»   » ಸಿಹಿ ಕಹಿ ಚಂದ್ರು ಅಸಲಿಯತ್ತು ಬಟಾಬಯಲು ಮಾಡಿದ ಕೃಷಿ ತಾಪಂಡ.!

ಸಿಹಿ ಕಹಿ ಚಂದ್ರು ಅಸಲಿಯತ್ತು ಬಟಾಬಯಲು ಮಾಡಿದ ಕೃಷಿ ತಾಪಂಡ.!

Posted By:
Subscribe to Filmibeat Kannada
Bigg Boss Kannada 5: ಸಿಹಿ ಕಹಿ ಚಂದ್ರು ಅಸಲಿಯತ್ತು ಬಟಾಬಯಲು ಮಾಡಿದ ಕೃಷಿ ತಾಪಂಡ | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸಿಹಿ ಕಹಿ ಚಂದ್ರು ಅತಿ ಹಿರಿಯ ಸ್ಪರ್ಧಿ. ಇದೇ ಕಾರಣಕ್ಕೆ ಸಿಹಿ ಕಹಿ ಚಂದ್ರು ಕಂಡ್ರೆ ಎಲ್ಲರಿಗೂ ಗೌರವ. ರುಚಿ ರುಚಿಯಾದ ಅಡುಗೆ ಮಾಡಿ ಕೊಡುವ ಸಿಹಿ ಕಹಿ ಚಂದ್ರು ರವರ ಮಾತನ್ನ ಯಾರೂ ಅಲ್ಲಗೆಳೆಯುವುದೂ ಇಲ್ಲ.

'ಬಿಗ್ ಬಾಸ್' ಮನೆಯಲ್ಲಿ ಯಾವುದೇ ವಿವಾದಗಳಿಗೆ ಸಿಲುಕದೆ ಸೇಫ್ ಆಗಿ ಆಡುತ್ತಿರುವ ಸಿಹಿ ಕಹಿ ಚಂದ್ರು ರವರ ಅಸಲಿಯತ್ತನ್ನ ಎಲಿಮಿನೇಟ್ ಅದ ಸ್ಪರ್ಧಿ ಕೃಷಿ ತಾಪಂಡ ಬಯಲು ಮಾಡಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿ ಹಾಲು ಮುಚ್ಚಿಟ್ಟು, ಸಮೀರಾಚಾರ್ಯ ರವರಿಗೆ ಒಂದು ಲೋಟ ಹಾಲು ಕೊಡದ ವಿಚಾರ ದೊಡ್ಡ ವಿವಾದ ಆಗಿದ್ದು ನಿಮಗೆಲ್ಲ ಗೊತ್ತಿರಲೇಬೇಕು. ಅಂದು ''ಹಾಲು ಮುಚ್ಚಿಟ್ಟ ಸಂಗತಿ ಗೊತ್ತೇ ಇರಲಿಲ್ಲ'' ಎಂದು ಸುದೀಪ್ ಮುಂದೆ ಸಿಹಿ ಕಹಿ ಚಂದ್ರು ಹೇಳಿದ್ದರು. ಆದ್ರೆ, ''ಹಾಲು ಮುಚ್ಚಿಡುವ ಪ್ಲಾನ್ ನಲ್ಲಿ ಸಿಹಿ ಕಹಿ ಚಂದ್ರು ಇದ್ದರು'' ಎಂಬ ಸತ್ಯವನ್ನ ಇಂದು ಕೃಷಿ ತಾಪಂಡ ಹೊರ ಹಾಕಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿದ್ದಾರೆ ಹಾಲು ಕಳ್ಳರು: ಛೀಮಾರಿ ಹಾಕಿದ ವೀಕ್ಷಕರು.!

ಇನ್ನೂ ಅಡುಗೆ ಮನೆಯಲ್ಲಿ ಬಿದ್ದಿದ್ದ ಈರುಳ್ಳಿ ಸಿಪ್ಪೆಯಿಂದಾಗಿ, ಮಾಡದ ತಪ್ಪಿಗೆ ಸಮೀರಾಚಾರ್ಯ, ಕೃಷಿ ತಾಪಂಡ ರಿಂದ ಬೈಯ್ಯಿಸಿಕೊಂಡರು. ಅದು ತಪ್ಪು ತಮ್ಮದಾಗಿದ್ದರೂ, ಅದನ್ನ ಒಪ್ಪಿಕೊಳ್ಳದೆ ಸಮೀರಾಚಾರ್ಯ-ಕೃಷಿ ವಾಕ್ಸಮರವನ್ನ ಸೈಲೆಂಟ್ ಆಗಿ ಸಿಹಿ ಕಹಿ ಚಂದ್ರು ನೋಡುತ್ತಿದ್ದರು.

