»   » 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆದ 'ಬೊಂಬೆ' ನಿವೇದಿತಾ ಗೌಡ.!

'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆದ 'ಬೊಂಬೆ' ನಿವೇದಿತಾ ಗೌಡ.!

Posted By:
Subscribe to Filmibeat Kannada
Big Boss Kannada Season 5 : ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆದ 'ಬೊಂಬೆ' ನಿವೇದಿತಾ ಗೌಡ

ಬಹುಶಃ ಎಲ್ಲರಿಗೂ ಒಂದು ಕಾಲ ಬರುತ್ತೆ ಅನ್ನೋದು ಇದಕ್ಕೆ ಇರಬೇಕು..! ಇಷ್ಟು ದಿನ ಮೈಸೂರಿನ ನಿವೇದಿತಾ ಗೌಡರನ್ನ ಸ್ಪರ್ಧಿ ಅಂತಲೇ ಪರಿಗಣಿಸದೆ ಬಾಲಿಶವಾಗಿ ನೋಡುತ್ತಿದ್ದವರಿಗೆಲ್ಲ ಇದೀಗ ಅದೇ ನಿವೇದಿತಾ ಗೌಡ ತಿರುಗೇಟು ನೀಡಿದ್ದಾರೆ.

'ಸಾಮಾನ್ಯ ಜ್ಞಾನ'ದ ಟಾಸ್ಕ್ ನಲ್ಲಿ ಪಟ ಪಟ ಅಂತ ಸರಿ ಉತ್ತರಗಳನ್ನು ನೀಡಿದ ನಿವೇದಿತಾ ಗೌಡ ಈ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.

ನಿವೇದಿತಾ ಗೌಡ ಯಾವುದೇ ಕೆಲಸ ಮಾಡಲ್ಲ ಎಂದು ದೂಷಿಸಿ, ಆಕೆಯನ್ನ ಕಳೆದ ವಾರವಷ್ಟೇ ಸೆಲೆಬ್ರಿಟಿ ಸ್ಪರ್ಧಿಗಳು ನಾಮಿನೇಟ್ ಮಾಡಿದ್ದರು. ಆದ್ರೀಗ, ಅದೇ ನಿವೇದಿತಾ ಗೌಡ ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡಿ 'ಕ್ಯಾಪ್ಟನ್' ಆಗಿದ್ದಾರೆ. ಮುಂದೆ ಓದಿರಿ...

'ಬಿಗ್ ಬಾಸ್' ನೀಡಿದ್ದ ಟಾಸ್ಕ್ ಏನು.?

ಈ ವಾರದ ಕ್ಯಾಪ್ಟನ್ ಆಯ್ಕೆಗಾಗಿ 'ಬಿಗ್ ಬಾಸ್' ಒಂದು ಚಟುವಟಿಕೆ ನೀಡಿದ್ದರು. ಇದರ ಅನುಸಾರ 'ಬಿಗ್ ಬಾಸ್', ಮನೆಯ ಎಲ್ಲ ಸದಸ್ಯರಿಗೆ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಿದರು. ಅವುಗಳಲ್ಲಿ ಎರಡು ತಪ್ಪು ಉತ್ತರಗಳನ್ನು ನೀಡಿದ ಸದಸ್ಯರು ಕ್ಯಾಪ್ಟನ್ ರೇಸ್ ನಿಂದ ಹೊರ ಬಿದ್ದರು. ಅತಿ ಹೆಚ್ಚು ಸರಿಯಾದ ಉತ್ತರಗಳನ್ನು ನೀಡಿದ ನಿವೇದಿತಾ ಗೌಡ, 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆದರು.

'ಬೇಬಿ ಡಾಲ್' ನಿವೇದಿತಾ ಗೌಡ ಕನ್ನಿಂಗ್ (ಕುತಂತ್ರಿ) ಅಂತೆ.!

ಕಠಿಣ ಸ್ಪರ್ಧೆ ನೀಡಿದ ಜೆಕೆ, ರಿಯಾಝ್

ಕಾರ್ತಿಕ್ ಜಯರಾಂ ಹಾಗೂ ರಿಯಾಝ್ ಕೂಡ ಕೆಲ ಸರಿ ಉತ್ತರಗಳನ್ನು ನೀಡಿ ನಿವೇದಿತಾ ಗೌಡಗೆ ಕಠಿಣ ಸ್ಪರ್ಧೆ ನೀಡಿದರು. ಆದ್ರೆ, ಅಂತಿಮವಾಗಿ ಅತಿ ಹೆಚ್ಚು ಸರಿ ಉತ್ತರಗಳನ್ನು ನೀಡಿದ್ದು ನಿವೇದಿತಾ ಗೌಡ ಎಂದು 'ಬಿಗ್ ಬಾಸ್' ಘೋಷಿಸಿದರು.

ಜಗನ್ ಗೆ ಕಿರಿಕಿರಿ: ನಿವೇದಿತಾ ಗೌಡ ಕಣ್ಣಲ್ಲಿ ಗಂಗಾ-ಕಾವೇರಿ.!

ಫುಲ್ ಖುಷಿ ಆದ ನಿವೇದಿತಾ

''ಈ ವಾರದ ಮನೆಯ ಕ್ಯಾಪ್ಟನ್ ನಿವೇದಿತಾ'' ಎಂದು 'ಬಿಗ್ ಬಾಸ್' ಘೋಷಿಸುತ್ತಿದ್ದಂತೆಯೇ, ನಿವೇದಿತಾ ಸಂಭ್ರಮಿಸಿದರು.

ಆಗಾಗ ನಾಮಿನೇಟ್ ಆಗಬೇಕು, ಆಗಲೇ ಜನರಿಗೆ ಗೊತ್ತಾಗೋದು: ಇದು ದಿವಾಕರ್ ಸಿದ್ಧಾಂತ.!

ಮತ್ತೆ ಗ್ಯಾಸ್ ಪ್ರಾಬ್ಲಂ

ಕ್ಯಾಪ್ಟನ್ ಜವಾಬ್ದಾರಿಯನ್ನ ನಿವೇದಿತಾ ವಹಿಸಿಕೊಳ್ಳುತ್ತಿದ್ದಂತೆಯೇ, 'ಬಿಗ್ ಬಾಸ್' ಮನೆಯೊಳಗೆ ಅಡುಗೆ ಅನಿಲ ಪೂರೈಕೆ ನಿಂತಿತ್ತು. ಕ್ಯಾಪ್ಟನ್ ಆದ ಮರುಕ್ಷಣವೇ ಅಡುಗೆ ಅನಿಲ ಪೂರೈಸುವಂತೆ ನಿವೇದಿತಾ 'ಬಿಗ್ ಬಾಸ್' ಬಳಿ ಮನವಿ ಮಾಡಿದರು.

ಎಲ್ಲರನ್ನೂ ಹೇಗೆ ನಿಭಾಯಿಸುತ್ತಾರೋ.?

ಇನ್ನೂ ಯಾರ್ಯಾರು ಅಡುಗೆ ಮನೆಯ ಡಿಪಾರ್ಟ್ಮೆಂಟ್ ನಲ್ಲಿ ಇರಬೇಕು ಎಂಬ ಲೆಕ್ಕಾಚಾರ ಶುರು ಆದಾಗ, 'ಬಿಗ್ ಬಾಸ್' ಮನೆಯಲ್ಲಿ ಬಿಸ್ಕತ್ತು ಹಾಗೂ ಐಸ್ ಕ್ರೀಮ್ ಗಾಗಿ ದೊಡ್ಡ ರಾದ್ಧಾಂತವೇ ನಡೆಯಿತು. ಎಲ್ಲರನ್ನೂ ನಿವೇದಿತಾ ಅದ್ಹೇಗೆ ಹ್ಯಾಂಡಲ್ ಮಾಡ್ತಾರೋ.?

English summary
Bigg Boss Kannada 5: Week 6: Niveditha Gowda becomes captain

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada