»   » ಸಿಹಿ ಕಹಿ ಚಂದ್ರು ಮರೆತ ಗುಟ್ಟು, ಕಿಚ್ಚ ಸುದೀಪ್ ಮುಂದೆ ರಟ್ಟು.!

ಸಿಹಿ ಕಹಿ ಚಂದ್ರು ಮರೆತ ಗುಟ್ಟು, ಕಿಚ್ಚ ಸುದೀಪ್ ಮುಂದೆ ರಟ್ಟು.!

Posted By:
Subscribe to Filmibeat Kannada

''ಸಮೀರಾಚಾರ್ಯ ಸ್ವಚ್ಛತೆಯನ್ನು ಕಾಪಾಡುವುದಿಲ್ಲ'' ಅಂತ ಆಗಾಗ ಸೆಲೆಬ್ರಿಟಿ ಸ್ಪರ್ಧಿಗಳು ದೂರುತ್ತಲೇ ಇರುತ್ತಾರೆ. ಅದಕ್ಕೆ ಪೂರಕವಾಗಿ ಕಳೆದ ವಾರ ಅಡುಗೆ ಮನೆಯಲ್ಲಿ ಈರುಳ್ಳಿ ಸಿಪ್ಪೆ ಬಿದ್ದಿತ್ತು.

''ಅಡುಗೆ ಮನೆಯನ್ನ ಸ್ವಚ್ಛಗೊಳಿಸಿದ ಬಳಿಕ ಈರುಳ್ಳಿ ಸಿಪ್ಪೆಯನ್ನ ಹಾಕಿರುವುದು ಸಮೀರಾಚಾರ್ಯ ಅವರೇ'' ಎಂದು ಹಿಂದು ಮುಂದೆ ನೋಡದೇ ಸಮೀರಾಚಾರ್ಯ ಮೇಲೆ ಕೃಷಿ ತಾಪಂಡ ಕೂಗಾಡಿದರು. ಆದ್ರೆ, ಅದನ್ನ ಸಮೀರಾಚಾರ್ಯ ಮಾಡಿಲ್ಲ ಎಂದು ಗೊತ್ತಾದ ಬಳಿಕ ಕೃಷಿ ತಾಪಂಡ ಸುಮ್ಮನಾಗಿ ಕ್ಷಮೆ ಕೇಳಿದರೇ ಹೊರತು, ತಪ್ಪು ಮಾಡಿದ್ದು ಯಾರು ಎಂದು ಕಂಡುಹಿಡಿಯುವ ಗೋಜಿಗೆ ಹೋಗಲಿಲ್ಲ.

ಸಿಹಿ ಕಹಿ ಚಂದ್ರು ಅಸಲಿಯತ್ತು ಬಟಾಬಯಲು ಮಾಡಿದ ಕೃಷಿ ತಾಪಂಡ.!

ಇನ್ನೂ ಅದು ತಮ್ಮ ತಪ್ಪು ಅಂತ ಗೊತ್ತಿದ್ದರೂ, ಅದನ್ನ ಒಪ್ಪಿಕೊಳ್ಳದೆ ಸಮೀರಾಚಾರ್ಯ-ಕೃಷಿ ವಾಕ್ಸಮರವನ್ನ ಸೈಲೆಂಟ್ ಆಗಿ ಸಿಹಿ ಕಹಿ ಚಂದ್ರು ನೋಡುತ್ತಿದ್ದರು. ಟಾಪಿಕ್ ಮುಗಿದ ನಂತರವೂ ತಮ್ಮ ತಪ್ಪನ್ನ ಸಿಹಿ ಕಹಿ ಚಂದ್ರು ಒಪ್ಪಿಕೊಳ್ಳಲಿಲ್ಲ.

ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ಕಿಚ್ಚ ಸುದೀಪ್, 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕೃಷಿ ತಾಪಂಡ ಹಾಗೂ ಸಿಹಿ ಕಹಿ ಚಂದ್ರು ಅವರಿಗೆ ಬಿಸಿ ಮುಟ್ಟಿಸಿದರು. ಮುಂದೆ ಓದಿರಿ....

ಕೃಷಿ ತಾಪಂಡಗೆ ಸುದೀಪ್ ಪ್ರಶ್ನೆ

''ಅಡುಗೆ ಮನೆಯಲ್ಲಿ ಈರುಳ್ಳಿ ಸಿಪ್ಪೆ ಬಿದ್ದಿರುವಾಗ, ನಿಮಗೆ ಕೋಪ ಬರುತ್ತೆ. ಈ ಕೆಲಸವನ್ನ ಸಮೀರಾಚಾರ್ಯ ಮಾಡಿರುವುದು ಅಂತ ಜಾಸ್ತಿ ಕೂಗಾಡುತ್ತೀರಾ. ಸಮೀರಾಚಾರ್ಯ ಬಂದು 'ಈ ಕೆಲಸ ನಾನು ಮಾಡಿಲ್ಲ' ಅಂದ ಮೇಲೆ ನೀವು ರೇಗುವುದನ್ನು ನಿಲ್ಲಿಸಿಬಿಟ್ರಿ. ಆದ್ರೆ, ಆ ಕೆಲಸವನ್ನ ಮಾಡಿದ್ದು ಯಾರು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಲ್ಲ. ಯಾಕೆ.?'' ಎಂದು ಕೃಷಿ ತಾಪಂಡ ಅವರಿಗೆ ಸುದೀಪ್ ಪ್ರಶ್ನೆ ಮಾಡಿದರು.

ಕೃಷಿ ತಾಪಂಡ ಕೊಟ್ಟ ಉತ್ತರ ಏನು.?

ಕೃಷಿ ತಾಪಂಡ : ''ಹೌದು, ಆ ಕೆಲಸ ಮಾಡಿದ್ದು ಯಾರು ಅಂತ ತಿಳಿದುಕೊಳ್ಳಲು ನಾನು ಹೋಗಲಿಲ್ಲ''

ಸುದೀಪ್ : ''ಯಾಕೆ.?''

ಕೃಷಿ ತಾಪಂಡ : ''ತಪ್ಪು ಮಾಡದೇ ಇದ್ದರೂ, ಸಮೀರಾಚಾರ್ಯ ಮೇಲೆ ಕೂಗಾಡಿದಕ್ಕೆ ನನ್ನ ಮೇಲೆ ನನಗೆ ಬೇಜಾರಾಯ್ತು. ಹೀಗಾಗಿ, ಎಲ್ಲರ ಮುಂದೆ ನಾನು ಕ್ಷಮೆ ಕೇಳಿದೆ''

ಸುದೀಪ್ : ''ತಪ್ಪು ಮಾಡಿದ್ದು ಯಾರು ಅಂತ ನೀವು ಆಗಲೇ ಕಂಡು ಹಿಡಿದಿದ್ರೆ, ನಿಮ್ಮ ರಾಂಗ್ ಆಕ್ಷನ್ ಬ್ಯಾಲೆನ್ಸ್ ಆಗುತ್ತಿತ್ತು''

ಕೃಷಿ ತಾಪಂಡ : ''ಹೌದು, ಆದ್ರೆ...''

ತಪ್ಪು ಮಾಡಿದ್ದು ಯಾರು.?

ಸುದೀಪ್ : ''ಹೋಗಲಿ ಯಾರು ಅಂತ ಗೊತ್ತಾಯ್ತಾ.?''

ಕೃಷಿ ತಾಪಂಡ : ''ಇಲ್ಲ''

ಸುದೀಪ್ : ''ಕೇಳಿ ಈಗ ಯಾರು ಅಂತ...''

ಸಮೀರಾಚಾರ್ಯ : ''ಚಂದ್ರು''

ಕೃಷಿ ತಾಪಂಡ : ''ನಾನು ಸಮೀರಾಚಾರ್ಯ ಅವರಿಗೆ ಬೈಯ್ಯಬೇಕಾದರೆ, ಚಂದ್ರು ಸರ್ ಇದ್ದರು''

ಬಿಸಿ ಮುಟ್ಟಿಸಿದ ಸುದೀಪ್

''ಪ್ರತಿಯೊಂದು ವಿಚಾರ ಕೂಡ ನಮ್ಮ ಬಳಿ ಕ್ಯಾಮರಾದಲ್ಲಿ ಇದೆ. ಯಾರು ಸರಿ, ತಪ್ಪು ಅಂತ ತೋರಿಸುವುದು ಪಾಯಿಂಟ್ ಅಲ್ಲ. ಸಮೀರಾಚಾರ್ಯ ಅಲ್ಲ ಅಂತ ಗೊತ್ತಾದ ತಕ್ಷಣ ನೀವು ಸುಮ್ಮನಾದ್ರಿ. ತಪ್ಪು ಮಾಡಿದವರು ಬಂದು ಒಪ್ಪಿಕೊಳ್ಳಲಿಲ್ಲ. ಸನ್ನಿವೇಶ ಹೀಗೆ ಬಂದಾಗ ಹೇಗೆ ಕಾಣಿಸುತ್ತೀರಾ.?'' ಎಂದು ಕೃಷಿ ತಾಪಂಡ ಹಾಗೂ ಸಿಹಿ ಕಹಿ ಚಂದ್ರು ಅವರಿಗೆ ಸುದೀಪ್ ಬಿಸಿ ಮುಟ್ಟಿಸಿದರು.

ಕ್ಷಮೆ ಕೇಳಿದ ಸಿಹಿ ಕಹಿ ಚಂದ್ರು

''ಈಗ ಸಮೀರಾಚಾರ್ಯ ನೆನಪಿಸಿದ ಮೇಲೆ ನನಗೆ ನೆನಪಾಗುತ್ತಿದೆ, ಅದನ್ನ ಮಾಡಿದ್ದು ನಾನು ಅಂತ. ಐ ಆಮ್ ಸಾರಿ'' ಎಂದು ಸಿಹಿ ಕಹಿ ಚಂದ್ರು ಕ್ಷಮೆ ಕೇಳಿದರು.

English summary
Bigg Boss Kannada 5: Week 5: Sihi Kahi Chandru apologizes for his mistake

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada