»   » ಕಿವಿಯೋಲೆ ಕೊಡಿಸಿದ ರಿಯಾಝ್: ಭಾವುಕರಾದ ಹೆಣ್ಮಕ್ಕಳು

ಕಿವಿಯೋಲೆ ಕೊಡಿಸಿದ ರಿಯಾಝ್: ಭಾವುಕರಾದ ಹೆಣ್ಮಕ್ಕಳು

Posted By:
Subscribe to Filmibeat Kannada

ಇಷ್ಟು ದಿನ ರಿಯಾಝ್ ಕಂಡ್ರೆ ಉರಿದು ಬೀಳುತ್ತಿದ್ದ ಅನುಪಮಾ ಗೌಡ ಇದೀಗ ರಿಯಾಝ್ ನಡೆದುಕೊಂಡ ರೀತಿ ನೋಡಿ ಭಾವುಕರಾಗಿದ್ದಾರೆ. ಬರೀ ಅನುಪಮಾ ಗೌಡ ಮಾತ್ರ ಅಲ್ಲ, ಆಶಿತಾ, ಕೃಷಿ ತಾಪಂಡ, ಶ್ರುತಿ ಪ್ರಕಾಶ್ ಹಾಗೂ ನಿವೇದಿತಾ ಗೌಡ ಕೂಡ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಯಾಕಪ್ಪಾ ಅಂದ್ರೆ, ''ಇತಿಹಾಸ ಪ್ರಸಿದ್ಧವಾದ ಕಡಲೆಕಾಯಿ ಪರಿಷೆಯನ್ನ ಮನೆಯ ಸದಸ್ಯರಿಗೆ ಪರಿಚಯಿಸುವ ಸಲುವಾಗಿ 'ಬಿಗ್ ಬಾಸ್' ವಿಶೇಷ ಅವಕಾಶ ಸೃಷ್ಟಿಸಿದರು.

'ಗೋಮುಖ ವ್ಯಾಘ್ರ' ರಿಯಾಝ್ ಔಟ್ ಆದರೆ ಪಾರ್ಟಿ ಮಾಡ್ತಾರಂತೆ ಚಂದನ್ ಶೆಟ್ಟಿ.!

Bigg Boss Kannada 5: Week 7: Riyaz gifts ear rings to all female contestants

'ಬಿಗ್ ಬಾಸ್' ಮನೆಯ ಗಾರ್ಡನ್ ಏರಿಯಾದಲ್ಲಿ ಸೃಷ್ಟಿಸಲಾಗಿದ್ದ ಎಂ.ಜಿ.ರೋಡ್ ನಲ್ಲಿ ಕಡಲೆ ಕಾಯಿ ಪರಿಷೆ ನಡೆದು, ಅದರಲ್ಲಿ ಭಾಗವಹಿಸಲು ಎಲ್ಲರಿಗೂ ಅವಕಾಶವಿತ್ತು.

Bigg Boss Kannada 5: Week 7: Riyaz gifts ear rings to all female contestants

ತಮ್ಮ ಬಳಿ ಇದ್ದ ದುಡ್ಡಿನಿಂದ ಕೆಲ ಸದಸ್ಯರು ಕಡಲೆಕಾಯಿ ಕೊಂಡುಕೊಂಡರೆ, ರಿಯಾಝ್ ಮಾತ್ರ ತಮ್ಮ ಬಳಿ ಇದ್ದ ದುಡ್ಡಿನಲ್ಲಿ ಎಲ್ಲ ಹೆಣ್ಮಕ್ಕಳಿಗೂ ಕಿವಿಯೋಲೆ ಕೊಡಿಸಿದರು.

Bigg Boss Kannada 5: Week 7: Riyaz gifts ear rings to all female contestants

ರಿಯಾಝ್ ಮಾಡಿದ್ದು ಚೀಪ್ ಎಂದ ಆಶಿತಾಗೆ ಬಿಸಿ ಮುಟ್ಟಿಸಿದ ಸುದೀಪ್.!

ರಿಯಾಝ್ ಕಿವಿಯೋಲೆ ಕೊಡುವಾಗ ಭಾವುಕರಾದರು, ಅವರೊಂದಿಗೆ ಎಲ್ಲ ಹೆಣ್ಮಕ್ಕಳು ಕೂಡ ಸಂತೋಷದಿಂದ ಕಣ್ಣೀರಿಟ್ಟರು.

ಒಟ್ನಲ್ಲಿ, ಸದ್ಯ ರಿಯಾಝ್ ಎಲ್ಲ ಹೆಣ್ಮಕ್ಕಳ ಮನ ಗೆದ್ದಿದ್ದಾರೆ. ಮುಂದೇನಾಗುತ್ತೋ, 'ಬಿಗ್ ಬಾಸ್' ಬಲ್ಲ.!

English summary
Bigg Boss Kannada 5: Week 7: Riyaz gifts ear rings to all female contestants

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada