»   » ಚಂದನ್ ಶೆಟ್ಟಿ ಲೆಕ್ಕಾಚಾರ ಮಾಡಿ ಆಡ್ತಿದ್ದಾರಾ? ಸುದೀಪ್ ಆಡಿದ ಮಾತಿನ ಅರ್ಥವೇನು?

ಚಂದನ್ ಶೆಟ್ಟಿ ಲೆಕ್ಕಾಚಾರ ಮಾಡಿ ಆಡ್ತಿದ್ದಾರಾ? ಸುದೀಪ್ ಆಡಿದ ಮಾತಿನ ಅರ್ಥವೇನು?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಐದು ವಾರಗಳು ಉರುಳಿವೆ. ಈ ಐದು ವಾರಗಳಲ್ಲಿ ಚಂದನ್ ಶೆಟ್ಟಿ ಒಮ್ಮೆಯೂ ಡೇಂಜರ್ ಝೋನ್ ಗೆ ಬಂದಿಲ್ಲ. ಹಾಗಂತ ಚಂದನ್ ಶೆಟ್ಟಿ ತುಂಬಾ ಸೇಫ್ ಆಗಿ ಆಡುತ್ತಿದ್ದಾರೆ ಅಂತಲೂ ಇಲ್ಲ. ಸಣ್ಣ ಪುಟ್ಟ ಕಿತ್ತಾಟ ಆದರೂ, ಅದನ್ನ ಎಳೆದುಕೊಂಡು ಹೋಗುತ್ತಿಲ್ಲ ಅಷ್ಟೆ.

ಯಾವುದೇ ವಿವಾದಗಳಿಗೆ ಸಿಲುಕದ ಚಂದನ್ ಶೆಟ್ಟಿ ಲೆಕ್ಕಾಚಾರ ಮಾಡಿ ಆಟ ಆಡುತ್ತಿದ್ದಾರಾ.? ಹೀಗೊಂದು ಅನುಮಾನ ಮೂಡಲು ಕಾರಣ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಆಡಿದ ಮಾತುಗಳು....

ಚಂದನ್ ಶೆಟ್ಟಿಗೆ ಸುದೀಪ್ ಕೇಳಿದ ಪ್ರಶ್ನೆ ಏನು.?

'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮ ಶುರು ಆಗುತ್ತಿದ್ದಂತೆಯೇ, ''ಶನಿವಾರದ ಪಂಚಾಯತಿಯಲ್ಲಿ ಮಾತು ಆಡದೆ ಇರುವುದರಿಂದ ಆಗುವ ಲಾಭಗಳೇನು.?'' ಎಂದು ಚಂದನ್ ಶೆಟ್ಟಿಗೆ ಸುದೀಪ್ ಪ್ರಶ್ನೆ ಮಾಡಿದರು. ಅದಕ್ಕೆ ''ಏನಿಲ್ಲ'' ಎಂದು ಚಂದನ್ ಶೆಟ್ಟಿ ಹೇಳಿದಕ್ಕೆ ''ನಷ್ಟ ಏನು.?'' ಎಂದು ಸುದೀಪ್ ಮರು ಪ್ರಶ್ನೆ ಹಾಕಿದರು.

ಅದೃಷ್ಟವಶಾತ್ ಕ್ಯಾಪ್ಟನ್ ಆದ ಚಂದನ್ ಶೆಟ್ಟಿ: ಈ ವಾರ ಕೂಡ ಸೇಫ್.!

ಚಂದನ್ ಬಗ್ಗೆ ಸುದೀಪ್ ಹೇಳಿದ್ದೇನು.?

ಚಂದನ್ ಶೆಟ್ಟಿ ತಬ್ಬಿಬ್ಬಾದಾಗ, ''ತುಂಬಾ ಲೆಕ್ಕಾಚಾರ ಮಾಡಿ ಆಡುತ್ತಿದ್ದೀರಾ ಅಂತ ಜನರಿಗೆ ಗೊತ್ತಾಗುತ್ತೆ'' ಎಂದರು ಸುದೀಪ್. ಅದಕ್ಕೆ ''ಜಾಸ್ತಿ ಮಾತನಾಡಲು ಬರಲ್ಲ'' ಅಂತ ಚಂದನ್ ಶೆಟ್ಟಿ ಹೇಳಿದಾಗ, ''ಹೇಳಬೇಕು ಅನಿಸ್ತು, ಹೇಳದೆ'' ಅಂತ ಸುದೀಪ್ ಹೇಳಿದರು.

ಅಷ್ಟರಲ್ಲೇ ಜಸ್ಟ್ ಮಿಸ್ ಆದ ಚಂದನ್: ಈ ವಾರವೂ ಶೆಟ್ರಿಗೆ ತಲೆನೋವಿಲ್ಲ.!

ಸ್ಟ್ರಾಟೆಜಿ ಎದ್ದು ಕಾಣುತ್ತೆ

''ಮೀಟರ್, ಮೊಮೆನ್ಟಮ್ ಭಾನುವಾರದಿಂದ ಶುಕ್ರವಾರದವರೆಗೂ ಒಂದಿರುತ್ತೆ. ಶನಿವಾರ ಇನ್ನೊಂದಾಗುತ್ತೆ ಅಂದ್ರೆ... ಎಲ್ಲೋ ಒಂದು ಕಡೆ ಜನರಿಗೆ ನಿಮ್ಮ ಸ್ಟ್ರಾಟೆಜಿ ಎದ್ದು ಕಾಣುತ್ತೆ'' ಎಂದು ಚಂದನ್ ಶೆಟ್ಟಿಗೆ ಸುದೀಪ್ ಹೇಳಿದರು.

ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ...

ಸುದೀಪ್ ಹೇಳಿದಂತೆ, ಚಂದನ್ ಶೆಟ್ಟಿ ಲೆಕ್ಕಾಚಾರ ಮಾಡಿ ಆಡುತ್ತಿದ್ದಾರಾ.? ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ನಮಗೆ ತಿಳಿಸಿ... 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ...

English summary
Bigg Boss Kannada 5: Week 5: Sudeep speaks about Chandan Shetty's strategy

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada