»   » ಅದೃಷ್ಟವಶಾತ್ ಕ್ಯಾಪ್ಟನ್ ಆದ ಚಂದನ್ ಶೆಟ್ಟಿ: ಈ ವಾರ ಕೂಡ ಸೇಫ್.!

ಅದೃಷ್ಟವಶಾತ್ ಕ್ಯಾಪ್ಟನ್ ಆದ ಚಂದನ್ ಶೆಟ್ಟಿ: ಈ ವಾರ ಕೂಡ ಸೇಫ್.!

Posted By:
Subscribe to Filmibeat Kannada
Bigg Boss Season 05 : ಅದೃಷ್ಟವಶಾತ್ ಕ್ಯಾಪ್ಟನ್ ಆದ ಚಂದನ್ ಶೆಟ್ಟಿ: ಈ ವಾರ ಕೂಡ ಸೇಫ್.! | Filmibeat Kannada

ಇದಕ್ಕೆ ಅದೃಷ್ಟ ಎನ್ನಬೇಕೋ ಅಥವಾ ಪ್ರಜ್ಞೆಯಿಂದ ಆಟ ಆಡುತ್ತಿರುವುದರ ಪ್ರತಿಫಲವೋ ಗೊತ್ತಿಲ್ಲ. ಒಟ್ನಲ್ಲಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸತತ ಐದು ವಾರ ನಾಮಿನೇಟ್ ಆಗದೆ ಫುಲ್ ಸೇಫ್ ಆಗಿರುವ ಏಕೈಕ ಸ್ಪರ್ಧಿ ಅಂದ್ರೆ ಅದು ಚಂದನ್ ಶೆಟ್ಟಿ.!

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಇತಿಹಾಸದಲ್ಲಿ ಇಲ್ಲಿಯವರೆಗೂ ಒಮ್ಮೆ ಕೂಡ ಚಂದನ್ ಶೆಟ್ಟಿ ನಾಮಿನೇಟ್ ಆಗಿಲ್ಲ.

ನಾಲ್ಕು ವಾರಗಳ ಕಾಲ ಇಮ್ಯೂನಿಟಿ ಪಡೆಯದೆ, ಯಾರಿಂದಲೂ ನಾಮಿನೇಟ್ ಆಗದ ಚಂದನ್ ಶೆಟ್ಟಿ, ಐದನೇ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿ ನಾಮಿನೇಷನ್ ನಿಂದ ಹೊರಗುಳಿದಿದ್ದಾರೆ. ಮುಂದೆ ಓದಿರಿ....

ಕ್ಯಾಪ್ಟನ್ ಆದ ಚಂದನ್ ಶೆಟ್ಟಿ

ಕ್ಯಾಪ್ಟನ್ ಆಯ್ಕೆಗಾಗಿ 'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆಯಲ್ಲಿ ವಿಜೇತರಾಗಿ ಈ ವಾರದ ಕ್ಯಾಪ್ಟನ್ ಆದರು ಚಂದನ್ ಶೆಟ್ಟಿ.

ಅಷ್ಟರಲ್ಲೇ ಜಸ್ಟ್ ಮಿಸ್ ಆದ ಚಂದನ್: ಈ ವಾರವೂ ಶೆಟ್ರಿಗೆ ತಲೆನೋವಿಲ್ಲ.!

'ಬಿಗ್ ಬಾಸ್' ನೀಡಿದ್ದ ಟಾಸ್ಕ್ ಏನು.?

ಕ್ಯಾಪ್ಟನ್ ಆಯ್ಕೆಗಾಗಿ 'ಬಿಗ್ ಬಾಸ್' ವಿಶೇಷ ಚಟುವಟಿಕೆಯೊಂದನ್ನ ನೀಡಿದ್ದರು. ಇದರ ಅನುಸಾರ, ಗಾರ್ಡನ್ ಏರಿಯಾದಲ್ಲಿ ಹಾಕಲಾಗಿದ್ದ ವೃತ್ತಾಕಾರದ ಗುರುತಿನ ಮೇಲೆ ಕುಳಿತುಕೊಂಡು, ಪ್ರತಿ ಬಾರಿ ಹಾಡು ಆರಂಭವಾದ ಕೂಡಲೆ, ನೀಡಲಾಗಿರುವ ಪುಟ್ಟ ಪೆಟ್ಟಿಗೆಯನ್ನು ಸದಸ್ಯರು ಒಬ್ಬರಿಂದ ಒಬ್ಬರಿಗೆ ಹಸ್ತಾಂತರಿಸಬೇಕಿತ್ತು. ಹಾಡು ನಿಂತ ತಕ್ಷಣ ಹಸ್ತಾಂತರ ಮಾಡುವುದನ್ನು ನಿಲ್ಲಿಸಬೇಕಿತ್ತು. ಹಾಡು ನಿಂತ ತಕ್ಷಣ, ಪೆಟ್ಟಿಗೆ ಯಾವ ಸದಸ್ಯರ ಕೈಯಲ್ಲಿ ಇರುತ್ತದೆಯೋ, ಆ ಸದಸ್ಯರು ಈ ಚಟುವಟಿಕೆಯಿಂದ ಹೊರಬರಬೇಕಿತ್ತು.

'ಬಿಗ್ ಬಾಸ್' ಮನೆಯಲ್ಲಿ ದಿವಾಕರ್ ಗೆ ಆಪ್ತ ಗೆಳೆಯ ಯಾರು ಅಂತೀರಾ.?

ಗೆದ್ದ ಚಂದನ್ ಶೆಟ್ಟಿ

ವಿಶೇಷ ಚಟುವಟಿಕೆಯಲ್ಲಿ ಕೊನೆಯವರೆಗೂ ಉಳಿದುಕೊಂಡು ಗೆಲುವಿನ ನಗೆ ಬೀರಿದ ಚಂದನ್ ಶೆಟ್ಟಿ ಕ್ಯಾಪ್ಟನ್ ಆದರು.

ಕ್ಷಣಾರ್ಧದಲ್ಲಿ ಸೇಫ್ ಆಗ್ಹೋದ ರಿಯಾಝ್: ಬೆಂಕಿಗಾಹುತಿ ಮಾಡಿದವರಿಗೆ ಮುಖಭಂಗ.!

ಚಂದನ್ ಶೆಟ್ಟಿ ಫುಲ್ ಸೇಫ್

ಸಾಮಾನ್ಯವಾಗಿ ಕ್ಯಾಪ್ಟನ್ ಆದ 'ಬಿಗ್ ಬಾಸ್' ಮನೆಯ ಸದಸ್ಯರನ್ನ ಬೇರಾರೂ ನಾಮಿನೇಟ್ ಮಾಡುವಂತಿಲ್ಲ. ಹೀಗಾಗಿ ಈ ವಾರವೂ ಚಂದನ್ ಶೆಟ್ಟಿಗೆ ಎಲಿಮಿನೇಷನ್ ಭಯ ಇಲ್ಲ.

English summary
Bigg Boss Kannada 5: Week 5: Chandan Shetty becomes captain

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada