For Quick Alerts
  ALLOW NOTIFICATIONS  
  For Daily Alerts

  ದಿವಾಕರ್ ಬದಲಾಗಿದ್ದಾರಾ.? ರಿಯಾಝ್ ಗೆ ಅಷ್ಟು ಬೇಸರ ಯಾಕೆ.?

  By Harshitha
  |

  'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಮೊದಲೆರಡು ವಾರ ಸೆಲೆಬ್ರಿಟಿ ಸ್ಪರ್ಧಿಗಳೆಲ್ಲ ದಿವಾಕರ್ ವಿರುದ್ಧ ಇದ್ದಾಗ, ದಿವಾಕರ್ ಪರ ದನಿ ಎತ್ತಿದವರು ರಿಯಾಝ್.

  ಇದೀಗ ಅದೇ ದಿವಾಕರ್ ಮತ್ತು ರಿಯಾಝ್ ನಡುವೆ ಎಲ್ಲವೂ ಸರಿ ಇಲ್ಲ ಎಂಬಂತಾಗಿದೆ. ದಿವಾಕರ್ ಪರ ರಿಯಾಝ್ ನಿಂತ ಮೇಲೆ... ದಿವಾಕರ್ ಗೆ ಸುದೀಪ್ ಕೆಲ ಟಿಪ್ಸ್ ಹೇಳಿದ್ಮೇಲೆ... ದಿವಾಕರ್ ಬದಲಾದರು. ಸೆಲೆಬ್ರಿಟಿ ಸ್ಪರ್ಧಿಗಳ ಜೊತೆ ಬೆರೆಯಲು ಶುರು ಮಾಡಿದರು.

  ಸೆಲೆಬ್ರಿಟಿ ಸ್ಪರ್ಧಿಗಳ ಕಣ್ಣಿಗೆ ದಿವಾಕರ್ ಈಗ ಒಳ್ಳೆಯವರಾಗಿ ಕಾಣುತ್ತಿದ್ದಾರೆ. ದಿವಾಕರ್ ಪರ ದನಿ ಎತ್ತಿದ ರಿಯಾಝ್ ಮಾತ್ರ ಸೆಲೆಬ್ರಿಟಿ ಸ್ಪರ್ಧಿಗಳ ಕಣ್ಣಿಗೆ ಅಷ್ಟಕಷ್ಟೆ.

  ಸೆಲೆಬ್ರಿಟಿ ಸ್ಪರ್ಧಿಗಳ ಜೊತೆ ದಿವಾಕರ್ ಚೆನ್ನಾಗಿ ಇರುವ ಕಾರಣ, ದಿವಾಕರ್ ಹಾಗೂ ರಿಯಾಝ್ ಮಧ್ಯೆ ಕಂದಕ ಮೂಡಿದ್ಯಾ.? 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ದಿವಾಕರ್ ಹಾಗೂ ರಿಯಾಝ್ ಬಗ್ಗೆ ಸುದೀಪ್ ಹೇಳಿದ್ದೇನು.? ಸಂಪೂರ್ಣ ವಿವರ ಇಲ್ಲಿದೆ ಓದಿರಿ....

  ದಿವಾಕರ್ ಬಗ್ಗೆ ರಿಯಾಝ್ ಗೆ ಇಷ್ಟ ಆಗುತ್ತಿಲ್ಲ.!

  ದಿವಾಕರ್ ಬಗ್ಗೆ ರಿಯಾಝ್ ಗೆ ಇಷ್ಟ ಆಗುತ್ತಿಲ್ಲ.!

  ''ತಾನು ಕೂತಿರುವ ರೆಂಬೆಯನ್ನೇ ದಿವಾಕರ್ ಕತ್ತರಿಸುತ್ತಾನೆ. ಇದೇ ನನಗೆ ಅವನ (ದಿವಾಕರ್) ಬಗ್ಗೆ ಇಷ್ಟ ಆಗಲ್ಲ. ಮೊದಲ ವಾರದಿಂದ ಅವನ ಕೈಹಿಡಿದಿದ್ದು ನಾನು. ಇಡೀ ಮನೆ ಅವನ ವಿರುದ್ಧ ನಿಂತಿದ್ದಾಗ, ಅವರ ಪರ ನಿಂತಿದ್ದು ನಾನು. ಆದ್ರೆ, ಎಲ್ಲರ ದೃಷ್ಟಿಯಲ್ಲಿ ನಾನು ಕೆಟ್ಟವನಾದೆ. ಅವನು ಒಳ್ಳೆಯವನಾದ. ಅವನಿಗೆ ಓವರ್ ಕಾನ್ಫಿಡೆನ್ಸ್ ಜಾಸ್ತಿ ಆಗಿದೆ'' ಎಂದು ಚಂದನ್ ಶೆಟ್ಟಿ ಜೊತೆ ಮಾತನಾಡುವಾಗ ರಿಯಾಝ್ ಬೇಸರ ಮಾಡಿಕೊಂಡರು.

  ರಿಯಾಝ್ ಹೇಳಿದ್ರಲ್ಲಿ ತಪ್ಪೇನಿದೆ.? ಸೆಲೆಬ್ರಿಟಿಗಳು ಮಾತ್ರ ಸರಿಯೇ.?

  ದಿವಾಕರ್ ಗೆ ಸುದೀಪ್ ಪ್ರಶ್ನೆ

  ದಿವಾಕರ್ ಗೆ ಸುದೀಪ್ ಪ್ರಶ್ನೆ

  ಸುದೀಪ್ - ''ಬಿಗ್ ಬಾಸ್ ಗೆ ಬಂದು ಬೆಳೆದ್ರಿ ಅನ್ಸುತ್ತಾ.?''

  ದಿವಾಕರ್ - ''ಆ ತರಹ ಅನಿಸಲ್ಲ''

  ಸುದೀಪ್ - ''ಸೇಫ್ ಆಗುತ್ತಾ ಬಂದಂತೆ ಕಾನ್ಫಿಡೆನ್ಸ್ ಹೆಚ್ಚಾಗುತ್ತಾ ಹೋಯ್ತಾ.?''

  ದಿವಾಕರ್ - ''ಮೊದಲನೇ ವಾರ ಕಾನ್ಫಿಡೆನ್ಸ್ ಹೇಗಿತ್ತೋ, ಈಗಲೂ ಹಾಗೇ ಇದೆ''

  ಆಗಾಗ ನಾಮಿನೇಟ್ ಆಗಬೇಕು, ಆಗಲೇ ಜನರಿಗೆ ಗೊತ್ತಾಗೋದು: ಇದು ದಿವಾಕರ್ ಸಿದ್ಧಾಂತ.!

  ರಿಯಾಝ್ ಗೆ ಸುದೀಪ್ ಪ್ರಶ್ನೆ

  ರಿಯಾಝ್ ಗೆ ಸುದೀಪ್ ಪ್ರಶ್ನೆ

  ''ಈ ಮನೆಯಲ್ಲಿ ದಿವಾಕರ್ ಅವರು ದಿವಾಕರ್ ಆಗಲು ನೀವೇ ಕಾರಣ ಅಂತ ನೀವು ನಂಬುತ್ತೀರಾ.?'' ಎಂದು ರಿಯಾಝ್ ಗೆ ಸುದೀಪ್ ಪ್ರಶ್ನಿಸಿದರು. ಅದಕ್ಕೆ, ''ನಾನೇ ಕಾರಣ ಅಂತ ಹೇಳುವಷ್ಟು ಮುಠ್ಠಾಳ ನಾನಲ್ಲ. ಆದ್ರೆ, ಮೊದಲು ಇಲ್ಲಿ ಇಡೀ ಮನೆ ದಿವಾಕರ್ ವಿರುದ್ಧ ಇದ್ದಾಗ ದಿವಾಕರ್ ಪರ ದನಿ ಎತ್ತಿದ್ದು ನಾನು. ಸತತವಾಗಿ ನಾನು ದಿವಾಕರ್ ಜೊತೆಯಲ್ಲಿ ಇದ್ದು ನಾನು ಅವರನ್ನ ತಿದ್ದಿದೆ. ಸಪೋರ್ಟ್ ಮಾಡಿದ್ದೇನೆ ಅಷ್ಟೆ'' ಎಂದರು ರಿಯಾಝ್

  ಕ್ಷಣಾರ್ಧದಲ್ಲಿ ಸೇಫ್ ಆಗ್ಹೋದ ರಿಯಾಝ್: ಬೆಂಕಿಗಾಹುತಿ ಮಾಡಿದವರಿಗೆ ಮುಖಭಂಗ.!

  ಇತರೆ ಸ್ಪರ್ಧಿಗಳ ಪ್ರತಿಕ್ರಿಯೆ

  ಇತರೆ ಸ್ಪರ್ಧಿಗಳ ಪ್ರತಿಕ್ರಿಯೆ

  ''ದಿವಾಕರ್ ಬೆಳವಣಿಗೆಗೆ ರಿಯಾಝ್ ಸಪೋರ್ಟ್ ಜಾಸ್ತಿ ಇದೆ'' ಎಂದು ಜಯಶ್ರೀನಿವಾಸನ್ ಹಾಗೂ ನಿವೇದಿತಾ ಹೇಳಿದರೆ, ''ರಿಯಾಝ್ ಸಪೋರ್ಟ್ ಮಾಡಿದರು ನಿಜ. ಆದ್ರೆ, ದಿವಾಕರ್ ಬದಲಾಗಲು ನೀವು (ಸುದೀಪ್) ಹೇಳಿದ ಮಾತುಗಳು ಕಾರಣ ಅಂತ ಅವರೇ (ದಿವಾಕರ್) ಹೇಳಿದರು'' ಎಂದು ಕೃಷಿ ತಾಪಂಡ ಹೇಳಿದರು.

  ರಿಯಾಝ್ ಗೆ ಉಪಯೋಗ ಇತ್ತಾ.?

  ರಿಯಾಝ್ ಗೆ ಉಪಯೋಗ ಇತ್ತಾ.?

  ''ದಿವಾಕರ್ ಪರವಾಗಿ ನಿಲ್ಲುವುದರಿಂದ ರಿಯಾಝ್ ಗೆ ಉಪಯೋಗ ಇತ್ತು ಎಂಬ ವಾದ ಬಂದರೆ ಅದಕ್ಕೆ ಉತ್ತರ ಏನು.?'' ಎಂದು ರಿಯಾಝ್ ಗೆ ಸುದೀಪ್ ಪ್ರಶ್ನಿಸಿದರು. ಅದಕ್ಕೆ ''ಅವರಿಂದ ನನಗೆ ಉಪಯೋಗ ಇದೆ ಎಂಬ ಉದ್ದೇಶದಿಂದ ನಾನು ಅವರ ಪರ ನಿಂತಿಲ್ಲ. ನಾನು ಆ ತರಹ ಯೋಚನೆ ಮಾಡಿಲ್ಲ'' ಎಂದು ಉತ್ತರಿಸಿದರು ರಿಯಾಝ್.

  ಚಂದನ್ ಭಿಕ್ಷೆ ಹಾಕಿದ್ರಾ.?

  ಚಂದನ್ ಭಿಕ್ಷೆ ಹಾಕಿದ್ರಾ.?

  ''ಈ ವಾರ ನಾಮಿನೇಟ್ ಆದ್ಮೇಲೆ, ಚಂದನ್ ಅವರಿಂದ ಸೇಫ್ ಆಗುತ್ತೀರಾ. ಅದರ ಬಗ್ಗೆ ಬೇಸರ ಮಾಡಿಕೊಂಡು ಚಂದನ್ ಭಿಕ್ಷೆ ಹಾಕುವುದು ಬೇಕಾಗಿರಲಿಲ್ಲ. ನಾನು ಈ ವಾರ ಹೋಗುತ್ತಿರಲಿಲ್ಲ ಅಂತ ಮಾತು ಬರುತ್ತೆ. ಇದು ಕಾನ್ಫಿಡೆನ್ಸ್ ಅನ್ಸುತ್ತೋ, ಓವರ್ ಕಾನ್ಫಿಡೆನ್ಸೋ..?'' ಎಂದು ರಿಯಾಝ್ ಗೆ ನೇರ ಬಾಣ ಬಿಟ್ಟರು ಸುದೀಪ್.

  ರಿಯಾಝ್ ಕೊಟ್ಟ ಉತ್ತರ ಏನು.?

  ರಿಯಾಝ್ ಕೊಟ್ಟ ಉತ್ತರ ಏನು.?

  ''ಇಡೀ ವಾರ ನಾವು ಏನನ್ನ ತೋರಿಸಿಕೊಳ್ತೀವೋ, ಅದರ ಮೇಲೆ ಎಲಿಮಿನೇಷನ್ ನಡೆಯುತ್ತೆ. ನನ್ನನ್ನ ಅವರು ಉಳಿಸಿಕೊಂಡ ಕಾರಣಕ್ಕೆ ನಾನು ಉಳಿದುಬಿಟ್ಟೆ ಅಂತ ಮಾತು ಬಂತು. ನಾನು ಅಷ್ಟು ವೀಕ್ ಸ್ಪರ್ಧಿ ಅಲ್ಲವೇ ಅಲ್ಲ. ಹೀಗಾಗಿ ಆ ಮಾತನ್ನ ನಾನು ಹೇಳಿದೆ'' ಎಂದರು ಸುದೀಪ್.

  ದಿವಾಕರ್ ಗೆ ಬುದ್ಧಿ ಮಾತು

  ದಿವಾಕರ್ ಗೆ ಬುದ್ಧಿ ಮಾತು

  ''ಮೊದಲ ಬಾರಿಗೆ ನಿಮ್ಮ ಜೊತೆ ಯಾರು ನಿಂತುಕೊಳ್ತಾರೋ, ಅವರನ್ನ ಮರೆಯಬೇಡಿ'' ಎಂದು ಸುದೀಪ್ ದಿವಾಕರ್ ಗೆ ಬುಧ್ಧಿ ಮಾತು ಹೇಳಿದರು. ''ಯಾರನ್ನೂ ಮರೆಯಲ್ಲ'' ಎಂದರು ದಿವಾಕರ್.

  ಮುಂದೆ ಹೇಗಿರ್ತಾರೋ.?

  ಮುಂದೆ ಹೇಗಿರ್ತಾರೋ.?

  ದಿವಾಕರ್ ಹಾಗೂ ರಿಯಾಝ್ ಮಧ್ಯೆ ಸದ್ಯ ಕಂದಕ ಮೂಡಿರುವುದು 'ಬಿಗ್ ಬಾಸ್' ಸಂಚಿಕೆಯಲ್ಲಿ ಜಗಜ್ಜಾಹೀರಾಗಿದೆ. ತಮ್ಮ ತಮ್ಮ ತಪ್ಪಿನ ಅರಿವಾಗಿ ದಿವಾಕರ್ ಹಾಗೂ ರಿಯಾಝ್ ಒಂದಾಗುತ್ತಾರೋ.? ಇಲ್ಲ, ಜಗಳ ಮುಂದುವರೆಸುತ್ತಾರೋ... ನೋಡೋಣ.

  English summary
  Bigg Boss Kannada 5: Week 5: Sudeep questions Riyaz and Diwakar

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X