ಹಾಲಿಗಾಗಿ ಕೋಲಾಹಲ: ಹಾಲು ಮುಚ್ಚಿಟ್ಟ ಮಹಾನುಭಾವರಿಗೆ ಸುದೀಪ್ ಚಾಟಿಯೇಟು.!

ಸಿಹಿ ಕಹಿ ಚಂದ್ರು ರವರ ಈ ವರ್ತನೆ 'ಬಿಗ್ ಬಾಸ್' ಮನೆಯಿಂದ ಐದನೇ ವಾರ ಹೊರಬಿದ್ದ ಸ್ಪರ್ಧಿ ಕೃಷಿ ತಾಪಂಡ ಅವರಿಗೆ ಬೇಸರ ತಂದಿದೆ. ಈ ಬಗ್ಗೆ ಸುದೀಪ್ ಮುಂದೆ ಕೃಷಿ ತಾಪಂಡ ಮಾತನಾಡಿದ್ದು ಹೀಗೆ...

ಸಿಹಿ ಕಹಿ ಚಂದ್ರು ಬಗ್ಗೆ ಕೃಷಿ ಮಾತು

''ಯಾರೇ ಹೊರಗಡೆ ಹೋದಾಗಲೂ ಸಿಹಿ ಕಹಿ ಚಂದ್ರು ಕಣ್ಣಲ್ಲಿ ನೀರು ಇರಲಿಲ್ಲ. ಆದ್ರೆ, ನಾನು ಹೊರಗಡೆ ಬಂದಾಗ ಅವರ ಕಣ್ಣಲ್ಲಿ ನೀರು ಇತ್ತು. ಅವರು ನನ್ನನ್ನ ಮಿಸ್ ಮಾಡಿಕೊಳ್ಳಬಹುದು'' ಎಂದು ಸಿಹಿ ಕಹಿ ಚಂದ್ರು ಬಗ್ಗೆ 'ಸೂಪರ್ ಸಂಡೆ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ಕೃಷಿ ತಾಪಂಡ ಮಾತನಾಡಿಸಲು ಆರಂಭಿಸಿದರು.

'ಬಿಗ್' ಮನೆಯಿಂದ ಎಲಿಮಿನೇಟ್ ಆದರು ಕೃಷಿ ತಾಪಂಡ.!

ಸೇಫ್ ಆಗಲು ಟ್ರೈ ಮಾಡುತ್ತಿದ್ದಾರೆ

''ಸಿಹಿ ಕಹಿ ಚಂದ್ರು ಅವರಿಗೆ ನಾನು ಗೌರವ ಕೊಡುತ್ತೇನೆ. ಆದ್ರೆ, ಕೆಲವು ಸನ್ನಿವೇಶಗಳಲ್ಲಿ ಅವರು ತುಂಬಾ ಸೇಫ್ ಆಗಲು ಟ್ರೈ ಮಾಡುತ್ತಿದ್ದಾರೆ. ಜಗಳ ಅಥವಾ ಪ್ರಾಬ್ಲಂ ಆದಾಗ ಅವರು ಕಾಣಿಸಿಕೊಳ್ಳುವುದಿಲ್ಲ'' ಎಂದು ಕೃಷಿ ತಾಪಂಡ ಕಾಮೆಂಟ್ ಮಾಡಿದರು.

ಚಾಕಲೇಟ್ ಕಳ್ಳರು, ಇವರೆಂಥಾ ಸೆಲೆಬ್ರಿಟಿಗಳು.! 'ಚೀಪ್' ಅವರೋ.. ಇವರೋ..?

ಹಾಲು ಮುಚ್ಚಿಡುವ ವಿಚಾರ ಸಿಹಿ ಕಹಿ ಚಂದ್ರುಗೆ ಗೊತ್ತಿತ್ತು.!

''ಹಾಲನ್ನ ಮುಚ್ಚಿಟ್ಟ ಮೇಲೆ ದೊಡ್ಡ ವಿವಾದ ಆಯ್ತು. ಆದ್ರೆ, ಹಾಲನ್ನ ಮುಚ್ಚಿಟ್ಟ ಮೊದಲ ದಿನವೇ ಚಂದ್ರು, ಜಗನ್, ಆಶಿತಾ, ಅನುಪಮಾ ಗೌಡಗೆ ವಿಷಯ ಗೊತ್ತಿತ್ತು'' - ಕೃಷಿ ತಾಪಂಡ, ನಟಿ

ಅಂದು ಹಾಲು ಮುಚ್ಚಿಟ್ಟರು, ಇಂದು ಚಾಕಲೇಟ್ ಕದ್ದು ತಿಂದರು: ಅನುಪಮಾ ಏನಿದೆಲ್ಲಾ.?

ದನಿ ಎತ್ತಲಿಲ್ಲ

''ಇದೇ ವಿಚಾರದ ಬಗ್ಗೆ ಸುದೀಪ್ ಟಾಪಿಕ್ ತೆಗೆಯುತ್ತಾರೆ ಅಂತ ಚರ್ಚೆ ಶುರು ಆದಾಗ, ''ನಾವು ಹೀಗೆ ಮಾಡಬಾರದಿತ್ತು. ನನಗೆ ಈ ವಿಷಯ ಗೊತ್ತಿರಲಿಲ್ಲ'' ಅಂತ ಸಿಹಿ ಕಹಿ ಚಂದ್ರು ಹೇಳಿದರು. ಆದ್ರೆ, ಹಾಲನ್ನ ಮುಚ್ಚಿಡುವ ಪ್ಲಾನ್ ನಲ್ಲಿ ಸಿಹಿ ಕಹಿ ಚಂದ್ರು ಇದ್ದರು. ಇದು ನಿಜ. ಆದ್ರೆ, ಅದೇ ದೊಡ್ಡ ಪ್ರಾಬ್ಲಂ ಆದಾಗ ಅವರು ದನಿ ಎತ್ತಲಿಲ್ಲ. ಸೈಲೆಂಟ್ ಆದರು'' - ಕೃಷಿ ತಾಪಂಡ, ನಟಿ.

ಅಡುಗೆ ಸಾಮಾನು ಮೇಲೆ ನಿಗಾ ಇಟ್ರೆ ಅನುಪಮಾಗೆ ಹಿಂಸೆ, ಹೊಟ್ಟೆ ಉರಿ.!

ಸೈಲೆಂಟ್ ಆಗಿ ಗಲಾಟೆ ನೋಡುತ್ತಿದ್ದರು

''ಅಡುಗೆ ಮನೆಯಲ್ಲಿ ಈರುಳ್ಳಿ ಸಿಪ್ಪೆ ಬಿದ್ದ ವಿಚಾರಕ್ಕೆ ನಾನು ಸಮೀರಾಚಾರ್ಯ ಮೇಲೆ ಗಲಾಟೆ ಮಾಡಿದೆ. ನಾನು ಸಮೀರಾಚಾರ್ಯಗೆ ಬೈಯ್ಯುವಾಗ ಸಿಹಿ ಕಹಿ ಚಂದ್ರು ಪಕ್ಕದಲ್ಲೇ ಇದ್ದರು. 'ತಪ್ಪು ನನ್ನಿಂದ ಆಗಿದ್ದು' ಎಂದು ಸಿಹಿ ಕಹಿ ಚಂದ್ರು ಹೇಳಬಹುದಿತ್ತು. ಆದ್ರೆ, ಅವರು ಸೈಲೆಂಟ್ ಆಗಿದ್ದರು'' - ಕೃಷಿ ತಾಪಂಡ, ನಟಿ

ಚಂದ್ರುಗ್ಯಾಕೆ ಇಷ್ಟೊಂದು ಅನುಮಾನ .? 'ಬಿಗ್ ಬಾಸ್' ಯಾರಿಗೆ ಯಾಕೆ ಮೋಸ ಮಾಡ್ತಾರೆ.?

ಸೇಫ್ ಗೇಮ್ ಆಡುತ್ತಿದ್ದಾರೆ

''ಎಲ್ಲರ ಮುಂದೆ ಸಮೀರಾಚಾರ್ಯ ಓಪನ್ ಆಗಿ ಸಿಹಿ ಕಹಿ ಚಂದ್ರು ಮಾಡಿದ್ದು ಅಂತ ಹೇಳುವವರೆಗೂ ಅವರು ಸೈಲೆಂಟ್ ಆಗಿದ್ದರು. ಇದು ಯಾಕೆ ಅಂತ ನನಗೆ ಅರ್ಥ ಆಗಲಿಲ್ಲ. ಅವರಿಗೆ ಅವರು ಸೇಫ್ ಆಗಿರಬೇಕು ಅಂತ ಅನಿಸುತ್ತಿದೆಯೇನೋ.? ಯಾರೂ ನೆಗೆಟಿವ್ ಆಗಿ ಮಾತನಾಡಬಾರದು ಅಂತ ಹಾಗೆ ಮಾಡುತ್ತಿದ್ದಾರೇನೋ.?'' ಎಂದು ಸಿಹಿ ಕಹಿ ಚಂದ್ರು ಬಗ್ಗೆ ಕೃಷಿ ತಾಪಂಡ ಹೇಳಿದರು.

English summary
Bigg Boss Kannada 5: Week 5: Krishi Thapanda speaks about Sihi Kahi Chandru

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada