.!

''ನಾವು ನಾಮಿನೇಟ್ ಮಾಡಿದ್ವಿ ಅಂತ ಅವರು ನಮ್ಮನ್ನ ನಾಮಿನೇಟ್ ಮಾಡಿದರು. ಅದು ಮೋಸ'' ಅಂತ ಅನುಪಮಾ ಗೌಡ ಉದ್ಗಾರ ಮಾಡಿದರು. ಹಾಗಾದ್ರೆ, ಸೆಲೆಬ್ರಿಟಿ ಸ್ಪರ್ಧಿಗಳು ಮಾಡಿದೆಲ್ಲವೂ ನ್ಯಾಯಸಮ್ಮತವಾಗಿತ್ತು ಅಂತ ನಿಮಗೆ ಅನಿಸುತ್ತದೆಯೇ.? ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ... ನಿಮ್ಮ ಫಿಲ್ಮಿಬೀಟ್ ಕನ್ನಡ ಫೇಸ್ ಬುಕ್ ಪುಟವನ್ನ ಲೈಕ್ ಮಾಡಿ ಕಾಮೆಂಟ್ ಮಾಡಿ....

English summary
Bigg Boss Kannada 5: Week 5: Are celebrity contestants right on their part.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada