»   » 'ಬಿಗ್ ಬಾಸ್' ಮನೆಯಲ್ಲಿ ಬೆಂಕಿಗೆ ಬಿದ್ದ ಅತಿ ಹೆಚ್ಚು ಮುಖಗಳಿವು.!

'ಬಿಗ್ ಬಾಸ್' ಮನೆಯಲ್ಲಿ ಬೆಂಕಿಗೆ ಬಿದ್ದ ಅತಿ ಹೆಚ್ಚು ಮುಖಗಳಿವು.!

Posted By:
Subscribe to Filmibeat Kannada
Bigg Boss Kannada Season 5 : week 5 ನಾಮಿನೇಷನ್ ಪ್ರಕ್ರಿಯೆ ಈ ಬಾರಿ ಬೇರೆ ರೀತಿಯಲ್ಲಿ | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದೆ. ನಾಲ್ಕು ವಾರಗಳ ಬಳಿಕ ಇದೇ ಮೊದಲ ಬಾರಿಗೆ 'ಬಿಗ್ ಬಾಸ್' ಮನೆಯಲ್ಲಿ ಓಪನ್ ನಾಮಿನೇಷನ್ ಪ್ರಕ್ರಿಯೆ ನಡೆಯಿತು.

ಎಂದಿನ ಹಾಗೆ ಕನ್ಫೆಶನ್ ರೂಮ್ ಒಳಗೆ ಈ ಬಾರಿ ನಾಮಿನೇಷನ್ ಪ್ರಕ್ರಿಯೆ ನಡೆಯಲಿಲ್ಲ. ಬದಲಾಗಿ, ಗಾರ್ಡನ್ ಏರಿಯಾದಲ್ಲಿ 'ಬಿಗ್ ಬಾಸ್' ಅಗ್ನಿಕುಂಡ ಇರಿಸಿದ್ದರು. ಪ್ರತಿಯೊಬ್ಬ ಸ್ಪರ್ಧಿ ಕೂಡ ತಾವು ನಾಮಿನೇಟ್ ಮಾಡಲು ಇಚ್ಛಿಸುವ ಇಬ್ಬರು ಸದಸ್ಯರ ಭಾವಚಿತ್ರಗಳಿಂದ ನಾಲ್ಕು ಬ್ಲಾಕ್ ಗಳನ್ನು ತೆಗೆದುಕೊಂಡು ಬೆಂಕಿಗೆ ಹಾಕಬೇಕಿತ್ತು.

ಮೊದಲಿಗೆ, ಓಪನ್ ನಾಮಿನೇಷನ್ ನಡೆದದ್ದು ಇದೇ ಮೊದಲ ಬಾರಿಗೆ.! ಅದರಲ್ಲೂ, ಭಾವಚಿತ್ರಗಳನ್ನ ಬೆಂಕಿಗೆ ಹಾಕಬೇಕಾಗಿದ್ರಿಂದ ಸ್ಪರ್ಧಿಗಳಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿತು. ಐದನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಬೆಂಕಿಗೆ ಬಿದ್ದ ಅತಿ ಹೆಚ್ಚು ಮುಖಗಳ ಪರಿಚಯ ಮಾಡಿಸ್ತೀವಿ ಬನ್ನಿ....

ಕ್ಯಾಪ್ಟನ್ ಆಗಿರುವ ಚಂದನ್ ಶೆಟ್ಟಿ

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಐದನೇ ವಾರದ ಕ್ಯಾಪ್ಟನ್ ಆಗಿ ಚಂದನ್ ಶೆಟ್ಟಿ ಆಯ್ಕೆ ಆದರು. ಹೀಗಾಗಿ, ಚಂದನ್ ಶೆಟ್ಟಿ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸೇಫ್ ಆಗಿ ಉಳಿದರು.

ಒಳ್ಳೆಯವರಿಗೆ ಕೋಪ ಬರಿಸುವುದು ದೊಡ್ಡ ಮುಠ್ಠಾಳತನ.!

ರಿಯಾಝ್ ಕಂಡ್ರೆ ಅನೇಕರಿಗೆ ಉರಿ ಉರಿ

ಕಳೆದ ವಾರ ಮನೆಯ ಕ್ಯಾಪ್ಟನ್ ಆಗಿದ್ದ ರಿಯಾಝ್ ಸ್ಟಾಕ್ ಚೆಕ್ಕಿಂಗ್ ಮಾಡಿ, ಕಾರ್ಪರೇಟ್ ಸ್ಟೈಲ್ ನಲ್ಲಿ ಮನೆ ನಡೆಸಿದ್ದು ಕೆಲವರಿಗೆ ಇಷ್ಟ ಆಗಲಿಲ್ಲ. ಹೀಗಾಗಿ, ಅನುಪಮಾ ಗೌಡ, ಜಗನ್ನಾಥ್, ಆಶಿತಾ, ಕೃಷಿ, ಶ್ರುತಿ ಪ್ರಕಾಶ್ ಹಾಗೂ ಜೆಕೆ... ರಿಯಾಝ್ ಭಾವಚಿತ್ರದಿಂದ ಬ್ಲಾಕ್ ಗಳನ್ನು ತೆಗೆದು ಬೆಂಕಿಗೆ ಹಾಕಿದರು.

ಸರಿ-ತಪ್ಪು ನೋಡದೆ ರಿಯಾಝ್ ಮೇಲೆ ಉಗ್ರ ಪ್ರತಾಪ ತೋರಿದ ಜಗನ್, ಚಂದ್ರು.!

ಟಾರ್ಗೆಟ್ ಆದ ನಿವೇದಿತಾ

ಯಾವುದೇ ಕೆಲಸ ಮಾಡಲು ಮುಂದೆ ಬರಲ್ಲ, ಆಕೆ ಮಗು ಅಲ್ಲ ಎಂಬ ಕಾರಣ ನೀಡಿ ಅನುಪಮಾ ಗೌಡ, ಜಗನ್ನಾಥ್, ಆಶಿತಾ ಹಾಗೂ ಶ್ರುತಿ ಪ್ರಕಾಶ್.... ನಿವೇದಿತಾ ಗೌಡ ವಿರುದ್ಧ ಮತ ಚಲಾಯಿಸಿದರು.

ಸುದೀಪ್ ನಿರೂಪಣೆ ಸರಿ ಇರ್ಲಿಲ್ಲ, ಜಗನ್ ಔಟ್ ಆಗಲಿಲ್ಲ, ಜನ ಬೈಯ್ಯುವುದನ್ನ ನಿಲ್ಲಿಸುತ್ತಿಲ್ಲ.!

ಡೇಂಜರ್ ಝೋನ್ ನಲ್ಲಿ ಕೃಷಿ ತಾಪಂಡ

ದಿವಾಕರ್ ಮತ್ತು ರಿಯಾಝ್... ಕೃಷಿ ತಾಪಂಡ ಭಾವಚಿತ್ರದಿಂದ ಬ್ಲಾಕ್ ಗಳನ್ನು ತೆಗೆದು ಬೆಂಕಿಗೆ ಸಮರ್ಪಿಸಿದರು. ಹೀಗಾಗಿ, ಕೃಷಿ ತಾಪಂಡ ಕೂಡ ನಾಮಿನೇಟ್ ಆಗಬೇಕಾಯ್ತು.

ಸಿಹಿ ಕಹಿ ಚಂದ್ರು ಮಿಸ್ ಆಗಲಿಲ್ಲ.!

ಸಮೀರಾಚಾರ್ಯ ಮತ್ತು ಜಯಶ್ರೀನಿವಾಸನ್.... ಸಿಹಿ ಕಹಿ ಚಂದ್ರು ವಿರುದ್ಧ ಮತ ಚಲಾಯಿಸಿದರು.

ನಾಮಿನೇಟ್ ಆಗಿದ್ದಾರೆ ಜಗನ್.!

ದಿವಾಕರ್ ಮತ್ತು ಸಮೀರಾಚಾರ್ಯ.... ಜಗನ್ನಾಥ್ ಚಂದ್ರಶೇಖರ್ ರನ್ನ ನಾಮಿನೇಟ್ ಮಾಡಿದರು.

ಧಿಮಾಕು ದೌಲತ್ತಿನ ಜಗನ್ 'ಬಿಗ್ ಬಾಸ್' ಇತಿಹಾಸದಲ್ಲಿಯೇ 'ಕಳಪೆ' ಸ್ಪರ್ಧಿ.!

ಆಶಿತಾಗೆ ಎಲಿಮಿನೇಷನ್ ಭಯ.!

ಆಶಿತಾ ಡಬಲ್ ಫೇಸ್ಡ್ ಎಂದು ಕಾರಣ ನೀಡಿ ರಿಯಾಝ್ ಹಾಗೂ ನಿವೇದಿತಾ ನಾಮಿನೇಟ್ ಮಾಡಿದರು.

ಚಂದನ್ ಶೆಟ್ಟಿ ಹಣೆ ಚಚ್ಚಿಕೊಂಡರು: 'ಕೊಬ್ಬಿನ' ಬಗ್ಗೆ ಆಶಿತಾ ಕೂಗಾಡಿದರು.!

ಅಖಾಡದಲ್ಲಿ ದಿವಾಕರ್

ಸಿಹಿ ಕಹಿ ಚಂದ್ರು ಮತ್ತು ಜೆಕೆ ವೋಟ್ ಹಾಕಿದ್ರಿಂದಾಗಿ ದಿವಾಕರ್ ಕೂಡ ನಾಮಿನೇಟ್ ಆದರು.

ಒಂದು ಮತದಿಂದ ಬಚಾವ್ ಆದವರು...

ಸಮೀರಾಚಾರ್ಯ, ಜಯಶ್ರೀನಿವಾಸನ್, ಅನುಪಮಾ ಗೌಡ ಹಾಗೂ ಜಯರಾಂ ಕಾರ್ತಿಕ್ (ಜೆಕೆ) ರವರಿಗೆ ತಲಾ ಒಂದು ವೋಟ್ ಬಿದ್ದ ಪರಿಣಾಮ ನಾಮಿನೇಷನ್ ಲಿಸ್ಟ್ ನಿಂದ ಬಚಾವ್ ಆದರು.

ಸೇಫ್ ಆದ ರಿಯಾಝ್ ಭಾಯ್.!

ನಾಮಿನೇಟ್ ಆಗಿದ್ದ ಏಳು ಜನರ ಪೈಕಿ ಒಬ್ಬರನ್ನ ನಾಮಿನೇಷನ್ ನಿಂದ ಮುಕ್ತ ಮಾಡುವ ಅವಕಾಶ ಕ್ಯಾಪ್ಟನ್ ಚಂದನ್ ಶೆಟ್ಟಿಗೆ 'ಬಿಗ್ ಬಾಸ್' ನೀಡಿದರು. ಅದನ್ನ ಸದುಪಯೋಗ ಮಾಡಿಸಿಕೊಂಡ ಚಂದನ್ ಶೆಟ್ಟಿ, ರಿಯಾಝ್ ರವರನ್ನ ಸೇಫ್ ಮಾಡಿದರು.

ಯಾರು ಔಟ್ ಆಗಬೇಕು.?

ನಿವೇದಿತಾ ಗೌಡ, ಕೃಷಿ ತಾಪಂಡ, ಸಿಹಿ ಕಹಿ ಚಂದ್ರು, ಜಗನ್ನಾಥ್ ಚಂದ್ರಶೇಖರ್, ಆಶಿತಾ ಹಾಗೂ ದಿವಾಕರ್ ಪೈಕಿ ನಿಮ್ಮ ಮತ ಯಾರಿಗೆ.? ಯಾರನ್ನ ಉಳಿಸಿಕೊಂಡು, ಯಾರನ್ನ ಔಟ್ ಮಾಡಲು ನೀವು ಇಚ್ಛಿಸುತ್ತೀರಾ.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

English summary
Bigg Boss Kannada 5: Week 5: Niveditha Gowda, Jaganath, Sihi Kahi Chandru, Ashita, Diwakar and Krishi are nominated for this week's elimination.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada