Just In
Don't Miss!
- News
ಕೊರೊನಾ ಲಸಿಕೆ ಪಡೆದವರೂ ಸೋಂಕು ಹರಡಬಹುದು: ತಜ್ಞರು
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 24ರ ಚಿನ್ನ, ಬೆಳ್ಳಿ ದರ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸೂಕ್ತ ಕಾರಣ ಕೊಟ್ಟು ನಾಮಿನೇಟ್ ಮಾಡದವರಿಗೆ ಮಾತಲ್ಲೇ ಪೆಟ್ಟು ಕೊಟ್ಟ ಸುದೀಪ್.!

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಐದನೇ ವಾರ ಓಪನ್ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ತಾವು ನಾಮಿನೇಟ್ ಮಾಡುವ ಇಬ್ಬರು ಸದಸ್ಯರ ಭಾವಚಿತ್ರವನ್ನ, ಅವರ ಎದುರಿಗೆ ಸ್ಪರ್ಧಿಗಳು ಅಗ್ನಿಕುಂಡಕ್ಕೆ ಸಮರ್ಪಿಸಬೇಕಿತ್ತು.
ಈ ಪ್ರಕ್ರಿಯೆಯಲ್ಲಿ ಕೆಲವರು ಸೂಕ್ತ ಕಾರಣ ನೀಡಲಿಲ್ಲ. ಸೆಲೆಬ್ರಿಟಿ ಸ್ಪರ್ಧಿಗಳೆಲ್ಲ ಜನಸಾಮಾನ್ಯ ಸ್ಪರ್ಧಿಗಳನ್ನೇ ಟಾರ್ಗೆಟ್ ಮಾಡಿದರು. ಇನ್ನೂ ಜನಸಾಮಾನ್ಯ ಸ್ಪರ್ಧಿಗಳು ಕೂಡ ಸೆಲೆಬ್ರಿಟಿ ಸ್ಪರ್ಧಿಗಳನ್ನೇ ನಾಮಿನೇಟ್ ಮಾಡಿದರು.
'ಬಿಗ್ ಬಾಸ್' ಮನೆಯಲ್ಲಿ ಬೆಂಕಿಗೆ ಬಿದ್ದ ಅತಿ ಹೆಚ್ಚು ಮುಖಗಳಿವು.!
ಇದನ್ನ ಗಮನಿಸಿದ ಕಿಚ್ಚ ಸುದೀಪ್, 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಎಲ್ಲ ಸ್ಪರ್ಧಿಗಳಿಗೂ ಬೆಂಡೆತ್ತಿದರು. ಮುಂದೆ ಓದಿರಿ...

ಮಕ್ಕಳ ತರಹ ಆಡಿದ್ದು ಯಾಕೆ.?
''ಓಪನ್ ನಾಮಿನೇಷನ್ ನಲ್ಲಿ ಮಕ್ಕಳ ತರಹ ಆಡಿದ್ದು ಯಾಕೆ.? ಒಳಗಿರುವವರೆಲ್ಲ ಹೊರಗಡೆ ಇರುವವರನ್ನ ನಾಮಿನೇಟ್ ಮಾಡುತ್ತೀರಿ. ಹೊರಗಡೆ ಇರುವವರೆಲ್ಲ ಒಳಗಡೆ ಇರುವವರನ್ನ ನಾಮಿನೇಟ್ ಮಾಡುತ್ತೀರಿ. ಅವರು ನಾಮಿನೇಟ್ ಮಾಡಿದರು ಅಂತ ಇವರು, ಇವರು ನಾಮಿನೇಟ್ ಮಾಡಿದರು ಅಂತ ಅವರು. ಕಾರಣ ಬಹಳ ಕಮ್ಮಿ ಜನ ಕರೆಕ್ಟಾಗಿ ಕೊಟ್ರಿ. ಇನ್ನೂ ಕೆಲವರು ಮಕ್ಕಳಿಗಿಂತ ಕಡೆ ರೀಸನ್ ಕೊಟ್ರಿ'' ಎಂದು ಓಪನ್ ನಾಮಿನೇಷನ್ ಪ್ರಕ್ರಿಯೆ ಬಗ್ಗೆ ಸುದೀಪ್ ಬೇಸರ ವ್ಯಕ್ತಪಡಿಸಿದರು.

ಆಶಿತಾ ಹೇಳಿದ್ದೇನು.?
''ಅದು ಟಿಟ್ ಫಾರ್ ಟಾಟ್ ಅಂತಲೇ ಆಗಿದ್ದು. ಇಲ್ಲಿ ಯಾರನ್ನೂ ನಾಮಿನೇಟ್ ಮಾಡಬೇಕು ಅಂತ ನನಗೆ ಅನಿಸುವುದೇ ಇಲ್ಲ. ಅದೊಂದು ಪೇನ್ ಫುಲ್ ಪ್ರೋಸೆಸ್'' ಎಂದು ಸುದೀಪ್ ಗೆ ಉತ್ತರಿಸಿದರು ಆಶಿತಾ.

ರಿಯಾಝ್ ಹೇಳಿದ್ದೇನು.?
''ನಾನು ಆಶಿತಾ ಹೆಸರೇ ಹೇಳಬೇಕು ಅಂತ ಫಿಕ್ಸ್ ಆಗಿ ಬಂದಿದ್ದೆ. ಯಾಕಂದ್ರೆ, ಅವರು 'ಚೀಪ್' ಎಂಬ ಪದವನ್ನು ನನ್ನ ಮೇಲೆ ಬಳಸಿದರು. ನಾನು ಚೀಪ್ ಮನುಷ್ಯ ಅಲ್ಲ. ಹೀಗಾಗಿ, ಅದೇ ಕಾರಣ ಕೊಟ್ಟು ನಾನು ನಾಮಿನೇಟ್ ಮಾಡಿದೆ. ಕೃಷಿ ವಿಷಯದಲ್ಲಿ ನಾನು ಸ್ವಲ್ಪ ಸಿಲ್ಲಿ ಆದೆ. ಅದಕ್ಕೆ ನಾನು ಅವರ ಬಳಿ ಕ್ಷಮೆ ಕೇಳಿದೆ'' ಎಂದರು ರಿಯಾಝ್.

ಕಾರಣ ಸೂಕ್ತ ಆಗಿರಬೇಕು.!
ನಾಮಿನೇಷನ್ ಪ್ರಕ್ರಿಯೆಯಲ್ಲಿ ಕೊಡುವ ಕಾರಣ ಸೂಕ್ತ ಆಗಿರಬೇಕು ಎಂದು ಸುದೀಪ್ ಇದೇ ವೇಳೆ ಎಲ್ಲರಿಗೂ ಎಚ್ಚರಿಸಿದರು. ಸುದೀಪ್ ಮಾತಿನಂತೆ, ಮುಂಬರುವ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸುಮ್ಮನೆ ಟಾರ್ಗೆಟ್ ಮಾಡದೆ ಎಲ್ಲರೂ ಸೂಕ್ತ ಕಾರಣಗಳನ್ನೇ ನೀಡುತ್ತಾರಾ.? ಕಾದು ನೋಡೋಣ..