»   » 'ಬಿಗ್ ಬಾಸ್' ಮನೆಯಲ್ಲಿ ಇದಕ್ಕಿದ್ದಂತೆ ಟಾರ್ಗೆಟ್ ಆದ ಶ್ರುತಿ ಪ್ರಕಾಶ್.!

'ಬಿಗ್ ಬಾಸ್' ಮನೆಯಲ್ಲಿ ಇದಕ್ಕಿದ್ದಂತೆ ಟಾರ್ಗೆಟ್ ಆದ ಶ್ರುತಿ ಪ್ರಕಾಶ್.!

Posted By:
Subscribe to Filmibeat Kannada

ಕ್ಯಾಪ್ಟನ್ ಆಗಿದ್ದಾಗ 'ಕಳಪೆ' ಕಿತ್ತಾಟಕ್ಕೆ ಸಾಕ್ಷಿಯಾಗಿದ್ದರು ಎನ್ನುವುದನ್ನು ಬಿಟ್ಟರೆ ನಟಿ, ಗಾಯಕಿ ಶ್ರುತಿ ಪ್ರಕಾಶ್... ತಾವಾಯ್ತು, ತಮ್ಮ ಟಾಸ್ಕ್ ಆಯ್ತು ಅಂತ 'ಬಿಗ್ ಬಾಸ್' ಮನೆಯಲ್ಲಿ ಇದ್ದಾರೆ.

ಯಾವುದೇ ವಿವಾದಗಳಿಗೆ, ಜಗಳಗಳಿಗೆ ಸಿಲುಕದ ನಟಿ ಶ್ರುತಿ ಪ್ರಕಾಶ್ ಇದಕ್ಕಿದ್ದಂತೆ ಆರನೇ ವಾರ ಟಾರ್ಗೆಟ್ ಆಗಿದ್ದಾರೆ. ಶ್ರುತಿ ಪ್ರಕಾಶ್ ರನ್ನ ನಾಲ್ಕು ಮಂದಿ ನಾಮಿನೇಟ್ ಮಾಡಿದರು.

ನಾಮಿನೇಷನ್ ಪ್ರಕ್ರಿಯೆಯಲ್ಲಿ ಆರನೇ ವಾರ ಯಾರ್ಯಾರ ಲೆಕ್ಕಾಚಾರ ಏನಾಗಿತ್ತು ಅಂತ ನೋಡೋಣ ಬನ್ನಿ....

ಟಾರ್ಗೆಟ್ ಆದ ಶ್ರುತಿ ಪ್ರಕಾಶ್

ದಿವಾಕರ್, ರಿಯಾಝ್, ಸಮೀರಾಚಾರ್ಯ ಹಾಗೂ ಚಂದನ್ ಶೆಟ್ಟಿ... ನಟಿ ಶ್ರುತಿ ಪ್ರಕಾಶ್ ವಿರುದ್ಧ ಮತ ಚಲಾಯಿಸಿದರು.

'ಬಿಗ್ ಬಾಸ್': ಈ ವಾರ ಯಾರಿಗೂ ವೋಟ್ ಮಾಡಿ ಹಣ ವ್ಯರ್ಥ ಮಾಡಬೇಡಿ.!

ಮೊಟ್ಟ ಮೊದಲ ಬಾರಿಗೆ ನಾಮಿನೇಟ್ ಆದ ಚಂದನ್ ಶೆಟ್ಟಿ

ಪ್ರಭಲ ಸ್ಪರ್ಧಿ ಎಂದು ಅರಿವಿಗೆ ಬಂದ ಕಾರಣ ಸಿಹಿ ಕಹಿ ಚಂದ್ರು, ಅನುಪಮಾ ಗೌಡ, ಜಗನ್ ಹಾಗೂ ಶ್ರುತಿ ಪ್ರಕಾಶ್... ಚಂದನ್ ಶೆಟ್ಟಿ ವಿರುದ್ಧ ವೋಟ್ ಮಾಡಿದರು.

ಅದೃಷ್ಟ ಅಂದ್ರೆ ಇದು.! ಏನ್ ಗುರು ಚಂದನ್ ಶೆಟ್ಟಿ ಲಕ್ಕು.!

ಸಮೀರಾಚಾರ್ಯ ಮಿಸ್ ಆಗಲಿಲ್ಲ.!

ಅನುಪಮಾ, ಜಗನ್ ಹಾಗೂ ಆಶಿತಾಗೆ ಸಮೀರಾಚಾರ್ಯ ಕಂಡ್ರೆ ಅಷ್ಟಕಷ್ಟೆ. ಹೀಗಾಗಿ, ಈ ಮೂವರು ಸಮೀರಾಚಾರ್ಯ ರನ್ನ ನಾಮಿನೇಟ್ ಮಾಡಿದರು.

ವಾರವಿಡೀ ಗಳಿಸಿದ್ದನ್ನ ಒಂದೇ ನಿಮಿಷದಲ್ಲಿ ಹಾಳು ಮಾಡಿದ ಚಂದ್ರು, ಅನು.!

ಮತ್ತೆ ರಿಯಾಝ್ ವಿರುದ್ಧ ಮತಗಳು

ಸಿಹಿ ಕಹಿ ಚಂದ್ರು, ಜೆಕೆ ಮತ್ತು ಚಂದನ್ ಶೆಟ್ಟಿ... ರಿಯಾಝ್ ವಿರುದ್ಧ ಮತ ಹಾಕಿದರು.

ಜಯಶ್ರೀನಿವಾಸನ್ ಕೂಡ ತಪ್ಪಿಸಿಕೊಳ್ಳಲಿಲ್ಲ.!

ಸಮೀರಾಚಾರ್ಯ, ಆಶಿತಾ ಮತ್ತು ಜೆಕೆ ವೋಟ್ ಮಾಡಿದ್ರಿಂದಾಗಿ ಜಯಶ್ರೀನಿವಾಸನ್ ಕೂಡ ತಪ್ಪಿಸಿಕೊಳ್ಳಲಿಲ್ಲ.

ನಾಮಿನೇಟ್ ಆದ ಅನುಪಮಾ

ದಿವಾಕರ್ ಮತ್ತು ಶ್ರುತಿ ಪ್ರಕಾಶ್... ಅನುಪಮಾ ರನ್ನ ನಾಮಿನೇಟ್ ಮಾಡಿದರು

ಜಗನ್ ವಿರುದ್ಧ ಎರಡು ವೋಟ್

ರಿಯಾಝ್ ಮತ್ತು ಜಯಶ್ರೀನಿವಾಸನ್... ಜಗನ್ ಹೆಸರನ್ನ ಹೇಳಿದರು.

ಕ್ಯಾಪ್ಟನ್ ನಿವೇದಿತಾ ಆಯ್ಕೆ...

'ಬಿಗ್ ಬಾಸ್' ಮನೆಯಲ್ಲಿ ಮತ್ತೆ ಗ್ಯಾಸ್ ಟ್ರಬಲ್ ಆಗಲು ಸಿಹಿ ಕಹಿ ಚಂದ್ರು ಕಾರಣ. ಹೀಗಾಗಿ, ಕ್ಯಾಪ್ಟನ್ ನಿವೇದಿತಾ ಗೌಡ, ಸಿಹಿ ಕಹಿ ಚಂದ್ರು ರನ್ನ ನಾಮಿನೇಟ್ ಮಾಡಿದರು.

ಎಲ್ಲರೂ ಸೇಫ್ ಆಗಿದ್ದಾರೆ

ಎಂಟು ಮಂದಿ ನಾಮಿನೇಟ್ ಆಗಿದ್ದರೂ, ಈ ವಾರ ಎಲಿಮಿನೇಷನ್ ಇಲ್ಲ. ಆರನೇ ವಾರ ಎಲಿಮಿನೇಷನ್ ಕ್ಯಾನ್ಸಲ್ ಆಗಿರುವ ಸಂಗತಿ ಸ್ಪರ್ಧಿಗಳಿಗೆ ಗೊತ್ತಿಲ್ಲ.

English summary
Bigg Boss Kannada 5: Week 6: Though Nomination process is done, No eviction this week.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada