»   » ಇವರನ್ನೆಲ್ಲ ಇತರೆ ಸ್ಪರ್ಧಿಗಳು ಉಳಿಸಲಿಲ್ಲ, ನೀವು ಉಳಿಸುತ್ತೀರಾ.?

ಇವರನ್ನೆಲ್ಲ ಇತರೆ ಸ್ಪರ್ಧಿಗಳು ಉಳಿಸಲಿಲ್ಲ, ನೀವು ಉಳಿಸುತ್ತೀರಾ.?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಅದಾಗಲೇ ಆರು ವಾರಗಳು ಉರುಳಿವೆ. ಏಳನೇ ವಾರದ ಆರಂಭದಲ್ಲೇ, ನಾಮಿನೇಷನ್ ಪ್ರಕ್ರಿಯೆ ಕೂಡ ನಡೆದಿದೆ.

ಆರು ವಾರಗಳಲ್ಲಿ ಈವರೆಗೆ ನಡೆದ ನಾಮಿನೇಷನ್ ಪ್ರಕ್ರಿಯೆಗಳಿಗಿಂತ ಏಳನೇ ವಾರದ ನಾಮಿನೇಷನ್ ಪ್ರಕ್ರಿಯೆ ಸ್ವಲ್ಪ ವಿಭಿನ್ನವಾಗಿತ್ತು. ಸಾಮಾನ್ಯವಾಗಿ 'ಬಿಗ್ ಬಾಸ್' ಮನೆಯಿಂದ ಹೊರ ಹಾಕಲು ತಾವು ಇಚ್ಛಿಸುವ ಇಬ್ಬರು ಸದಸ್ಯರನ್ನ ಸ್ಪರ್ಧಿಗಳು ಸೂಚಿಸಬೇಕಿತ್ತು. ಆದ್ರೆ, ಏಳನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಹಾಗೆ ನಡೆಯಲಿಲ್ಲ.

'ಬಿಗ್ ಬಾಸ್' ಮನೆಯಲ್ಲಿ ತಾವು ಉಳಿಸಲು ಇಚ್ಛಿಸುವ ಇಬ್ಬರು ಸದಸ್ಯರ ಹೆಸರುಗಳನ್ನು ಸ್ಪರ್ಧಿಗಳು ಸೂಚಿಸಬೇಕಿತ್ತು. ಅತಿ ಹೆಚ್ಚು ಮತ ಪಡೆದವರು ಸೇಫ್ ಆದರೆ, ಕಡಿಮೆ ಮತಗಳು ಪಡೆದವರು ಈ ವಾರ ನಾಮಿನೇಟ್ ಆಗಿದ್ದಾರೆ.

ಹಾಗಾದ್ರೆ, ಈ ವಾರ ಡೇಂಜರ್ ಝೋನ್ ನಲ್ಲಿ ಇರುವ ಸ್ಪರ್ಧಿಗಳ ಪಟ್ಟಿಯನ್ನ ಒಮ್ಮೆ ನೋಡ್ಕೊಂಡ್ ಬರೋಣ ಬನ್ನಿ....

ಜಯರಾಂ ಕಾರ್ತಿಕ್ ಸೇಫ್.!

'ಬಿಗ್ ಬಾಸ್' ಮನೆಯ ಏಳನೇ ವಾರದ ಕ್ಯಾಪ್ಟನ್ ಆಗಿ ಜಯರಾಂ ಕಾರ್ತಿಕ್ ಆಯ್ಕೆ ಆಗಿದ್ದಾರೆ. ಹೀಗಾಗಿ, ನಾಮಿನೇಷನ್ ಪ್ರಕ್ರಿಯೆಯಲ್ಲಿ ಜೆಕೆ ಸೇಫ್ ಆಗಿದ್ದರು.

ಜಸ್ಟ್ ಮಿಸ್ ಆದ ಜಯಶ್ರೀನಿವಾಸನ್: ಕ್ಯಾಪ್ಟನ್ ಆದ ಜಯರಾಂ ಕಾರ್ತಿಕ್.!

ರಿಯಾಝ್ ಗೆ ಕೇವಲ ಒಂದು ವೋಟ್.!

ಸಮೀರಾಚಾರ್ಯ ಬಿಟ್ಟರೆ ಇನ್ಯಾರೂ ರಿಯಾಝ್ ಪರ ಮತ ಚಲಾಯಿಸಲೇ ಇಲ್ಲ. ಹೀಗಾಗಿ, ರಿಯಾಝ್ ನಾಮಿನೇಟ್ ಆಗಬೇಕಾಯಿತು.

ಸುದೀಪ್ ಎದುರಿಗೆ ಅನುಪಮಾ ತಾಯಿ-ಕಿರಿಕ್ ಕೀರ್ತಿ ವಾಗ್ಯುದ್ಧ.!

ಸಿಹಿ ಕಹಿ ಚಂದ್ರು ರವರದ್ದೂ ಅದೇ ಕಥೆ.!

ಇನ್ನೂ ಸಿಹಿ ಕಹಿ ಚಂದ್ರು ಅವರಿಗೆ ಶ್ರುತಿ ಪ್ರಕಾಶ್ ಬಿಟ್ರೆ ಬೇರೆ ಯಾರೂ ವೋಟ್ ಹಾಕಲಿಲ್ಲ.

ಪ್ರಥಮ್ ನ ಫಾಲೋ ಮಾಡುತ್ತಾ ನಾಟಕ ಆಡ್ತಿದ್ದಾರಾ ದಿವಾಕರ್.?

ಡೇಂಜರ್ ಝೋನ್ ನಲ್ಲಿ ಸಮೀರಾಚಾರ್ಯ

ರಿಯಾಝ್ ಹೊರತು ಪಡಿಸಿದರೆ ಇತರೆ ಯಾವ ಸ್ಪರ್ಧಿಯೂ ಸಮೀರಾಚಾರ್ಯ ರವರನ್ನ ಉಳಿಸುವ ಮನಸ್ಸು ಮಾಡಲಿಲ್ಲ. ಹೀಗಾಗಿ, ಡೇಂಜರ್ ಝೋನ್ ಗೆ ಸಮೀರಾಚಾರ್ಯ ಬರಬೇಕಾಯಿತು.

'ಜಯಶ್ರೀನಿವಾಸನ್ 420' ಎಂದ ದಿವಾಕರ್ ಗೆ ಸುದೀಪ್ ಗದಾ ಪ್ರಹಾರ.!

ನಾಮಿನೇಟ್ ಆದ ಜಯಶ್ರೀನಿವಾಸನ್

ನಿವೇದಿತಾ ಗೌಡ ಮಾತ್ರ ಜಯಶ್ರೀನಿವಾಸನ್ ಪರ ವೋಟ್ ಮಾಡಿದರು. ಕೇವಲ ಒಂದು ವೋಟ್ ಬಿದ್ದ ಪರಿಣಾಮ, ಜಯಶ್ರೀನಿವಾಸನ್ ನಾಮಿನೇಟ್ ಆಗಿದ್ದಾರೆ.

ಕೃಷಿಗೆ ಸೊನ್ನೆ.!

ಒಮ್ಮೆ 'ಬಿಗ್ ಬಾಸ್' ಮನೆಯಿಂದ ಔಟ್ ಆಗಿ ಇದೀಗ ಪುನಃ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಿರುವ ಕೃಷಿ ತಾಪಂಡ ರವರನ್ನ ಒಬ್ಬರೂ ಸೇಫ್ ಮಾಡಲಿಲ್ಲ. ಹೀಗಾಗಿ, ಕೃಷಿ ತಾಪಂಡಗೆ ಈ ವಾರವೂ ಎಲಿಮಿನೇಷನ್ ಭಯ ಇದೆ.

ನೇರವಾಗಿ ನಾಮಿನೇಟ್ ಆದ ದಿವಾಕರ್

ಇನ್ನೂ, ಕ್ಯಾಪ್ಟನ್ ಆದ ಜೆಕೆ, ದಿವಾಕರ್ ರವರನ್ನ ನೇರವಾಗಿ ನಾಮಿನೇಟ್ ಮಾಡಿದರು.

ಆರು ಜನರಲ್ಲಿ ನಿಮ್ಮ ಮತ ಯಾರಿಗೆ.?

ರಿಯಾಝ್, ಸಿಹಿ ಕಹಿ ಚಂದ್ರು, ಸಮೀರಾಚಾರ್ಯ, ಜಯಶ್ರೀನಿವಾಸನ್, ಕೃಷಿ ಹಾಗೂ ದಿವಾಕರ್... ಈ ಆರು ಜನರಲ್ಲಿ ನೀವು ಯಾರನ್ನ ಉಳಿಸುತ್ತೀರಾ.? ನಿಮ್ಮ ಮತ ಯಾರಿಗೆ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ನಿಮ್ಮ ಫಿಲ್ಮಿಬೀಟ್ ಕನ್ನಡ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಕಾಮೆಂಟ್ ಮಾಡಿ...

English summary
Bigg Boss Kannada 5: Week 7: Sihi Kahi Chandru, Diwakar, Riyaz, Sameeracharya, Jayasreenivasan and Krishi are nominated for this week's elimination.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada