»   » ಕೃಷಿ ಔಟ್ ಆಗಿದ್ದಕ್ಕೆ ಸುದೀಪ್ ಕಾರಣ.! ಇದೇನಿದು ಹೊಸ ಆರೋಪ.?

ಕೃಷಿ ಔಟ್ ಆಗಿದ್ದಕ್ಕೆ ಸುದೀಪ್ ಕಾರಣ.! ಇದೇನಿದು ಹೊಸ ಆರೋಪ.?

Posted By:
Subscribe to Filmibeat Kannada
Bigg Boss Kannada Season 5 : ಕೃಷಿ ತಾಪಂಡ ಔಟ್ ಆಗಿದ್ದಾಕೆ ಸುದೀಪ್ ಕಾರಣವಂತೆ | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಐದನೇ ವಾರ ನಟಿ ಕೃಷಿ ತಾಪಂಡ ಔಟ್ ಆದರು. 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೊದಲ ದಿನದಿಂದಲೂ, ನಟಿ ಕೃಷಿ ತಾಪಂಡ ಸೆಲೆಬ್ರಿಟಿ ಸ್ಪರ್ಧಿಗಳ ಜೊತೆ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.

ಅನುಪಮಾ ಗೌಡ, ಸಿಹಿ ಕಹಿ ಚಂದ್ರು, ಜಗನ್, ಆಶಿತಾ ಜೊತೆಗೆ ಹೆಚ್ಚು ಕಾಲ ಇರುತ್ತಿದ್ದ ಕೃಷಿ, ಅಡುಗೆ ಮನೆ ವಿಚಾರಕ್ಕೆ ಅನೇಕ ಬಾರಿ ದನಿ ಎತ್ತಿದ್ದಾರೆ. ಟಾಸ್ಕ್ ಗಳಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದ ನಟಿ ಕೃಷಿ ತಾಪಂಡ 'ಬಿಗ್ ಬಾಸ್' ಮನೆಯಿಂದ ಔಟ್ ಆಗಲು ಕಾರಣ ಏನು.?

'ಬಿಗ್' ಮನೆಯಿಂದ ಎಲಿಮಿನೇಟ್ ಆದರು ಕೃಷಿ ತಾಪಂಡ.!

ನಟಿ ಕೃಷಿ ತಾಪಂಡ ಔಟ್ ಆಗಲು ಅನೇಕ ಕಾರಣಗಳು ಇರಬಹುದು. ಆದ್ರೆ, ತಾವು ಔಟ್ ಆಗಲು ಸುದೀಪ್ ಕಾರಣ ಅಂತ ಸ್ವತಃ ಕೃಷಿ 'ಸೂಪರ್ ಸಂಡೆ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ಆರೋಪ ಮಾಡಿದ್ದಾರೆ. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ....

ಸುದೀಪ್ ಜೊತೆ ಕೃಷಿ ಮಾತುಕತೆ

'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೆ, 'ಸೂಪರ್ ಸಂಡೆ ವಿತ್ ಸುದೀಪ್' ಕಾರ್ಯಕ್ರಮದ ವೇದಿಕೆ ಮೇಲೆ ಕೃಷಿ ಪ್ರತ್ಯಕ್ಷವಾದರು. ಸುದೀಪ್ ಜೊತೆ ಕೃಷಿ ತಾಪಂಡ ಮಾತುಕತೆ ನಡೆಸುತ್ತಿರುವಾಗಲೇ....

ಕೃಷಿ ಮಾಡಿದ ಆರೋಪ ಏನು.?

ಸುದೀಪ್ - ''ಜನರು ನೋಡುತ್ತಿರುತ್ತಾರೆ, ಕೇಳಿ.... 'ನನಗೆ ಯಾಕೆ ವೋಟ್ ಮಾಡಿಲ್ಲ. ನನ್ನನ್ನ ಯಾಕೆ ಕರೆಯಿಸಿಕೊಂಡ್ರಿ' ಅಂತ''

ಕೃಷಿ ತಾಪಂಡ - ''ನಾನು ಯಾಕೆ ಔಟ್ ಆದೆ ಎಂಬುದರ ಬಗ್ಗೆ ನನಗೆ ಈಗಲೂ ಕಾರಣ ಗೊತ್ತಾಗುತ್ತಿಲ್ಲ''

ಸುದೀಪ್ - ''ಯಾಕೆ ಇರಬಹುದು ಅನ್ಸುತ್ತೆ.?''

ಕೃಷಿ - ''ನೀವು ನನ್ನನ್ನ ಶನಿವಾರ ಮಾತನಾಡಿಸುತ್ತಲೇ ಇರಲಿಲ್ಲ. ಅದಕ್ಕೆ ಅನ್ಸುತ್ತೆ.!''

ಸುದೀಪ್ ಏನಂದರು.?

''ನೀವು ನನ್ನನ್ನ ಶನಿವಾರ ಮಾತನಾಡಿಸುತ್ತಲೇ ಇರಲಿಲ್ಲ. ಅದಕ್ಕೆ ನಾನು ಔಟ್ ಆದೆ'' ಎಂದು ಕೃಷಿ ನೇರವಾಗಿ ಬೆಟ್ಟು ಮಾಡಿದ ನಂತರ ''ನಾನಾ..?! ಎಲ್ಲವೂ ನನ್ನ ಮೇಲೆ ಬಂದು ಬಿಡುತ್ತೆ. ನಾನು ಮಾತಾಡಿಸಿಲ್ಲ. ಅದಕ್ಕೆ ಕೃಷಿ ಹೊರಗೆ ಬಂದರು ಅಂತ....'' ಎಂದು ಸುದೀಪ್ ಹೇಳಿದರು.

ಕೃಷಿ ಕಾಣಿಸಿಕೊಳ್ಳಲಿಲ್ಲ ಅಂದ್ರೆ ಸುದೀಪ್ ಏನ್ ಮಾಡೋಕೆ ಸಾಧ್ಯ.?

''ನೀವೇ ನನ್ನನ್ನ ಮಾತನಾಡಿಸಿಲ್ಲ ಅಂದರೆ ಕನ್ನಡ ಜನತೆ ಹೇಗೆ ನನ್ನನ್ನ ಒಪ್ಪಿಕೊಳ್ಳುತ್ತಾರೆ'' ಎಂದು ಕೃಷಿ ಹೇಳಿದಕ್ಕೆ, ''ಅಲ್ಲ ರೀ... ನಾನು ಯಾಕೆ ನಿಮ್ಮ ಹತ್ತಿರ ಮಾತನಾಡಲಿಲ್ಲ ಅಂತ ನಾನೇ ಹೇಳಿದೆ. ಅದಕ್ಕೆ ನೀವು ಏನಂತ ಹೇಳಿದ್ರಿ'' ಎಂದು ಸುದೀಪ್ ಪ್ರಶ್ನಿಸಿದರು. ಅದಕ್ಕೆ ಕೃಷಿ ಉತ್ತರ ಕೊಟ್ಟಿದ್ದು ಹೀಗೆ - ''ಇಡೀ ವಾರ ನಾನು ಅಷ್ಟಾಗಿ ಕಾಣಿಸಿಕೊಂಡಿಲ್ಲ. ಅದಕ್ಕೆ...''

ಕೃಷಿ ಕೊಟ್ಟ ಸಮಜಾಯಿಷಿ ಏನು.?

''ಕಾಣಿಸಿಕೊಂಡಿಲ್ಲ ಅಂದ್ಮೇಲೆ ನಾನು ಏನಂತ ಮಾತನಾಡಿಸಲಿ.?'' ಎಂದು ಸುದೀಪ್ ತಿರುಗೇಟು ನೀಡಿದರು. ''ಕಾಣಿಸಿಕೊಳ್ಳುವುದಕ್ಕೆ ಏನು ಮಾಡಬೇಕು ಅನ್ನೋದೇ ನನಗೆ ಗೊತ್ತಾಗುತ್ತಿರಲಿಲ್ಲ'' ಎಂದು ಕೃಷಿ ಸಮಜಾಯಿಷಿ ನೀಡಿದರು. ''ಮಿಕ್ಕವರು ಚೆನ್ನಾಗಿ ಆಡುತ್ತಿದ್ದರು. ನೀವು ಅವರ ಪಕ್ಕ ಕೂತಿರುತ್ತಿದ್ರಿ ಅಷ್ಟೇ'' ಎಂದುಬಿಟ್ಟರು ಸುದೀಪ್.

English summary
Bigg Boss Kannada 5: Week 5: Did Krishi Thapanda blame Sudeep for her elimination.?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada