For Quick Alerts
  ALLOW NOTIFICATIONS  
  For Daily Alerts

  'ಬಿಗ್' ಶಾಕ್: 'ಬಿಗ್ ಬಾಸ್' ಮನೆಯಿಂದ ಸಿಹಿ ಕಹಿ ಚಂದ್ರು ಔಟ್.!

  By Harshitha
  |

  'ಬಿಗ್ ಬಾಸ್' ಮನೆಯೊಳಗೆ ಸಿಹಿ ಕಹಿ ಚಂದ್ರು ಕಾಲಿಟ್ಟಾಗ, ಖಂಡಿತ ಇವರು ಗ್ರ್ಯಾಂಡ್ ಫಿನಾಲೆಗೆ ಹೋಗೇ ಹೋಗುತ್ತಾರೆ ಎಂಬ ನಂಬಿಕೆ ಕರುನಾಡ ಜನರಲ್ಲಿತ್ತು. ಅಷ್ಟಕ್ಕೂ, ಸಿಹಿ ಕಹಿ ಚಂದ್ರು 'ಘಟಾನುಘಟಿ' ಸ್ಪರ್ಧಿ ಅಂತಲೇ ಸಹ ಸ್ಪರ್ಧಿಗಳು ಭಾವಿಸಿದ್ದರು.

  ಅಡುಗೆ ಮನೆಯ ಸುಪರ್ದಿ ವಹಿಸಿಕೊಂಡಿದ್ದ ಸಿಹಿ ಕಹಿ ಚಂದ್ರು ರವರ ಮಾತನ್ನ 'ಬಿಗ್ ಬಾಸ್' ಮನೆಯ ಸದಸ್ಯರು ತಳ್ಳಿಹಾಕುತ್ತಿರಲಿಲ್ಲ. ಇಷ್ಟೆಲ್ಲ ಇದ್ದರೂ, ಕೇವಲ ಏಳೇ ವಾರಕ್ಕೆ 'ಬಿಗ್ ಬಾಸ್' ಮನೆಯಿಂದ ಸಿಹಿ ಕಹಿ ಚಂದ್ರು ಹೊರ ಬಂದಿದ್ದಾರೆ.

  ಸಿಹಿ ಕಹಿ ಚಂದ್ರು ಅಸಲಿಯತ್ತು ಬಟಾಬಯಲು ಮಾಡಿದ ಕೃಷಿ ತಾಪಂಡ.!ಸಿಹಿ ಕಹಿ ಚಂದ್ರು ಅಸಲಿಯತ್ತು ಬಟಾಬಯಲು ಮಾಡಿದ ಕೃಷಿ ತಾಪಂಡ.!

  ಅಚ್ಚರಿ ಅನಿಸಿದರೂ ಇದೇ ಸತ್ಯ.! 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಸಿಹಿ ಕಹಿ ಚಂದ್ರು ಎಲಿಮಿನೇಟ್ ಆಗಿದ್ದಾರೆ. ಇದು 'ಬಿಗ್ ಬಾಸ್' ಮನೆಯ ಸೆಲೆಬ್ರಿಟಿ ಸ್ಪರ್ಧಿಗಳಿಗೆ 'ಬಿಗ್' ಶಾಕ್ ನೀಡಿದೆ. ಮುಂದೆ ಓದಿರಿ...

  ವೀಕ್ಷಕರ ಬೆಂಬಲ ಕಡಿಮೆ

  ವೀಕ್ಷಕರ ಬೆಂಬಲ ಕಡಿಮೆ

  ನಾಮಿನೇಟ್ ಆಗಿದ್ದ ಇತರೆ ಸ್ಪರ್ಧಿಗಳಿಗೆ ಹೋಲಿಸಿದರೆ, ಸಿಹಿ ಕಹಿ ಚಂದ್ರು ಅವರಿಗೆ ಕಮ್ಮಿ ವೋಟ್ ಗಳು ಬಿದ್ದಿದ್ವು. ಹೀಗಾಗಿ, ಅವರು 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಎಲಿಮಿನೇಟ್ ಆಗಿದ್ದಾರೆ.

  ಇವರನ್ನೆಲ್ಲ ಇತರೆ ಸ್ಪರ್ಧಿಗಳು ಉಳಿಸಲಿಲ್ಲ, ನೀವು ಉಳಿಸುತ್ತೀರಾ.?ಇವರನ್ನೆಲ್ಲ ಇತರೆ ಸ್ಪರ್ಧಿಗಳು ಉಳಿಸಲಿಲ್ಲ, ನೀವು ಉಳಿಸುತ್ತೀರಾ.?

  ಆರು ಮಂದಿ ನಾಮಿನೇಟ್ ಆಗಿದ್ದರು

  ಆರು ಮಂದಿ ನಾಮಿನೇಟ್ ಆಗಿದ್ದರು

  ಕೃಷಿ ತಾಪಂಡ, ದಿವಾಕರ್, ಸಮೀರಾಚಾರ್ಯ, ಜಯಶ್ರೀನಿವಾಸನ್, ರಿಯಾಝ್ ಹಾಗೂ ಸಿಹಿ ಕಹಿ ಚಂದ್ರು ನಾಮಿನೇಟ್ ಆಗಿದ್ದರು. ಆರು ಮಂದಿ ಪೈಕಿ ಸಿಹಿ ಕಹಿ ಚಂದ್ರು ಅವರಿಗೆ ಹೊರ ಹೋಗಲು ಗೇಟ್ ಪಾಸ್ ಸಿಕ್ಕಿದೆ.

  ಸಿಹಿ ಕಹಿ ಚಂದ್ರು ಮರೆತ ಗುಟ್ಟು, ಕಿಚ್ಚ ಸುದೀಪ್ ಮುಂದೆ ರಟ್ಟು.!ಸಿಹಿ ಕಹಿ ಚಂದ್ರು ಮರೆತ ಗುಟ್ಟು, ಕಿಚ್ಚ ಸುದೀಪ್ ಮುಂದೆ ರಟ್ಟು.!

  ಯಾರೂ ಉಳಿಸಲಿಲ್ಲ.!

  ಯಾರೂ ಉಳಿಸಲಿಲ್ಲ.!

  'ಬಿಗ್ ಬಾಸ್' ಮನೆಯೊಳಗೆ ಸಿಹಿ ಕಹಿ ಚಂದ್ರು ರವರನ್ನ ಶ್ರುತಿ ಪ್ರಕಾಶ್ ಬಿಟ್ಟರೆ ಇನ್ಯಾರೂ ಉಳಿಸಲಿಲ್ಲ. ಹೀಗಾಗಿ, ಸಿಹಿ ಕಹಿ ಚಂದ್ರು ನಾಮಿನೇಟ್ ಆದರು.

  ಬೇಕು ಅಂತಲೇ ಸೋತರಂತೆ ಚಂದ್ರು.! ಕ್ಯಾಪ್ಟನ್ ನಿವೇದಿತಾಗೆ ಮುನಿಸು.!ಬೇಕು ಅಂತಲೇ ಸೋತರಂತೆ ಚಂದ್ರು.! ಕ್ಯಾಪ್ಟನ್ ನಿವೇದಿತಾಗೆ ಮುನಿಸು.!

  'ಬಿಗ್ ಶಾಕ್'

  'ಬಿಗ್ ಶಾಕ್'

  'ಬಿಗ್ ಬಾಸ್' ಮನೆಯಿಂದ ಸಿಹಿ ಕಹಿ ಚಂದ್ರು ಔಟ್ ಆಗುತ್ತಾರೆ ಅಂತ ಯಾರೂ ಊಹಿಸಿರಲಿಲ್ಲ. ಹೀಗಿರುವಾಗಲೇ, ಸಿಹಿ ಕಹಿ ಚಂದ್ರು ಎಲಿಮಿನೇಟ್ ಆಗಿದ್ದು, ಸೆಲೆಬ್ರಿಟಿ ಸ್ಪರ್ಧಿಗಳಿಗೆ ದೊಡ್ಡ ಶಾಕ್ ಸಿಕ್ಕಂತಾಗಿದೆ.

  English summary
  Bigg Boss Kannada 5: Week 7: Sihi Kahi Chandru eliminated. ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಐದನೇ ವಾರಕ್ಕೆ ಸಿಹಿ ಕಹಿ ಚಂದ್ರು ಔಟ್ ಆಗಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X