»   » ಇಬ್ಬರು ಘಟಾನುಘಟಿಗಳು ಹೊರಬಿದ್ದಾಯ್ತು.! ಮುಂದಿನ ಟಾರ್ಗೆಟ್ ಯಾರು.?

ಇಬ್ಬರು ಘಟಾನುಘಟಿಗಳು ಹೊರಬಿದ್ದಾಯ್ತು.! ಮುಂದಿನ ಟಾರ್ಗೆಟ್ ಯಾರು.?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಆರಂಭ ಆಗಿ, ಒಟ್ಟು ಹದಿನೇಳು ಸ್ಪರ್ಧಿಗಳು 'ದೊಡ್ಮನೆ'ಯೊಳಗೆ ಎಂಟ್ರಿಕೊಟ್ಮೇಲೆ, ''ಇವರು ನನಗೆ ಸ್ಪರ್ಧಿ'' ಅಂತ ಬಹುತೇಕ ಸ್ಪರ್ಧಿಗಳ ತಲೆಯಲ್ಲಿ ಓಡಾಡಿದ್ದು ಮೂವರ ಹೆಸರು ಮಾತ್ರ.!

ಈ ಮೂವರ ಪೈಕಿ ಈಗಾಗಲೇ ಇಬ್ಬರು 'ಬಿಗ್ ಬಾಸ್' ಮನೆಯಿಂದ ಔಟ್ ಆಗಿದ್ದಾರೆ. ಉಳಿದ ಒಬ್ಬರು ಮಾತ್ರ 'ದೊಡ್ಮನೆ'ಯೊಳಗೆ ಸೇಫ್ ಆಗಿ ಆಟ ಆಡುತ್ತಿದ್ದಾರೆ.

'ದೊಡ್ಮನೆ'ಯೊಳಗಿರುವವರ ಕಣ್ಣಿಗೆ ಈ ಮೂವರು ಮಾತ್ರ ಘಟಾನುಘಟಿಗಳು.!

ಇದಕ್ಕೆ ಅಚ್ಚರಿ ಎನ್ನಬೇಕೋ, ಇಲ್ಲ ಗೇಮ್ ಪ್ಲಾನ್ ಎನ್ನಬೇಕೋ.. ಅಥವಾ ವಿಪರ್ಯಾಸ ಎನ್ನಬೇಕೋ ನಿಮಗೆ ಬಿಟ್ಟಿದ್ದು. ಒಟ್ನಲ್ಲಿ, ಇಬ್ಬರು ಘಟಾನುಘಟಿ ಸ್ಪರ್ಧಿಗಳು ಮಾತ್ರ 'ದೊಡ್ಮನೆ'ಯಿಂದ ಹೊರಗೆ ಬಂದಿರುವುದು ವಾಸ್ತವ.! ಮುಂದೆ ಓದಿರಿ....

ಸಿಹಿ ಕಹಿ ಚಂದ್ರು ಔಟ್.!

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಏಳನೇ ವಾರ ಸಿಹಿ ಕಹಿ ಚಂದ್ರು ಔಟ್ ಆದರು. ಹಾಗ್ನೋಡಿದ್ರೆ, 'ದೊಡ್ಮನೆ'ಯೊಳಗೆ ಸಿಹಿ ಕಹಿ ಚಂದ್ರು ಕಾಲಿಟ್ಟಾಗ ''ಇವರು ಘಟಾನುಘಟಿ ಸ್ಪರ್ಧಿ'' ಅಂತ ಬಹುತೇಕರಿಗೆ ಅನಿಸಿತ್ತು.

'ಬಿಗ್' ಶಾಕ್: 'ಬಿಗ್ ಬಾಸ್' ಮನೆಯಿಂದ ಸಿಹಿ ಕಹಿ ಚಂದ್ರು ಔಟ್.!

ಸುದೀಪ್ ಮುಂದೆ ಎಲ್ಲರೂ ಹೇಳಿದ್ದು ಅದನ್ನೇ.!

''ಸ್ಪರ್ಧಿಗಳ ಪೈಕಿ ಟಫ್ ಕಂಟೆಸ್ಟೆಂಟ್ ಯಾರು.?'' ಎಂದು ಸುದೀಪ್ ಕೇಳಿದಾಗ, ಬಹುತೇಕ ಸ್ಪರ್ಧಿಗಳ ಬಾಯಲ್ಲಿ ಬಂದ ಉತ್ತರ 'ಸಿಹಿ ಕಹಿ ಚಂದ್ರು'.! ಆದ್ರೀಗ, ಅದೇ ಚಂದ್ರು ಎಲಿಮಿನೇಟ್ ಆಗ್ಬಿಟ್ಟಿದ್ದಾರೆ.

ಮೂರನೇ ವಾರಕ್ಕೆ ದಯಾಳ್ ಔಟ್.!

ಸಿಹಿ ಕಹಿ ಚಂದ್ರು ಬಿಟ್ಟರೆ, ದಯಾಳ್ ಪದ್ಮನಾಭನ್ 'ಕಠಿಣ ಸ್ಪರ್ಧಿ' ಎಂಬ ಭಾವನೆ 'ಬಿಗ್ ಬಾಸ್' ಸ್ಪರ್ಧಿಗಳಲ್ಲಿತ್ತು. ಆದ್ರೆ, ಕೇವಲ ಮೂರನೇ ವಾರಕ್ಕೆ ದಯಾಳ್ ಔಟ್ ಆಗ್ಬಿಟ್ಟರು.

ಅಚ್ಚರಿ.! 'ಬಿಗ್ ಬಾಸ್' ಮನೆಯಿಂದ ಮೊದಲ ಸೆಲೆಬ್ರಿಟಿ ಔಟ್.!

ಉಳಿದಿರುವವರು ಜೆಕೆ ಮಾತ್ರ.!

ಸಿಹಿ ಕಹಿ ಚಂದ್ರು ಹಾಗೂ ದಯಾಳ್ ಬಿಟ್ಟರೆ ಜೆಕೆ 'ಟಫ್ ಕಂಟೆಸ್ಟೆಂಟ್' ಎಂಬ ಮಾತು ಇತರೆ ಸ್ಪರ್ಧಿಗಳ ಬಾಯಿಂದ ಬಂದಿತ್ತು. ಸದ್ಯ ಜೆಕೆ ಸೇಫ್ ಆಗಿ ಗೇಮ್ ಆಡುತ್ತಿದ್ದಾರೆ.

''ಹಾಲು ಕುಡಿದ ಮಕ್ಳೇ ಬದುಕಲ್ಲ, ಇನ್ನೂ ಹಾಲು ಕದ್ದವು ಬದುಕ್ತಾವಾ.?!''

ಇವರೆಲ್ಲ ಲೆಕ್ಕಕ್ಕೆ ಇರಲಿಲ್ಲ

ಹಾಗ್ನೋಡಿದ್ರೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಸೆಲೆಬ್ರಿಟಿ ಸ್ಪರ್ಧಿಗಳು ದಿವಾಕರ್, ರಿಯಾಝ್, ಸಮೀರಾಚಾರ್ಯ, ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ರನ್ನ ಸೀರಿಯಸ್ ಆಗಿ ತೆಗೆದುಕೊಂಡಿರಲೇ ಇಲ್ಲ. ಆದರೂ, ಇವರೆಲ್ಲರೂ ಇಲ್ಲಿಯವರೆಗೂ ವೀಕ್ಷಕರ ಕೃಪೆಯಿಂದ ಸೇಫ್ ಆಗಿದ್ದಾರೆ. ಕಾಂಪಿಟೇಷನ್ ಅಂದ್ರೆ ಇದೇ ತಾನೆ.?

ಮುಂದಿನ ಟಾರ್ಗೆಟ್ ಯಾರು.?

ಊಟ, ತಿಂಡಿ ವಿಚಾರಕ್ಕೆ ಇಷ್ಟು ದಿನ 'ಬಿಗ್ ಬಾಸ್' ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಅಡುಗೆ ಮನೆಯ ಉಸ್ತುವಾರಿ ವಹಿಸಿಕೊಂಡಿದ್ದ ದಯಾಳ್ ಹಾಗೂ ಸಿಹಿ ಕಹಿ ಚಂದ್ರು ಸದ್ಯ ಔಟ್ ಆಗಿದ್ದಾರೆ. ಮುಂದೆ ಅಡುಗೆ ಮನೆಯ ಸುಪರ್ದಿ ಯಾರ ಕೈಗೆ ಬರುತ್ತೋ.? ಮುಂದಿನ ಟಾರ್ಗೆಟ್ ಯಾರಾಗ್ತಾರೋ, ನೋಡಬೇಕು.

English summary
Bigg Boss Kannada 5: Week 7: Two Tough Contestants Sihi Kahi Chandru and Dayal Padmanabhan gets eliminated.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada